Lucky Numbers: ನಿಮ್ಮ ಹುಟ್ಟಿದ ದಿನಾಂಕ ನಿಮ್ಮ ಯಶಸ್ಸಿನ ರಹಸ್ಯವನ್ನು ತಿಳಿಸುತ್ತೆ!

Lucky Numbers: ನಮ್ಮ ಜೀವನದಲ್ಲಿ ನಮ್ಮ ಯಶಸ್ಸನ್ನು ಲೆಕ್ಕಾಚಾರ ಹಾಕುವುದಕ್ಕೆ ಸಂಖ್ಯಾಶಾಸ್ತ್ರದ ಅಗತ್ಯತೆ ಕೂಡ ಸಾಕಷ್ಟು ಇರುತ್ತದೆ. ಸಂಖ್ಯಾಶಾಸ್ತ್ರದ ಪ್ರಕಾರ ನಾವು ಹುಟ್ಟಿರುವಂತಹ ದಿನಾಂಕದ ಆಧಾರದ ಮೇಲೆ ನಮ್ಮ ಅದೃಷ್ಟ ಸಂಖ್ಯೆ ಯಾವುದು ಹಾಗೂ ಅದಕ್ಕೆ ಸಂಬಂಧಪಟ್ಟಂತಹ ಇನ್ನಿತರ ವಿಚಾರಗಳನ್ನು ಕೂಡ ನಾವು ತಿಳಿದುಕೊಳ್ಳಬಹುದಾಗಿದೆ. ಹೀಗಾಗಿ ಇವತ್ತಿನ ಲೇಖನದಲ್ಲಿ ಕೂಡ ನಾವು ನಿಮಗೆ ಸಂಖ್ಯಾಶಾಸ್ತ್ರದ ಈ ರಹಸ್ಯದ ಬಗ್ಗೆ ಹೇಳಲು ಹೊರಟಿದ್ದು ತಪ್ಪದೆ ಲೇಖನವನ್ನು ಕೊನೆಯವರೆಗೂ ಓದಿ.

ಅದೃಷ್ಟ ಸಂಖ್ಯೆಯನ್ನು ಕಂಡುಹಿಡಿಯುವುದು ಹೇಗೆ ಅಂತ ಅಂದ್ರೆ ಉದಾಹರಣೆಗೆ ನೀವು ಅಕ್ಟೋಬರ್ ತಿಂಗಳ 15ನೇ ತಾರೀಖಿನ 1990ರ ಇಸ್ವಿಯಲ್ಲಿ ಜನಿಸಿದ್ರೆ ಆಗ ಅದೃಷ್ಟ ಸಂಖ್ಯೆಯನ್ನು ಲೆಕ್ಕಾಚಾರ ಹಾಕುವುದು 15+10+1990 = 6+1+10=7 ಅದೃಷ್ಟ ಸಂಖ್ಯೆ ಆಗಿರುತ್ತದೆ. ನಿಮ್ಮ ದಿನಾಂಕ ತಿಂಗಳು ಹಾಗೂ ಹುಟ್ಟಿದ ವರ್ಷವನ್ನು ಕೂಡಿದ ನಂತರ ಸಿಗುವಂತಹ ಅಂಕೆ ಅದೃಷ್ಟ ಸಂಖ್ಯೆ ಆಗಿರುತ್ತದೆ.

ಯಾವ ಅದೃಷ್ಟ ಸಂಖ್ಯೆ ಏನನ್ನು ಸೂಚಿಸುತ್ತದೆ?

ಅದೃಷ್ಟ ಸಂಖ್ಯೆ 1: ಅದೃಷ್ಟ ಸಂಖ್ಯೆ ಒಂದನ್ನು ಹೊಂದಿರುವಂತಹ ಜನರು ತಮ್ಮ 22 ಹಾಗೂ 34ನೇ ವಯಸ್ಸಿನಲ್ಲಿ ತಮ್ಮ ಯಶಸ್ಸಿನ ಉತ್ತುಂಗಕ್ಕೆ ಏರುತ್ತಾರೆ. ಈ ವಯಸ್ಸಿನಲ್ಲಿ ಅವರು ತಮ್ಮ ಜೀವನದಲ್ಲಿ ಯಶಸ್ಸನ್ನು ಪಡೆದುಕೊಳ್ಳಲು ಸಾಕಷ್ಟು ಅವಕಾಶಗಳನ್ನು ಹಾಗೂ ಅದೃಷ್ಟವನ್ನು ಸಂಪಾದನೆ ಮಾಡಿರುತ್ತಾರೆ.

ಅದೃಷ್ಟ ಸಂಖ್ಯೆ 2: ಇವರು ಕೂಡ 24 ಹಾಗೂ 38ನೇ ವಯಸ್ಸಿನಲ್ಲಿ ತಮ್ಮ ನಿಜವಾದ ಜೀವನದಲ್ಲಿ ಉತ್ತಮ ಯಶಸ್ಸನ್ನು ಪಡೆದುಕೊಳ್ಳುತ್ತಾರೆ. ಈ ವಯಸ್ಸಿನಲ್ಲಿ ತಮ್ಮ ಉದ್ಯೋಗದಲ್ಲಿ ಕೂಡ ಸಾಕಷ್ಟು ಪ್ರಗತಿಯನ್ನು ಸಾಧಿಸುತ್ತಾರೆ ಹಾಗೂ ಸಾಕಷ್ಟು ಆದಾಯದ ಮೂಲಗಳನ್ನು ಕೂಡ ಹೊಂದಿರುತ್ತಾರೆ. ಸಂಪತ್ತಿನ ರಾಶಿ ಇವರ ಕಾಲ ಬುಡದಲ್ಲಿ ಬಂದು ಬಿದ್ದಿರುತ್ತದೆ.

ಅದೃಷ್ಟ ಸಂಖ್ಯೆ 3 & 5: ಈ ಅದೃಷ್ಟ ಸಂಖ್ಯೆಗಳನ್ನು ಹೊಂದಿರುವಂತಹ ಜನರು ತಮ್ಮ 32ನೇ ವಯಸ್ಸಿನಲ್ಲಿ ನಿಜವಾದ ಯಶಸ್ಸನ್ನು ಪಡೆದುಕೊಳ್ಳುತ್ತಾರೆ. ಅಲ್ಲಿವರೆಗೂ ಕೂಡ ಉತ್ತಮ ಪರಿಶ್ರಮವನ್ನು ಮುಂದುವರಿಸಿಕೊಂಡು ಹೋಗಬೇಕು ಹಾಗೂ ತಮ್ಮ ಸಮಯಕ್ಕಾಗಿ ಕಾಯಬೇಕಾಗಿರುತ್ತದೆ. ಯಾವುದೇ ಕಾರಣಕ್ಕೂ ಕೆಟ್ಟ ಸಹವಾಸಗಳನ್ನು ಪ್ರಾರಂಭಿಸಿ ಕೆಟ್ಟದಾರಿ ತಲುಪಬಾರದು.

ಅದೃಷ್ಟ ಸಂಖ್ಯೆ 4: ಅದೃಷ್ಟ ಸಂಖ್ಯೆ ನಾಲ್ಕಿರಲಿ ಜನಿಸಿರುವಂತಹ ವ್ಯಕ್ತಿಗಳು ತಮ್ಮ 36ನೇ ವಯಸ್ಸಿನಲ್ಲಿ ಯಶಸ್ಸಿನ ಸವಿಯನ್ನು ಸವಿಯುತ್ತಾರೆ. ತಾವು ಮುಂದುವರೆಸಿಕೊಂಡು ಬಂದಿರುವಂತಹ ದಾರಿಯಲ್ಲೇ ಮುಂದೆ ಸಾಗಿದರೆ ಅವರು ಖಂಡಿತವಾಗಿ ತಮ್ಮ ಜೀವನದ ಅತ್ಯಂತ ಸಂತೋಷದ ಕ್ಷಣಗಳನ್ನು ಹಾಗೂ ಐಷಾರಾಮಿ ಕ್ಷಣಗಳನ್ನು ಕಾಣಬಹುದಾಗಿದೆ.

ಅದೃಷ್ಟ ಸಂಖ್ಯೆ 6: ಶುಕ್ರನ ಪ್ರಭಾವದಿಂದಾಗಿ 25 27 ಹಾಗೂ 32ನೇ ವಯಸ್ಸಿನಲ್ಲಿ ಇವರು ತಮ್ಮ ಜೀವನದಲ್ಲಿ ಉತ್ತಮ ಕ್ಷಣಗಳನ್ನು ಕಾಣಬಹುದಾದಂತಹ ಅವಕಾಶವನ್ನು ಹೊಂದಿರುತ್ತಾರೆ. ಇದಕ್ಕಾಗಿ ಅವರು ತಮ್ಮ ಪರಿಶ್ರಮವನ್ನು ಮುಂದುವರಿಸಬೇಕು ಹಾಗೂ ಪ್ರತಿಯೊಂದು ವಿಚಾರಗಳಲ್ಲಿ ನಿರ್ಧಾರವನ್ನು ತೆಗೆದುಕೊಳ್ಳುವಾಗ ಸಾಧಕ ಬಾದಕಗಳ ಬಗ್ಗೆ ಲೆಕ್ಕಾಚಾರ ಮಾಡಬೇಕಾಗಿರುತ್ತದೆ.

ಅದೃಷ್ಟ ಸಂಖ್ಯೆ ಏಳು: ಸಾಮಾನ್ಯವಾಗಿ ಇವರು 20 ವರ್ಷದ ನಂತರ ಗೆಲುವಿನ ದಾರಿಯನ್ನ ಕಾಣಲು ಪ್ರಾರಂಭ ಮಾಡುತ್ತಾರೆ ಆದರೆ ಅದಾದ ನಂತರ ಅವರು 30 38 ಹಾಗು 44ನೇ ವಯಸ್ಸಿನಲ್ಲಿ ಕೂಡ ಸಾಕಷ್ಟು ಅದೃಷ್ಟ ಶಾಲಿಗಳಾಗಿರುತ್ತಾರೆ ಅನ್ನೋದನ್ನ ಸಂಖ್ಯಾಶಾಸ್ತ್ರ ಹೇಳುತ್ತದೆ.

ಅದೃಷ್ಟ ಸಂಖ್ಯೆ 8: 36 ಹಾಗೂ 42ನೇ ವಯಸ್ಸು ಅನ್ನೋದು ಅದೃಷ್ಟ ಸಂಖ್ಯೆ ಎಂಟು ಹೊಂದಿರುವವರ ಜೀವನದಲ್ಲಿ ಸಾಕಷ್ಟು ಅದೃಷ್ಟವನ್ನು ಹೊತ್ತು ತರುತ್ತದೆ ಹಾಗೂ ಜೀವನದಲ್ಲಿ ಅಂದುಕೊಂಡಿದ್ದನ್ನೆಲ್ಲಾ ಸಾಧಿಸುವಂತಹ ಅವಕಾಶವನ್ನು ಕೂಡ ನೀಡುತ್ತದೆ.

ಅದೃಷ್ಟ ಸಂಖ್ಯೆ 9: ಅದೃಷ್ಟ ಸಂಖ್ಯೆ ಒಂಬತ್ತು ಹೊಂದಿರುವವರು ತಮ್ಮ 26ನೇ ವಯಸ್ಸಿನಲ್ಲಿ ಯಾವುದೇ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದರೂ ಕೂಡ ಅವರು ಅಂದುಕೊಂಡಿರುವಂತಹ ಗೆಲುವು ಅವರಿಗೆ ಸಿಗಲಿದೆ. ಅವರು ಅಂದುಕೊಂಡಿರುವಂತಹ ಕನಸಿನ ಜೀವನ ಅವರದಾಗಲಿದೆ.

Comments are closed.