Crime News: ಲಕ್ಷ ಲಕ್ಷ ಆಫರ್, ಮಾಯಾಂಗೀನಿ ಕೋಟಿ ಕೋಟಿ ಹಣ ಮಾಡಿದ್ದು ಹೇಗೆ ಗೊತ್ತೇ? ಐನಾತಿ ಮಹಿಳೆ ಬಗ್ಗೆ ತಿಳಿದರೆ, ಮೈಂಡ್ ಬ್ಲಾಕ್ ಆಗುತ್ತೆ.

Crime News: ಈಗಿನ ಕಾಲದಲ್ಲಿ ಹಣ ಸಂಪಾದನೆ ಮಾಡಲು ನ್ಯಾಯ ಮಾರ್ಗಕ್ಕಿಂತ ಅನ್ಯಾಯದ ಮಾರ್ಗ ಅನುಸರಿಸುವವರೆ ಹೆಚ್ಚು. ಮೋಸ, ಕಳ್ಳತನ, ಸುಲಿಗೆ, ಸೈಬರ್ ಕ್ರೈಮ್ ಈ ರೀತಿ ಮಾಡಿ ಹಲವರು ಹಣ ಗಳಿಸುತ್ತಿದ್ದಾರೆ. ಇಲ್ಲೊಬ್ಬ ಮಹಿಳೆ ತನ್ನ ಚಾಲಾಕಿ ತನದಿಂದ, 50 ಮಹಿಳೆಯರ ಪೈಕಿ, ನಂಬಿಕೆ ಹುಟ್ಟಿಸಿ, 14 ಕೋಟಿ ಲಪಟಾಯಿಸಿ ಎಸ್ಕೇಪ್ ಆಗಿದ್ದಾಳೆ. ಇದೀಗ ಪೊಲೀಸರು ಈಕೆಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಅಷ್ಟಕ್ಕೂ ಏನಾಗಿದೆ ಗೊತ್ತಾ?

ಈ ಘಟನೆ ನಡೆದಿರುವುದು ಹೈದರಾಬಾದ್ ನ ವನಸ್ಥಲಿಪುರಂನಲ್ಲಿ. ಇಲ್ಲಿ ಸ್ವರ್ಣಲತಾ ಎನ್ನುವ ಮಹಿಳೆಯೊಬ್ಬರು ತಮ್ಮ ಸುತ್ತಾ ಮುತ್ತಾ ಇರುವ ಮಹಿಳೆಯರ ಬಳಿ ಹಣದ ವಿಚಾರಕ್ಕೆ ಮೋಸ ಮಾಡಿದ್ದಾಳೆ.
ಮಹಿಳೆಯರ ಬಳಿ ಹೋಗಿ, ತಮಗೆ 1 ಲಕ್ಷ ಕೊಟ್ಟರೆ, ಸ್ವಲ್ಪ ದಿನದಲ್ಲಿ ಎರಡು ಲಕ್ಷ ಕೊಡುವುದಾಗಿ ನಂಬಿಸಿದ್ದಾಳೆ. ಹಣ ಡಬಲ್ ಆಗುತ್ತದೆ ಎಂದು ನಂಬಿದ ಮಹಿಳೆಯರು ಈಕೆಯ ಕೈಗೆ ತಾವು ಉಳಿಸಿದ್ದ ಎಲ್ಲಾ ಹಣವನ್ನು ಕೊಟ್ಟಿದ್ದಾರೆ..

ಈ ರೀತಿ 50 ಮಹಿಳೆಯರಿಂದ ಸುಮಾರು 14 ಕೋಟಿ ಸಂಪಾದನೆ ಮಾಡಿಕೊಂಡ ಸ್ವರ್ಣ ಲತಾ, ಹಣದ ಜೊತೆಗೆ ಎಸ್ಕೇಪ್ ಆಗಿದ್ದಾಳೆ. ಮಹಿಳೆಯರು ಎಷ್ಟು ಸಾರಿ ಫೋನ್ ಮಾಡಿದರು ಸ್ವಿಚ್ ಅಫ್ ಬರುತ್ತಿರುವುದನ್ನು ನೋಡಿ, ಮಹಿಳೆಯರಿಗೆ ಅನುಮಾನ, ಗಾಬರಿ, ಭಯ ಇದೆಲ್ಲವೂ ಶುರುವಾಗಿ, ಕೊನೆಗೆ ಪೊಲೀಸರ ಮೊರೆ ಹೋಗಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು, ಈ ಮೊದಲೇ ಆಕೆಯ ಮೇಲೆ ಮೋಸದ ಕೇಸ್ ದಾಖಲಾಗಿತ್ತು ಎಂದು ತಿಳಿಸಿದ್ದಾರೆ..

ಹಾಗೆಯೇ ಆ ಮಹಿಳೆಯನ್ನು ಹುಡುಕಲು ತನಿಖೆ ಕೂಡ ಶುರು ಮಾಡಿದ್ದಾರೆ. ಆಕೆಯ ಬಣ್ಣದ ಮಾತುಗಳನ್ನು ನಂಬಿ ಮಹಿಳೆಯರು ಆಕೆಯಿಂದ ಮೋಸ ಹೋಗಿದ್ದು, ಕಣ್ಣೀರು ಹಾಕುತ್ತಾ ಕೂತಿದ್ದಾರೆ. ಹೀಗೆ ಮಧ್ಯಮ ವರ್ಗದ ಜನರ ಭಯ, ಅಸಹಾಯಕತೆ, ದೌರ್ಬಲ್ಯ ಇದೆಲ್ಲವನ್ನು ದುರುಪಯೋಗ ಪಡಿಸಿಕೊಂಡು ಹಲವು ಜನರು ಅವರಿಗೆ ಮೋಸ ಮಾಡುತ್ತಿದ್ದಾರೆ. ಇದನ್ನೆಲ್ಲ ನೋಡುತ್ತಿದ್ದರು, ಈ ಮೋಸದ ಜಾಲದ ಬಗ್ಗೆ ಕೇಳುತ್ತಿದ್ದರು ಕೂಡ, ಜನರು ಮೋಸ ಹೋಗುವುದು ಮಾತ್ರ ಕಡಿಮೆ ಆಗುತ್ತಿಲ್ಲ.

Comments are closed.