magala Gochara 2023:ಈ ತಿಂಗಳ 13ನೇ ತಾರೀಖಿನಿಂದ ಮಿಥುನ ರಾಶಿಯಲ್ಲಿ ಮಂಗಳನ ಸಂಚಾರ: ಮಂಗಳ ಸುಮ್ಮನೆ ಬಂದು ಹೋಗುವುದಿಲ್ಲ ಈ ರಾಶಿಯವರಿಗೆ ಎಂತಹ ಅದೃಷ್ಟ ತರುತ್ತಾನೆ ನೋಡಿ!

magala Gochara 2023: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಮಾರ್ಚ್ 13 ಅಂದರೆ ಸೋಮವಾರದ ದಿನ ಬೆಳಿಗ್ಗೆ 5:47ಕ್ಕೆ ಮಿಥುನ ರಾಶಿಗೆ ಮಂಗಳನ ಪ್ರವೇಶ ಆಗಲಿದೆ ಇದು ಏಪ್ರಿಲ್ 5ರ ವರೆಗೂ ನಡೆಯುತ್ತದೆ. ಪ್ರತಿಗ್ರಹ ಸಂಚಾರದಿಂದಲೂ 12 ರಾಶಿಗಳ ಮೇಲೆ ಪರಿಣಾಮ ಇರುತ್ತದೆ. ಮಿಥುನ ರಾಶಿಯನ್ನು ಪ್ರವೇಶ ಮಾಡಲಿರುವ ಮಂಗಳನು ಕೆಲವರಿಗೆ ಶುಭ ಹಾಗೂ ಇನ್ನು ಕೆಲವರಿಗೆ ಅಶುಭ ಫಲವನ್ನು ನೀಡಲಿದ್ದಾನೆ. ಹಾಗಾದ್ರೆ ಯಾವ ರಾಶಿಯವರಿಗೆ ಯಾವ ಫಲ ನೋಡೋಣ.

ಮಿಥುನ ರಾಶಿ:

ವ್ಯಾಪಾರಿಗಳಿಗೆ ಲಕ್ ಕುಲಾಯಿಸಿತು ಎಂದೇ ಅರ್ಥ ಆದರೆ ಮಾತನಾಡುವಾಗ ಮಾತ್ರ ಬಹಳ ಎಚ್ಚರಿಕೆ ಇರಲಿ ನೀವು ಕೆಲಸ ಮಾಡುವ ಕಚೇರಿಯಲ್ಲಿ ಎಲ್ಲರೂ ನಿಮ್ಮನ್ನ ಬೆಂಬಲಿಸುತ್ತಾರೆ. ಜೊತೆಗೆ ಕೆಲಸದಲ್ಲಿ ತಾಯಿಯ ಬೆಂಬಲವೂ ಇರುತ್ತದೆ.

ಸಿಂಹ ರಾಶಿ:

ಮಂಗಳನ ಸಂಚಾರದಿಂದ ಸಿಂಹ ರಾಶಿಯವರಿಗೆ ಶುಭ ಫಲ. ಹೆತ್ತವರ ಜೊತೆಗೆ ಸಂಬಂಧ ಸುಧಾರಿಸುತ್ತದೆ ಸಾಮಾಜಿಕತೆ ಮೊದಲಿಗಿಂತಲೂ ಉತ್ತಮವಾಗಿರುತ್ತದೆ. ವ್ಯಾಪಾರವನ್ನು ವಿಸ್ತರಿಸಲು ಇದು ಸರಿಯಾದ ಸಮಯ ನಿಮ್ಮ ಸಹೋದರ ಸಹೋದರಿಯರಿಂದ ಎಲ್ಲಾ ಕೆಲಸಕ್ಕೂ ಬೆಂಬಲ ಪಡೆಯುತ್ತೀರಿ.

ಕನ್ಯಾ ರಾಶಿ:

ವೃತ್ತಿ ಜೀವನ ಇನ್ನಷ್ಟು ಸುಧಾರಿಸಲಿದೆ. ಸ್ನೇಹಿತರನ್ನ ನಿರ್ಲಕ್ಷಿಸಬೇಡಿ. ವೃತ್ತಿ ಜೀವನದಲ್ಲಿ ನಿರತರಾಗಿ ಬ್ಯುಸಿ ಆಗಿದ್ದಾಗ ಕುಟುಂಬದ ಕಡೆಗೆ ಗಮನ ಕೊಡುವುದನ್ನು ಮರೆಯಬಹುದು ಹಾಗೆ ಮಾಡಿದರೆ ನಿಮ್ಮ ವೈಯಕ್ತಿಕ ಜೀವನಕ್ಕೆ ತೊಂದರೆ ಆಗುತ್ತದೆ ಎಂಬುದನ್ನು ನೆನಪಿಡಿ.

ಧನು ರಾಶಿ:

ಒಂಟಿಯಾಗಿದ್ದವರು ಜಂಟಿ ಆಗುವ ಸಮಯ ಇದು ಮದುವೆಯ ನಿರೀಕ್ಷೆಯಲ್ಲಿದ್ದರೆ ನಿಮಗೆ ವಿವಾಹ ಪ್ರಸ್ತಾಪಗಳು ಕೇಳಿ ಬರಬಹುದು ಅದೇ ರೀತಿಯಾಗಿ ವಿವಾಹ ಆದವರಿಗೂ ಈ ಸಮಯ ಶುಭ ಫಲ ನೀಡಲಿದೆ. ಆದರೂ ಸಂಗಾತಿಯ ಜೊತೆಗೆ ಜೀವನ ಸುಧಾರಿಸಿಕೊಳ್ಳುವಲ್ಲಿ ಎಚ್ಚರಿಕೆ ವಹಿಸಿ.

Comments are closed.