Lakshmi: ಲಕ್ಷ್ಮಿ ದೇವಿ ನಿಮ್ಮ ಮನೆಗೆ ಬರುವ ಮುನ್ನ ಈ ಸೂಚನೆಗಳನ್ನು ನೀಡುತ್ತಾರೆ. ಈ ಸೂಚನೆಗಳು ಬಂದರೆ, ಲಕ್ಷ್ಮಿ ದೇವಿ ಬರುತ್ತಿದ್ದಾರೆ ಎಂದರ್ಥ.

Lakshmi: ಈಗಿನ ಕಾಲದಲ್ಲಿ ಎಲ್ಲರೂ ಬಯಸಿ ಬೇಡಿಕೊಳ್ಳುವುದು ಹೆಚ್ಚು ಹಣ ಸಿಗಬೇಕು ಎಂದು, ಈಗ ಪ್ರಪಂಚ ನಿಂತಿರುವುದೇ ಹಣದ ಮೇಲೆ. ಯಾವುದೇ ವಿಷಯಕ್ಕೆ ಆಗಿದ್ದರು ಈಗ ಹಣ ಇರಲೇಬೇಕು. ಜನರ ನಡುವೆ ಪ್ರೀತಿ ಹಾಗೂ ನಂಬಿಕೆಯನ್ನು ಉಳಿಸಿಕೊಳ್ಳುವುದಕ್ಕೂ ಸಹ ಹಣ ಬೇಕು. ಇದಕ್ಕೆಲ್ಲ ಅದೃಷ್ಟ ಬೇಕು ಎಂದು ಎಲ್ಲರೂ ನಂಬುತ್ತಾರೆ. ಹಣದ ವಿಷಯದಲ್ಲಿ ನಮಗೆ ಎಲ್ಲವು ಚೆನ್ನಾಗಿರಬೇಕು ಎಂದರೆ, ನಮಗೆ ಲಕ್ಷ್ಮೀದೇವಿಯ ಕೃಪೆ ಇರಬೇಕು. ಲಕ್ಷ್ಮೀದೇವಿಯನ್ನು ಉಳಿಸಿಕೊಳ್ಳಲು ಬಹಳಷ್ಟು ರೀತಿಯಲ್ಲಿ ಜನರು ಪೂಜೆ ಪುನಸ್ಕಾರಗಳನ್ನು ಮಾಡುತ್ತಾರೆ. ಆದರೆ ಹಣದ ವಿಷಯದಲ್ಲಿ, ಈ ಅದೃಷ್ಟ ನಿಮ್ಮ ಮನೆಯ ಬಾಗಿಲನ್ನು ಹೇಗೆ ತಟ್ಟುತ್ತದೆ? ಇದಕ್ಕೆ ಲಕ್ಷ್ಮೀದೇವಿ ಯಾವುದಾದರೂ ಸೂಚನೆ ಕೊಡುತ್ತಾರಾ? ತಿಳಿಸುತ್ತೇವೆ ನೋಡಿ..

lakshmi goddess will give these signs | Live Kannada News
Lakshmi: ಲಕ್ಷ್ಮಿ ದೇವಿ ನಿಮ್ಮ ಮನೆಗೆ ಬರುವ ಮುನ್ನ ಈ ಸೂಚನೆಗಳನ್ನು ನೀಡುತ್ತಾರೆ. ಈ ಸೂಚನೆಗಳು ಬಂದರೆ, ಲಕ್ಷ್ಮಿ ದೇವಿ ಬರುತ್ತಿದ್ದಾರೆ ಎಂದರ್ಥ. https://sihikahinews.com/2023/05/04/lakshmi-goddess-will-give-these-signs/

ಕೋಗಿಲೆ ಕೂಗುವುದು :- ಕೋಗಿಲೆಯ ಹಾಡು ಮಾಧುರ್ಯವಾದದ್ದು, ಇದನ್ನು ಕೇಳುವುದು ಶುಭ ಸಂಕೇತ ಎಂದು ಹೇಳಲಾಗುತ್ತದೆ.. ಕೋಗಿಲೆ ಯಾವ ದಿಕ್ಕಿನಿಂದ ಕೂಗುತ್ತದೆ ಎನ್ನುವುದರ ಮೇಲೆ ಒಳ್ಳೆಯದು ಮತ್ತು ಕೆಟ್ಟದ್ದನ್ನು ನಿರ್ಧಾರ ಮಾಡಲಾಗುತ್ತದೆ. ಸಂಜೆ ಸಮಯದಲ್ಲಿ ಕೋಗಿಲೆ ಹಾಡು ಕೇಳುವುದು ಅದೃಷ್ಟ ಎಂದು ಹೇಳುತ್ತಾರೆ. ಯಾವುದೇ ಕೆಲಸಕ್ಕೆ ಹೋಗುವಾಗ, ಕೋಗಿಲೆಯ ಹಾಡಿನ ಶಬ್ಧ ಕೇಳಿದರೆ, ಅದು ಲಾಭ ಎಂದು ಹೇಳುತ್ತಾರೆ.

ಇರುವೆಗಳ ಓಡಾಟ :- ಮನೆಯಲ್ಲಿ ಸಾಮಾನ್ಯವಾಗಿ ಇರುವೆಗಳು ಇದ್ದರೆ ಅವುಗಳನ್ನು ಸಾಯಿಸಿಬಿಡುತ್ತೇವೆ. ಆದರೆ ವಿಜ್ಞಾನದ ಪ್ರಕಾರ ಕಪ್ಪು ಇರುವೆಗಳು ಮನೆಯಲ್ಲಿದ್ದರೆ ಅದು ಒಳ್ಳೆಯ ಸೂಚನೆ. ಬಾಯಿಯಲ್ಲಿ ಅಕ್ಕಿ ಕಾಳುಗಳನ್ನು ಇಟ್ಟುಕೊಂಡ ಇರುವೆಗಳು ಓಡಾಡುತ್ತಿದ್ದರೆ ಅದು ಒಳ್ಳೆಯದು, ಲಕ್ಷ್ಮೀದೇವಿಗೆ ಇದೆಲ್ಲವೂ ತುಂಬಾ ಪ್ರೀತಿ. ಆದರೆ ಮನೆಯಲ್ಲಿ ಕೆಂಪು ಇರುವೆಗಳು ಹೆಚ್ಚಾಗಿ ಕಾಣಿಸಿಕೊಂಡರೆ ಸಾಲ ಹೆಚ್ಚಾಗುತ್ತದೆ ಎಂದು ಹೇಳುತ್ತಾರೆ.

ಹಲ್ಲಿ ಬಿದ್ದರೆ :- ಒಂದು ವೇಳೆ ಹಲ್ಲಿ ಬಿದ್ದರೆ ನಮಗೆ ಅದರಿಂದ ಕಿರಿಕಿರಿ ಆಗುತ್ತದೆ. ಆದರೆ ಕೆಲವು ಜಾಗಗಳಲ್ಲಿ ಹಲ್ಲಿ ಬಿದ್ದರೆ ಅದನ್ನು ಅದೃಷ್ಟ ಎಂದು ಕರೆಯುತ್ತಾರೆ. ನಿಮ್ಮ ಬಲಗೈಮೇಲೆ ಹಲ್ಲಿ ಬಿದ್ದರೆ ಅದನ್ನು ಅದೃಷ್ಟ ಎಂದು ಪರಿಗಣಿಸುತ್ತಾರೆ. ಹಲ್ಲಿಯನ್ನು ಸಂಪತ್ತಿನ ಸಂಕೇತ ಎಂದು ಕರೆಯುತ್ತಾರೆ.

ಎರಡು ತಲೆ ಹಾವು ಕಾಣಿಸಿದರೆ :- ಹಾವು ಎನ್ನುವುದೇ ಭಯ ಹುಟ್ಟಿಸುವಂಥದ್ದು, ಮನೆಯಲ್ಲಿ ಅವುಗಳು ಕಂಡುಬಂದರೆ, ಕಚ್ಚುತ್ತದೆ ಎನ್ನುವ ಭಯದಲ್ಲಿ ಸಾಯಿಸಿಬಿಫ್ಯೂತ್ತಾರೆ. ಆದರೆ ಇದನ್ನು ಶುಭಸಂಕೇತ ಎಂದು ಕೆಲವರು ಹೇಳುತ್ತಾರೆ. ಮನೆಯಲ್ಲಿ ಎರಡು ತಲೆಯ ನಾಗರಹಾವು ಕಾಣಿಸಿದರೆ ಒಳ್ಳೆಯದು ಎಂದು ಹೇಳುತ್ತಾರೆ. ಈ ಮನೆಯಲ್ಲಿ ಅದೃಷ್ಟ ಬರುತ್ತದೆ ಎನ್ನುವ ನಂಬಿಕೆ ಕೂಡ ಇದೆ. ಇಂಥ ಹಾವು ಕಂಡರೆ, ಅದನ್ನು ಮುಗಿಸದೆ ದಾರಿ ತೋರಿಸಬೇಕು. ಅದರಿಂದ ಲಕ್ಷ್ಮೀದೇವಿಯ ಆಶೀರ್ವಾದ ಸಿಗುತ್ತದೆ.

ಲಕ್ಷ್ಮೀದೇವಿಯ ಆಶೀರ್ವಾದ ನಿಮಗೆ ಸಿಗುತ್ತದೆ ಎನ್ನುವ ಸಮಯದಲ್ಲಿ ನಿಮ್ಮ ಯೋಚನೆಗಳು ಕೂಡ ಬದಲಾಗುತ್ತದೆ, ನಿಮ್ಮ ಮನಸ್ಸಿನಲ್ಲಿ ಕೋಪ, ದ್ವೇಷ, ಅಸೂಯೆ ಕಡಿಮೆ ಆಗಿ ಎಲ್ಲವೂ ಒಳ್ಳೆಯ ಆಲೋಚನೆಗಳು ಬರುತ್ತದೆ. ಮನೆಯು ಶುಭ್ರವಾಗಿ ಇರುತ್ತದೆ. ಸ್ವಚ್ಛತೆ ಇದ್ದ ಕಡೆ ಲಕ್ಷ್ಮೀದೇವಿ ಬರುತ್ತಾಳೆ ಎನ್ನುವ ನಂಬಿಕೆ ಕೂಡ ಇದೆ.

Comments are closed.