Kannada Astrology: ಶನಿ ದೇವನೇ ಈ ರಾಶಿಯವರನ್ನು 7 ತಿಂಗಳು ಕಾಲ ಕುಬೇರರನ್ನಾಗಿ ಮಾಡುತ್ತಾನೆ, ಯಾವ್ಯಾವ ರಾಶಿಗಳನ್ನು ಗೊತ್ತೇ??

Kannada Astrology:ಶನಿದೇವರು ಎಲ್ಲರಿಗೂ ಕಷ್ಟಕೊಡುವ ದೇವರಲ್ಲ., ಶನಿದೇವರು ಪ್ರತಿಯೊಬ್ಬ ವ್ಯಕ್ತಿ ಮಾಡುವ ಕರ್ಮದ ಅನುಸಾರ ಅವನಿಗೆ ಫಲ ನೀಡುತ್ತಾನೆ, ಒಳ್ಳೆಯದನ್ನು ಮಾಡುವವರಿಗೆ ಒಳ್ಳೆಯಫಲ, ಕೆಟ್ಟದ್ದು ಮಾಡುವವರಿಗೆ ಕೆಟ್ಟಫಲ ಸಿಗುತ್ತದೆ. ಹೀಗೆ ಶನಿದೇವರು ತನ್ನ ಸ್ಥಾನ ಬದಲಾವಣೆ ಮಾಡಿದಾಗ ಅದು ಎಲ್ಲಾ ರಾಶಿಗಳ ಮೇಲೆ ಪರಿಣಾಮ ಬೀರುತ್ತದೆ, ಅಷ್ಟೇ ಅಲ್ಲದೆ ಶನಿದೇವರು ನಕ್ಷತ್ರವನ್ನು ಬದಲಾಯಿಸಿದಾಗ ಕೂಡ ಎಲ್ಲಾ ರಾಶಿಗಳ ಮೇಲೆ ಪರಿಣಾಮ ಬೀರುತ್ತದೆ. ಈಗ ಮಾರ್ಚ್ 15ರಂದು ಶನಿಗ್ರಹವು ಬೆಳಗ್ಗೆ 11:40ಕ್ಕೆ ಮೊದಲ ಪಾದದಲ್ಲಿ ಶತಭಿಷಾ ನಕ್ಷತ್ರಕ್ಕೆ ಪ್ರವೇಶ ಮಾಡುತ್ತದೆ. 2023ರ ಅಕ್ಟೋಬರ್ 17ರ ಮಧ್ಯಾಹ್ನ 1:37ರವರೆಗು ಅದೇ ನಕ್ಷತ್ರದಲ್ಲಿ ಇರಲಿದ್ದು, ಈ ವೇಳೆ 6 ರಾಶಿಯವರಿಗೆ ವಿಶೇಷವಾದ ಪ್ರಯೋಜನ ಸಿಗಲಿದೆ. ಆ ರಾಶಿಗಳು ಯಾವುವು ಎಂದು ತಿಳಿಸುತ್ತೇವೆ ನೋಡಿ..

ಮೇಷ ರಾಶಿ :- ಒಂದು ವೇಳೆ ನೀವು ಹೊಸ ಬ್ಯುಸಿನೆಸ್ ಶುರು ಮಾಡಬೇಕು ಎಂದುಕೊಂಡಿದ್ದ ಇದು ಒಳ್ಳೆಯ ಸಮಯ. ಈಗಾಗಲೇ ಬ್ಯುಸಿನೆಸ್ ಮಾಡುತ್ತಿರುವವರಿಗ್ಗೆ ಲಾಭ ಸಿಕ್ಕಿ, ಹಣಕಾಸಿನ ವಿಚಾರದಲ್ಲಿ ಬಲವಾಗುತ್ತೀರಿ. ಶತಭಿಷಾ ನಕ್ಷತ್ರದ ತ್ರಿಕೋನ ರಾಶಿಯಲ್ಲಿ ಶನಿದೇವರಿರುವ ಕಾರಣಕ್ಕೆ ಈ ರಾಶಿಯವರಿಗೆ ಹಣಕಾಸಿನ ಲಾಭ ಹೆಚ್ಚಾಗುತ್ತದೆ. ಮಾಡುವ ಎಲ್ಲಾ ಕೆಲಸದಲ್ಲು ಯಶಸ್ಸು ನಿಮ್ಮದಾಗುತ್ತದೆ.

ಮಿಥುನ ರಾಶಿ :- ಬೇರೆ ದೇಶದಲ್ಲಿ ಓದಬೇಕು, ಕೆಲಸ ಮಾಡಬೇಕು ಎಂದು ಬಹಳ ಸಮಯದಿಂದ ಕನಸು ಕಾಣುತ್ತಿರುವವರಿಗೆ ಈಗ ನನಸಾಗುವ ಸಮಯ. ಉದ್ಯೋಗದಲ್ಲಿ ಲಾಭದ ಫಲಿತಾಂಶ ಪಡೆಯುತ್ತೀರಿ. ಶನಿಗ್ರಹದ ಕೃಪೆಯಿಂದ ನಿಮಗೆ ಕೆಲವು ತೊಂದರೆ ಆಗಬಹುದು, ಆದರೆ ಕಷ್ಟಪಟ್ಟರೆ ಎಲ್ಲವೂ ಸರಿ ಹೋಗುತ್ತದೆ. ಮುಂದಿನ ಏಳು ನಿಮಗೆ ಅದೃಷ್ಟ ತರುವುದರಿಂದ ಸಿಗುವ ಅವಕಾಶಗಳನ್ನು ಕಳೆದುಕೊಳ್ಳಬೇಡಿ.

ಸಿಂಹ ರಾಶಿ :- ಶತಭಿಷಾ ನಕ್ಷತ್ರದಲ್ಲಿ ಶನಿ ಇರುವುದರಿಂದ ಈ ರಾಶಿಯವರಿಗೆ ಕೆಲಸ ಯಶಸ್ಸು ಹಾಗೂ ವೃತ್ತಿ ವರ್ಗಾವಣೆಗೆ ಕಾರಣ ಆಗಬಹುದು. ಹೊಸ ಉದ್ಯೋಗ ಬೇಕು ಎಂದುಕೊಂಡವರಿಗೆ ಒಳ್ಳೆಯ ಅವಕಾಶ ಸಿಗಬಹುದು. ಈ ಸಮಯ ಬ್ಯುಸಿನೆಸ್ ಮಾಡುತ್ತಿರುವವರಿಗೆ ಉತ್ತಮ ಫಲಿತಾಂಶ ನೀಡುತ್ತದೆ. ಹಣಕಾಸಿನ ವಿಚಾರದಲ್ಲಿ ಹೆಚ್ಚು ಪ್ರಯೋಜನ ಇದೆ. ಮನೆಯ ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ.

ತುಲಾ ರಾಶಿ :- ಶನಿದೇವರ ನಕ್ಷತ್ರ ಬದಲಾವಣೆ ಇಂದ ಈ ರಾಶಿಯವರಿಗೆ ಉದ್ಯೋಗದಲ್ಲಿ ಒಳ್ಳೆಯದಾಗುತ್ತದೆ. ತುಲಾ ರಾಶಿಯವರಿಗೆ ಇದು ಶುಭ ಸಮಯ, ಸ್ವಯಂ ಉದ್ಯೋಗ ಮಾಡುತ್ತಿರುವವರಿಗೆ ಲಾಭ ಹೆಚ್ಚಾಗುತ್ತದೆ. ಹಣ ಸಂಪಾದನೆ ಮಾಡಲು ಶಾರ್ಟ್ ಕಟ್ ತೆಗೆದುಕೊಳ್ಳಬಾರದು. ಈ ರೀತಿ ಮಾಡಿದರೆ ನಿಮಗೆ ನಷ್ಟವಾಗುತ್ತದೆ. ಸಮಾಜದಲ್ಲಿ ನಿಮಗೆ ಒಳ್ಳೆಯ ಹೆಸರು ಸಿಗುತ್ತದೆ.

ಧನು ರಾಶಿ :- ಶನಿದೇವರ ನಕ್ಷತ್ರ ಬದಲಾವಣೆ ಈ ರಾಶಿಯವರಿಗೆ ಶುಭ ನೀಡುತ್ತದೆ, ಎಲ್ಲಾ ಕೆಲಸಗಳಲ್ಲೂ ಯಶಸ್ಸು ಪಡೆಯುತ್ತಾರೆ. ಕೆಲಸ ಮಾಡುತ್ತಿರುವವರಿಗ್ಗೆ ಬಡ್ತಿ ಮತ್ತು ಆದಾಯ ಎರಡು ಕೂಡ ಹೆಚ್ಚಾಗುತ್ತದೆ. ನೀವು ಇಷ್ಟಪಟ್ಟ ಕೆಲಸ ಪಡೆಯುವಲ್ಲಿ ಯಶಸ್ಸು ಪಡೆಯುತ್ತೀರಿ.

ಮಕರ ರಾಶಿ :- ಶನಿದೇವರು ಶತಭಿಷಾ ನಕ್ಷತ್ರಕ್ಕೆ ಪ್ರವೇಶ ಮಾಡುತ್ತಿರುವುದರಿಂದ ಬ್ಯುಸಿನೆಸ್ ಮಾಡುತ್ತಿರುವವರಿಗೆ ಹೆಚ್ಚು ಲಾಭ ಸಿಗುತ್ತದೆ. ಬ್ಯುಸಿನೆಸ್ ನಲ್ಲಿ ಲಾಭ ಪಡೆಯುತ್ತೀರಿ, ಶನಿದೇವರ ಕೃಪೆಯಿಂದ ಹೆಚ್ಚಿನ ಹಣಕಾಸಿನ ಲಾಭ ಪಡೆಯುತ್ತೀರಿ. ಈ ವೇಳೆ ಶುರು ಮಾಡಿದರೆ, ನಿಮ್ಮ ಬ್ಯುಸಿನೆಸ್ ನಲ್ಲಿ ಬಹಳ ಸಮಯದವರೆಗು ಲಾಭ ಪಡೆಯುತ್ತೀರಿ.

Comments are closed.