Student Answer sheet viral: ಮದುವೆ ಅಂದರೆ ಏನು? ಮೂರನೇ ತರಗತಿಯ ವಿದ್ಯಾರ್ಥಿ ನೀಡಿದ ಉತ್ತರಕ್ಕೆ ಇಡೀ ದೇಶವೇ ತಲೆಕೆಡಿಸಿಕೊಂಡಿದೆ, ಶಿಕ್ಷಕರು ತಲೆಮೇಲೆ ಕೈಹೊತ್ತುಕೊಳ್ಳುವಂತಾಗಿದೆ, ಆತನ ಉತ್ತರ ಎನಿತ್ತು ಗೊತ್ತಾ?

Student Answer sheet viral: ಈಗಿನ ಕಾಲದ ವಿದ್ಯಾರ್ಥಿಗಳು ಆಗಿನ ಕಾಲದ ವಿದ್ಯಾರ್ಥಿಗಳ ಹಾಗೆ ಇಲ್ಲ ಎಲ್ಲವೂ ಇರುವುದೇ ಬೇರೆ ರೀತಿ. ವಿದ್ಯಾರ್ಥಿಗಳಿಗೆ ಭಕ್ತಿ, ಶಿಕ್ಷಣಕ್ಕಿಂತ ಮನರಂಜನೆ ಬೇಕು ಎಂದರೆ ತಪ್ಪಾಗುವುದಿಲ್ಲ. ಶಾಲೆಗಳಲ್ಲಿ ವಿದ್ಯಾರ್ಥಿಗಳ ಅರಿವು ಎಷ್ಟಿದೆ ಏನು ನೋಡಲು ಪರೀಕ್ಷೆಗಳನ್ನು ನಡೆಸುತ್ತಾರೆ. ಕೆಲವೊಮ್ಮೆ ವಿದ್ಯಾರ್ಥಿಗಳು ಅಲ್ಲಿ ಕೇಳಿರುವ ಪ್ರಶ್ನೆಗಿಂತ ಹೆಚ್ಚಾಗಿ ಬೇರೆ ಉತ್ತರವನ್ನೇ ಬರೆದಿರುತ್ತಾರೆ, ಕೆಲವು ಸಾರಿ ಏನೋ ಕಥೆ, ಇನ್ನು ಕೆಲವು ಸಾರಿ ಸಿನಿಮಾ ಹಾಡುಗಳು ಹೀಗೆ ಏನೇನೋ ಬರೆದಿರುತ್ತಾರೆ..

ಹೀಗೆ ವಿದ್ಯಾರ್ಥಿಗಳು ಬರೆದಿರುವ ಫೇಕ್ ಉತ್ತರ ಪತ್ರಿಕೆಗಳು ಆಗಾಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುತ್ತದೆ. ಅವರುಗಳು ಬರೆದಿರುವ ಉತ್ತರಗಳನ್ನು ನೋಡಿದರೆ ಓದಿದರೆ ಜೋರಾಗಿ ನಗು ಬರುವುದು ಖಂಡಿತ. ಪರೀಕ್ಷೆಗಳಲ್ಲಿ ಒಂದು ವಿಷಯದ ಕುರಿತು ಹೆಚ್ಚು ವಾಕ್ಯಗಳಲ್ಲಿ ಉತ್ತರಿಸಿ ಅಥವಾ ಪ್ರಬಂಧ ಬರೆಯಿರಿ ಎಂದು ಪ್ರಶ್ನೆ ಕೇಳಿರುತ್ತಾರೆ. ಮದುವೆ ಎಂದರೆ ಏನು ಎಂದು ಕೇಳಿರುವ ಪ್ರಶ್ನೆಗೆ ವಿದ್ಯಾರ್ಥಿಯೊಬ್ಬ ಬರೆದಿರುವ ಉತ್ತರ ನೆಟ್ಟಿಗಾರನ್ನು ನಗೆಗಡಲಿನಲ್ಲಿ ತೇಲಿಸುತ್ತಿದೆ..

ಆ ವಿದ್ಯಾರ್ಥಿ ಬರೆದಿರುವ ಉತ್ತರ ಹೀಗಿತ್ತು..”ಕುಟುಂಬದವರು ಹುಡುಗಿಯನ್ನು ಕರೆದು, ನೀನು ಈಗ ಬೆಳೆದಿದ್ದೀಯಾ ನಿನ್ನನ್ನ ನೋಡಿಕೊಳ್ಳೋಕೆ ನಮ್ಮಿಂದ ಆಗಲ್ಲ. ಅದಕ್ಕೆ ಒಂದು ಹುಡುಗನನ್ನು ಹುಡುಕು ಆಗ ನಿನ್ನನ್ನು ನೋಡಿಕೊಳ್ಳುವ ಹಾಗು ನಿನಗೆ ಊಟ ಹಾಕುವ ಜವಾಬ್ದಾರಿ ಅವನ ಮೇಲಿರುತ್ತದೆ ಎಂದು ಹೇಳುತ್ತಾರೆ. ಆಗ ಹುಡುಗಿ ತನಗೆ ಇಷ್ಟ ಆಗುವಂತಹ ಒಬ್ಬ ಹುಡುಗನನ್ನು ಹುಡುಕಿ, ಅವನನ್ನು ಪರೀಕ್ಷಿಸಿ, ಮದುವೆಯಾಗಿ ಇಬ್ಬರು ಜೊತೆಯಾಗಿ ಒಂದೇ ಮನೆಯಲ್ಲಿ ಇರುತ್ತಾರೆ..” ಎಂದು ಆ ವಿದ್ಯಾರ್ಥಿ ಉತ್ತರ ಬರೆದಿದ್ದರು. ಆ ಉತ್ತರ ಈಗ ಭಾರಿ ವೈರಲ್ ಆಗುತ್ತಿದೆ.

Comments are closed.