Chanakya neeti: ನೀವು ಎಷ್ಟೇ ಕಷ್ಟಪಟ್ಟರು ಇದು ನಿಮಗೆ ಸಿಗಲು ಅದೃಷ್ಟ ಬೇಕು ಬಿಡಿ, ನೀವು ಕೂಡ ಆ ಅದೃಷ್ಟವಂತರ ಲಿಸ್ಟ್ ನಲ್ಲಿ ಇದ್ದೀರಾ ನೋಡಿ!

Chanakya neeti: ಚಾಣಕ್ಯ ಎನ್ನುವ ಮಹಾನ್ ವ್ಯಕ್ತಿ ಮನುಷ್ಯನ ಭವಿಷ್ಯ (Future)ಕ್ಕೆ ಸಂಬಂಧಪಟ್ಟ ಹಾಗೆ ಸಾಕಷ್ಟು ವಿಷಯಗಳನ್ನ ಹೇಳಿದ್ದಾರೆ. ಜನ್ಮ ಕರ್ಮಗಳ ಬಗ್ಗೆ ಬದುಕಿನ ನಿಗೂಢ ಅರ್ಥದ ಬಗ್ಗೆ ವಿವರಣೆ ನೀಡಿದ್ದಾರೆ ಚಾಣಕ್ಯ ಅವರ ಗ್ರಂಥಗಳಲ್ಲಿ ಅವರು ಹೇಳಿದ ಪ್ರತಿಯೊಂದು ಮಾತು ಮನುಷ್ಯನಿಗೆ ಈಗಲೂ ಅನ್ವಯವಾಗುವಂಥದ್ದು. ಚಾಣಕ್ಯ ಹೇಳುವ ಪ್ರಕಾರ ಈ ಕೆಲವು ವಿಷಯ ನಮ್ಮ ಜೀವನದಲ್ಲಿ ಬೇಕು ಅಂದ್ರೆ ನಾವು ಅಷ್ಟು ಭಾಗ್ಯಶಾಲಿಗಳಾಗಿರಬೇಕು ಅಷ್ಟು ಅದೃಷ್ಟವಂತರಾಗಿರಬೇಕು. ಕೆಲವೊಮ್ಮೆ ಎಷ್ಟೇ ಕಷ್ಟಪಟ್ಟರು ಈ ಕೆಲವು ವಿಷಯಗಳು ಲಭಿಸುವುದೇ ಇಲ್ಲ. ಹಾಗಾದ್ರೆ ಯಾವ ವಿಷಯಕ್ಕಾಗಿ ನಮಗೆ ಅದೃಷ್ಟ ಬೇಕು ಎನ್ನುವುದನ್ನು ನೋಡೋಣ. ಇದನ್ನೂ ಓದಿ: Film News: ಕರುನಾಡು ಕಂಡ ಶ್ರೇಷ್ಠ ನಟ ವಿಷ್ಣುವರ್ಧನ್ ರವರಿಗೆ ಇಷ್ಟವಾದ ನಟ ಯಾರು ಗೊತ್ತೇ? ಇವರು ಎಂದರೆ ನಿಮಗೂ ಕೂಡ ಇಷ್ಟ

ಮನುಷ್ಯ ಜನ್ಮ: (Birth)

ಮನುಷ್ಯ ಜನ್ಮ ಎನ್ನುವಂತದ್ದು ಬಹಳ ಅಪರೂಪ ಹಾಗೂ ಸುಲಭವಾಗಿ ಸಿಗುವಂತದ್ದು ಅಲ್ಲ ಮನುಷ್ಯನಾಗಿ ಹುಟ್ಟುವುದಕ್ಕೆ ಪುಣ್ಯ ಮಾಡಿರಬೇಕು ಎಂದು ಹೇಳಲಾಗುತ್ತದೆ. ಇನ್ನು ಆಚಾರ್ಯ ಚಾಣಕ್ಯ ಹೇಳುವಂತೆ ನೀವು ಯಾವ ತಾಯಿಯ ಹೊಟ್ಟೆಯಲ್ಲಿ ಜನಿಸಬೇಕು ಎನ್ನುವುದು ಅದೃಷ್ಟ ತಿಂದರೆ ನಿರ್ಧಾರವಾಗುತ್ತದೆ ಪ್ರಾಣಿಯ ಹುಟ್ಟಿದ ಬದಲು ಮನುಷ್ಯರ ಗರ್ಭ ಧರಿಸಿದರೆ ಅದುವೇ ಅದೃಷ್ಟ.

ಆಯಸ್ಸು: (Age)

ಆಯಸ್ಸು ಎನ್ನುವುದು ನಮ್ಮ ಹಾಗೂ ನಮ್ಮ ಪೂರ್ವಜರಿಂದ ಸಿಗುವಂತಹ ಭಾಗ್ಯ. ಹುಟ್ಟುವಾಗಲೇ ಆತನ ಆಯಸ್ಸು ಇಷ್ಟೇ ಎಂದು ನಿಶ್ಚಯವಾಗುತ್ತದೆ ನಾವು ಎಷ್ಟೇ ಕಷ್ಟಪಟ್ಟರು ಏನನ್ನೇ ಗಳಿಸಿದರು ಏನು ಕಳೆದುಕೊಂಡರು ಆಯಸ್ಸನ್ನು ಮಾತ್ರ ನಮ್ಮ ಇಚ್ಛೆಗೆ ಅನುಸಾರವಾಗಿ ಪಡೆದುಕೊಳ್ಳಲು ಸಾಧ್ಯವಿಲ್ಲ. ಇದನ್ನೂ ಓದಿ: Temple: ಈ ಸ್ಥಳದಲ್ಲಿ ಮಹಿಳೆಯರ ಸ್ತನಗಳಿಗೆ ನಡೆಯುತ್ತೆ ನಿತ್ಯ ಪೂಜೆ: ಈ ವಿಶಿಷ್ಟ ಪದ್ದತಿಯಿಂದ ನಡೆಯುತ್ತೆ ಪವಾಡ, ವೈದ್ಯರೂ ಇಲ್ಲಿಗೆ ಬಂದು ಹರಕೆ ಕಟ್ಟುತ್ತಾರಾ? ಈ ಸ್ಥಳ ಎಲ್ಲಿದೆ ಗೊತ್ತೇ?

ಕರ್ಮ: (Kharma)

ಆಚಾರ್ಯ ಚಾಣಕ್ಯ ಹೇಳುವ ಪ್ರಕಾರ ಪರಿಶ್ರಮದಿಂದ ಹಣದಿಂದ ಕರ್ಮ ಸಿಗುವುದಿಲ್ಲ ಕರ್ಮ ಎನ್ನುವುದು ನಮ್ಮ ಭಾಗ್ಯದಿಂದ ಲಭಿಸುವಂತದ್ದು ನಮ್ಮ ಹಿಂದಿನ ಜನ್ಮವನ್ನು ಅದು ಅವಲಂಬಿಸಿರುತ್ತದೆ. ಪ್ರತಿಯೊಬ್ಬ ವ್ಯಕ್ತಿಯೂ ತನ್ನ ಕರ್ಮಗಳಿಗೆ ಅನುಕೂಲವಾಗಿ ಸುಖ ದುಃಖಗಳನ್ನು ಅನುಭವಿಸಬೇಕು ಎಂದು ನಿರ್ಣಯವಾಗಿರುತ್ತದೆ.

ಸಂಪತ್ತು: (money)

ಬಡವರು ಶ್ರೀಮಂತರ ಕನಸು ಕಾಣುವುದು ಸಹಜ ಅದಕ್ಕಾಗಿ ಎಷ್ಟು ಕಷ್ಟ ಪಡುತ್ತಾರೆ ಆದರೆ ಕಷ್ಟಪಟ್ಟ ಮಾತ್ರಕ್ಕೆ ಹಣ ನಮ್ಮ ಸ್ವಂತದ್ದಾಗುವುದಿಲ್ಲ ಕೆಲವೊಮ್ಮೆ ಅದೃಷ್ಟ ಇಲ್ಲದೆ ಇದ್ರೆ ಹಗಲು ರಾತ್ರಿ ದುಡಿದರು ಕೈಯಲ್ಲಿ ಒಂದು ರೂಪಾಯಿ ಕೂಡ ನಿಲ್ಲುವುದಿಲ್ಲ. ಜನ್ಮಕಿಂತ ಮೊದಲೇ ನಮ್ಮ ಹಣೆಬರಹ ಕೂಡ ನಿರ್ಧಾರವಾಗಿರುತ್ತದೆ ಎಂದು ಚಾಣಕ್ಯ ಹೇಳುತ್ತಾನೆ ಹಾಗಾಗಿ ಆತನ ಪ್ರಕಾರ ವ್ಯಕ್ತಿ ತನ್ನಲ್ಲಿರುವುದಕ್ಕೆ ತೃಪ್ತನಾಗಬೇಕು.

ಶಿಕ್ಷಣ: (Education)

ಕೆಲವರಿಗೆ ಏನೇ ಮಾಡಿದರೂ ವಿದ್ಯೆ ಅನ್ನೋದು ತಲೆಗೆ ಹತ್ತೋದೆ ಇಲ್ಲ ಎಷ್ಟೋ ಜನ ಮಕ್ಕಳಿಗೆ ಟ್ಯೂಷನ್ ಕೊಟ್ಟು ಹಗಲಿರುಳು ಓದಿಸಿದರು ತಲೆಯಲ್ಲಿ ಒಂದು ಅಕ್ಷರವೂ ನಿಲ್ಲೋದಿಲ್ಲ. ಆದರೆ ಕೆಲವರಿಗೆ ಸ್ವಲ್ಪ ಓದಿದ್ರು ಅದು ತಲೆಯಲ್ಲಿ ಶಾಶ್ವತವಾಗಿ ನೆಲೆಸುತ್ತದೆ. ಚಾಣಕ್ಯನ ಪ್ರಕಾರ ಶಿಕ್ಷಣ ಕೂಡ ನಮ್ಮ ಭಾಗ್ಯದಿಂದಲೇ ಲಭಿಸುವಂಥದ್ದು.

ಸಾವು: (Death)

ಚಾಣಕ್ಯ ಹೇಳುವಂತೆ ವ್ಯಕ್ತಿಯ ಸಾವು ಕೂಡ ತಾಯಿಯ ಗರ್ಭದಲ್ಲಿಯೇ ನಿರ್ಧರಿತವಾಗಿರುತ್ತದೆ ಸಾವು ನಮಗೆ ಬೇಕು ಅಂದಾಗ ಬರುವುದಿಲ್ಲ ನಮಗೆ ಬೇಡ ಅಂದಾಗ ನಮ್ಮನ್ನು ಬಿಟ್ಟು ಹೋಗುವುದಿಲ್ಲ. ನಮ್ಮ ಹಾಗೂ ನಮ್ಮ ಪೂರ್ವಜರ ಕರ್ಮಗಳ ಫಲದಿಂದ ನಮಗೆ ಯಾವ ರೀತಿಯ ಸಾವು ಎಂಬುದು ನಿರ್ಧಾರಿತವಾಗುತ್ತದೆ ಎಂದು ಚಾಣಕ್ಯ ಹೇಳುತ್ತಾರೆ. ಇದನ್ನೂ ಓದಿ: Father’s property: ಹೆಣ್ಣು ಮಕ್ಕಳಿಗೆ ಆಸ್ತಿ ವಿಚಾರದಲ್ಲಿ ಮಹತ್ವದ ಆದೇಶ ಹೊರಡಿಸಿದ ಕೋರ್ಟ್; ಯಾವಾಗ ಪಾಲು ಕೇಳಲು ಸಾಧ್ಯವಿಲ್ಲ ಗೊತ್ತೇ? ಯಾವಾಗ ಆಸ್ತಿ ಪಾಲು ಕೊಡಲೇಬೇಕಾಗುತ್ತದೆ ಗೊತ್ತೇ?

Comments are closed.