Easy Dose Recipe: ಹಾಸಿಗೆಯ ರೀತಿ ಮೆತ್ತಗೆ ದೋಸೆ ಮಾಡಬೇಕು ಎಂದರೆ ಏನು ಮಾಡಬೇಕು ಗೊತ್ತೇ?? ಹೋಟೆಲ್ ನವರು ಕೂಡ ಹುಡುಕಿಕೊಂಡು ಬರುತ್ತಾರೆ!

Easy Dose Recipe ಬೆಳಿಗ್ಗೆ ದಿನವೂ ಒಂದೇ ತರಹದ ದೋಸೆ ಮಾಡಿ ಬೋರ್ ಆಗಿದ್ಯಾ? ಹಾಗಾದ್ರೆ ಹೊಟೆಲ್ ತರ ಮೃದುವಾಗಿರುವ, ಕೆಲವೇ ನಿಮಿಷಗಳಲ್ಲಿ ರೆಡಿ ಮಾಡಬಹುದಾದ ಒಂದು ದೋಸಾ ರೆಸಿಪಿ ಜೊತೆ ನಾವು ಬಂದಿದ್ದೇವೆ ಇದಕ್ಕೆ ಅಡಿಗೆ ಸೋಡಾ ಬೇಡ ಮೊಸರು ಹಾಗೂ ಒಂದು ಹನಿ ಎಣ್ಣೆ ಕೂಡ ಬೇಡ ಇದು ಯಾವುದು ಇಲ್ದೆ ಮೃದುವಾಗಿ ಹತ್ತಿಯಂತೆ ಸ್ಪಂಜಿನ  ದೋಸೆ ಮಾಡೋದು ಹೇಗೆ ಗೊತ್ತಾ? ಇಲ್ಲಿದೆ ನೋಡಿ ಬೆಸ್ಟ್ ರೆಸಿಪಿ. ಇದನ್ನೂ ಓದಿ: SBI Mudra Loan: ಲೋನ್ ಗಾಗಿ ಅಲೆದಾಡುವುದು ಬೇಡ, ಜಸ್ಟ್ ಈ ಡಾಕ್ಯುಮೆಂಟ್ಸ್ ಸಿದ್ದ ಪಡಿಸಿಕೊಂಡು, SBI ಬ್ಯಾಂಕ್ ಗೆ ಹೋಗಿ. ಲೋನ್ ಕೊಡುವುದು ಫಿಕ್ಸ್. ಜನರ ಕಷ್ಟ ಕೊನೆಗೂ ಅರ್ಥಮಾಡಿಕೊಂಡ ಬ್ಯಾಂಕ್!

ದೋಸೆ ಮಾಡಲು ಬೇಕಾಗುವ ಸಾಮಗ್ರಿಗಳು: ಅಕ್ಕಿ ಒಂದುವರೆ ಕಪ್

ಮೆಂತ್ಯ ಅರ್ಧ ಕಪ್

ಮಂಡಕ್ಕಿ ಮೂರು ಕಪ್

ರುಚಿಗೆ ತಕ್ಕಷ್ಟು ಉಪ್ಪು

ರುಬಲು ನೀರು

ದೋಸೆ ಮಾಡುವ ವಿಧಾನ;

ಮೊದಲಿಗೆ ಒಂದು ಪಾತ್ರಕ್ಕೆ ದೋಸೆ ಅಕ್ಕಿಯನ್ನು ಹಾಕಿ ಅದಕ್ಕೆ ಸ್ವಲ್ಪ ಮೆಂತ್ಯ ಕೂಡ ಸೇರಿಸಿ ಸ್ವಚ್ಚವಾಗಿ ತೊಳೆದು ಸುಮಾರು ಐದು ಗಂಟೆಗಳ ಕಾಲ ನೆನೆಸಿಟ್ಟುಕೊಳ್ಳಿ.

ಐದು ಗಂಟೆಗಳ ಕಾಲ ನೆನೆದ ಅಕ್ಕಿಯನ್ನು ಒಂದು ಮಿಕ್ಸರ್ ಜಾರ್ ಗೆ ಹಾಕಿ ಅದನ್ನ ರುಬ್ಬಿಕೊಳ್ಳಲು ಬೇಕಾಗುವಷ್ಟು ನೀರನ್ನು ಹಾಕಿ ನುಣ್ಣಗೆ ರುಬ್ಬಿಕೊಳ್ಳಿ ಈ ದೋಸೆ ಹಿಟ್ಟು ತುಂಬಾ ತೆಳ್ಳಗೆ ಆಗಬಾರದು ಸ್ವಲ್ಪ ದಪ್ಪವಾದ ರೀತಿಯಲ್ಲಿ ನಯವಾಗಿ ರುಬ್ಬಿಕೊಳ್ಳಿ. ಈಗ ಮತ್ತೊಂದು ಪಾತ್ರ ತೆಗೆದುಕೊಂಡು ಅದರಲ್ಲಿ ಮೂರು ಕಪ್ ನಷ್ಟು ಮಂಡಕ್ಕಿಯನ್ನು ಹಾಕಿ. ನೀರಿನಲ್ಲಿ ಚೆನ್ನಾಗಿ ತೊಳೆದು ಆ ನೀರನ್ನು ಬಸಿದು ತೆಗೆಯಿರಿ. ನಂತರ ನೀರಿನಲ್ಲಿ ತೊಳೆದ ಮಂಡಕ್ಕಿಯನ್ನು ಒಂದು ಮಿಕ್ಸರ್ ಜಾರ್ ಗೆ ಹಾಕಿ ಸ್ವಲ್ಪ ನೀರನ್ನು ಸೇರಿಸಿ ನುಣ್ಣಗೆ ರುಬ್ಬಿಕೊಳ್ಳಿ. (ಒಂದುವರೆ ಕಪ್ ಅಕ್ಕಿಗೆ ಮೂರು ಕಪ್ ಮಂಡಕ್ಕಿ ಬೇಕಾಗುತ್ತದೆ) ಇದನ್ನೂ ಓದಿ:Sabarimala Ayyappa: ಅಯ್ಯಪ್ಪ ಶಬರಿಮಲೆಯಲ್ಲಿ ಬಂದು ಯಾಕೆ ಕುಳಿತಿದ್ದಾನೆ ಗೊತ್ತೇ: ಆತ ಇಲ್ಲಿಗೆ ಬಾರದೇ ಇದ್ದಿದ್ದರೆ ಏನಾಗುತ್ತಿತ್ತು? ಇದರ ಹಿಂದೆ ಇದೆ ನೋಡಿ ಒಂದು ಅಚ್ಚರಿಯ ಕಹಾನಿ!

ನಂತರ ರುಬ್ಬಿದ ಮಂಡಕ್ಕಿಯನ್ನು ಮೊದಲೇ ರುಬ್ಬಿ ಇಟ್ಟುಕೊಂಡ ಅಕ್ಕಿ ಹಿಟ್ಟಿಗೆ ಸೇರಿಸಿ. ನಂತರ ಈ ಎರಡು ಹಿಟ್ಟನ್ನು ಚೆನ್ನಾಗಿ ಮಿಕ್ಸ್ ಮಾಡಿ ನೀವು ಸೌಟ್ ನಿಂದ ಅಥವಾ ಕೈಯಿಂದ ಮಿಕ್ಸ್ ಮಾಡಬಹುದು.

ಈಗ ಮಿಕ್ಸ್ ಮಾಡಿರುವ ದೋಸೆ ಹಿಟ್ಟನ್ನು ಸುಮಾರು ಎಂಟು ಗಂಟೆಗಳ ಕಾಲ ನೆನೆಯಲು ಬಿಡಿ ಅಥವಾ ರಾತ್ರಿ ನೆನೆಯಲು ಬಿಟ್ಟು ಬೆಳಿಗ್ಗೆ ದೋಸೆ ಮಾಡಿಕೊಳ್ಳಬಹುದು. 8 ಗಂಟೆಯ ನಂತರ ದೋಸೆ ಹಿಟ್ಟು ಚೆನ್ನಾಗಿ ಹುಳಿ ಬಂದಿರುತ್ತದೆ. ಅದಕ್ಕೆ ಸ್ವಲ್ಪ ಉಪ್ಪು ಹಾಗೂ ಅಗತ್ಯವಿದ್ದರೆ ಸ್ವಲ್ಪ ನೀರನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ ಮಾಡಿ ಎರಡು ಕಡೆಗೆ ಚೆನ್ನಾಗಿ ಬೇಯಿಸಿ ತೆಗೆದರೆ ರುಚಿಕರವಾದ ಮೆತ್ತಗಿನ ದೋಸೆ ಸವಿಯಲು ಸಿದ್ಧ. ದೋಸೆ ಏನು ಸಿದ್ಧವಾಯಿತು ಇದಕ್ಕೆ ಹಚ್ಚಿ ತಿನ್ನಲು ರುಚಿಕರವಾದ ಚಟ್ನಿ ಇದ್ದರೆ ಚೆನ್ನಾಗಿ ಇರುತ್ತೆ ಅಲ್ವಾ ಹಾಗಾದ್ರೆ ಒಂದು ರುಚಿಕರವಾದ ಚಟ್ನಿ ಮಾಡುವುದು ಹೇಗೆ ನೋಡೋಣ ಬನ್ನಿ.

ಚಟ್ನಿ ಮಾಡುವ ವಿಧಾನ;

ಒಂದು ಪ್ಯಾನ್ ಅನ್ನು ಗ್ಯಾಸ್ ಮೇಲೆ ಇಟ್ಟು ಬಿಸಿ ಮಾಡಿ ಅದಕ್ಕೆ ಎರಡು ಸ್ಪೂನ್ ಎಣ್ಣೆಯನ್ನು ಹಾಕಿ ನಂತರ ಸಿಪ್ಪೆ ಸುಲಿದ ನಾಲ್ಕು ಬೆಳ್ಳುಳ್ಳಿಯನ್ನು ಹಾಕಿ ಸ್ವಲ್ಪ ಬಣ್ಣ ಬದಲಾಗುವ ವರೆಗೆ ಹುರಿದುಕೊಳ್ಳಿ. ಈಗ ಕಾರಕ್ಕೆ ತಕ್ಕಷ್ಟು ಒಣ ಮೆಣಸನ್ನು ಹಾಕಿ ಸ್ವಲ್ಪ ಫ್ರೈ ಮಾಡಿ ಈಗ ಹೆಚ್ಚಿಟ್ಟುಕೊಂಡ ಒಂದು ದೊಡ್ಡ ಟೊಮೇಟೊವನ್ನು ಇದಕ್ಕೆ ಸೇರಿಸಿ ಜೊತೆಗೆ ಸ್ವಲ್ಪ ಹುಣಸೆ ಹಣ್ಣನ್ನು ಕೂಡ ಸೇರಿಸಬಹುದು ಇದನ್ನ ಒಂದು ಐದು ನಿಮಿಷಗಳ ಕಾಲ ಚೆನ್ನಾಗಿ ಬೇಯಲು ಬಿಡಿ.

ಟೊಮ್ಯಾಟೋ ಚೆನ್ನಾಗಿ ಬೆಂದ ನಂತರ ಗ್ಯಾಸ್ ಆಫ್ ಮಾಡಿ ಅದನ್ನು ಆರಲು ಬಿಡಿ ನಂತರ ಒಂದು ಮಿಕ್ಸರ್ ಜಾರ್ ಗೆ ಟೊಮೇಟೊ ಮಿಶ್ರಣವನ್ನು ಹಾಕಿ. ಅದಕ್ಕೆ ರುಚಿಗೆ ತಕ್ಕಷ್ಟು ಉಪ್ಪನ್ನು ಸೇರಿಸಿ ಚೆನ್ನಾಗಿ ನುಣುಪಾಗಿ ರುಬ್ಬಿಕೊಳ್ಳಿ. ಇದನ್ನು ಒಂದು ಪಾತ್ರೆಗೆ ಹಾಕಿಟ್ಟುಕೊಳ್ಳಿ.

ಕೊನೆಯಲ್ಲಿ ಎಣ್ಣೆ, ಸಾಸಿವೆ, ಒಣ ಮೆಣಸು, ಹಾಗೂ ಕರಿಬೇವನ್ನು ಹಾಕಿ ಒಗ್ಗರಣೆ ಮಾಡಿ ಚಟ್ನಿಗೆ ಕೊಟ್ಟರೆ ಸಾಕು ರುಚಿಕರವಾದ ದೋಸಾ ಹಾಗೂ ಚಟ್ನಿ ಸವಿಯಲು ಸಿದ್ಧ.