Agriculture: ಅಡಿಕೆ ತೋಟದಲ್ಲಿ ಕಳೆನಾಶಕಗಳನ್ನು ಬಳಸಿದ್ರೆ ಕಳೆ ಮಾತ್ರವಲ್ಲ, ಜೀವ, ತೋಟ ಎರಡನ್ನೂ ಕಳೆದುಕೊಳ್ಳಬೇಕಾಗುತ್ತೇ ಎಚ್ಚರ, ಸಂಶೋಧಕರಿಂದ ಹೊರಬಿತ್ತು ಭಯಾನಕ ಸುದ್ದಿ!

Agriculture: ದೇಶದಲ್ಲಿ ಅದರಲ್ಲೂ ಕರ್ನಾಟಕದಲ್ಲಿ ಅಡಿಕೆ ಬೆಳೆ (arecanut) ಯನ್ನೇ ನಂಬಿಕೊಂಡಿರುವ ಸಾಕಷ್ಟು ರೈತರಿದ್ದಾರೆ ಅಡಿಕೆ ಬೆಳೆ ಚೆನ್ನಾಗಿ ಬರಬೇಕು ಅಂದ್ರೆ ಮರಕ್ಕೆ ಸರಿಯಾದ ನೀರು ಗೊಬ್ಬರ ಆರೈಕೆ ಬೇಕೇ ಬೇಕು. ಇದರ ಜೊತೆಗೆ ತೋಟದಲ್ಲಿ ಆಗುವಂತಹ ಕಳೆಗಳಿಗೆ ಕಳೆ ನಾಶಕ ಬಳಸಬೇಕಾ ಬೇಡವಾ ಇದರಿಂದ ಏನಾದರೂ ಅಪಾಯ ಇದೆಯಾ ಎನ್ನುವುದು ಹಲವರ ಗೊಂದಲ ಅದಕ್ಕೆ ತಜ್ಞರು ಏನಂತಾರೆ ಗೊತ್ತಾ?

ತೋಟದಲ್ಲಿ ಕಳೆ ಹುಟ್ಟಿಕೊಳ್ಳುವುದು ಹೇಗೆ?

ರೈತರ ಜಮೀನಿನಲ್ಲಿ ಬೆಳೆಯುವ ಬೆಳೆಯ ಜೊತೆಗೆ ಅನಗತ್ಯವಾಗಿ ಹುಟ್ಟುಕೊಳ್ಳುವ ಬೆಳೆ ಇದಾಗಿದೆ. ಮಣ್ಣು ಫಲವತ್ತಾಗಿದ್ರೆ ಪೋಷಕಾಂಶದಿಂದ ಕೂಡಿದ್ರೆ ಅಂತಹ ಮಣ್ಣಿನಲ್ಲಿ ಈ ಕಳೆ ಹೆಚ್ಚಾಗಿ ಬೆಳೆಯುತ್ತೆ. ಮಣ್ಣಿನ ಗುಣ ಹಾಗೂ ಅದರಲ್ಲಿರುವ ಪೋಷಕಾಂಶದ ಆಧಾರದ ಮೇಲೆ ಬೇರೆ ಬೇರೆ ರೀತಿಯ ಕಳೆಗಳು ಬೆಳೆಯುತ್ತವೆ.

ಕಳೆ ಬೆಳೆದರೆ ಏನು ಸಮಸ್ಯೆ?

ಜಮೀನಿನಲ್ಲಿ ಕಳೆ ಬೆಳೆದರೆ ಏನು ಸಮಸ್ಯೆ ಅನ್ನೋದು ಹಲವರ ಪ್ರಶ್ನೆ ಇದು ಮಣ್ಣಿನಲ್ಲಿನ ಪೋಷಕಾಂಶ ಹಾಗೂ ನೀರನ್ನು ಹೆಚ್ಚು ಹೀರಿಕೊಂಡು ಅಡಿಕೆ ಮರ ಬೆಳವಣಿಗೆಗೆ ಪೆಟ್ಟು ನೀಡುತ್ತದೆ. ಕಳೆಗಳು ಹೆಚ್ಚಾಗಿದ್ದರೆ ಅಡಿಕೆ ತೋಟದಲ್ಲಿ ಬೇರೆ ಕೃಷಿ ಮಾಡುವುದಕ್ಕೂ ಸಾಧ್ಯವಿಲ್ಲ. ಹನಿ ನೀರಾವರಿ ಪದ್ಧತಿಯಲ್ಲಿ ಕಳೆಯಿಂದಾಗಿ ಅಡಿಕೆ ಮರಗಳು ಎಷ್ಟು ಪ್ರಮಾಣದಲ್ಲಿ ನೀರು ಪಡೆದಿವೆ ಇಲ್ಲ ಎಂಬುದು ಕೂಡ ಗೊತ್ತಾಗೋದಿಲ್ಲ. ತುಂತುರು ನೀರಾವರಿ ಪದ್ಧತಿಯನ್ನು ಅಳವಡಿಸಿಕೊಂಡರೆ ಕಳೆ ಬೆಳೆಯುವುದು ಹೆಚ್ಚು ಏಕೆಂದರೆ ನೆಲವೆಲ್ಲ ಒದ್ದೆಯಾದಾಗ ನೀರು ಬೀಳುವ ಜಾಗದಲ್ಲೆಲ್ಲ ಕಳೆ ಬೆಳೆಯುತ್ತದೆ. ಇನ್ನು ಕಳೆ ಕೀಳುವುದಕ್ಕಾಗಿ ಕೂಲಿಕಾರ್ಮಿಕರನ್ನು ನೇಮಿಸಿಕೊಳ್ಳಬೇಕು ಅದಕ್ಕೆ ಅವರಿಗೆ ಸಂಬಳ ನೀಡಬೇಕು ರೈತರಿಗೆ ಹೊರೆಯಾಗುತ್ತದೆ

ಕಳಿಬೆಳೆಯುವುದನ್ನು ತಡೆಯುವುದಕ್ಕೆ ಕಳೆ ನಾಶಕ ಬೇಕಾ?

ಅಡಿಕೆ ಮರದ ತೋಟದಲ್ಲಿ ಕಳೆನಾಶಕವಾಗಿ ಗ್ಲೈಫೋಸೈಟ್ (Glyphosate) ಅಥವಾ ಗ್ಲೈಫೋಸೈಟ್ ಅಮೋನಿಯಂ ಸಾಲ್ಟ್ (Glyphosate ammonium salt)   ನಾಶಕವನ್ನು ಬಳಸುತ್ತಾರೆ ಕಳೆಯ ಮೇಲೆ ಇದನ್ನು ಹಾಕಿದ್ರೆ ಕಳೆಗಳು ಸುಟ್ಟು ಹೋಗುತ್ತವೆ ಆದರೆ ಈ ರೀತಿ ಪ್ರತಿ ಬಾರಿ ಕಳೆನಾಶಕ ಬಳಸುವುದರಿಂದ ಚಿಕ್ಕ ಅಡಿಕೆ ಮರಗಳಿಗೆ ಕೂಡ ಪರಿಣಾಮ ಬೀರುತ್ತದೆ. ಅಡಿಕೆ ಮರಗಳು ಸಾಯುತ್ತವೆ ಜೊತೆಗೆ ಹಳದಿ ಬಣ್ಣಕ್ಕೆ ತಿರುಗುತ್ತವೆ.

ತೋಟದಲ್ಲಿ ಪ್ರತಿ ಬಾರಿ ಕಳೆನಾಶಕ ಬಳಸುವುದರಿಂದ ಮಣ್ಣಿನ ಗುಣಲಕ್ಷಣ ಫಲವತ್ತತೆ ಎಲ್ಲವೂ ಕಡಿಮೆಯಾಗುತ್ತದೆ. ಮಣ್ಣಿನ ಫಲವತ್ತತೆ ಹೆಚ್ಚಿಸುವಂತಹ ಸೂಕ್ಷ್ಮಾಣು ಜೀವಿಗಳು ಸಾಯುತ್ತಾ ಬರುತ್ತವೆ ಇದರಿಂದ ಮಣ್ಣು ಪೋಷಕಾಂಶಗಳನ್ನು ಕಳೆದುಕೊಳ್ಳುತ್ತದೆ. ಕಳೆನಾಶಕದಲ್ಲಿರುವ ರಾಸಾಯನಿಕಗಳು ಅಡಿಕೆ ಬೆಳೆಗೆ ಭಾರಿ ಪೆಟ್ಟನ್ನು ಉಂಟುಮಾಡುತ್ತದೆ. ಅಷ್ಟೇ ಅಲ್ಲ ಮಳೆಗಾಲದಲ್ಲಿ ನೀರಿನಲ್ಲಿ ಮಣ್ಣು ಕೊಚ್ಚಿ ಹೋದಾಗ ಕಳೆನಾಶಕ ನೀರಿಗೆ ಸೇರುತ್ತದೆ.

ತಜ್ಞರು ಏನಂತಾರೆ?

ಎಲ್ಲಾ ಸಮಸ್ಯೆಗಳು ಇರುವುದರಿಂದ ತಜ್ಞರ ಪ್ರಕಾರ ಅನಿವಾರ್ಯವಲ್ಲದ ಸಮಯದಲ್ಲಿ ಕಳೆನಾಶಕವನ್ನು ಬಳಸಬಾರದು ಬದಲಾಗಿ ಕಳೆನಾಶಕಗಳನ್ನು ತಡೆಯಲು ಅಡಿಕೆ ಮರಗಳ ಮಧ್ಯೆ ಇತರ ಯಾವುದಾದರೂ ಉಪಯುಕ್ತ ಬೆಳೆಯನ್ನು ಬೆಳೆಯಬೇಕು. ದ್ವಿದಳ ಧಾನ್ಯಗಳನ್ನು ಬೆಳೆದರೆ ಒಳ್ಳೆಯದು. ಅಂದರೆ ಸೆಣಬು, ಅಲಸಂಧಿ, ಅವre, ಮೊದಲಾದವುಗಳನ್ನು ಬೆಳೆದರೆ ಕಳೆಗಳ ಹಾನಿಯಿಂದ ತಪ್ಪಿಸಿಕೊಳ್ಳಬಹುದು. ಬೆಳೆದು ಅವುಗಳನ್ನು ಕಿತ್ತಾಗ ಮಣ್ಣಿನಲ್ಲಿ ಮಗುಚುವಿಕೆಯಿಂದ ಫಲವತ್ತತೆಯು ಹೆಚ್ಚುತ್ತದೆ.

Comments are closed.