Film News: ಪೊನ್ನಿಯನ್ ಸೆಲ್ವನ್ ಸಿನಿಮಾ ಕಲೆಕ್ಷನ್ ನೋಡಿದರೆ ಶಾಕ್ ಆಗ್ತೀರಾ. ರಾಜಮೌಳಿ ಕೂಡ ಗಾಬರಿ ಬೀಳುವಂತೆ ಗಳಿಸಿದ್ದು ಎಷ್ಟು ಕೋಟಿ ಗೊತ್ತೇ??

Film News: ಪೊನ್ನಿಯಿನ್ ಸೆಲ್ವನ್ ಇದು ಭಾರತ ಚಿತ್ರರಂಗದ ಶ್ರೇಷ್ಠ ನಿರ್ದೇಶಕರಲ್ಲಿ ಒಬ್ಬರಾದ ಮಣಿರತ್ನಂ ಅವರ ಕನಸಿನ ಪ್ರಾಜೆಕ್ಟ್. ಪೊನ್ನಿಯಿನ್ ಸೆಲ್ವನ್ (ponniyin-selvan) ಚೋಳರಾಜರ (Chola samsthanam) ಸಂಸ್ಥಾನದ ಕಥೆಯನ್ನು ಆಧರಿಸಿದ ಸಿನಿಮಾ. ಇತಿಹಾಸದ ಈ ಕಥೆಯನ್ನು ಸುಮಾರು 70 ವರ್ಷಗಳ ಹಿಂದೆ ಕಲ್ಕಿ ಅವರು ಬರೆದ ಕಾದಂಬರಿಯನ್ನು ಆಧರಿಸಿ ಪೊನ್ನಿಯಿನ್ ಸೆಲ್ವನ್ ಸಿನಿಮಾವನ್ನು ತಯಾರಿಸಲಾಗಿದೆ. ಈ ಸಿನಿಮಾಗಾಗಿ ತಮಿಳು ಚಿತ್ರರಂಗ (Tamil Film Industry) ಬಹಳಷ್ಟು ವರ್ಷಗಳಿಂದ ಕಾಯುತ್ತಿತ್ತು. ಇದನ್ನೂ ಓದಿ:Cricket news: ಗಳಿಸಿದ್ದು ಕೇವಲ 12 ರನ್ ಆದರೂ ಲಕ್ನೋ ತಂಡ 257 ರನ್ ಗಳಿಸಲು, ರಾಹುಲ್ ಕಾರಣ ಎಂದ ನೆಟ್ಟಿಗರು. ಅದು ಹೇಗೆ ಗೊತ್ತೇ?? ಲೆಕ್ಕದ ಪ್ರಕಾರ ರಾಹುಲ್ ಗೆದ್ದದ್ದು ಹೇಗೆ ಗೊತ್ತೇ?

ಮಣಿರತ್ನಂ (Maniratnam) ಅವರು ಕೂಡ ಬಹಳ ವರ್ಷಗಳ ಕಾಲ ಈ ಕಥೆಯನ್ನು ಸಿನಿಮಾ ಮಾಡಬೇಕು ಎಂದು ಶ್ರಮ ಪಟ್ಟು, ಕೊನೆಗೆ ಎರಡು ಪಾರ್ಟ್ ಗಳ ಮೂಲಕ ಸಿನಿಮಾ ಬಿಡುಗಡೆ ಮಾಡಿದ್ದಾರೆ. ಪೊನ್ನಿಯಿನ್ ಸೆಲ್ವನ್ 1 ಹಾಗೂ ಪೊನ್ನಿಯಿನ್ ಸೆಲ್ವನ್2 ಎರಡು ಸಿನಿಮಾಗಳ ಚಿತ್ರೀಕರಣವನ್ನು ಒಂದೇ ಸಾರಿ ಮಾಡಿ, ಮೊದಲ ಪಾರ್ಟ್ ಅನ್ನು ಕಳೆದ ವರ್ಷ ಬಿಡುಗಡೆ ಮಾಡಿದರು, ಪಿ.ಎಸ್2 ಸಿನಿಮಾ ಬರೋಬ್ಬರಿ 600 ಕೋಟಿ ಗಳಿಸಿ ಬ್ಲಾಕ್ ಬಸ್ಟರ್ (block buster movie) ಎನ್ನಿಸಿಕೊಂಡಿತ್ತು.

ಏಪ್ರಿಲ್ 28ರಂದು ಈ ಸಿನಿಮಾದ ಎರಡನೇ ಪಾರ್ಟ್ ಬಿಡುಗಡೆ ಆಗಿದೆ, ಪಾರ್ಟ್ 2 ಕೂಡ ಜನರಿಗೆ ಬಹಳ ಇಷ್ಟವಾಗಿದೆ. ಬಿಡುಗಡೆಯಾಗಿ ಎರಡೇ ದಿನದಲ್ಲಿ ಹಣಗಳಿಕೆ ವಿಚಾರದಲ್ಲಿ ಪೊನ್ನಿಯಿನ್ ಸೆಲ್ವನ್ ಮಾಡಿರುವ ಹಣಗಳಿಕೆ ನೋಡಿ ಸ್ವತಃ ರಾಜಮೌಳಿ (Rajamouli) ಅವರಿಗೆ ಶಾಕ್ ಆಗಿದೆ. ಏಪ್ರಿಲ್28ರಂದು ಪ್ಯಾನ್ ಇಂಡಿಯಾ ಸಿನಿಮಾ ಆಗಿ ಬಿಡುಗಡೆಯಾಗಿ ಮೂರೇ ದಿನಗಳಲ್ಲಿ 100ಕೋಟಿ ಗಳಿಸಿ, 100ಕ್ರೋರ್ ಕ್ಲಬ್ ಸೇರಿಸಿ ಪಿಎಸ್2. ತಮಿಳು ಚಿತ್ರರಂಗಕ್ಕೆ ಈ ಸಿನಿಮಾ ಅದ್ಭುತವಾದ ಯಶಸ್ಸು ತಂದುಕೊಟ್ಟಿದೆ.

ತಮಿಳಿನಲ್ಲಿ ಇಷ್ಟು ದೊಡ್ಡ ಮಟ್ಟಗೆ ಯಶಸ್ಸು ಹಣಗಳಿಕೆ ಕಂಡಿದ್ದ ಸಿನಿಮಾಗಳು ಕಡಿಮೆ, ಪಿಎಸ್2 ಈಗ ಆ ಸಾಲಿಗೆ ಸೇರಿದೆ. ಈ ವೇಳೆ ಬೇರೆ ಯಾವುದೇ ದೊಡ್ಡ ಸಿನಿಮಾಗಳು ಬಿಡುಗಡೆ ಆಗದ ಕಾರಣ ಜನರು ಪಿಎಸ್2 ಸಿನಿಮಾವನ್ನು ನೋಡಿ ಎಂಜಾಯ್ ಮಾಡುತ್ತಿದ್ದಾರೆ. ಬಿಡುಗಡೆಯಾದ ಮೊದಲ ಅಷ್ಟೇನು ಕ್ರೇಜ್ ಪಡೆಯದೆ ಹೋದರು, ಎರಡನೇ ದಿನದಿಂದ ಒಳ್ಳೆಯ ಹಣಗಳಿಕೆ ಜೊತೆಗೆ ಜನರನ್ನು ಮೆಚ್ಚಿಸುತ್ತಿದೆ. ಇದನ್ನೂ ಓದಿ: TRAI: ಹೊಸ ನಿಯಮ ಬಿಡುಗಡೆ ಮಾಡಿದ ಟ್ರಾಯ್: ನಾಳೆ ಇಂದ ಏನೆಲ್ಲಾ ಬದಲಾಗಲಿದೆ ಗೊತ್ತೇ? ಜನ ಸಾಮಾನ್ಯರಿಗೆ ನಿಟ್ಟುಸಿರು.

Comments are closed.