Sandalwood: ಬೇಡರ ಕಣ್ಣಪ್ಪನಾಗಿ ನಟಿಸುವುದಕ್ಕೆ ರಾಜಕುಮಾರ್ ಎಷ್ಟು ಸಂಭಾವನೆ ಪಡೆದುಕೊಂಡಿದ್ದರು ಗೊತ್ತಾ? ಅಯ್ಯೋ ಇಷ್ಟಾ?

Sandalwood: ಕನ್ನಡ ಚಿತ್ರರಂಗ ಕಂಡಂತಹ ಸಾರ್ವಕಾಲಿಕ ಶ್ರೇಷ್ಠ ನಟರಲ್ಲಿ ನಟಸಾರ್ವಭೌಮ ರಾಜಕುಮಾರ್ ಅವರು ಒಬ್ಬರಾಗಿ ಕಾಣಿಸಿಕೊಳ್ಳುತ್ತಾರೆ. ಇವತ್ತು ಸಾಕಷ್ಟು ಜನರು ಅವರ ಕುಟುಂಬವನ್ನು ಸಿನಿಮಾ ಹಿನ್ನೆಲೆ ಇರುವಂತಹ ಕುಟುಂಬ ಅದಕ್ಕಾಗಿಯೇ ಉತ್ತಮ ಅವಕಾಶ ಸಿಗುತ್ತದೆ ಹಾಗೂ ಇನ್ನೂ ಸಾಕಷ್ಟು ರೀತಿಯ ಮಾತುಗಳನ್ನು ಅವರ ವಿರುದ್ಧವಾಗಿ ಆಡಬಹುದು ಆದರೆ ರಾಜಕುಮಾರ್ ರವರು ಕೂಡ ಕನ್ನಡ ಚಿತ್ರರಂಗದಲ್ಲಿ ಏನು ಇಲ್ಲದೆ ಬಂದು ಎಲ್ಲವನ್ನು ಪಡೆದವರು ಅದು ಕೂಡ ತಮ್ಮ ಸ್ವಂತ ಪ್ರತಿಭೆ ಹಾಗೂ ಪರಿಶ್ರಮದ ಮೂಲಕ ಎಂಬುದು ಪ್ರತಿಯೊಬ್ಬರು ಕೂಡ ಅರ್ಥಮಾಡಿಕೊಳ್ಳ ಬೇಕಾಗಿರುವುದು ಅಗತ್ಯವಾಗಿದೆ.

ಸಿನಿಮಾ ನಟನಾಗಿ ಆಯ್ಕೆ ಆಗೋದಕ್ಕಿಂತ ಮುಂಚೆ ರಾಜಕುಮಾರ್ ರವರು ನಾಟಕದ ಕಂಪನಿಯಲ್ಲಿ ಪಾತ್ರವನ್ನು ನಿರ್ವಹಿಸುತ್ತಿದ್ದರು. ಊರು ಊರುಗಳಿಗೆ ತಿರುಗಿ ನಾಟಕ ಮಾಡುವ ಮೂಲಕ ತಮ್ಮ ಕುಟುಂಬದ ಹೊಟ್ಟೆ ಹೊರೆಯುವಂತಹ ಕೆಲಸವನ್ನು ರಾಜಕುಮಾರ್ ಅವರು ಮಾಡ್ತಾ ಇದ್ರು. ಮುತ್ತುರಾಜ ಸಿನಿಮಾದಲ್ಲಿ ಕಾಲಿಡೋದಕ್ಕಿಂತ ಮುಂಚೆ ನಾಟಕದ ಕ್ಷೇತ್ರದಲ್ಲಿ ಸಾಕಷ್ಟು ಪಳಗಿದ್ರು. ಇನ್ನು ಅವರ ತಂದೆಗೆ ತಮ್ಮ ಮಗನನ್ನ ನಟನಾಗಿ ಮಾಡಬೇಕು ಅನ್ನೋದಾಗಿ ಸಾಕಷ್ಟು ಆಸೆ ಇತ್ತು. ಕೊನೆಗೂ ಕೂಡ ಅದು ನಿಜಕ್ಕೂ ಕೂಡ ಸಂತೋಷದಾಯಕ ವಿಚಾರವಾಗಿ. ಇಂದು ರಾಜಕುಮಾರ್ ಅವರ ಹೆಸರಿನಲ್ಲಿ ನೂರಾರು ಸಿನಿಮಾಗಳು ಕಾಣಿಸಿಕೊಳ್ಳುತ್ತವೆ ಆದರೆ ರಾಜಕುಮಾರ್ ರವರ ಮೊದಲ ಸಿನಿಮಾ ವಾಗಿ ಕಾಣಿಸಿಕೊಳ್ಳುವುದು ಬೇಡರ ಕಣ್ಣಪ್ಪ ಅನ್ನೋದ್ರಲ್ಲಿ ಯಾವುದೇ ಅನುಮಾನವಿಲ್ಲ.

ಬೇಡರ ಕಣ್ಣಪ್ಪ ಸಿನಿಮಾ ರಾಜಕುಮಾರ್ ಪಡೆದುಕೊಂಡ ಸಂಪಾದನೆ?

ಬೇಡರ ಕಣ್ಣಪ್ಪ ಸಿನಿಮಾ ಬಿಡುಗಡೆಯಾಗಿ ಈಗಾಗಲೇ 70 ವರ್ಷಗಳು ಕಳೆದಿವೆ. ಈ ನಾಟಕದಿಂದ ಪ್ರೇರೇಪಿತವಾಗಿರುವ ಸಿನಿಮಾ ಇವತ್ತಿಗೂ ಕೂಡ ಕನ್ನಡ ಚಿತ್ರರಂಗದಲ್ಲಿ ಪ್ರಸ್ತುತ ಎನಿಸುವಂತಹ ಅಭಿಮಾನಿ ಬಳಗವನ್ನು ಹೊಂದಿದೆ. ಈ ಸಿನಿಮಾದ ಮೂಲಕ ಕನ್ನಡ ಚಿತ್ರರಂಗಕ್ಕೆ ನಿಜವಾದ ಸೂಪರ್ ಸ್ಟಾರ್ ಸಿಕ್ಕಿದ ಎಂದು ಹೇಳಬಹುದು. ಕನ್ನಡ ಚಿತ್ರರಂಗ 70 ವರ್ಷಗಳ ಕಾಲ ಸೆಲೆಬ್ರೇಟ್ ಮಾಡಿರುವಂತಹ ನಾಯಕನಟ ಬೇಡರ ಕಣ್ಣಪ್ಪ ಎನ್ನುವಂತಹ ಸಿನಿಮಾದ ಮೂಲಕ ಸಿಕ್ತಾರೆ.

200ಕ್ಕೂ ಹೆಚ್ಚಿನ ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದ ರಾಜಕುಮಾರ್ ರವರು ತಮ್ಮ ಸಿನಿಮಾ ಜರ್ನಿಯನ್ನು ಪ್ರಾರಂಭ ಮಾಡಿದ್ದು ಇದೇ ಬೇಡರ ಕಣ್ಣಪ್ಪ ಸಿನಿಮಾದ ಮೂಲಕ. 1954 ರಲ್ಲಿ ಬಿಡುಗಡೆಯಾಗಿದ್ದಂತಹ ಈ ಸಿನಿಮಾ ಭರ್ಜರಿಯಾಗಿ ಒಂದು ವರ್ಷಗಳ ಕಾಲ ಸಿನಿಮಾ ಥಿಯೇಟರ್ ಗಳಲ್ಲಿ ಓಡುತ್ತೆ. ಈ ಸಿನಿಮಾದಲ್ಲಿ ಪಂಡರಿ ಬಾಯಿ ರಾಜಕುಮಾರ್ ಅವರಿಗೆ ನಾಯಕಿಯಾಗಿ ಕಾಣಿಸಿಕೊಂಡಿದ್ದರು.

ಇನ್ನು ರಾಜಕುಮಾರು ತಿಂಗಳಿಗೆ 300 ರೂಪಾಯಿಗಳ ರೀತಿಯಲ್ಲಿ ಆರು ತಿಂಗಳು ಈ ಸಲುವಾಗಿ ಕೆಲಸ ಮಾಡಿ 1800 ರೂಪಾಯಿಗಳ ಸಂಭಾವನೆಯನ್ನು ಪಡೆದುಕೊಳ್ಳುತ್ತಾರೆ. ಇದು ರಾಜಕುಮಾರ್ ರವರು ಸಿನಿಮಾಗಾಗಿ ಮೊದಲಿಗೆ ಪಡೆದುಕೊಂಡಂತಹ ಸಂಭಾವನೆ ಆಗಿದೆ ಎಂದು ಹೇಳಬಹುದಾಗಿದೆ.

Comments are closed.