mounika manoj marriage: ಎರಡನೇ ಮದುವೆಯಾದ ತನ್ನ ಮಗ ಮನೋಜ್ ಗೆ ಶಾಕ್ ಕೊಟ್ಟ ತಂದೆ ಮೋಹನ್ ಬಾಬು: ತೆಗೆದುಕೊಂಡ ಗಟ್ಟಿ ನಿರ್ಧಾರ ಏನು ಗೊತ್ತೇ? ಆಸ್ತಿ ಆಸೆಗೆ ಮದುವೆಯಾದವನಿಗೆ ಬಿಗ್ ಶಾಕ್.

mounika manoj marriage:ತೆಲುಗು ಚಿತ್ರರಂಗದ ಖ್ಯಾತ ನಟ ಮೋಹನ್ ಬಾಬು ಅವರು 70 ಮತ್ತು 80ರ ದಶಕದಲ್ಲಿ ಸ್ಟಾರ್ ಹೀರೋಗಳ ಜೊತೆಗೆ ಸರಿಸಮವಾಗಿ ಹೆಸರು ಮಾಡಿ ಬೆಳೆದವರು. ಹಲವು ಸೂಪರ್ ಹಿಟ್ ಸಿನಿಮಾಗಳ ಮೂಲಕ ಒಳ್ಳೆಯ ಹೆಸರು ಪಡೆದುಕೊಂಡ ಮೋಹನ್ ಬಾಬು ಅವರು, ಕೆಲವು ಸಾರಿ ವಿವಾಗಳಲ್ಲಿ ಕೂಡ ಸಿಕ್ಕಿಹಾಕಿಕೊಂಡಿದ್ದಾರೆ. ಹಾಗೆಯೇ ಕೆಲವು ಸಾರಿ ಚರ್ಚೆಯಲ್ಲಿ ಕೂಡ ಇರುತ್ತಾರೆ. ಅದಕ್ಕೆ ಕಾರಣ ಮೋಹನ್ ಬಾಬು ಅವರು ವೈಯಕ್ತಿಕ ಜೀವನದಲ್ಲಿ ತೆಗೆದುಕೊಳ್ಳುತ್ತಿರುವ ನಿರ್ಧಾರಗಳು.

ಮೋಹನ್ ಬಾಬು ಅವರು ವೈಯಕ್ತಿಕ ಜೀವನದ ಕೆಲವು ವಿಚಾರಗಳಲ್ಲಿ ತೆಗೆದುಕೊಳ್ಳುವ ನಿರ್ಧಾರಗಳು ಹೆಚ್ಚಾಗಿ ಚರ್ಚೆಯಾಗಿದೆ. ಇದೀಗ ತಮ್ಮ ಮಗನ ವಿಚಾರದಲ್ಲಿ ಸಹ ಇಂಥದ್ದೇ ನಿರ್ಧಾರ ತೆಗೆದುಕೊಂಡು ಸುದ್ದಿಯಾಗಿದ್ದಾರೆ. ಮೋಹನ್ ಬಾಬು ಅವರ ಎರಡನೇ ಮಗ ಮಂಚು ಮನೋಜ್ ಅವರು ಇತ್ತೀಚೆಗೆ ಭೂಮ ಮೌನಿಕ ರೆಡ್ಡಿ ಅವರೊಡನೆ ಎರಡನೇ ಮದುವೆಯಾದರು. ಮನೋಜ್ ಅವರು ಈ ಮೊದಲೇ ಪ್ರಣತಿ ಅವರೊಡನೆ ಮದುವೆಯಾಗಿದ್ದರು, ಆದರೆ ವೈಮನಸ್ಸಿನಿಂದ ಇಬ್ಬರು ವಿಚ್ಛೇದನ ಪಡೆದರು. ಈಗ ಭೂಮ ಮೌನಿಕ ರೆಡ್ಡಿ ಅವರ ಜೊತೆಗೆ ಮದುವೆಯಾಗಿದ್ದಾರೆ. ಆದರೆ ಈ ಮದುವೆ ಮೋಹನ್ ಬಾಬು ಅವರಿಗೆ ಇಷ್ಟ ಇರಲಿಲ್ಲವಂತೆ.

ಅದಕ್ಕೆ ಕಾರಣ, ಮೌನಿಕಾ ರೆಡ್ಡಿ ಅವರಿಗೆ ಅದಾಗಲೇ ಮದುವೆಯಾಗಿ ಒಬ್ಬ ಮಗ ಕೂಡ ಇದ್ದಾನೆ ಎನ್ನುವುದಾಗಿದೆ. ಈ ಕಾರಣಕ್ಕೆ ಮೋಹನ್ ಬಾಬು ಅವರಿಗೆ ಈ ಮದುವೆ ಇಷ್ಟವಿಲ್ಲದೆ, ಮಗನ ವಿಚಾರದಲ್ಲಿ ಈಗ ಶಾಕಿಂಗ್ ನಿರ್ಧಾರ ತೆಗೆದುಕೊಂಡಿದ್ದಾರೆ. ಅದೇನೆಂದರೆ, ಮದುವೆ ನಂತರ ಮನೋಜ್ ತಮ್ಮ ಜೊತೆಗೆ ಇರಬಾರದು ಎನ್ನುವುದಾಗಿದ್ದು, ಅದರ ಜೊತೆಗೆ ಆಸ್ತಿ ವಿಚಾರದಲ್ಲಿ ತಾನು ಹೇಳಿದ ಹಾಗೆಯೇ ಕೇಳಬೇಕು ಎಂದು ವಾರ್ನಿಂಗ್ ಕೊಟ್ಟಿದ್ದಾರಂತೆ. ಹಾಗಾಗಿ ಮನೋಜ್ ಅವರು ಈಗ ಬಂಜಾರ ಹಿಲ್ಸ್ ನಲ್ಲಿ ಒಂದು ಮನೆಯನ್ನು ಬಾಡಿಗೆಗೆ ಪಡೆದು ಅಲ್ಲಿ ವಾಸ ಮಾಡುವುದಕ್ಕೆ ಶುರು ಮಾಡಿದ್ದು, ಮನೋಜ್ ಅವರಿಗೆ ಅನ್ಯಾಯವಾಗಿದೆ ಎನ್ನುತ್ತಿದ್ದಾರೆ ನೆಟ್ಟಿಗರು.

Comments are closed.