Kannada Astrology:ಮಾರ್ಚ್ ತಿಂಗಳ ಆರಂಭದ ಬಗ್ಗೆ ತಲೆಕೆಡಿಸಿಕೊಳ್ಳಬೇಡಿ ಈ ರಾಶಿಯವರಿಗೆ ಹಣದ ಬಾಧೆ ಇನ್ನು ಮುಂದೆ ಇರುವುದಿಲ್ಲ; ಯಾವ ರಾಶಿಗಳಿಗೆ ಗೊತ್ತೇ?

Kannada Astrology: ಕುಂಭ ರಾಶಿಯಲ್ಲಿ ಅಸ್ತಮಿಸಿರುವ ಶನಿ ಸಂಪೂರ್ಣವಾಗಿ ಉದಯಿಸುವ ಕಾಲ ಹತ್ತಿರ ಬಂದಿದೆ ಮಾರ್ಚ್ 5ರಂದು ಶನಿಯ ಸಂಪೂರ್ಣ ಉದಯವಾಗುತ್ತದೆ. ಹಾಗಾಗಿ ಕೆಲವು ರಾಶಿಯ ಮೇಲೆ ಶನಿಯ ನೇರ ಪರಿಣಾಮ ಬೀರಲಿದೆ. ಆದರೆ ಇದು ಸಕಾರಾತ್ಮಕವಾಗಿ ಇರಲಿದ್ದು ಕೆಲವು ರಾಶಿಯವರು ಯಾವ ಕೆಲಸಕ್ಕೆ ಕೈ ಹಾಕಿದರು ಯಶಸ್ಸನ್ನ ಪಡೆದುಕೊಳ್ಳುತ್ತಾರೆ. ಹಾಗಾದ್ರೆ ಅಂತಹ ಅದೃಷ್ಟ ರಾಶಿಗಳು ಯಾವುವು ನೋಡೋಣ ಬನ್ನಿ!

ವೃಷಭ ರಾಶಿ:

ಶನಿಯ ಉದಯದಿಂದ ವೃಷಭ ರಾಶಿಗೆ ಒಳ್ಳೆಯದೇ ಆಗಲಿದೆ ಎಂದು ಜ್ಯೋತಿ ಶಾಸ್ತ್ರದ ಪ್ರಕಾರ ಹೇಳಲಾಗುತ್ತದೆ ಈ ರಾಶಿಯವರು ಏನೇ ಕೆಲಸ ಮಾಡಲು ಹೋದರು ಸಫಲರಾಗುತ್ತಾರೆ. ಜೀವನದಲ್ಲಿ ಪ್ರಗತಿ ಸಾಧಿಸುತ್ತಾರೆ ಆರ್ಥಿಕವಾಗಿ ಪರಿಸ್ಥಿತಿ ಇನ್ನಷ್ಟು ಸುಧಾರಿಸಲಿದೆ. ಅರ್ಥದಲ್ಲಿ ನಿಂತು ಹೋದ ಕೆಲಸಗಳನ್ನು ಪೂರ್ಣಗೊಳ್ಳುತ್ತವೆ.

ಕುಂಭ ರಾಶಿ:

ಶನಿಯ ಉದಯಿಸುವುದರಿಂದ ಕುಂಭ ರಾಶಿಯವರಿಗೆ ಹೆಚ್ಚಿನ ಲಾಭ ತಂದು ಕೊಡುತ್ತಾನೆ. ಶನಿಯ ಉದಯದಿಂದಾಗಿ ಹಠಾತ್ ಧನ ಲಾಭ. ಉದ್ಯೋಗ ಆಕಾಂಕ್ಷಿಗಳಿಗೆ ಉತ್ತಮ ಉದ್ಯೋಗ ದೊರೆಯುತ್ತದೆ. ಶಿಕ್ಷಣ ಕ್ಷೇತ್ರದಲ್ಲಿಯೂ ಹೆಚ್ಚಿನ ಪ್ರಗತಿ ಇರುತ್ತದೆ. ಯಾವುದೇ ಕೆಲಸ ಮಾಡಿದರು ಕೂಡಲೇ ಪ್ರತಿಫಲ ದೊರೆಯುತ್ತದೆ.

ಸಿಂಹ ರಾಶಿ;

ಶನಿ ಉದಯಿಸುವುದರಿಂದ ಸಿಂಹ ರಾಶಿಗೂ ಸಾಕಷ್ಟು ಉತ್ತಮ ಪ್ರತಿಫಲ ದೊರೆಯಲಿದೆ. ಮನೆಯಲ್ಲಿ ಸುಖ ಶಾಂತಿ ನೆಮ್ಮದಿ ನೆಲೆಸಲಿದೆ. ಸ್ನೇಹಿತರೊಂದಿಗೆ ಉತ್ತಮ ಸಂಬಂಧ ಹೊಂದಲಿದ್ದೀರಿ. ಆರೋಗ್ಯದಲ್ಲಿಯೂ ಕೂಡ ಉತ್ತಮ ಚೇತರಿಕೆ ಕಂಡುಬರುತ್ತದೆ.

ಮೀನ ರಾಶಿ:

ಶನಿಯ ಉದಯ ಮೀನ ರಾಶಿಯ ಮೇಲು ಹೆಚ್ಚಿನ ಪರಿಣಾಮ ಬೀರಲಿದೆ. ಇವರಿಗೆ ಏನೇ ಸಮಸ್ಯೆ ಇದ್ದರೂ ಮಾರ್ಚ್ ತಿಂಗಳಿನಲ್ಲಿ ಅದೆಲ್ಲವೂ ಸರಿ ಹೋಗುತ್ತದೆ ಉತ್ತಮ ದಿನಗಳನ್ನು ಕಾಣುತ್ತೀರಿ. ಹೆಚ್ಚಾಗಿ ಧಾರ್ಮಿಕ ಕಾರ್ಯಗಳಲ್ಲಿ ಭಾಗವಹಿಸಿ. ಕಳೆದುಕೊಂಡ ಮನಸ್ಸಿನ ಶಾಂತಿ ಮತ್ತೆ ಸಿಗುತ್ತದೆ.

Comments are closed.