Scholarship 2024: ಸರ್ಕಾರದಿಂದ ವಿದ್ಯಾರ್ಥಿಗಳಿಗೆ ಬಂಪರ್ ನ್ಯೂಸ್. ಕಾರ್ಮಿಕರ ಇಲಾಖೆಯ ವಿದ್ಯಾರ್ಥಿ ವೇತನಕ್ಕೆ ಇವತ್ತೇ ಅರ್ಜಿ ಸಲ್ಲಿಸಿ; ಡೈರೆಕ್ಟ್ ಲಿಂಕ್ ಇಲ್ಲಿದೆ!

Scholarship 2024: ಶಾಲಾ ಕಾಲೇಜಿನ ವಿದ್ಯಾರ್ಥಿಗಳು ಗುಣಮಟ್ಟದ ಶಿಕ್ಷಣವನ್ನು ಪಡೆದುಕೊಳ್ಳುವ ನಿಟ್ಟಿನಲ್ಲಿ ಸರ್ಕಾರ ಸಾಕಷ್ಟು ಯೋಜನೆಗಳನ್ನು ಜಾರಿಗೆ ತಂದಿದ್ದು ಈಗ ಅವರಿಗೆ ಆರ್ಥಿಕ ಸಹಾಯವನ್ನು ಒದಗಿಸುವ ನಿಟ್ಟಿನಲ್ಲಿ, ವಿಶೇಷವಾಗಿ ಕಾರ್ಮಿಕರ ಮನೆಯ ಮಕ್ಕಳಿಗೆ ಕರ್ನಾಟಕ ಲೇಬರ್ ಕಾರ್ಡ್ ಸ್ಕಾಲರ್ಶಿಪ್ ಯೋಜನೆ ಅಡಿಯಲ್ಲಿ ಧನಸಹಾಯವನ್ನು ಮಾಡಲು ಹೊರಟಿದ್ದು ಆಸಕ್ತ ವಿದ್ಯಾರ್ಥಿಗಳು ಇದರ ಲಾಭವನ್ನು ಪಡೆದುಕೊಳ್ಳಬಹುದಾಗಿದೆ. ಈ ಯೋಜನೆ ಅಡಿಯಲ್ಲಿ ಯಾವ ರೀತಿಯಲ್ಲಿ ಅರ್ಜಿ ಸಲ್ಲಿಸಿ ಸ್ಕಾಲರ್ಶಿಪ್ ಪಡೆದುಕೊಳ್ಳಬಹುದಾಗಿದೆ ಎನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಪಡೆದುಕೊಳ್ಳೋಣ.

ಕರ್ನಾಟಕ ಲೇಬರ್ ಕಾರ್ಡ್ ಸ್ಕಾಲರ್ಶಿಪ್ 2024!

ನೋಂದಾವಣೆ ಮಾಡಿಕೊಂಡಿರುವಂತಹ ಕಟ್ಟಡ ಕಾರ್ಮಿಕರ ಮಕ್ಕಳಿಗೆ ಕಲಿಕಾ ಭಾಗ್ಯ ಯೋಜನೆ ಅಡಿಯಲ್ಲಿ ಶೈಕ್ಷಣಿಕ ಪ್ರೋತ್ಸಾಹ ಧನವನ್ನು ನೀಡುವಂತಹ ಕೆಲಸವನ್ನು ಸರ್ಕಾರ ಮಾಡಿಕೊಂಡು ಬಂದಿದೆ. ಇದರಿಂದಾಗಿ ಈ ವರ್ಗದ ಕುಟುಂಬದ ಮಕ್ಕಳು ಶಿಕ್ಷಣ ಪಡೆದುಕೊಳ್ಳುವುದಕ್ಕೆ ಸಹಾಯವಾಗುತ್ತಿದೆ. ಒಂದು ವೇಳೆ ನೀವು ಕೂಡ ಈ ವರ್ಗಕ್ಕೆ ಸೇರಿದವರಾಗಿದ್ದು ನಿಮಗೂ ಕೂಡ ಈ ಸ್ಕಾಲರ್ಶಿಪ್ ಬೇಕು ಅಂತ ಅನಿಸಿದ್ರೆ ಯಾವ ರೀತಿಯಲ್ಲಿ ಪಡೆದುಕೊಳ್ಳಬಹುದು ಅನ್ನೋದನ್ನ ಇವತ್ತಿನ ಈ ಲೇಖನಿಯ ಮೂಲಕ ನೀವು ತಿಳಿದುಕೊಳ್ಳಲಿದ್ದೀರಿ. ಕಾರ್ಮಿಕರ ಕಲ್ಯಾಣ ಇಲಾಖೆಯ ಕಡೆಯಿಂದ ನೋಂದಾವಣೆ ಆಗಿರುವಂತಹ ಕಾರ್ಮಿಕರ ಮನೆಯ ಇಬ್ಬರು ಮಕ್ಕಳಿಗೆ ಈ ಅವಕಾಶವನ್ನು ನೀಡುವಂತಹ ಕೆಲಸವನ್ನು ಶಿಕ್ಷಣ ಇಲಾಖೆ ಮಾಡುತ್ತದೆ. ಕಳಸಿ ಪಡೆದುಕೊಳ್ಳಲು ಅರ್ಹ ಆಗಿರುವಂತಹ ಎಲ್ಲಾ ಅಭ್ಯರ್ಥಿಗಳು SSP ತಂತ್ರಾಂಶದ ಮೂಲಕ ಈಗಾಗಲೇ 2023 ಹಾಗೂ 24ನೇ ಸಾಲಿಗೆ ಅರ್ಜಿ ಸಲ್ಲಿಸಿರುವ ವಿದ್ಯಾರ್ಥಿಗಳು ಮತ್ತೆ ಅರ್ಜಿ ಸಲ್ಲಿಸಬೇಕಾದ ಅಗತ್ಯ ಇಲ್ಲ.

ಸ್ಕಾಲರ್ಶಿಪ್ ಪಡೆದುಕೊಳ್ಳಲು ಬೇಕಾಗಿರುವ ಡಾಕ್ಯುಮೆಂಟ್ಗಳು!

  • ಕಾರ್ಮಿಕರ ಕಲ್ಯಾಣ ಮಂಡಳಿಯ ನೊಂದಾವಣಿ ಕಾರ್ಡ್ ಅನ್ನು ನೀಡಬೇಕು ಹಾಗೂ ಕಾರ್ಮಿಕರು ತಮ್ಮ ಪತಿ ಅಥವಾ ಪತ್ನಿಯ ಆಧಾರ್ ಕಾರ್ಡ್ ಜೆರಾಕ್ಸ್ ಅನ್ನು ಒದಗಿಸಬೇಕು.
  • ನೋಂದಣಿ ಮಾಡಿಸಿಕೊಂಡಿರುವ ಬ್ಯಾಂಕ್ ಡಿಟೇಲ್ಸ್ ಹಾಗೂ ವಿದ್ಯಾರ್ಥಿಯ ಆಧಾರ್ ಕಾರ್ಡ್ ಒದಗಿಸಬೇಕಾಗುತ್ತದೆ.
  • ಸ್ಟುಡೆಂಟ್ ಐಡಿ ವ್ಯಾಸಂಗ ಪ್ರಮಾಣ ಪತ್ರ ಹಾಗೂ ಉದ್ಯೋಗ ದೃಢೀಕರಣ ಪತ್ರದ ಜೊತೆಗೆ ಸ್ವಯಂ ದೃಢೀಕರಣ ಪತ್ರವನ್ನು ಕೂಡ ನೀಡಬೇಕಾಗುತ್ತದೆ.

ಈ ಯೋಜನೆ ಅಡಿಯಲ್ಲಿ ಸ್ಕಾಲರ್ಶಿಪ್ ಪಡೆದುಕೊಳ್ಳಲು ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಲು ನೇ 31 ಕೊನೆಯ ದಿನಾಂಕ ಆಗಿದೆ ಎಂಬುದನ್ನ ನೆನಪಿಸಿಕೊಳ್ಳಬೇಕು. ಲೇಬರ್ ಡಿಪಾರ್ಟ್ಮೆಂಟ್ ಸ್ಕಾಲರ್ಶಿಪ್ ನ ಅಧಿಕೃತ ವೆಬ್ ಸೈಟ್ ಗೆ ಹೋಗಿ ನೀವು ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಕಾರ್ಮಿಕರ ವರ್ಗಕ್ಕೆ ಸೇರಿರುವಂತಹ ಮನೆಯ ವಿದ್ಯಾರ್ಥಿಗಳು ಈ ಯೋಜನೆಯ ಲಾಭವನ್ನು ಅರ್ಜಿ ಸಲ್ಲಿಸುವ ಮೂಲಕ ಪಡೆದುಕೊಳ್ಳಬಹುದಾಗಿದ್ದು ಇಂತಹ ವರ್ಗಕ್ಕೆ ಸೇರಿರುವಂತಹ ವಿದ್ಯಾರ್ಥಿಗಳ ಜೊತೆಗೆ ಈ ಮಾಹಿತಿಯನ್ನು ಶೇರ್ ಮಾಡಿಕೊಳ್ಳಿ.

Comments are closed.