Real Story: ಸೇಫ್ ಆಗಿ ಮನೆಗೆ ತಲುಪಿಸುತ್ತಾನೆ ಎಂದು ಆತನ ಕಾರ್ ಹತ್ತಿದಳು; ಒಂಟಿ ಹೆಣ್ಣು ಎಂದು ಮೋಹಕ್ಕೆ ಬಿದ್ದ ಆತ ಮಾಡಿದ್ದು ಮಾತ್ರ ಎಂಥ ಕೆಲಸ ನೋಡಿ!

Real Story: ಆತ ದಿನವೂ ತನ್ನನ್ನು ಪಿಕ್ ಅಪ್ ಡ್ರಾಪ್ ಮಾಡುವ ಕ್ಯಾಬ್ ಡ್ರೈವರ್ ಎನ್ನುವ ಕಾರಣಕ್ಕೆ ಸ್ವಲ್ಪ ಸಲುಗೆ ಇಟ್ಟುಕೊಂಡಿರುತ್ತಾಳೆ. ಆದರೆ ಆತ ಮಾತ್ರ ಅವಳ ಬಗ್ಗೆ ಮೋಹ ಬೆಳೆಸಿಕೊಂಡಿದ್ದ ಯಾವಾಗ ಸ್ವಲ್ಪ ಅವಾಯ್ಡ್ ಮಾಡೋದಕ್ಕೆ ಶುರು ಮಾಡಿದ್ಲೋ ಆಕೆನೇ ಮುಗಿಸುವುದಕ್ಕೆ ಪ್ಲಾನ್ ಮಾಡಿಬಿಟ್ಟ.

ಅದೇ ಹೆಸರು ದೀಪ. ತಮಿಳುನಾಡಿನ ಮೂಲದ ದೀಪ 48 ವರ್ಷವಾದರೂ ಮದುವೆ ಆಗಿರಲಿಲ್ಲ. ಇತ್ತೀಚಿಗೆ ಬೆಂಗಳೂರಿನಲ್ಲಿ ಕಂಪನಿ ಒಂದರಲ್ಲಿ ಅಕೌಂಟೆಂಟ್ ಆಗಿ ಕೆಲಸಕ್ಕೆ ಸೇರಿದ್ದರು. ಆಕೆ ಕೈ ತುಂಬಾ ಸಂಬಳ ಬರುತ್ತಿತ್ತು. ಆದರೆ ಒಂಟಿಯಾಗಿ ಜೀವನ ನಡೆಸುತ್ತಿದ್ದಳು. ತಾನಾಯಿತು ತನ್ನ ಕೆಲಸವಾಯಿತು ಎಂದು ಬೆಳಿಗ್ಗೆ ಆಫಿಸ್ ಗೆ ಹೋಗಿ ಸಂಜೆ ಮನೆಗೆ ಹಿಂತಿರುಗುತ್ತಿದ್ದಳು ದೀಪ.

ಭೀಮರಾಯ ಎನ್ನುವ 22 ವರ್ಷದ ಹುಡುಗ ಆಕೆಯನ್ನು ದಿನವೂ ತನ್ನ ಕಾರಿನಲ್ಲಿ ಪಿಕ್ ಆಫ್ ಡ್ರಾಪ್ ಮಾಡುತ್ತಿದ್ದ. ಇದೇ ಕಾರಣಕ್ಕೆ ಅವರಿಬ್ಬರ ನಡುವೆ ಸ್ವಲ್ಪ ಸಲುಗೆ, ಆತ್ಮೀಯತೆ ಬೆಳೆದಿತ್ತು. ದಿನ ಕಳೆದಂತೆ ಆಕೆಯ ಜೊತೆಗೆ ಹೆಚ್ಚು ಕ್ಲೋಸ್ ಆಗಿ ಇರುತ್ತಿದ್ದ ಭೀಮರಾಯ. ಒಂದು ದಿನ ಇದ್ದಕ್ಕಿದ್ದ ಹಾಗೆ ದೀಪ ಭೀಮರಾಯನನ್ನು ನಿರ್ಲಕ್ಷಿಸುವುದಕ್ಕೆ ಶುರು ಮಾಡುತ್ತಾರೆ. ಆತನ ನಂಬರ್ ಕೂಡ ಬ್ಲಾಕ್ ಮಾಡುತ್ತಾರೆ. ಇದರಿಂದ ಕುಪಿತನಾದ ಭೀಮರಾಯ ಮಾಡಿದ್ದೇನು ಗೊತ್ತಾ?!

ಒಂದು ದಿನ ಆಕೆಯ ಮನೆಯ ಮುಂದೆ ತನ್ನ ಕಾರ್ ತಂದು ನಿಲ್ಲಿಸುತ್ತಾನೆ. ಏನೇ ಆಗಲಿ ಡ್ರೈವರ್ ಅಲ್ವಾ ಅಂತ ದೀಪ ಕೂಡ ಆಫೀಸ್ ಹೋಗೋದಿಕ್ಕೆ ಅವನ ಕಾರ್ ಹತ್ತಿ ಕುಳಿತುಕೊಳ್ಳುತ್ತಾಳೆ. ಆದರೆ ಆಕೆಗೇನು ಗೊತ್ತು ಇದೇ ತನ್ನ ಕೊನೆಯ ಡ್ರೈವ್ ಅಂತ. ದೀಪ ತನ್ನನ್ನ ಅವಾಯ್ಡ್ ಮಾಡಿದ್ದಕ್ಕೆ ಆತ ನಿರ್ಜನ ಪ್ರದೇಶಕ್ಕೆ ದೀಪಗಳನ್ನು ಕರೆದುಕೊಂಡು ಹೋಗಿ ಹ ತ್ಯೆ ಮಾಡುತ್ತಾನೆ. ಆಕೆಯಿಂದ ಎಲ್ಲವನ್ನು ಪಡೆದುಕೊಂಡ ಭೀಮರಾಯ ಕೊನೆಗೆ ಅವಳನ್ನೆ ಮುಗಿಸುವ ಪ್ಲಾನ್ ಮಾಡಿಬಿಟ್ಟಿದ್ದ.

ದೀಪ ಮನೆಯಿಂದ ಹೊರಟವಳು ಐದು ದಿನ ಆದರೂ ಕಾಣದೆ ಇದ್ದಿದ್ದಕ್ಕೆ ಆಕೆಯ ಸಂಬಂಧಿಕರು ಪೊಲೀಸರಿಗೆ ಕಂಪ್ಲೇಂಟ್ ನೀಡುತ್ತಾರೆ. ಮದುವೆಯು ಆಗಿಲ್ಲ ಯಾವ ಶತ್ರುಗಳು ಇಲ್ಲ ಆದರೂ ಹೀಗೆ ಬರ್ಬರವಾಗಿ ಹ ತ್ಯೆ ಆಗಿರುವುದು ಹೇಗೆ ಎಂಬುದು ಪೊಲೀಸರಿಗೆ ಕೂಡ ಸವಾಲ್ ಆಗಿತ್ತು. ಕೊನೆಗೆ ಕೊ ಲೆಯ ಪ್ರಕರಣವನ್ನು ಭೇದಿಸಿದ ಪೊಲೀಸರು ಭೀಮರಾಯನನ್ನು ಅರೆಸ್ಟ್ ಮಾಡಿದ್ದಾರೆ. ಆತ ತಾನೇ ದೀಪಾಳನ್ನು ಹ ತ್ಯೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ. ದಿನವೂ ತನ್ನನ್ನು ಕರೆದುಕೊಂಡು ಹೋಗುವ ಹಾಗೂ ಮನೆಗೆ ಸೇಫ್ ಆಗಿ ಹಿಂತಿರುಗಿಸುವ ಡ್ರೈವರ್ ಜೊತೆಗೆ ಸ್ವಲ್ಪ ಸಲಿಗೆ ಬೆಳೆಸಿಕೊಂಡಿದ್ದಕ್ಕೆ ಆಕೆಗೆ ಬಂತು ನೋಡಿ. ಈ ಕಾಲದಲ್ಲಿ ಯಾರನ್ನು ನಂಬುವುದು ಯಾರನ್ನ ಬಿಡುವುದು ಅಲ್ವಾ?

Comments are closed.