Ashika ranganath: ತೆಲುಗು ವೇದಿಕೆಯಲ್ಲಿ ಪುನೀತ್ ರಾಜ್ ಕುಮಾರ್ ರವರ ಮಾತನಾಡಿದ ಆಶಿಕಾ. ಹೇಳಿದ್ದನು ಗೊತ್ತೇ? ಕಣ್ಣೀರು ಹಾಕಿದ ಅಪ್ಪು ಫ್ಯಾನ್ಸ್!

Ashika ranganath: ಇಂದು ಯಾವುದೇ ಸಿನಿಮಾ ಇಂಡಸ್ಟ್ರಿ ನೋಡಿ ಎಲ್ಲಾ ಸಿನಿಮಾ ಇಂಡಸ್ಟ್ರಿಗಳಲ್ಲಿಯೂ ಕೂಡ ವಾರಕ್ಕೆ ನಾಲ್ಕೈದು ಸಿನಿಮಾಗಳಾದರೂ ಬಿಡುಗಡೆಯಾಗುತ್ತಿವೆ. ಅದರ ಜೊತೆಗೆ ಹೊಸ ನಾಯಕರು ಕೂಡ ಸಿನಿಮಾ ರಂಗಕ್ಕೆ ಎಂಟ್ರಿ ಕೊಡುತ್ತಿದ್ದಾರೆ. ಕನ್ನಡದ ಮಿಲ್ಕ್ ಬ್ಯೂಟಿ ಎಂದೇ ಖ್ಯಾತರಾಗಿರುವ ಆಶಿಕ ರಂಗನಾಥ್ ಅವರು ಇದೀಗ ಕನ್ನಡದಲ್ಲಿ ಮಾತ್ರವಲ್ಲದೆ ತೆಲುಗು ಸಿನಿಮಾಗಳಲ್ಲಿಯೂ ಕೂಡ ಅಭಿನಯಿಸುತ್ತಿದ್ದಾರೆ.

ಆಶಿಕಾ ರಂಗನಾಥ್ ಅವರು ನಂದಮೂರಿ ಕಲ್ಯಾಣ ರಾಮ ಅಭಿನಯದ ಅಮಿಗೋಸ್ ಚಿತ್ರದಲ್ಲಿ ಅಭಿನಯಿಸುವುದರ ಮೂಲಕ ತೆಲುಗು ಸಿನಿಮಾ ರಂಗದಲ್ಲಿ ತಮ್ಮ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ. ಆದರೆ ಮೊದಲ ಸಿನಿಮಾದಲ್ಲಿಯೇ ಆಶಿಕ ರಂಗನಾಥ್ ತೆಲುಗು ಸಿನಿಪ್ರಿಯರ ಮನಸ್ಸನ್ನು ಗೆದ್ದಿದ್ದಾರೆ. ಅವರಿಗೆ ಸಾಕಷ್ಟು ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕನ್ನಡ ಸ್ಪೂರದ್ರೂಪ ನಟಿ ಇದೀಗ ತೆಲುಗು ವೇದಿಕೆಗಳಲ್ಲಿ ಮಿಂಚುತ್ತಿದ್ದಾರೆ.

ತೆಲುಗು ಸಿನಿಮಾ ಉತ್ತಮ ಪ್ರಶಂಸೆಯನ್ನು ಪಡೆದುಕೊಂಡ ಹಿನ್ನೆಲೆಯಲ್ಲಿ ಆಶಿಕಾ ಅವರು ತೆಲುಗು ಚಿತ್ರರಂಗದ ವೇದಿಕೆ ಒಂದರಲ್ಲಿ ಮಾತನಾಡಿದರು. ಹೀಗೆ ಮಾತನಾಡುವಾಗ ಆಶಿಕಾ ರಂಗನಾಥ್ ನೆನಪಿಸಿಕೊಂಡಿದ್ದು ಕನ್ನಡದ ಸೂಪರ್ ಸ್ಟಾರ್ ಪುನೀತ್ ರಾಜಕುಮಾರ್ ಅವರನ್ನು.

ಆಶಿಕಾ ರಂಗನಾಥ್ ಅವರಿಗೆ ಪುನೀತ್ ರಾಜಕುಮಾರ್ ಅವರ ಜೊತೆಗೆ ನಟಿಸಬೇಕು ಎನ್ನುವ ಆಸೆ ಇತ್ತಂತೆ. ಹಾಗಾಗಿ ಎರಡು ಮೂರು ಬಾರಿ ಪುನೀತ್ ರಾಜಕುಮಾರ್ ಅವರನ್ನ ಭೇಟಿಯಾಗಿದ್ದೆ ಎಂದು ಆಶಿಕ ಹೇಳಿದ್ದಾರೆ. ಕೊನೆಗೂ ಅವರ ಜೊತೆ ನಟಿಸುವ ಅವಕಾಶವೂ ಸಿಕ್ಕಿತ್ತು. ಆದರೆ ಅವರು ನಮ್ಮನ್ನ ಬಿಟ್ಟು ಹೋದರು ಹಾಗಾಗಿ ನನ್ನ ಆಸೆ ಕನಸಾಗಿಯೇ ಉಳಿಯಿತು ಎಂದು ಆಶಿಕ ರಂಗನಾಥ್ ಹೇಳಿದ್ದಾರೆ. ಇನ್ನು ಆಶಿಕಾ ರಂಗನಾಥ್ ಅವರಿಗೆ ರಾಜಮೌಳಿ ಸಿನಿಮಾದಲ್ಲಿ ನಟಿಸುವ ಆಸೆ ಇದೆಯಂತೆ ಅವರ ಸಿನಿಮಾಗಳು ಇದೇ ರೀತಿ ಹಿಟ್ ಆಗ್ತಾ ಇದ್ರೆ ಆ ಕನಸು ನನಸಾಗುವ ಸಮಯ ದೂರ ಇಲ್ಲ.

Comments are closed.