Real Story: ಮೊನ್ನೆಯಷ್ಟೇ ಮದುವೆಯಾಗಿದ್ದ ಓಯೋ ಸಂಸ್ಥಾಪಕನ ಬಾಳಲ್ಲಿ ಬಿರುಗಾಳಿ, ಪಾಪ ಎರಡೇ ದಿನಕ್ಕೆ ಏನಾಗಿದೆ ಗೊತ್ತೇ??

Real Story: ಓಯೋ ಬಗ್ಗೆ ಎಲ್ಲರಿಗು ಗೊತ್ತಿದೆ. ಓಯೋ ಅನ್ನು ಶುರು ಮಾಡಿದವರು ರಿತೇಶ್ ಅಗರ್ವಾಲ್, ಇವರು ಇತ್ತೀಚೆಗೆ ಈ ವಾರದ ಶುರುವಿನಲ್ಲಿ ಮದುವೆಯಾದರು. ಫಾರ್ಮೇಷನ್ ವೆಂಚರ್ಸ್ ಪ್ರೈವೇಟ್ ಲಿಮಿಟೆಡ್ ನ ಡೈರೆಕ್ಟರ್ ಗೀತಾನ್ಶಾ ಸೂದ್ ಅವರೊಡನೆ ಮದುವೆಯಾಗಿದ್ದು, ಈ ಜೋಡಿಯ ಮದುವೆಗೆ ದೊಡ್ಡ ದೊಡ್ಡ ಉದ್ಯಮಿಗಳು ಸೆಲೆಬ್ರಿಟಿಗಳು ಗೆಸ್ಟ್ ಆಗಿ ಬಂದಿದ್ದರು. ಪೇಟಿಎಂ ಸಂಸ್ಥೆಯ ವಿಜಯ್ ಶೇಖರ್ ವರ್ಮಾ, ಸ್ಟಾಫ್ ಬ್ಯಾಂಕ್ ನ ಮಸಯೋಶಿ ಸನ್, ಭಾರತಿ ಏರ್ಟೆಲ್ ನ ವಿಜಯ್ ಮಿತ್ತಲ್ ಸೇರಿದಂತೆ ಅನೇಕರು ಬಂದಿದ್ದರು.

ಮದುವೆ ಏನೋ ಅದ್ಧೂರಿಯಾಗಿ ನಡೆಯಿತು, ಆದರೆ ಈ ಮದುವೆಯಾದ ಒಂದು ವಾರದ ಒಳಗೆ ರಿತೇಶ್ ಅಗರ್ವಾಲ್ ಅವರಿಗೆ ದೊಡ್ಡ ಶಾಕ್ ಸಿಕ್ಕಿದೆ. ರಿತೇಶ್ ಅವರ ತಂದೆ ರ ಮೇಶ್ ಅಗರ್ವಾಲ್ ಅವರು ಬಹುಮಹಡಿಗಳು ಇರುವ ಕಟ್ಟಡದ 20ನೇ ಫ್ಲೋರ್ ಇಂದ ಬಿದ್ದು, ಉಸಿರು ನಿಲ್ಲಿಸಿದ್ದಾರೆ. ಈ ರೀತಿ ಮಾಡಿಕೊಂಡಿದ್ದು ಯಾಕೆ ಎನ್ನುವ ಪ್ರಶ್ನೆಗೆ ಯಾವುದೇ ಉತ್ತರ ಸಿಕ್ಕಿಲ್ಲ. ಶುಕ್ರವಾರ ಮಧ್ಯಾಹ್ನ 1ಗಂಟೆಗೆ ಈ ಘಟನೆ ನಡೆದಿದ್ದು, ಘಟನೆ ನಡೆದಾಗ ರಿತೇಶ್ ಅಗರ್ವಾಲ್, ಅವರ ತಾಯಿ ಮತ್ತು ರಿತೇಶ್ ಅವರ ಪತ್ನಿ ಮೂವರು ಕೂಡ ಮನೆಯಲ್ಲೇ ಇದ್ದರು ಎಂದು ವರದಿಗಳ ಪ್ರಕಾರ ತಿಳಿದುಬಂದಿದೆ. ಆದರೆ ರಮೇಶ್ ಅಗರ್ವಾಲ್ ಅವರು ಈ ರೀತಿ ಮಾಡಿಕೊಂಡಿರುವುದು ಯಾಕೆ ಎಂದು ಗೊತ್ತಾಗಿಲ್ಲ, ಡೆತ್ ನೋಟ್ ಕೂಡ ಸಿಕ್ಕಿಲ್ಲ.

ಪೊಲೀಸರ ಈ ಘಟನೆಯ ಕುರಿತು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಇನ್ನು ರಿತೇಶ್ ಅಗರ್ವಾಲ್ ಅವರು ಸೋಷಿಯಲ್ ಮೀಡಿಯಾ ಮೂಲಕ ಈ ಘಟನೆಯ ಬಗ್ಗೆ ಬರೆದು, ಈ ಸಮಯದಲ್ಲಿ ನಮಗೆ ಪ್ರೈವೆಸಿ ಕೊಡಿ ಎಂದು ಎಲ್ಲರಲ್ಲೂ ಮನವಿ ಮಾಡಿಕೊಂಡಿದ್ದಾರೆ. ನನ್ನ ತಂದೆ ಮಾರ್ಚ್10 ರಂದು ಇಹಲೋಕ ತ್ಯಜಿಸಿದರು ಎಂದು ನೋವಿನ ಹೃದಯದಿಂದ ತಿಳಿಸುತ್ತಿದ್ದೇವೆ, ಅವರು ಸಂಪೂರ್ಣ ಜೀವನವನ್ನು ಜೀವಿಸಿದರು. ಪ್ರತಿದಿನ ನಮಗೆ ಸ್ಪೂರ್ತಿ ನೀಡಿದರು, ಅವರನ್ನು ಕಳೆದುಕೊಂಡಿದ್ದು ನಮ್ಮ ಮನೆಗೆ ತುಂಬಲಾರದ ನಷ್ಟ. ನನ್ನ ತಂದೆಯಲ್ಲಿದ್ದ ಒಳ್ಳೆಯತನ, ನಾವು ಕಷ್ಟದಲ್ಲಿದ್ದಾಗ ಜೀವನ ನಡೆಸಲು ಸಹಾಯ ಮಾಡಿದೆ. ಅವರು ಆಡಿದ ಮಾತುಗಳು ನಮ್ಮೆಲ್ಲರ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿದಿದೆ. ಈ ನೋವಿನ ಸಮಯದಲ್ಲಿ ನಮಗೆ ಪ್ರೈವೆಸಿ ಬೇಕು ಎಂದು ಪ್ರತಿಯೊಬ್ಬರಲ್ಲೂ ವಿನಂತಿ ಮಾಡಿಕೊಳ್ಳುತ್ತೇವೆ.. ಎಂದು ಬರೆದುಕೊಂಡಿದ್ದಾರೆ ರಿತೇಶ್ ಅಗರ್ವಾಲ್.

Comments are closed.