Film News:ಚಿಕ್ಕ ವಯಸ್ಸಿನ ಸುಂದರಿಯರನ್ನೇ ಮದುವೆಯಾಗಿ ಎಂದು ಯುವಕರಿಗೆ ಸಲಹೆ ಕೊಟ್ಟ ಸೈಫ್. ಯಾಕೆ ಅಂತೇ ಗೊತ್ತೇ??

Film News: ಬಾಲಿವುಡ್ ನಲ್ಲಿ ಪಾಪಾರಾಜಿಗಳ ಹವಾ ಹೆಚ್ಚಾಗಿರುತ್ತದೆ ಎಂದರೆ ತಪ್ಪಲ್ಲ. ಸೆಲೆಬ್ರಿಟಿಗಳು ಹೋಗುವ ಕಡೆಯಲ್ಲೆಲ್ಲಾ ಇವರು ಇರುತ್ತಾರೆ, ಅವರುಗಳ ಫೋಟೋ ತೆಗೆದು, ವಿಡಿಯೋ ಕ್ಯಾಪ್ಚರ್ ಮಾಡುತ್ತಾರೆ. ಪಾಪಾರಾಜಿಗಳಿಂದ ಕಲಾವಿದರಿಗೆ ಒಳ್ಳೆಯ ಪ್ರಚಾರ ಸಿಗುತ್ತದೆ, ಆದರೆ ಕೆಲವೊಮ್ಮೆ ಅವರು ಮಾಡುವ ಕೆಲಸ ಮುಜುಗರವನ್ನು ಕೂಡ ತರುತ್ತದೆ. ಇದೀಗ ಅಂಥದ್ದೇ ಘಟನೆ ನಟ ರಣಬೀರ್ ಕಪೂರ್ ಮತ್ತು ಆಲಿಯಾ ಭಟ್ ಜೋಡಿಯ ಮನೆ ವಿಚಾರದಲ್ಲಿ ನಡೆದಿದ್ದು, ಈ ಜೋಡಿ ಈಗ ಕೋರ್ಟ್ ಮೂಲಕ ಕಾನೂನು ಕ್ರಮ ಕೈಗೊಳ್ಳುವ ನಿರ್ಧಾರ ಮಾಡಿದ್ದಾರೆ.

ನಡೆದಿದ್ದೇನು ಎಂದರೆ, ಕೆಲವು ದಿನಗಳ ಹಿಂದೆ, ಆಲಿಯಾ ಭಟ್ ಅವರು ತಮ್ಮ ಮನೆಯ ಬಾಲ್ಕನಿಯಲ್ಲಿ ನಿಂತಿದ್ದಾಗ, ಪಾಪಾರಾಜಿಗಳ ಪಕ್ಕದ ಮನೆಯ ಟೆರೇಸ್ ಇಂದ ಆಲಿಯಾ ಭಟ್ ಅವರ ಫೋಟೋ ಕ್ಲಿಕ್ ಮಾಡಿ ಅದನ್ನು ಶೇರ್ ಮಾಡಿಕೊಂಡಿದ್ದು, ಆ ಫೋಟೋವನ್ನು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಮಾಡಿದ್ದರು. ಇದನ್ನು ಆಲಿಯಾ ಭಟ್ ಅವರು ರೀಶೇರ್ ಮಾಡಿ, ಪ್ರೈವೆಸಿಗೆ ಧಕ್ಕೆ ಆಗಿದೆ ಎಂದಿದ್ದರು, ಆಲಿಯಾ ಭಟ್ ಅವರನ್ನು ಇನ್ನು ಕೆಲವು ಸೆಲೆಬ್ರಿಟಿಗಳು ಕೂಡ ಸಪೋರ್ಟ್ ಮಾಡಿದ್ದರು. ಇದೀಗ ಈ ವಿಚಾರದ ಬಗ್ಗೆ ನಟ ರಣಬೀರ್ ಕಪೂರ್ ಮಾತನಾಡಿದ್ದಾರೆ.

“ನಮ್ಮ ಪ್ರೈವೆಟ್ ಸ್ಪೇಸ್ ಗೆ ಅವರು ಬಂದಿದ್ದಾರೆ. ನನ್ನ ಮನೆಯಲ್ಲಿ ಏನು ಬೇಕಾದರೂ ನಡೆಯುತ್ತಿರಬಹುದು, ಅದನ್ನು ರೆಕಾರ್ಡ್ ಮಾಡುವ ಹಾಗಿಲ್ಲ. ಅದು ನನ್ನ ಮನೆ, ಈ ಘಟನೆಯನ್ನು ನಾವು ಕಾನೂನಿನ ಮೂಲಕವೇ ಡೀಲ್ ಮಾಡುತ್ತೇವೆ..ಈ ಘಟನೆ ಬಗ್ಗೆ ಜಾಸ್ತಿ ಮಾತಾಡೋದಕ್ಕೆ ನನಗೆ ಇಷ್ಟವಿಲ್ಲ, ಇದು ಕೊಳಕು ಬುದ್ಧಿ. ಪಾಪಾರಾಜಿಗಳ ಮೇಲೆ ನನಗು ಗೌರವ ಇದೆ, ಅವರು ಚಿತ್ರರಂಗಕ್ಕೆ ಸೇರಿದವರು, ನಾವು ಅವರು ಜೊತೆಯಾಗಿ ಕೆಲಸ ಮಾಡುತ್ತೇವೆ, ಆದರೆ ಅವರು ಕೆಲವು ಸಾರಿ ಈ ಥರ ಮಾಡಿದರೆ, ಇರಿಸು ಮುರಿಸಿ ಉಂಟಾಗುತ್ತದೆ..” ಎಂದು ನಟ ರಣಬೀರ್ ಕಪೂರ್ ಅವರು ಒಂದು ಸಂದರ್ಶನದಲ್ಲಿ ಹೇಳಿದ್ದು, ಈ ಮೂಲಕ ಕಾನೂನು ಕ್ರಮ ಕೈಗೊಳ್ಳುವುದು ಖಚಿತ ಎಂದು ಹೇಳಿದ್ದಾರೆ.

Comments are closed.