Politics: ‘ಕರ್ನಾಟಕದ ಟ್ಯಾಕ್ಸ್ ಹಣದಲ್ಲಿ ಯಾಕೆ ಕೇಂದ್ರ ಸರ್ಕಾರ ರಾಜ್ಯಕ್ಕೆ ಮೋಸ ಮಾಡ್ತಾ ಇದೆ?” ಅನ್ನೋ ಪ್ರಶ್ನೆಗೆ ಮೋದಿ ನೀಡಿದ ಉತ್ತರ ಏನು ಗೊತ್ತಾ?

Politics: ಈಗಾಗಲೇ ಲೋಕಸಭಾ ಚುನಾವಣೆ ಇಡೀ ದೇಶದಲ್ಲಿ ಯಾವ ರೀತಿಯಲ್ಲಿ ವೇಗವಾಗಿ ನಡಿತಾ ಇದೆ ಅನ್ನೋದು ನಿಮಗೆಲ್ಲರಿಗೂ ತಿಳಿದಿರುವಂತಹ ವಿಚಾರವಾಗಿದೆ. ದೇಶದಲ್ಲಿ ಬೇರೆ ಬೇರೆ ಹಂತದಲ್ಲಿ ಬೇರೆ ಬೇರೆ ರಾಜ್ಯಗಳಲ್ಲಿ ಬೇರೆ ಬೇರೆ ದಿನಾಂಕದಲ್ಲಿ ಲೋಕಸಭಾ ಚುನಾವಣೆ ನಡೆಯುತ್ತಿದೆ. ಒಂದು ಕಡೆ ನರೇಂದ್ರ ಮೋದಿ ಅವರು ತಮ್ಮ ಮಿತ್ರ ಪಕ್ಷಗಳ ಜೊತೆಗೆ ಬಿಜೆಪಿ ನೇತೃತ್ವದಲ್ಲಿ ಮತ್ತೊಮ್ಮೆ ಮೂರನೇ ಬಾರಿಗೆ ಅಧಿಕಾರದ ಚುಕ್ಕಾಣಿಯನ್ನು ಪಡೆಯುವಂತಹ ಪ್ರಯತ್ನದಲ್ಲಿ ಇದ್ದಾರೆ. ಇನ್ನೊಂದು ಕಡೆಯಲ್ಲಿ ಕಳೆದ ಸಾಕಷ್ಟು ವರ್ಷಗಳಿಂದ ಅಧಿಕಾರಕ್ಕಾಗಿ ಕಾಯುತ್ತಿರುವಂತಹ ರಾಹುಲ್ ಗಾಂಧಿಯವರು ತಮ್ಮ ಅದೃಷ್ಟ ಪರೀಕ್ಷೆಯನ್ನು ಈ ಬಾರಿಯ ಚುನಾವಣೆಯಲ್ಲಿ ಮಾಡ್ತಾ ಇದ್ದಾರೆ. ಈ ಬಾರಿ ಕೂಡ ಎರಡು ಪಕ್ಷಗಳ ನಡುವೆ ಮಾತಿನ ಚಕಮಕಿ ಹಾಗೂ ಪ್ರಣಾಳಿಕೆಯ ವಿಚಾರದಲ್ಲಿ ಕೂಡ ಪೈಪೋಟಿ ನಡೆಯುತ್ತಿದೆ.

ಟ್ಯಾಕ್ಸ್ ಹಣ ಕರ್ನಾಟಕಕ್ಕೆ ಯಾಕೆ ಸಿಕ್ತಾ ಇಲ್ಲ ಅಂದಿದ್ದಕ್ಕೆ ಮೋದಿಜಿ ಹೇಳಿದ್ದೇನು ಗೊತ್ತಾ?

ಕಳೆದ ಸಾಕಷ್ಟು ಸಮಯಗಳಿಂದಲೂ ಕೂಡ ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ನಾವು ಹೆಚ್ಚಿನ ಟ್ಯಾಕ್ಸ್ ಹಣವನ್ನು ನೀಡಿದರೂ ಕೂಡ ನಮಗೆ ಕೇಂದ್ರ ಸರ್ಕಾರದಿಂದ ಸಿಗುವಂತಹ ಅನುದಾನದ ಹಣ ಕಡಿಮೆ ಎಂಬುದಾಗಿ ಆರೋಪವನ್ನು ಮಾಡ್ತಾ ಇತ್ತು. ಇದಕ್ಕೆ ಕೊನೆಗೂ ಇತ್ತೀಚಿಗಷ್ಟೇ ನಡೆದಿರುವಂತಹ ಸಂದರ್ಶನದಲ್ಲಿ ನರೇಂದ್ರ ಮೋದಿ ಅವರು ಸರಿಯಾದ ಉತ್ತರವನ್ನು ನೀಡಿದ್ದಾರೆ ಎಂದು ಹೇಳಬಹುದಾಗಿದೆ. ಅಷ್ಟಕ್ಕೂ ಈ ಪ್ರಶ್ನೆಗೆ ನರೇಂದ್ರ ಮೋದಿಜಿ ಏನು ಹೇಳಿದ್ದಾರೆ ಅನ್ನೋದನ್ನ ತಿಳಿಯೋಣ ಬನ್ನಿ.

ಈ ಪ್ರಶ್ನೆಗೆ ಉತ್ತರ ನೀಡುತ್ತಾ ನರೇಂದ್ರ ಮೋದಿಯವರು ನಮ್ಮ ದೇಶದ ಉತ್ತರ ಭಾಗದಲ್ಲಿ ಹಿಮಾಲಯ ಇದೆ ಆದರಿಂದ ನದಿಗಳು ಹರಿದುಕೊಂಡು ಬರುತ್ತದೆ. ಇದು ಹರಿಯೋದು ಹಿಮಾಚಲ ಪ್ರದೇಶ ರಾಜ್ಯದಲ್ಲಿ. ಹಿಮಾಚಲ ಪ್ರದೇಶ ರಾಜ್ಯದಲ್ಲಿ ನೀರು ಹರಿಯುತ್ತದೆ ಎಂದ ಮಾತ್ರಕ್ಕೆ ಅಲ್ಲಿನ ನೀರು ಅಲ್ಲಿಗೆ ಮಾತ್ರ ಸಿಗಬೇಕು ಎಂಬುದಾಗಿ ಹೇಳಲಾಗುತ್ತಾ? ಅದೇ ರೀತಿಯಲ್ಲಿ ನಮ್ಮ ಭಾರತ ದೇಶದ ಬೇರೆ ಯಾವುದು ರಾಜ್ಯದಲ್ಲಿ ಕಲ್ಲಿದ್ದಲನ್ನು ಹೆಚ್ಚಾಗಿ ನಿರ್ಮಾಣ ಮಾಡಲಾಗುತ್ತದೆ. ಆಗಿಂದ ಮಾತ್ರಕ್ಕೆ ಅಲ್ಲಿನ ಕಲ್ಲಿದ್ದಲು ಕೇವಲ ಅಲ್ಲಿ ಮಾತ್ರ ಬಳಸುವುದಕ್ಕೆ ಹೇಳುವುದಕ್ಕೆ ಸಾಧ್ಯವಾಗುತ್ತಾ. ಎಲ್ಲಿ ಹೆಚ್ಚಾಗಿ ಬೇಕಾಗಿರುತ್ತದೆಯೋ ಅಲ್ಲಿ ಅದನ್ನು ವಿನಿಯೋಗಿಸುವಂತಹ ಕೆಲಸವನ್ನು ಮಾಡಬೇಕಾಗಿರುತ್ತದೆ ಎಂಬುದು ಸತ್ಯವಾಗಿದೆ. ಹೀಗಾಗಿ ಯಾವ ರಾಜ್ಯಗಳಿಗೆ ಹೆಚ್ಚಿನ ಹಣದ ಅಗತ್ಯತೆ ಇರುತ್ತದೆಯೋ ಅಲ್ಲಿಗೆ ಅವುಗಳನ್ನು ವಿನಿಯೋಗಿಸ ಬೇಕಾಗಿರುತ್ತದೆ ಈ ದೇಶ ಅನ್ನೋದು ಯಾರೋ ಒಬ್ಬರ ಸಂಪತ್ತು ಅಲ್ಲ. ಪ್ರತಿಯೊಬ್ಬರ ಸಂಪತ್ತು. ಹೀಗಾಗಿ ಈ ರೀತಿಯ ಮಾತುಗಳನ್ನು ಆಡೋದು ಸಮಂಜಸವಲ್ಲ ಅನ್ನೋ ರೀತಿಯಲ್ಲಿ ಸರಿಯಾದ ರೀತಿಯಲ್ಲಿ ನರೇಂದ್ರ ಮೋದಿಯವರು ಈ ಅಪವಾದಗಳಿಗೆ ನೇರ ಪ್ರತಿಕ್ರಿಯೆ ನೀಡಿದ್ದಾರೆ.

Comments are closed.