Dhana Rekha: ಕೈಯಲ್ಲಿ ಸೊಗಸಾದ ಧನ ರೇಖೆ ಒಂದು ಇದ್ದು ಬಿಟ್ಟರೆ ಯೋಚನೆ ಇಲ್ಲದೆ ಆರಾಮವಾಗಿ ಇದ್ದು ಬಿಡಿ. ಹಾಗಾದರೆ ಏನಿದು ಧನರೇಖೆ ?

Dhana Rekha: ಧನರೇಖೆ ಕೈಯ ಕೆಳಗಿನ ಭಾಗದಿಂದ ಅಂದರೆ ಮಣಿಬಂಧ ರೇಖೆಯಿಂದ ಆರಂಭವಾಗಿ ಮೇಲ್ಮುಖವಾಗಿ ಇರುವ ರೇಖೆ. ನಸುಗೆಂಪು ಬಣ್ಣ (Red Colour) ದಿಂದ ಇದ್ದು ಸೂಕ್ಷವಾಗಿದ್ದಷ್ಟು ಇದು ಒಳ್ಳೆಯ ಫಲವನ್ನು ನೀಡುತ್ತದೆ. ಮಣಿಬಂಧ ರೇಖೆಯಿಂದ ಪ್ರಾರಂಭವಾಗಿ ಗುರು ಪರ್ವದಲ್ಲಿ ಕೊನೆಗೊಳ್ಳುವ ರೇಖೆಯು ಮನುಷ್ಯನ ಸಮೃದ್ಧಿಯನ್ನು ಸೂಚಿಸುತ್ತದೆ. ಈ ರೀತಿಯ ರೇಖೆ ಇರುವ ಜನರು ಹೃದಯವಂತರಾಗಿದ್ದು, ಸಮಾಜದಲ್ಲಿ ಒಳ್ಳೆಯ ಹೆಸರು ಗಳಿಸಿರುತ್ತಾರೆ. ಇದನ್ನೂ ಓದಿ; Rahane: ಅಜಿಂಕ್ಯ ರಹಾನೆ ಈ ಬಾರಿ ಇಷ್ಟು ವೇಗವಾಗಿ, ಬಿರುಸಾಗಿ ಬ್ಯಾಟ್ ಬೀಸಲು ಕಾರಣ ಏನು ಗೊತ್ತೇ? ಅದೊಂದು ಕೆಲಸ ಇಷ್ಟಕ್ಕೆ ಕಾರಣವಾಯ್ತಾ?

JOSH 2 | Live Kannada News
Dhana Rekha: ಕೈಯಲ್ಲಿ ಸೊಗಸಾದ ಧನ ರೇಖೆ ಒಂದು ಇದ್ದು ಬಿಟ್ಟರೆ ಯೋಚನೆ ಇಲ್ಲದೆ ಆರಾಮವಾಗಿ ಇದ್ದು ಬಿಡಿ. ಹಾಗಾದರೆ ಏನಿದು ಧನರೇಖೆ ? https://sihikahinews.com/2023/04/25/dhana-rekha-after-30-can-be-rich/

ಇವರ ಕೈಯಲ್ಲಿರುವ ಹಣವು ಯಾವಾಗಲೂ ಯಾವ ಕಾರಣದಿಂದಲೂ ದುರದ್ದೇಶಕ್ಕಾಗಿ ಖರ್ಚಾಗುವುದಿಲ್ಲ. ಇಂತಹ ರೇಖೆಯುಳ್ಳವರು ಒಳ್ಳೆಯ ಕುಟುಂಬದಲ್ಲಿ ಜನಿಸಿದ್ದರೂ ಚಿಕ್ಕಂದಿನಿಂದಲೂ ಶ್ರೀಮಂತ (Rich)ರಾಗಿ ಇರುವುದಿಲ್ಲ. ಕಠಿಣ ಪರಿಶ್ರಮದಿಂದ ಮೇಲೆ ಬಂದ ಇವರನ್ನು ಮತ್ತೆ ಯಾರಿಂದಲೂ ಹಿಡಿಯಲು ಸಾಧ್ಯವಿಲ್ಲ. ’ಸ್ಕೈ ಇಸ್ ದ ಓನ್ಲಿ ಲಿಮಿಟ್’ ಎಂಬ ಮಾತಿನಂತೆ ಅವರಿಗೆ ಅವರೇ ಸಾಟಿ.

ಸಾಧಾರಣವಾಗಿ ಇವರ ಅದೃಷ್ಟ ಖುಲಾಯಿಸುವುದು ಮೂವತ್ತೈದು ವರ್ಷಗಳ ನಂತರ. ಅದಕ್ಕಿಂತ ಮೊದಲಿನ ಜೀವನಕ್ಕೂ ನಂತರದ ಜೀವನಕ್ಕೂ ಅಜಗಜಾಂತರ ವ್ಯತ್ಯಾಸ ಇರುತ್ತದೆ. ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಅಂತಹ ಎತ್ತರಕ್ಕೆ ಬೆಳೆಯುತ್ತಾರೆ. ಅಂದರೆ ಮೂವತ್ತೈದು ವರ್ಷಗಳಿಗಿಂತ ಮೊದಲಿನ ಅವಧಿಯೂ ಅಷ್ಟೊಂದು ಕಷ್ಟಕರವಾಗಿರುತ್ತದೆ ಎಂದಲ್ಲ. ಖರ್ಚು ವೆಚ್ಚಗಳನ್ನು ಹೊಂದಿಸಿ ನೋಡಿದರೆ ಉಳಿಕೆಯ ಪ್ರಮಾಣ ತೀರಾ ಕಡಿಮೆ ಇರುತ್ತದೆ. ಇದನ್ನೂ ಓದಿ:Kavya Gowda: ಧಾರಾವಾಹಿಯಿಂದ ದೂರ ಹೋಗಿರುವ ಕಾವ್ಯ ಗೌಡ ರವರು, ಮಾಡುತ್ತಿರುವ ಕೆಲಸ ಏನು ಗೊತ್ತೇ?? ವಾಪಸ್ಸು ಬರದೇ ಈ ಕೆಲಸ ಮಾಡುತ್ತಿರುವುದು ಯಾಕೆ ಗೊತ್ತೆ?

ಈ ರೇಖೆ ಇದ್ದವರು ವಿದ್ಯೆಯ ಕಾರಣದಿಂದ ಧನ ಸಂಪಾದನೆ ಮಾಡುವುದಿಲ್ಲ. ಯಾವುದಾದರೂ ಸ್ವ ಉದ್ಯೋಗಕ್ಕೆ ಇವರ ಮನಸ್ಸು ಹಾತೊರೆಯುತ್ತಿರುತ್ತದೆ. ಇಪ್ಪತ್ತನಾಲ್ಕು ವರ್ಷಗಳ ಒಳಗೆ ಒಂದೆರಡು ಸ್ವ ಉದ್ಯೋಗ ಮಾಡಲು ಪ್ರಯತ್ನಿಸಿ ಯಶಸ್ವಿಯಾಗದೇ ಮತ್ತೆ ಇಪ್ಪತ್ತನಾಲ್ಕು ವರ್ಷಗಳ ನಂತರ ಆರಂಭಿಸಿದ ಸ್ವ ಉದ್ಯೋಗವನ್ನು ಛಲ ಹಿಡಿದು ಮುಂದುವರೆಸಿಕೊಂಡು ಹೋಗುತ್ತಾರೆ.

ಹಸ್ತದಲ್ಲಿ ಈ ರೀತಿಯ ರೇಖೆ ಉಳ್ಳವರು ಸೂಕ್ಷಮತಿಗಳಾಗಿರುತ್ತಾರೆ, ಅಂದರೆ ಇತರರ ಭಾವನೆಗಳನ್ನು ಅತೀ ಸೂಕ್ಷ್ಮವಾಗಿ ಗುರುತಿಸುತ್ತಾರೆ. ತೀರಾ ಸಂವೇದನಾಶೀಲ ವ್ಯಕ್ತಿ ಆಗಿರುವ ಇವರು ದಾನ ಧರ್ಮಾದಿಗಳಲ್ಲಿ ಆಸಕ್ತಿಯನ್ನು ಹೊಂದಿರುತ್ತಾರೆ. ಮತ್ತೊಬ್ಬನ ಜೀವನ ನಿರ್ಮಾಣದಲ್ಲೂ ಇವರ ಪಾಲು ಇರುತ್ತದೆ. ಇವರು ಬೆಳೆಸಿದ ಗೆಳೆತನ ಶಾಶ್ವತವಾಗಿರುತ್ತದೆ. ಆತ್ಮೀಯ ಗೆಳೆಯರು ಎಂದು ಇವರಿಗೆ ನಾಲ್ಕರಿಂದ ಐದು ಜನ ಮಾತ್ರ ಇರುತ್ತಾರೆ. ಇವರು ಗೆಳೆತನವನ್ನು ಸ್ವಾರ್ಥಕ್ಕಾಗಿ ಬಳಸಿಕೊಳ್ಳುವುದಿಲ್ಲ. ನಸುಗೆಂಪು ಬಣ್ಣದ ಧನರೇಖೆ ಇರುವವರು ಸಾಮಾನ್ಯವಾಗಿ ದೃಢಕಾಯರಾಗಿರುತ್ತಾರೆ. ಈ ವ್ಯಕ್ತಿಗಳಲ್ಲಿ ಎನೋ ಒಂದು ಅಮೂರ್ತ ಆಕರ್ಷಣೆ ಇರುತ್ತದೆ. ಇದನ್ನೂ ಓದಿ: Astrology: ಸಾಲದ ಸುಳಿಯಲ್ಲಿ ಸಿಲುಕಿಕೊಂಡು ತೆಗೆದುಕೊಂಡ ಹಣ ಹಿಂತಿರುಗಿ ಕೊಡಲು ಸಾಧ್ಯವಾಗದೆ ಕಷ್ಟ ಪಡುತ್ತಿದ್ದರೆ ಈ ಒಂದು ಪ್ರಯೋಗ ಮಾಡಿ ಸಾಕು ಸಾಲದಿಂದ ಶಾಶ್ವತ ಮುಕ್ತಿ ಸಿಗುತ್ತದೆ!

Comments are closed.