Kannada Film:ಇತ್ತೀಚೆಗಷ್ಟೇ ಕನ್ನಡ ಸಿನಿಮಾದಲ್ಲಿ ಭರ್ಜರಿಯಾಗಿ ನಟಿಸಿದ ನಟಿಯ ಜೊತೆ ಡೇಟಿಂಗ್ ಆರಂಭಿಸಿದ ಬಾಲಿವುಡ್ ನಟ ಟೈಗರ್ ಶ್ರಾಫ್. ಆ ಚೆಲುವೆ ಯಾರು ಗೊತ್ತೆ??

Kannada Film: ಬಾಲಿವುಡ್ ನ ಹ್ಯಾಂಡ್ಸಮ್ ನಟ ಹಾಗೂ ಎಲಿಜಿಬಲ್ ಬ್ಯಾಚುಲರ್ ಆಗಿರುವವರು ನಟ ಟೈಗರ್ ಶ್ರಾಫ್. ಇವರ ಬಗ್ಗೆ ಚಿತ್ರಪ್ರೇಮಿಗಳಿಗೆ ಹೊಸದಾಗಿ ಹೇಳಬೇಕಿಲ್ಲ. ಆಕ್ಷನ್ ಸಿನಿಮಾಗಳ ಮೂಲಕ ಅದ್ಭುತವಾದ ಡ್ಯಾನ್ಸ್ ಮೂಲಕ ಎಲ್ಲಾ ಅಭಿಮಾನಿಗಳ ಫೇವರೆಟ್ ಆಗಿದ್ದಾರೆ. ಇವರ ಸಿನಿಮಾಗಳು ಬಾಕ್ಸ್ ಆಫೀಸ್ ನಲ್ಲಿ ಸದ್ದು ಮಾಡುತ್ತವೆ. ತಮ್ಮದೇ ಆದ ರೀತಿಯಲ್ಲಿ ಛಾಪು ಮೂಡಿಸಿರುವ ಟೈಗರ್ ಶ್ರಾಫ್ ಅವರು ಸಿನಿಪ್ರೇಮಿಗಳ ಮನಸ್ಸು ಗೆದ್ದಿದ್ದಾರೆ.

ಸಿನಿಮಾಗಳ ವಿಚಾರಕ್ಕೆ ಮಾತ್ರವಲ್ಲದೆ, ಆಗಾಗ ಲವ್ ರಿಲೇಶನ್ಶಿಪ್ ಹಾಗೂ ಡೇಟಿಂಗ್ ಈ ವಿಚಾರಗಳಿಂದಲು ಟೈಗರ್ ಶ್ರಾಫ್ ಅವರು ಸುದ್ದಿಯಾಗುತ್ತಾರೆ. ಇವರು ಬಾಲಿವುಡ್ ನ ಖ್ಯಾತ ನಟ ಯಂಗ್ ಕ್ಯೂಟ್ ಹೀರೋಯಿನ್ ದಿಶಾ ಪಟಾಣಿ ಅವರೊಡನೆ ಡೇಟಿಂಗ್ ಮಾಡುತ್ತಿದ್ದರು. ಇವರಿಬ್ಬರು ಹಲವು ಕಾರ್ಯಕ್ರಮಗಳಲ್ಲಿ ಜೊತೆಯಾಗಿ ಕಾಣಿಸಿಕೊಳ್ಳುವುದು, ಕೈ ಕೈ ಹಿಡಿದು ಓಡಾಡುವ ಫೋಟೋಗಳು ಎಲ್ಲವೂ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದವು.

ಇವರಿಬ್ಬರು ಮದುವೆಯಾಗುತ್ತಾರೆ ಎಂದೇ ಎಲ್ಲರೂ ಅಂದುಕೊಂಡಿದ್ದರು. ಆದರೆ ಇದೀಗ ದಿಶಾ ಪಟಾಣಿ ಹಾಗೂ ನಟ ಟೈಗರ್ ಶ್ರಾಫ್ ಬ್ರೇಕಪ್ ಮಾಡಿಕೊಂಡಿದ್ದಾರೆ ಎನ್ನುವ ಸುದ್ದಿಯೊಂದು ಭಾರಿ ಸದ್ದು ಮಾಡುತ್ತಿದೆ. ಇಬ್ಬರು ಎಲ್ಲಿಯೂ ಜೊತೆಯಾಗಿ ಕಾಣಿಸಿಕೊಳ್ಳುತ್ತಿಲ್ಲ. ಈ ಬ್ರೇಕಪ್ ಸುದ್ದಿಯ ಬೆನ್ನಲ್ಲೇ ಟೈಗರ್ ಶ್ರಾಫ್ ಅವರು ಮತ್ತೊಬ್ಬ ನಟಿಯ ಪ್ರೀತಿಯಲ್ಲಿ ಬಿದ್ದಿದ್ದಾರೆ ಎನ್ನುವ ಸುದ್ದಿ ಕೂಡ ವೈರಲ್ ಆಗುತ್ತಿದೆ.

tiger shroff | Live Kannada News
Kannada Film:ಇತ್ತೀಚೆಗಷ್ಟೇ ಕನ್ನಡ ಸಿನಿಮಾದಲ್ಲಿ ಭರ್ಜರಿಯಾಗಿ ನಟಿಸಿದ ನಟಿಯ ಜೊತೆ ಡೇಟಿಂಗ್ ಆರಂಭಿಸಿದ ಬಾಲಿವುಡ್ ನಟ ಟೈಗರ್ ಶ್ರಾಫ್. ಆ ಚೆಲುವೆ ಯಾರು ಗೊತ್ತೆ?? https://sihikahinews.com/2023/04/05/kannada-film-2/

ಈ ಬಾರಿ ಟೈಗರ್ ಶ್ರಾಫ್ ಅವರು ಪ್ರೀತಿ ಮಾಡುತ್ತಿರುವುದು ಕನ್ನಡದ ಹುಡುಗಿಯ ಜೊತೆಗೆ ಎಂದು ಹೇಳಲಾಗುತ್ತಿದೆ. ಆಕೆಯ ಹೆಸರು ಆಕಾಂಕ್ಷ ಶರ್ಮ. ಮೂಲತಃ ಕರ್ನಾಟಕದ ಹುಡುಗಿ ಇವರಾಗಿದ್ದು, ಇವರೊಡನೆ ಪ್ರೀತಿಯಲ್ಲಿ ಬಿದ್ದಿದ್ದಾರೆ ಟೈಗರ್. ಇತ್ತೀಚಿಗೆ ಇಂಟರ್ವ್ಯೂ ಒಂದರಲ್ಲಿ ಮಾತನಾಡುವಾಗ, ಈ ಹೊಸ ಲವ್ ಇದೆ ಎನ್ನುವ ಅರ್ಥದಲ್ಲಿ ಟೈಗರ್ ಅವರು ಮಾತನಾಡಿದ್ದರು, ಆದರೆ ಆಕಾಂಕ್ಷ ಅವರು ಈ ವಿಚಾರದ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಮುಂದಿನ ದಿನಗಳಲ್ಲಿ ಇವರ ಬಗ್ಗೆ ಸುದ್ದಿ ಗೊತ್ತಾಗುತ್ತಾ ಎಂದು ಕಾದು ನೋಡಬೇಕಿದೆ.

Comments are closed.