Kannada Serial: ಲಕ್ಷ್ಮಿ ಬಾರಮ್ಮ ಧಾರಾವಾಹಿಯಲ್ಲಿ ವೈಷ್ಣವ್ ತಂಗಿ ವಿಧಿ ನಿಜಕ್ಕೂ ಯಾರು ಗೊತ್ತೇ?? ಇವರ ಬ್ಯಾಕ್ ಗ್ರೌಂಡ್ ಏನು ಗೊತ್ತೇ??

Kannada Serial: ಕಲರ್ಸ್ ಕನ್ನಡ ವಾಹಿನಿಯಲ್ಲಿ ಇತ್ತೀಚೆಗೆ ಶುರುವಾಗಿ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿರುವ ಧಾರವಾಹಿ ಲಕ್ಷ್ಮಿ ಬಾರಮ್ಮ. ಈ ಧಾರವಾಹಿ ಈಗ ಕಲರ್ಸ್ ಕನ್ನಡ ವಾಹಿನಿಯ ಟಾಪ್1 ಧಾರವಾಹಿ ಆಗಿದೆ. ಲಕ್ಷ್ಮಿ ಮತ್ತು ವೈಷ್ಣವ್ ಮನೆಯವರ ಸಂತೋಶಕ್ಕೋಸ್ಕರ ಮದುವೆಯಾಗಿದ್ದು, ಮುಂದೆ ಇವರ ನಡುವೆ ಬಾಂಧವ್ಯ ಹೇಗಿರುತ್ತದೆ ಎಂದು ನೋಡಲು ವೀಕ್ಷಕರು ಸಹ ಕಾತುರರಾಗಿ ಕಾಯುತ್ತಿದ್ದಾರೆ. ಇದನ್ನೂ ಓದಿ: Actress Fashion: ನಟಿಯರ ಮಂಗಳ ಸೂತ್ರಕ್ಕೆ ಎಷ್ಟು ಬೆಲೆ ಗೊತ್ತೇ?? ದುಬಾರಿ ತಾಳಿ ಧರಿಸಿರುವ ನಟಿಯ ತಾಳಿ ಬೆಲೆ ಕೇಳಿದರೆ, ನೀರು ಕುಡಿಯೋದು ಬಿಟ್ಟು, ಚಿಂತೆ ಮಾಡ್ತೀರಾ.

ಲಕ್ಷ್ಮಿ ಬಾರಮ್ಮ ಧಾರವಾಹಿಯಲ್ಲಿ ವೈಷ್ಣವ್ ತಂಗಿ ವಿಧಿ ಪಾತ್ರ ಎಲ್ಲರಿಗೂ ಗೊತ್ತಿದೆ. ಶ್ರೀಮಂತ ಕುಟುಂಬದಲ್ಲಿ ಐಶಾರಾಮಿ ಜೀವನ ಸಾಗಿಸುತ್ತಾ ಇರುವ ಹುಡುಗಿ ವಿಧಿ. ಇವಳಿಗೆ ಲಕ್ಷ್ಮಿಯನ್ನು ಕಂಡರೆ ಆಗುವುದಿಲ್ಲ, ಹೇಗಾದರೂ ಮಾಡಿ ಲಕ್ಷ್ಮಿಯನ್ನು ಮನೆಯಿಂದ ಓಡಿಸಬೇಕು ಎಂದು ಚಿಕ್ಕಮ್ಮನ ಜೊತೆ ಸೇರಿ ವಿಧಿ ಪ್ಲಾನ್ ಮಾಡುತ್ತಿದ್ದಾಳೆ. ಧಾರವಾಹಿಯಲ್ಲಿ ವಿಲ್ಲನ್ ಪಾತ್ರದಲ್ಲಿ ಮಿಂಚುತ್ತಿರುವ ವಿಧಿ ನಿಜಕ್ಕೂ ಯಾರು ಗೊತ್ತಾ?

ವಿಧಿ ಪಾತ್ರದಲ್ಲಿ ನಟಿಸುತ್ತಿರುವ ಹುಡುಗಿಯ ಹೆಸರು ಲಾವಣ್ಯ ಹಿರೇಮಠ್, ಇವರು ಮೂಲತಃ ಬಾಗಲಕೋಟೆಯ ಹುಡುಗಿ, ಬಾಗಲಕೋಟೆಯ ಮೆಡಿಕಲ್ ಕಾಲೇಜಿನಲ್ಲಿ ಓದಿ, ಡೆಂಟಿಸ್ಟ್ ಆಗಿದ್ದಾರೆ. ಬೆಂಗಳೂರಿನ ಕೋರಮಂಗಲದ ಕ್ಲಿನಿಕ್ ಒಂದರಲ್ಲಿ ಡೆಂಟಿಸ್ಟ್ ಆಗಿ ಕೂಡ ಕೆಲಸ ಮಾಡುತ್ತಿದ್ದಾರೆ ಲಾವಣ್ಯ. ಜೊತೆಗೆ ಆಕ್ಟಿಂಗ್ ನಲ್ಲಿ ಸಹ ಬ್ಯುಸಿ ಆಗಿದ್ದಾರೆ. ಲಾವಣ್ಯ ಅವರು ಈ ಮೊದಲು ನನ್ನರಸಿ ರಾಧೆ ಧಾರವಾಹಿಯಲ್ಲಿ ನವ್ಯ ಪಾತ್ರದಲ್ಲಿ ನಟಿಸಿದ್ದರು.

ಈಗ ಲಕ್ಷ್ಮಿ ಬಾರಮ್ಮ ಧಾರವಾಹಿ ಮೂಲಕ ಇವರಿಗೆ ಒಳ್ಳೆಯ ಹೆಸರು ಸಿಕ್ಕಿದೆ. ಸೋಷಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿರುವ ಲಾವಣ್ಯ ಅವರಿಗೆ ಟ್ರಾವೆಲ್ಲಿಂಗ್ ಅಂದ್ರೆ ತುಂಬಾ ಇಷ್ಟ, ಇವರು ಸಮಯ ಸಿಕ್ಕಾಗಲೆಲ್ಲಾ ಟ್ರಿಪ್ ಹೋಗುತ್ತಾ ಇರುತ್ತಾರೆ. ಹಾಗೆಯೇ ಶೂಟಿಂಗ್ ನಲ್ಲಿ ಬಿಡುವಾದಾಗ ನಟಿ ಸುಷ್ಮಾ ನಾಣಯ್ಯ ಅವರೊಡನೆ ರೀಲ್ಸ್ ಮಾಡುತ್ತಾರೆ. ಲಾವಣ್ಯ ಅವರು ಹೊಂದಿಸಿ ಬರೆಯಿರಿ ಸಿನಿಮಾದಲ್ಲಿ ಕೂಡ ನಟಿಸಿದ್ದಾರೆ. ಇದನ್ನೂ ಓದಿ: TCS Job: ಟಿಸಿಎಸ್ ಗೆ 40 ಸಾವಿರಕ್ಕೂ ಅಧಿಕ ಉದ್ಯೋಗಿಗಳು ಬೇಕಂತೆ; ಉತ್ತಮ ಸಂಬಳ, ಫ್ರೆಶರ್ಸ್ ಗೆ ಆದ್ಯತೆ; ಕೂಡಲೇ ಅರ್ಜಿ ಸಲ್ಲಿಸಿದ್ರೆ ಇಲ್ಲಿ ಕೆಲಸ ಪಕ್ಕಾ ಫಿಕ್ಸ್!

Comments are closed.