Temple special: ಬೀಡಿ, ಸಿಗರೇಟು ತಂಬಾಕಿನ ಘಾಟಿಗೆ ಒಲಿದು ಬಿಡುವ ಭೂತಪ್ಪ; ಇಂತಹ ಪವಾಡ ದೇವಾಲಯ ಇರುವುದಾದರೂ ಎಲ್ಲಿ ಗೊತ್ತಾ?

Temple special: ನಮ್ಮ ರಾಜ್ಯದಲ್ಲಿ ದೇವಾಲಯ ಸಂಪತ್ತು ಹೇರಳವಾಗಿದೆ. ಯಾವ ಮೂಲೆಯಲ್ಲಿ ನೋಡಿದರೂ ಒಂದಲ್ಲ ಒಂದು ವಿಶೇಷತೆಯನ್ನು ಹೊಂದಿರುವ ದೇವಾಲಯಗಳು ಇವೆ. ಅದೆಷ್ಟೋ ದೇವಾಲಯಗಳು ಸಾಕಷ್ಟು ಪವಾಡ ಹೊಂದಿದ್ದು ಹಲವಾರು ವರ್ಷಗಳ ಪುರಾತನವಾದದ್ದು.  ಇನ್ನು ದೇವಸ್ಥಾನ ಪೂಜೆ ಪುನಸ್ಕಾರಗಳು ಅಂದಮೇಲೆ ದೇವರಿಗೆ ನೈವೇದ್ಯ ಅರ್ಪಿಸುವುದು ಕೂಡ ಸಹಜ. ತಾವು ನಂಬಿರುವ ದೇವರಿಗೆ ನೈವೇದ್ಯ ಅರ್ಪಿಸಿ ಇಷ್ಟಾರ್ಥ ಸಿದ್ಧಿಗಾಗಿ ಭಕ್ತಾದಿಗಳು ಬೇಡುತ್ತಾರೆ. ಆದರೆ ನಾವು ಈಗ ಹೇಳಲು ಹೊರಟಿರುವ ದೇವಾಲಯ ಬಹಳ ವಿಭಿನ್ನ ಹಾಗೂ ವಿಶಿಷ್ಟವಾದದ್ದು. ಏಕೆಂದರೆ ಇಲ್ಲಿ ಹಣ್ಣು ಹೂವು ಅಥವಾ ಸಿಹಿ ಖಾದ್ಯಗಳನ್ನು ನೈವೇದ್ಯವಾಗಿ ನೀಡುವುದಿಲ್ಲ. ಅದರ ಬದಲು ಬೀಡಿ, ಸಿಗರೇಟ್, ಕೋಳಿ ಮೊದಲಾದವನ್ನು ನೈವೇದ್ಯವಾಗಿ ನೀಡಲಾಗುತ್ತದೆ.  ಇದನ್ನೂ ಓದಿ: Kannada News: ಯೌವ್ವನದಲ್ಲಿ ಸುಮ್ಮನಿರುವ ಹೆಂಡತಿಯರು, 40 ವರ್ಷ ಆದಮೇಲೆ ಗಂಡ ಇದನ್ನು ಕೊಡಬೇಕು ಎಂದು ಆಸೆ ಪಡುತ್ತಾರೆ, ಇದನ್ನು ತೀರಿಸಿ ನೋಡಿ, ನಿಮ್ಮನ್ನು ಬಿಟ್ಟು ಬೇರೆ ಆಲೋಚನೆ ಮಾಡಲ್ಲ!

ಇಂತಹ ಒಂದು ವಿಶಿಷ್ಟವಾದ ದೇವಾಲಯ ಇರುವುದು ಶಿವಮೊಗ್ಗದ ಸಾಗರದ ಅನಂತಪುರ ಸಮೀಪದ ಯೇಡೆಹಳ್ಳಿಯ ಬಸವನಹೊಂಡದಲ್ಲಿ. ಅದುವೇ ಭಂಗಿ ಭೂತಪ್ಪನ ದೇವಾಲಯ.

ಭಂಗಿ ಭೂತಪ್ಪ ದೇವಸ್ಥಾನದ ವೈಶಿಷ್ಟ್ಯತೆ:

ರುಮಾಲು ಧರಿಸಿದ ಅಜ್ಜನನ್ನು ಹೋಲುವಂತೆ ಇರುವ ಭೂತಪ್ಪನ ಮೂರ್ತಿ ಕೆಳಗೆ ಪ್ರತಿಷ್ಠಾಪನೆ ಮಾಡಲಾಗಿದ್ದರೆ ಅದರ ಮೇಲ್ಭಾಗದಲ್ಲಿ ಲಿಂಗಾಕಾರದ ಮೂರ್ತಿ ಇದೆ. ವಿಶೇಷವಾಗಿ ಈ ದಾರಿಯಲ್ಲಿ ಹೋಗುವ ಜನ ಭಂಗಿ ಭೂತಪ್ಪನಿಗೆ ಕೈಮುಗಿದು ಭಕ್ತಿಯಿಂದ ಪ್ರಾರ್ಥಿಸಿ ಮುಂದುವರೆಯುತ್ತಾರೆ. ಇದನ್ನೂ ಓದಿ: Cricket News: ಬೌಲರ್ ಹೊರ ಹೋಗಿ ಆಯಿತು, ಇದರ ಬೆನ್ನಲ್ಲೇ ಮತ್ತೊಬ್ಬ ಖಡಕ್ ಬ್ಯಾಟ್ಸಮನ್ ಟೂರ್ನಿಯಿಂದ ಔಟ್: ಆರ್ಸಿಬಿ ತಂಡಕ್ಕೆ ಸಂಕಷ್ಟ: ಹೊರಹೋಗಿದ್ದು ಯಾರು ಗೊತ್ತೆ?

ಭಂಗಿಯ ಘಾಟೇ ಈತನಿಗೆ ನೈವೇದ್ಯ:

ಒಂದು ವೇಳೆ ಈ ಗುಡಿಯ ಸುತ್ತಮುತ್ತ ನೀವೇನಾದರೂ ಬಿಡಿ, ಸಿಗರೇಟ್ ತಂಬಾಕಿನಂತಹ ವಸ್ತುಗಳನ್ನು ಕಂಡರೆ ಇದೇನಿದು ದೇವಸ್ಥಾನದ ಆವರಣದಲ್ಲಿ ಇದನ್ನ ತಂದು ಹಾಕಿದ್ದಾರಲ್ಲ ಎಂದು ಗಾಬರಿ ಆಗಬೇಡಿ. ಇಲ್ಲಿನ ಭೂತಪ್ಪನಿಗೆ ಭಂಗಿ ವಾಸನೆ ಭಕ್ತರು ಕೊಡುವ ನೈವೇದ್ಯ. ಇದಕ್ಕೆ ಭಂಗಿ ಭೂತಪ್ಪ ಒಲಿಯುತ್ತಾನೆ ಭಕ್ತರು ಕೇಳಿದ್ದನ್ನ ಕೊಡುತ್ತಾನೆ ಎಂದು ಕರಾವಳಿ ಹಾಗೂ ಮಲೆನಾಡಿಗಳಲ್ಲಿ ಇರುವ ನಂಬಿಕೆ. 16ನೇ ಶತಮಾನಕ್ಕಿಂತ ಹಿಂದಿನಿಂದಲೂ ಈ ದೇವಸ್ಥಾನಕ್ಕೆ ಇದೇ ರೀತಿಯ ಪೂಜೆ ಪುನಸ್ಕಾರಗಳು ನಡೆಯುತ್ತವೆ.

ಕಲ್ಲಿನ ಹರಕೆ ಸಲ್ಲಿಕೆ:

ಈ ದಾರಿಯಲ್ಲಿ ಕಲ್ಲಿನ ಟ್ರಕ್ ಸಾಗಿಸುವವರು ಒಂದು ಕಲ್ಲನ್ನ ಇಲ್ಲಿ ಇಟ್ಟು ಹೋಗುತ್ತಾರೆ. ಅಷ್ಟೇ ಅಲ್ಲ ಈ ಮಾರ್ಗದಲ್ಲಿ ಯಾರೇ ಪ್ರಯಾಣ ಮಾಡುವುದಾದರೂ ಎರಡು ನಿಮಿಷ ನಿಂತು ಭಂಗಿ ಭೂತಪ್ಪನಿಗೆ ಕೈಮುಗಿದು ಸಾಗುವುದು ವಾಡಿಕೆ. ಸೋಮವಾರದಂದು ಭೂತಪ್ಪನಿಗೆ ವಿಶೇಷ ಪೂಜೆ ನಡೆಸಲಾಗುತ್ತದೆ. ಅದೇ ರೀತಿ ಅಮಾವಾಸ್ಯೆ, ಹುಣ್ಣಿಮೆ ಸಮಯದಲ್ಲಿಯೂ ಭೂತಪ್ಪನಿಗೆ ವಿಶೇಷ ಪೂಜೆ ನಮಸ್ಕಾರಗಳನ್ನು ಮಾಡಲಾಗುತ್ತದೆ ಈ ದಿನ ಭೂತಪ್ಪನ ವಿಶೇಷ ದರ್ಶನ ಕೂಡ ಇರುತ್ತದೆ. ಹೊಸನಗರದ ಮೂಲಕ ಉಡುಪಿಗೆ ಸಾಗುವ ಮಾರ್ಗದಲ್ಲಿ ಪ್ರಯಾಣ ಮಾಡುವ ಕರಾವಳಿ ಹಾಗೂ ಮಲೆನಾಡಿಗರು ಈ ಭೂತಪ್ಪನ ಬಗ್ಗೆ ವಿಶೇಷ ನಂಬಿಕೆ ಇಟ್ಟುಕೊಂಡಿದ್ದಾರೆ. ಸಿಗರೇಟು ತಂಬಾಕಿನ ಘಾಟಿಗೆ ಒಲಿಯುವ ದೈವ ಭಂಗಿ ಭೂತಪ್ಪ. ಇದನ್ನೂ ಓದಿ: PMKSNY: ರೈತರ ಕಣ್ಣೀರು ಒರೆಸಲು ಮೋದಿ ಸರ್ಕಾರದ ಮತ್ತೊಂದು ಹೆಜ್ಜೆ, ರೈತರಿಗೆ ಸಿಗಲಿದೆ 8,000 ರೂಪಾಯಿ, ಜಸ್ಟ್ ಒಂದು ಕ್ಲಿಕ್ ಮಾಡಿದರೆ ಸಾಕು, ಹಣ ಪಡೆಯುವುದು ಹೇಗೆ ಗೊತ್ತೇ?

Comments are closed.