Shivrajkumar: 25 ವರ್ಷದ ಫ್ಯೂಚರ್ ಪ್ಲಾನ್ ಹೇಳೇ ಬಿಟ್ರು ಶಿವಣ್ಣ; ಈ ಒಂದು ಕೆಲಸ ಮಾಡೇ ಮಾಡುತ್ತಾರಂತೆ ಏನು ಗೊತ್ತಾ?

Shivrajkumar: ಶಿವರಾಜ್ ಕುಮಾರ್ ಅವರ ಬಗ್ಗೆ ಎಷ್ಟು ಹೇಳಿದರು ಕಡಿಮೆನೇ. ಒಬ್ಬ ಹೀರೋ (JHero) ಆಗಿ ಮಾತ್ರವಲ್ಲ ಒಬ್ಬ ಅತ್ಯುತ್ತಮ ವ್ಯಕ್ತಿತ್ವದಿಂದಲೂ ಕೂಡ ಗುರುತಿಸಿಕೊಂಡವರು ಶಿವರಾಜಕುಮಾರ್ ಅವರು. ಅವರಿಗೆ ಈಗ ಬರೋಬ್ಬರಿ 60 ವರ್ಷ ವಯಸ್ಸು ಆದರೆ ಯಾವ ಆಂಗಲ್ ನಲ್ಲಿಯೂ ಕೂಡ ಹಾಗೆ ಅನಿಸುವುದೇ ಇಲ್ಲ ಯಂಗ್ ಅಂಡ್ ಎನರ್ಜಿಟಿಕ್ (Young and energetic)  ಹೀರೋ ಶಿವರಾಜ್ ಕುಮಾರ್ ಅವರು.

ಶಿವಣ್ಣ ಕನ್ನಡ ಸಿನಿಮಾ ಇಂಡಸ್ಟ್ರಿಗೆ ಬಂದು 35 ವರ್ಷಗಳು ಕಳೆದವು .ಇಲ್ಲಿಯವರೆಗೆ ಸುಮಾರು 125 ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. 1986ರಲ್ಲಿ ತೆರೆಕಂಡ ಶಿವಣ್ಣ ಅವರ ಮೊದಲನೆಯ ಸಿನಿಮಾ ಆನಂದ್. ಇತ್ತೀಚಿಗೆ ತೆರೆಕಂಡ 125 ನೆಯ ಸಿನಿಮಾ ವೇದ. ಅಲ್ಲಿಂದ ಇಲ್ಲಿವರೆಗೂ ಶಿವಣ್ಣ ಅವರ ನಡೆ-ನುಡಿ ನೃತ್ಯ ನಟನೆ ಯಾವುದರಲ್ಲಿಯೂ ಕೂಡ ಬದಲಾವಣೆ ಆಗಿಲ್ಲ. ಅದೇ ಎನರ್ಜಿ ಅದೇ ಚಾರ್ಮ್ ಉಳಿಸಿಕೊಂಡು ಬಂದಿದ್ದಾರೆ ಶಿವಣ್ಣ. ಇದನ್ನೂ ಓದಿ: Drumstick benefits: ನುಗ್ಗೆಕಾಯಿ ಸೇವನೆ ಮಾಡಿದರೆ ಏನಾಗುತ್ತದೆ ಗೊತ್ತಾ; ಪುರುಷರು ಕೂಡ ತಿಳಿದುಕೊಳ್ಳಲೇ ಬೇಕು

ಸಿನಿಮಾ ರಂಗದಲ್ಲಿ 35 ವರ್ಷ ಕಂಪ್ಲೀಟ್ ಮಾಡಿದ್ದಕ್ಕೆ ಕನ್ನಡಿಗರಿಗೆ ಧನ್ಯವಾದ ತಿಳಿಸಿದ್ದಾರೆ ಶಿವಣ್ಣ. “ಕಳೆದ 37 ವರ್ಷಗಳಿಂದ ನನ್ನನ್ನು ಸಪೋರ್ಟ್ ಮಾಡಿಕೊಂಡು ಬಂದಿದ್ದೀರಿ ಯಾವುದೊ ಮೂಡನಲ್ಲಿ ಕೋಪದಲ್ಲಿ ಏನೋ ಹೇಳಿರಬಹುದು ಅದನ್ನು ತಡೆದುಕೊಂಡು ಬೆಂಬಲ ನೀಡಿದ್ದಕ್ಕೆ ಧನ್ಯವಾದಗಳು.. ನಾನು ಇನ್ನು 25 ವರ್ಷ ನಟನೆ ಮಾಡಬಹುದು ಎಂದು ಅನಿಸುತ್ತೆ” ಎಂಬುದಾಗಿ ಶಿವಣ್ಣ ಟ್ವಿಟರ್ ನಲ್ಲಿ ಬರೆದುಕೊಂಡಿದ್ದಾರೆ.

ಫೆಬ್ರುವರಿ 19ಕ್ಕೆ 37 ವರ್ಷಗಳ ವೃತ್ತಿ ಜೀವನವನ್ನು ಯಶಸ್ವಿಯಾಗಿ ಪೂರೈಸಿದ್ದ ಖುಷಿಯಲ್ಲಿ ಇದ್ದಾರೆ ಶಿವಣ್ಣ”ಮೊದಲ ಚಿತ್ರ ಆನಂದ್ ಮೊದಲ ದೃಶ್ಯ ಈಗಲೂ ಕಣ್ಣಿಗೆ ಕಟ್ಟಿದಂತಿದೆ ಆನಂದ್ ಸಿನಿಮಾದಿಂದ ವೇದದವರೆಗೂ ನೀವು ಕೊಟ್ಟ ಪ್ರೀತಿ ಬೆಲೆಕಟ್ಟಲಾಗದು. ನನ್ನನ್ನು ನೀವು ಕೇವಲ ಒಬ್ಬ ನಟನಾಗಿ ಮಾತ್ರವಲ್ಲದೆ ನಿಮ್ಮ ಮನೆ ಮಗನಾಗಿ ಬೆಳೆಸಿದ್ದೀರಿ. ಅನಂತ ವಂದನೆಗಳು” ಎಂಬುದಾಗಿ ಶಿವಣ್ಣ ಪೋಸ್ಟ್ ಬರೆದುಕೊಂಡಿದ್ದಾರೆ. ಪೋಸ್ಟ್ ನೋಡಿದ ಶಿವಣ್ಣ ಅವರ ಅಭಿಮಾನಿಗಳು ಖುಷಿಯಲ್ಲಿ ಶುಭ ಹಾರೈಸಿದ್ದಾರೆ.

Comments are closed.