Karnataka Politics: ಕುಮಾರಣ್ಣನ ವಿರುದ್ಧ ರೊಚ್ಚಿಗೆದ್ದ ಸುದೀಪ್ ಅಭಿಮಾನಿಗಳು; ಬಿಜೆಪಿ ಪರ ಎಂದಿದ್ದಕ್ಕೆ ನೇರವಾಗಿ ಸುದೀಪ್ ಬಗ್ಗೆ ಹೇಳಿದ್ದೇನು ಗೊತ್ತೇ??

Karnataka Politics: ನಿನ್ನೆಯಿಂದ ನಮ್ಮ ರಾಜ್ಯದಲ್ಲಿ ಅದೊಂದು ಸುದ್ದಿ ಸಿಕ್ಕಾಪಟ್ಟೆ ವೈರಲ್ ಆಗಿದೆ, ಅಭಿನಯ ಚಕ್ರವರ್ತಿ ನಟ ಕಿಚ್ಚ ಸುದೀಪ್ ಅವರು ಸಿಎಂ ಬಸವರಾಜ್ ಬೊಮ್ಮಾಯಿ ಅವರ ಪರವಾಗಿ ಪ್ರಚಾರ ಮಾಡ್ತೀನಿ ಎಂದು ಹೇಳಿರುವ ಹಲವರಿಗೆ ಶಾಕ್ ನೀಡಿದೆ, ಇದರ ಬಗ್ಗೆ ಸಾಕಷ್ಟು ಚರ್ಚೆಗಳು ಸಹ ನಡೆಯುತ್ತಿದೆ. ಇನ್ನು ಈ ವಿಷಯದ ಬಗ್ಗೆ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಕೂಡ ಪ್ರತಿಕ್ರಿಯೆ ಕೊಟ್ಟಿದ್ದು ಏನು ಹೇಳಿದ್ದಾರೆ ಗೊತ್ತಾ?

“ಬಹಳ ಹಿಂದಿನಿಂದಲೂ ಕೆಲವು ರಾಜಕಾರಣಿಗಳ ಮೇಲೆ ಇರುವ ವೈಯಕ್ತಿಕ ವಿಶ್ವಾಸದಿಂದ ಸಿನಿಮಾ ಕಲಾವಿದರು ಬಂದು ಪ್ರಚಾರ ಮಾಡ್ತಾರೆ, ಇದೆಲ್ಲವೂ ಕಾಮನ್. ಬೊಮ್ಮಾಯಿ ಅವರೊಡನೆ ವೈಯಕ್ತಿಕವಾಗಿ ಚೆನ್ನಾಗಿರುವುದರಿಂದ ಸುದೀಪ್ ಅವರು ಪ್ರಚಾರ ಮಾಡ್ತೀನಿ ಅಂತ ಅಂದಿದ್ದಾರೆ., ಅವರ ಅವರಿಬ್ಬರ ನಡುವಿನ ಪರ್ಸನಲ್ ಫ್ರೆಂಡ್ಶಿಪ್, ಅದಕ್ಕೆಲ್ಲಾ ನಾವು ಹೆಚ್ಚು ಮಹತ್ವ ಕೊಡೋ ಅವಶ್ಯತೆ ಇಲ್ಲ. ಬಿಜೆಪಿ ಅವರು ನಮ್ಮ ರಾಜ್ಯದಲ್ಲಿ ಅಭಿವೃದ್ಧಿ ಮಾಡಿಲ್ಲ, ಹಾಗಿದ್ದರೂ ಎಲೆಕ್ಷನ್ ನಲ್ಲಿ ಮತ ಪಡೆಯುವ ಪ್ರಯತ್ನದಲ್ಲಿದ್ದಾರೆ. ಇದ್ಯಾವುದು ಕೂಡ ಕೆಲಸಕ್ಕೆ ಬರಲ್ಲ.

ಸಿನಿಮಾದವರು ಪ್ರಚಾರಕ್ಕೆ ಬಂದ್ರೆ ಅವರನ್ನ ನೋಡೋದಕ್ಕೆ ಜನ ಬರ್ತಾರೆ, ಸಪೋರ್ಟ್ ಮಾಡ್ತಾರೆ ಅಂತ ಅಂದುಕೊಳ್ತಾರೆ. ನಾಯಕರು ಕಾಂಗ್ರೆಸ್ ಪರ, ಬಿಜೆಪಿ ಪರ ಕ್ಯಾಂಪೇನ್ ಗೆ ಹೋಗ್ತಾರೆ. ಸಿನಿಮಾದವರಲ್ಲಿ ಸ್ಥಿರತೆ ಇರೋದಿಲ್ಲ.. ನಾನು ಯಾವ ನಟರನ್ನು ದುರುಪಯೋಗ ಪಡಿಸಿಕೊಳ್ಳೋದಕ್ಕೆ ಇಷ್ಟಪಡೋದಿಲ್ಲ. ನನ್ನ ಕಾರ್ಯಕರ್ತರು, ನನ್ನ ಪಂಚರತ್ನ ಯೋಜನೆ ಇದೇ ನನ್ನ ಸೆಲೆಬ್ರಿಟಿಗಳು. ಅವುಗಳನ್ನ ತೆಗೆದುಕೊಂಡು ನಾನು ಜನರ ಮುಂದೆ ಹೋಗುತ್ತೇನೆ..

ಒಂದು ವೇಳೆ ಅವಶ್ಯಕತೆ ಇದ್ದರೆ, ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ಹಾಗೂ ಮಮತಾ ಬ್ಯಾನರ್ಜಿ ಅವರು ಪ್ರಚಾರಕ್ಕೆ ಬರ್ತೀನಿ ಅಂತ ಹೇಳಿದ್ದಾರೆ. ಯಾರು ಏನೇ ಮಾಡಿದರೂ ಅಂತಿಮವಾಗಿ ಜನರೇ ತೀರ್ಮಾನ ಮಾಡುತ್ತಾರೆ.” ಎಂದು ಕುಮಾರಸ್ವಾಮಿ ಅವರು ಹೇಳಿದ್ದು, ಈ ಮಾತುಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಸುದೀಪ್ ಅವರ ಅಭಿಮಾನಿಗಳನ್ನು ಕುಮಾರಸ್ವಾಮಿ ಅವರ ಮಾತುಗಳನ್ನು ಟ್ರೋಲ್ ಮಾಡುವುದಕ್ಕೆ, ಕುಮಾರಸ್ವಾಮಿ ಅವರಿಗೆ ಟಾಂಗ್ ಕೊಡುವುದಕ್ಕೆ ಶುರು ಮಾಡಿದ್ದಾರೆ.

Comments are closed.