Sara ali Khan: ಶಿವನಿಗೆ ಕೈ ಮುಗಿದು ತಿಲಕ ಇಟ್ಟಿದ್ದಕ್ಕೆ ಸಾರಾ ಅಲಿ ಖಾನ್ ಗೆ “ನ*ರಕಕ್ಕೆ ಹೋಗ್ತೀಯಾ” ಎಂದು ಬೈಗುಳ; ಹೇಳಿದ್ಯಾರು ಗೊತ್ತೇ?

Sara ali Khan:ಎಲ್ಲ ರಂಗಗಳಲ್ಲೂ ಹೊಸಬರ ಎಂಟ್ರಿ ಆಗುತ್ತಲೇ ಇರುತ್ತದೆ. ಹಾಗೆಯೇ ಚಿತ್ರರಂಗದಲ್ಲೂ ಕೂಡ. ಇದೀಗ ಮೂರನೇ ತಲೆಮಾರಿನವರ ಕಾಲ. ತಂದೆ, ತಾಯಿ ನಟ, ನಟಿ, ನಿರ್ದೇಶಕಿ ಅಥವಾ ಚಿತ್ರರಂಗದಲ್ಲಿದ್ದರೆ ಅವರ ಮಕ್ಕಳು ಸಹ ಚಿತ್ರರಂಗಕ್ಕೆ ಬರುತ್ತಾರೆ. ಅವರಿಗೆ ಚಿತ್ರರಂಗಕ್ಕೆ ಬರುವುದು ದೊಡ್ಡ ವಿಚಾರ ಎನಿಸುವುದಿಲ್ಲ. ಏಕೆಂದರೆ ಅದಕ್ಕೆ ಬೇಕಾದ ಎಲ್ಲ ಸಿದ್ದತೆಗಳನ್ನು ಪಾಲಕರೇ ಮಾಡಿಬಿಟ್ಟಿರುತ್ತಾರೆ. ಆದರೆ ಚಿತ್ರರಂಗಕ್ಕೆ ಬಂದ ನಂತರ ತಮ್ಮ ಛಾಪನ್ನು ಮೂಡಿಸುವುದು, ಜನರ ಪ್ರೀತಿ, ಅಭಿಮಾನ ಗಳಿಸುವುದು ಮಾತ್ರ ಅವರ ಸ್ವಂತ ತಾಕತ್ತಿನ ಮೇಲೆ. ಬಾಲಿವುಡ್ನಲ್ಲೂ ಈಗ ಮೂರನೇ ತಲೆಮಾರಿನ ಜಮಾನ. ನಟ ಸೈಫ್ ಅಲಿ ಖಾನ್ ಮಗಳು ಸಾರಾ ಅಲಿ ಖಾನ್ ಅವರು ಸಹ ಚಿತ್ರರಂಗದಲ್ಲಿ ಕೆಲಸ ಮಾಡುತ್ತಿದ್ದಾರೆ. ತಮ್ಮ ಮುಗ್ದ ಅಭಿನಯದಿಂದ ಜನರ ಮನಸೂರೆಗೊಂಡಿದ್ದಾರೆ. ಸಾಲು ಸಾಲು ಚಿತ್ರದಲ್ಲಿ ಅಭಿನಯಿಸುವ ಮೂಲಕ ಬ್ಯೂಸಿ ನಟಿಯಾಗಿದ್ದಾರೆ.

ಮೊನ್ನೆ ಮೊನ್ನೆ ಶಿವರಾತ್ರಿ ಹಬ್ಬವನ್ನು ದೇಶದಾದ್ಯಂತ ಭಕ್ತಿಭಾವದಿಂದ ಆಚರಿಸಲಾಯಿತು. ಭಕ್ತರು ಶಿವನ ದೇವಾಲಯಗಳಿಗೆ ತೆರಳಿ ದರ್ಶನ ಪಡೆದು ಪುನೀತರಾದರು. ಅಲ್ಲದೆ ಉಪವಾಸ, ಜಾಗರಣೆ ಮಾಡುವ  ಮೂಲಕ ತಮ್ಮ ಭಕ್ತಿಯನ್ನು ಸಮರ್ಪಿಸಿದರು. ಶಿವರಾತ್ರಿ ಹಬ್ಬದ ದಿನ ನಟಿ ಸಾರಾ ಅಲಿ ಖಾನ್ ಅವರು ಬೋಲೇನಾಥ ದೇವಾಲಯಕ್ಕೆ ಭೇಟಿ ನೀಡಿದ್ದರು. ಇದನ್ನು ಅವರು ತಮ್ಮ ಸಾಮಾಜಿಕ ಜಾಲತಾಣದ ಖಾತೆಗಳಲ್ಲಿ ಹಂಚಿಕೊಂಡಿದ್ದಾರೆ.

ಈ ಫೋಟೋಗಳಲ್ಲಿ ಹಣೆಗೆ ಶ್ರೀಗಂಧವನ್ನು ಹಚ್ಚಿಕೊಂಡು ದೇವರ ಎದುರು ನಮಿಸುತ್ತಿದ್ದಾರೆ. ಇದರ ಜೊತೆ ಶಿವರಾತ್ರಿ ಹಬ್ಬದ ಶುಭಾಶಯಗಳನ್ನು ಕೋರಿದ್ದಾರೆ. ಈ ಚಿತ್ರಗಳಲ್ಲಿ ನೀವು ಕೇದಾರನಾಥದಿಂದ ಸೋಮನಾಥದವರೆಗಿನ ಸಾರವನ್ನು ನೋಡಬಹುದಾಗಿದೆ.

ಒಂದು ಫೋಟೊದಲ್ಲಿ ಅವರು ಶಿವನ ದೇವಾಲಯದಲ್ಲಿ ಪರಶಿವನಿಗೆ ಭಕ್ತಿಯಿಂದ ಕೈಮುಗಿದು ಕುಳಿತಿದ್ದಾರೆ. ಕೊರಳಲ್ಲಿ ಜೈ ಭೀಮಾಶಂಕರ ಎನ್ನುವ ಚುನ್ರಿ ಧರಿಸಿದ್ದಾರೆ. ಇದರ ಜೊತೆ ಶಿವನ ದೇವಾಲಯದ ಎದುರು ಹಲವು ಫೋಸ್ ನೀಡಿ ಫೋಟೊ ತೆಗೆಸಿಕೊಂಡಿದ್ದಾರೆ.

ಈ ಫೋಟೊಗಳನ್ನು ನೋಡಿದ ಸಾರಾ ಅಲಿ ಖಾನ್ ಅವರ ಮುಸ್ಲಿಂ ಅಭಿಮಾನಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ನೀನು ಮುಸ್ಲಿಂ ಆಗಿರುವುದರಿಂದ ಸಮಾದಿಗೆ ಹೋಗಬೇಕು ಹಾಗೂ ನಮಾಜ್ ಮಾಡಬೇಕು ಎಂದು ಸಲಹೆ ನೀಡಿದ್ದಾರೆ. ಇನ್ನು ಕೆಲವರು ಇಂತವರು ಮುಸ್ಲಿಂ ಹೆಸರಿಗೆ ಕಳಂಕ ತರುತ್ತಿದ್ದಾರೆ ಎಂದು ಕಮಿಂಟ್ ಮಾಡಿದ್ದಾರೆ.

Comments are closed.