Instagram: ಇನ್ಸ್ಟಾಗ್ರಾಮ್ ಬಳಸುತ್ತಿರುವ ಈ ರೀತಿ ಲಿಂಕ್ ಮಾಡಿದರೆ, ನಿಮ್ಮ ಬ್ಯಾಂಕ್ ಖಾತೆಯ ಹಣ ಡಮಾರ್. ಈ ಮಹಿಳೆಗೆ ಆಗಿರುವುದೇನು ಗೊತ್ತೇ?

Instagram: ಈಗ ಸೋಷಿಯಲ್ ಮೀಡಿಯಾ ಎನ್ನುವುದು ಬಹಳ ಪವರ್ ಫುಲ್, ಎಲ್ಲರೂ ಸೋಷಿಯಲ್ ಮೀಡಿಯಾ ಬಳಸುತ್ತಾರೆ. ಇಲ್ಲಿ ಹಲವು ವಿಚಾರಗಳು ನಿಮಗೆ ಗೊತ್ತಾಗುತ್ತದೆ. ಮಹಿಳೆಯರು ಕೂಡ ಸೋಷಿಯಲ್ ಮೀಡಿಯಾ ಮೂಲಕ ಅನೇಕ ವಿಚಾರಗಳನ್ನು ತಿಳಿದುಕೊಳ್ಳುತ್ತಾರೆ. ಇಲ್ಲೊಬ್ಬ ಕೆಲಸ ಹುಡುಕುವ ಭರದಲ್ಲಿ ಇನ್ಸ್ಟಾಗ್ರಾಮ್ ನಲ್ಲಿ ಒಬ್ಬ ವ್ಯಕ್ತಿಯಿಂದ ಎಷ್ಟು ಲಕ್ಷ ಹಣ ಕಳೆದುಕೊಂಡಿದ್ದಾಳೆ ಗೊತ್ತಾ?

do not these links on instagram might be a scam | Live Kannada News
Instagram: ಇನ್ಸ್ಟಾಗ್ರಾಮ್ ಬಳಸುತ್ತಿರುವ ಈ ರೀತಿ ಲಿಂಕ್ ಮಾಡಿದರೆ, ನಿಮ್ಮ ಬ್ಯಾಂಕ್ ಖಾತೆಯ ಹಣ ಡಮಾರ್. ಈ ಮಹಿಳೆಗೆ ಆಗಿರುವುದೇನು ಗೊತ್ತೇ? https://sihikahinews.com/2023/05/04/do-not-these-links-on-instagram-might-be-a-scam/

ಈ ಮಹಿಳೆಗೆ ಕೆಲಸ ಮಾಡಬೇಕು ಎಂದು ಆಸೆ ಶುರುವಾಗಿತ್ತು. ಈಕೆಯ ಗಂಡ ಕೆಲಸಕ್ಕೆ ಹೋಗಿ ಚೆನ್ನಾಗಿ ಸಂಪಾದನೆ ಮಾಡುತ್ತಿದ್ದರು, ಆಗ ಈಕೆಗೆ ಕೂಡ ತಾನು ಸಹ ಕೆಲಸ ಮಾಡಬೇಕು ಎಂದು ಆಸಕ್ತಿ ಶುರುವಾಯಿತು. ಅದಕ್ಕಾಗಿ ಎಲ್ಲಾ ಕಡೆ ಕೆಲಸಕ್ಕಾಗಿ ಹುಡುಕಾಟ ನಡೆಸಿದಳು, ಆದರೆ ಎಲ್ಲೂ ಸರಿಯಾದ ಪ್ರತಿಕ್ರಿಯೆ ಸಿಗಲಿಲ್ಲ. ಆಗ ಇನ್ಸ್ಟಾಗ್ರಾಮ್ ನಲ್ಲಿ ಕೆಲಸ ಖಾಲಿ ಇದೆ ಎನ್ನುವ ಜಾಹಿರಾತು ನೋಡಿ, ಅಲ್ಲಿ ನೀಡಿದ್ದ ಹಾಗೆ ಅಪ್ಲೈ ಮಾಡಿದ್ದಾರೆ.

ಇದನ್ನು ಓದಿ: Business Ideas: ಮನೆಯಲ್ಲಿಯೇ ಕುಳಿತು ಗೂಗಲ್ ಪೇ ಬಳಸಿ, ಯಾವುದೇ ಬಂಡವಾಳವಿಲ್ಲದೆ ಹಣ ಗಳಿಸುವುದು ಹೇಗೆ ಗೊತ್ತೇ?? ತಿಂಗಳಿಗೆ 20 ರಿಂದ 30 ಸಾವಿರ ಗಳಿಸಬಹುದು.

ಸ್ವಲ್ಪ ಹೊತ್ತಿನ ನಂತರ ರಾಹುಲ್ ಎನ್ನುವ ವ್ಯಕ್ತಿ ಕಾಲ್ ಮಾಡಿದ್ದು, ಕೆಲಸಕ್ಕೆ ರಿಜಿಸ್ಟರ್ 750 ರೂಪಾಯಿ ಕಟ್ಟಬೇಕು ಎಂದು ಕೇಳಿದ್ದಾನೆ. ಆಕೆ ಕೂಡ ಕೇವಲ 750 ರೂಪಾಯಿ ಎಂದು ಕೊಟ್ಟಿದ್ದಾಳೆ. ಏರ್ ಲೈನ್ ಜಾಬ್ ಇಂಡಿಯಾ ಸಂಸ್ಥೆಯಲ್ಲಿ ಕೆಲಸ ಕೊಡಿಸುವುದಾಗಿ ಹೇಳಿ, ಇದಕ್ಕಾಗಿ ಎರಡು ಆಪ್ ಗಳನ್ನು ಡೌನ್ಲೋಡ್ ಮಾಡಲು ಹೇಳಿದ್ದಾನೆ, ಈಕೆ ಕೂಡ ಡೌನ್ಲೋಡ್ ಮಾಡಿದ್ದು, ನಂತರ ಏರ್ಪೋರ್ಟ್ ಸೆಕ್ಯೂರಿಟಿ ಆಗಿ 20 ರೂಪಾಯಿ ಕಟ್ಟಬೇಕು ಎಂದು ಹೇಳಿದ್ದಾನೆ.

ಹೀಗೆ ಒಂದಲ್ಲ ಒಂದು ನೆಪಗಳನ್ನು ಹೇಳಿ, ಆ ಫಾರ್ಮ್, ಈ ಫಾರ್ಮ್, ವಿಮೆ, ಆಫೀಸ್ ನ ವೆಲ್ಕಮ್ ಕಿಟ್, ಗೇಟ್ ಪಾಸ್ ಹೀಗೆ ಕಾರಣಗಳನ್ನು ಕೊಟ್ಟು ಆಕೆಯಿಂದ ಬರೋಬ್ಬರಿ ₹8,60,000 ರೂಪಾಯಿ ದೋಚಿದ್ದಾನೆ. ಆರಂಭದಲ್ಲಿ ಆಕೆಗೆ ಗೊತ್ತಾಗಲಿಲ್ಲ, ನಂತರ ಆಕೆಗೆ ಮೋಸ ಆಗಿದೆ ಎಂದು ಅರ್ಥವಾಗಿ ಏನು ಮಾಡಬೇಕೆಂದು ಗೊತ್ತಾಗದೆ, ತನ್ನ ಗಂಡನನ್ನು ಕರೆದು, ಈ ವಿಷಯ ಹೇಳಿದ್ದಾಳೆ..

ಇದನ್ನು ಓದಿ: EV Scooter: ಎಲ್ಲರೂ ಖರೀದಿ ಮಾಡುತ್ತಿದ್ದಾರೆ ಎಂದು ಎಲೆಕ್ಟ್ರಿಕ್ ಸ್ಕೂಟರ್ ಖರೀದಿ ಮಾಡುವ ಮುನ್ನ ಈ ವಿಷಯ ತಿಳಿದು ಖರೀದಿ ಮಾಡಿ. ಇದೊಂದು ಆಲೋಚನೆ ಮಾಡಿ.

ನಂತರ ಇಬ್ಬರು ಹೋಗಿ ಆ ವ್ಯಕ್ತಿಯ ವಿರುದ್ಧ ಪೊಲೀಸರ ಬಳಿ ದೂರು ಕೊಟ್ಟಿದ್ದು, ಕೆಲ ತಿಂಗಳ ಹಿಂದೆ ಈ ಪ್ರಕರಣ ನಡೆದಿದೆ, ನಂತರ ಪೊಲೀಸರು ಆತನನ್ನು ಹುಡುಕಿ ಬಂಧಿಸಿದ್ದು, ಆಗ ಪೊಲೀಸರಿಗೆ ಆತ ಇನ್ನಷ್ಟು ಜನರಿಂದ ಸುಮಾರು ಲಕ್ಷ ದೋಚಿದ್ದಾನೆ ಎಂದು ತಿಳಿದುಬಂದಿದೆ. ಹೀಗೆಲ್ಲಾ ಮೋಸ ಮಾಡುವವರು ಇರುತ್ತಾರೆ. ಹಾಗಾಗಿ ನೀವು ಸೋಷಿಯಲ್ ಮೀಡಿಯಾ ಬಳಸುವಾಗ ಹುಷಾರಾಗಿರಿ.

Comments are closed.