Cricket News: ಟೂರ್ನಿಗೆ ಕೆಲವೇ ದಿನಗಳು ಇರುವಾಗ ಆರ್ಸಿಬಿ ತಂಡಕ್ಕೆ ಸಿಹಿ ಸುದ್ದಿ: CSK ಗೆ ಬಿಗ್ ಶಾಕ್. ಐಪಿಎಲ್ ನಲ್ಲಿ ಏನಾಗುತ್ತಿದೆ ಗೊತ್ತೇ?

Cricket News: ಐಪಿಎಲ್ ಹದಿನಾರನೇ ಸೀಸನ್ ಇನ್ನೇನು ಆರಂಭವಾಗಲಿದೆ. ವೇಳಾಪಟ್ಟಿಯು ಕೂಡ ಈಗಾಗಲೇ ಬಿಡುಗಡೆಯಾಗಿದೆ. ಐಪಿಎಲ್ ಮೊದಲ ಪಂದ್ಯ ಮಾರ್ಚ್ 31ಕ್ಕೆ ಆರಂಭವಾಗಲಿದೆ. ಗುಜರಾತ್ ಟೈಟನ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ನಡುವೆ ಮೊದಲ ಪಂದ್ಯ ನಡೆಯಲಿದೆ. ಗುಜರಾತ್ ಟೈಟನ್ಸ್ ಕಳೆದ ವರ್ಷ ಚಾಂಪಿಯನ್ ಆಗಿದ್ದ ತಂಡ. ಆದರೆ ಈ ಮ್ಯಾಚ್ ಆರಂಭವಾಗುವುದರ ಮೊದಲೇ ತಂಡಗಳಿಗೆ ಶಾಕಿಂಗ್ ಸುದ್ದಿ ಒಂದು ಎದುರಾಗಿದೆ.

ಸಿಎಸ್‌ಕೆ ತಂಡಕ್ಕೆ ಇದು ಕಹಿ ಸುದ್ದಿ:

ಮಿನಿ ಹರಾಜ್ ನಲ್ಲಿ ಚೆನ್ನೈ ತಂಡಕ್ಕೆ ಸೇರಿಕೊಂಡಿದ್ದ ನ್ಯೂಜಿಲ್ಯಾಂಡ್ ಆಲ್ ರೌಂಡರ್ ಜೇಮಿಸನ್, ಬೆನ್ನು ನೋವಿನ ಕಾರಣಕ್ಕೆ ಐಪಿಎಲ್ ನಲ್ಲಿ ಆಡುತ್ತಿಲ್ಲ. ಅವರು ಇತ್ತೀಚಿಗೆ ಯಾವುದೇ ಅಂತರಾಷ್ಟ್ರೀಯ ಪಂದ್ಯದಲ್ಲಿಯೂ ಕೂಡ ಆಟವಾಡಲು ಸಾಧ್ಯವಾಗಿಲ್ಲ. ಇತ್ತೀಚಿಗೆ ಜೇಮಿಸನ್ ಅಭ್ಯಾಸ ಪಂದ್ಯದಲ್ಲಿ ಆಡಿದ್ದರು ಆದರೆ ಟೆಸ್ಟ್ ಪಂದ್ಯದಿಂದ ಅವರು ಹಿಂದೆ ಸರಿದಿದ್ದಾರೆ.

ಆರ್ ಸಿ ಬಿ ತಂಡಕ್ಕೆ ಒಂದು ಗುಡ್ ನ್ಯೂಸ್:

ಆಸ್ಟ್ರೇಲಿಯಾದ ಆಲ್ ರೌಂಡರ್ ಗ್ಲೆನ್ ಮ್ಯಾಕ್ಸಿವೆಲ್, ಫಿಟ್ ಆಗಿದ್ದು ಆರ್‌ಸಿಬಿಗೆ ಆನೆ ಬಲ ಬಂದಂತಾಗಿದೆ. ಮ್ಯಾಕ್ಸ್ ಕಾಲಿಗೆ ಗಾಯವಾಗಿತ್ತು ಹಾಗಾಗಿ ಅವರು ಕೆಲವು ತಿಂಗಳಿನಿಂದ ಪಂದ್ಯದಲ್ಲಿ ಪಾಲ್ಗೊಳ್ಳಲು ಸಾಧ್ಯವಾಗಿರಲಿಲ್ಲ. ಆದರೆ ಇದೀಗ ಅವರ ಆರೋಗ್ಯದಲ್ಲಿ ಚೇತರಿಕೆ ಕಂಡಿದ್ದು ಆರ್ ಸಿಬಿ ತಂಡವನ್ನು ಪ್ರತಿನಿಧಿಸುವುದು ಪಕ್ಕ ಆಗಿದೆ.

ಐಪಿಎಲ್ 16 ನೇ ಮಾರ್ಚ್ 31ಕ್ಕೆ ಆರಂಭವಾಗುತ್ತೆ ಒಟ್ಟು 10 ತಂಡಗಳು ಭಾಗವಹಿಸಲಿದ್ದು ತಂಡಗಳನ್ನು ಎರಡು ಗುಂಪುಗಳಾಗಿ ವಿಂಗಡಿಸಲಾಗಿದೆ. ಆರ್ ಸಿ ಬಿ ವಿರುದ್ಧ ಮುಂಬೈ ಆಡಲಿದ್ದು ಈ ಪಂದ್ಯ ಏಪ್ರಿಲ್ 2ರಂದು ಸಂಜೆ 7:30ಕ್ಕೆ ಆರಂಭವಾಗಲಿದೆ.

Comments are closed.