Crime Kannada News: ನೋಡಲು ತುಪ್ಪದಂತಹ ಬೆಡಗಿ, ಬಾಯ್ ಫ್ರೆಂಡ್ ಕರೆದ ತಕ್ಷಣ ಫಾರ್ಮ್ ಹೌಸ್ ಗೆ ಕುಣಿದುಕೊಂಡು ಹೋದಳು, ಆದರೆ ಕೊನೆಗೆ ಆತ ಮಾಡಿದ್ದೇನು ಗೊತ್ತೇ??

Crime Kannada News:ಹುಡುಗಿಯರು ತಮ್ಮನ್ನು ಪ್ರೀತಿಸಬೇಕು ಎಂದು ಹುಡುಗರು ಅವಳ ಹಿಂದೆ ಬಿದ್ದು ಪ್ರೀತಿಸಲು ಒತ್ತಾಯ ಮಾಡಿ, ಪ್ರೀತಿಯಲ್ಲಿ ಬೀಳಿಸಿಕೊಳ್ಳುತ್ತಾರೆ. ಹುಡುಗಿಯರು ಕೂಡ ,ಹುಡುಗರು ತಮ್ಮ ಹಿಂದೆ ಬರುವುದನ್ನು ಪ್ರೀತಿ ಎಂದುಕೊಂಡು, ಅವರ ಮಾತಿಗೆ ಮರುಳಾಗಿ ಪ್ರೀತಿಸಲು ಶುರು ಮಾಡುತ್ತಾರೆ. ಆದರೆ ಎಲ್ಲಾ ಹುಡುಗರು ಒಂದೇ ರೀತಿ ಇರುವುದಿಲ್ಲ, ಒಳ್ಳೆಯವರು ಆಗಿರುವುದಿಲ್ಲ. ಇಲ್ಲೊಬ್ಬ ಹುಡುಗ ಹಿಂದೆ ಬಿದ್ದು, ಪ್ರೀತಿ ಮಾಡಿ, ಕೊನೆಗೆ ಆಕೆಯನ್ನು ಯಾವ ಸ್ಥಿತಿಗೆ ತಂದಿದ್ದಾನೆ ಗೊತ್ತಾ? ಇದನ್ನೂ ಓದಿ:Temple special: ಬೀಡಿ, ಸಿಗರೇಟು ತಂಬಾಕಿನ ಘಾಟಿಗೆ ಒಲಿದು ಬಿಡುವ ಭೂತಪ್ಪ; ಇಂತಹ ಪವಾಡ ದೇವಾಲಯ ಇರುವುದಾದರೂ ಎಲ್ಲಿ ಗೊತ್ತಾ?

ಈ ಘಟನೆ ನಡೆದಿರುವುದು ಹರಿಯಾಣ ರಾಜ್ಯದ ಗುಂಡಾರ್ ಸೋನಿಪತ್ ಗ್ರಾಮದಲ್ಲಿ, ಈ ಗ್ರಾಮದಲ್ಲಿ ಸುನೀಲ್ ಎನ್ನುವ ಹುಡುಗನಿದ್ದ ಇವನಿಗೆ ಮೋನಿಕಾ ಎನ್ನುವ ಹುಡುಗಿಯ ಪರಿಚಯವಾಯಿತು. ಅವರಿಬ್ಬರ ಸ್ನೇಹ ಶುರುವಾಗಿ, ಇಬ್ಬರು ಆಗಾಗ ಮಾತನಾಡುತ್ತಿದ್ದರು, ಆದರೆ ಸುನೀಲ್ ಗೆ ಆಕೆಯ ಮೇಲೆ ಪ್ರೀತಿ ಶುರುವಾಗಿ, ಆಕೆ ತನ್ನ ಪ್ರೀತಿಯನ್ನು ಒಪ್ಪಿಕೊಳ್ಳಬೇಕು ಎಂದು, ಹಿಂದೆ ಬಿದ್ದು, ಒತ್ತಾಯ ಮಾಡಲು ಶುರು ಮಾಡಿದ. ಪ್ರೀತಿ ಮಾಡಲೇಬೇಕು ಎಂದು ಪೀಡಿಸಿದ. ಆರಂಭದಲ್ಲಿ ಒಪ್ಪದ ಮೋನಿಕಾ, ನಂತರ ಅವನ ಪ್ರೀತಿಯನ್ನು ಒಪ್ಪಿಕೊಂಡಳು. ಇದನ್ನೂ ಓದಿ; Job opportunity:  ಪೋಸ್ಟ್ ಆಫೀಸ್ ನಲ್ಲಿ ಇದೆ ಖಾಲಿ ಹುದ್ದೆಗಳು: ತಿಂಗಳಿಗೆ 63 ಸಾವಿರ ಸಂಬಳ. ಈಗಲೇ ಅರ್ಜಿ ಹಾಕಿ ಕೆಲಸ ಗಿಟ್ಟಿಸಿ.

ಪ್ರೀತಿ ಶುರುವಾದಾಗ ಇಬ್ಬರು ಬಹಳ ಎಂಜಾಯ್ ಮಾಡಿದರು, ಪಾರ್ಕ್ ಸಿನಿಮಾ ಎಂದು ಎಲ್ಲ ಕಡೆ ಓಡಾಡಿದ್ದರು. ಆದರೆ ಇದೆಲ್ಲವೂ ಇದ್ದದ್ದು ಬಹಳ ಕಡಿಮೆ ಸಮಯ ಮಾತ್ರ, ಅವನಿಗೆ ಕೋಪ ಜಾಸ್ತಿಯಾಗಿ, ಮೋನಿಕಾ ಮೇಲೆ ಕೋಪ ಮಾಡಿಕೊಂಡು ಜಗಳ ಆಡುವುದಕ್ಕೆ ಶುರುಮಾಡಿದ. ಈ ಜಗಳ ದೊಡ್ಡದಾಗಿ, ಗರ್ಲ್ ಫ್ರೆಂಡ್ ಮೇಲೆಯೇ ಕೋಪಗೊಂಡು, ಆಕೆಯನ್ನು ಮುಗಿಸಲು ಪ್ಲಾನ್ ಮಾಡಿ ಕರೆಸಿಕೊಂಡ. ಅಂದುಕೊಂಡ ಹಾಗೆಯೇ ಆಕೆ ಬಂದ ನಂತರ ಜಗಳ ಆಡಿ, ಕೋಪದಲ್ಲಿ ಆಕೆಯನ್ನು ಮುಗಿಸಿಯೇ ಬಿಟ್ಟ.

ನಂತರ ಆಕೆಯ ದೇಹವನ್ನು ತನ್ನ ಫಾರ್ಮ್ ನಲ್ಲಿ ಬಚ್ಚಿಟ್ಟು, ಎಸ್ಕೇಪ್ ಆದ. ಇತ್ತ ಮೋನಿಕಾ ಮನೆಯವರು ಮಗಳು ಮನೆಗೆ ಬಂದಿಲ್ಲ ಎಂದು ಗಾಬರಿಯಾಗಿ, ಪೊಲೀಸರಿಗೆ ದೂರು ನೀಡಿದ್ದು, ಅದರ ಅನುಸಾರ ಪೊಲೀಸರು, ತನಿಖೆ ಶುರು ಮಾಡಿ, ಇವರಿಬ್ಬರ ಬಗ್ಗೆ ಪತ್ತೆ ಹಚ್ಚಿ, ಸುನೀಲ್ ಫಾರ್ಮ್ ಹೌಸ್ ಗೆ ಹೋಗಿ, ಆಕೆಯ ದೇಹವನ್ನು ಹೊರತೆಗೆದಿದ್ದಾರೆ. ಈ ವಿಚಾರ ತಡವಾಗಿ ಹೊರಬಂದಿದ್ದು, ಪೊಲೀಸರು ಈಗ ಸುನೀಲ್ ಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಇದನ್ನೂ ಓದಿ:Job Opportunity: ಹಳ್ಳಿಗಳಲ್ಲಿ ಡಿಮ್ಯಾಂಡ್ ಹೆಚ್ಚುತ್ತಿರುವ ಈ ಉದ್ಯಮ ಆರಂಭ ಮಾಡಿ, ಲಕ್ಷ ಲಕ್ಷ ಆದಾಯ ಗಳಿಸಿ. ನಿಮಗೆ ನೀವೇ ಬಾಸ್ ಆಗಿ

Comments are closed.