Hasta Rekha: ಇದು ಅಂತಿಂಥ ಯೋಗವಲ್ಲ, ಈ ರೇಖೆ ಕೈಯಲ್ಲಿ ಇದ್ರೆ ವಿದೇಶದಲ್ಲಿ ಉದ್ಯೋಗ, ಕೈ ತುಂಬಾ ಹಣ ಗ್ಯಾರಂಟಿ!

Hasta Rekha: ಚಂದ್ರ ಮತ್ತು ಮಂಗಳದ ನಡುವಿನಿಂದ ಹೊರಟು ಗುರುಪರ್ವಕ್ಕೆ ಸೂಕ್ಷ್ಮವಾದ ನಸುಗೆಂಪುಬಣ್ಣದ ಭಾಗ್ಯರೇಖೆ ಸಾಗಿದ್ದರೆ ವಿದೇಶದಲ್ಲಿ ಸಂಪಾದನೆ ಮಾಡುವ ಯೋಗ ಇರುತ್ತದೆ. ಇವರು ಬಹಳ ವಿದ್ಯಾವಂತರಾಗಿರುತ್ತಾರೆ. ಇವರಲ್ಲಿ ಬಹಳಷ್ಟು ಜನ ವಿಜ್ಞಾನಿಗಳಾಗಿಯೂ ಇರಬಹುದು. ಸಣ್ಣ ವಯಸ್ಸಿನಲ್ಲೇ ವಿದೇಶ ಯೋಗ ಇವರ ಪಾಲಿನದ್ದಾಗಿರುತ್ತದೆ. ಕೇವಲ ಒಂದು ದೇಶಕ್ಕೆ ಹೋಗಿ ಕೆಲಸ ಮಾಡುವುದಷ್ಟೇ ಅಲ್ಲ, ವಿವಿಧ ದೇಶಗಳಿಗೆ ಭೇಟಿ ನೀಡುವ ಭಾಗ್ಯ ಇವರದ್ದಾಗಿರುತ್ತದೆ. ಕೇವಲ ಕೆಲಸ ಯಾರ ಕೈಕೆಳಗೆ ಕೆಲಸ ಮಾಡುವುದಷ್ಟೇ ಅಲ್ಲ ಇವರು ಒಂದು ದೊಡ್ಡ ತಂಡವನ್ನು ಮುನ್ನಡೆಸಿಕೊಂಡು ಹೋಗುವಷ್ಟು ಬೆಳೆಯುತ್ತಾರೆ. ಇದನ್ನೂ ಓದಿ: Astrology: ಕಷ್ಟ ಕೊಡುವ ರಾಹು, ಇದೀಗ ಅದೃಷ್ಟ ನೀಡುತ್ತಿರುವುದು ಯಾವ ರಾಶಿಯವರಿಗೆ ಗೊತ್ತೇ? ಇನ್ನು ಮುಂದೆ ಲೈಫ್ ಜಿಂಗಾ ಲಾಲಾ.

JOSH 2 | Live Kannada News
Hasta Rekha: ಇದು ಅಂತಿಂಥ ಯೋಗವಲ್ಲ, ಈ ರೇಖೆ ಕೈಯಲ್ಲಿ ಇದ್ರೆ ವಿದೇಶದಲ್ಲಿ ಉದ್ಯೋಗ, ಕೈ ತುಂಬಾ ಹಣ ಗ್ಯಾರಂಟಿ! https://sihikahinews.com/2023/05/10/if-you-have-this-rekha-in-hand-your-dreams-come-true/

ಇವರಲ್ಲಿ ಮಾತು ಬಹಳ ಕಡಿಮೆ, ಕುಟುಂಬ ಎಂದರೆ ಇವರಿಗೆ ಅಚ್ಚುಮೆಚ್ಚು. ಆದರೆ ಇವರ ಕುಟುಂಬದ ವ್ಯಾಖ್ಯಾನ ಎಂದರೆ ತನ್ನ ತಂದೆ-ತಾಯಿ ಹೆಂಡತಿ ಮತ್ತು ಮಕ್ಕಳು ಅಷ್ಟೇ ಆಗಿರುತ್ತದೆ. ಸಮಾಜಮುಖಿ ಚಟುವಟಿಕೆಗಳಲ್ಲಿ ಇವರ ಆಸಕ್ತಿ ಮತ್ತು ಪಾಲ್ಗೊಳ್ಳುವಿಕೆ ಬಹಳ ಕಡಿಮೆ. ಸೆಲ್ಫ್ ಸೆಂಟರ್ಡ್ ಎನ್ನುತ್ತಾರಲ್ಲ ಆ ತರಹದ ಸ್ವಭಾವ ಇವರದ್ದಾಗಿರುತ್ತದೆ. ಯಾರನ್ನೇ ಭೇಟಿಯಾದರೂ ಬಹಳ ಆತ್ಮೀಯತೆಯಿಂದ ಮಾತನಾಡುತ್ತಾರೆ ಆದರೆ ನಿಜವಾಗಿ ಯಾರ ಜೊತೆಗೂ ಅಷ್ಟೊಂದು ಆತ್ಮೀಯರಾಗಿ ಇರುವುದಿಲ್ಲ. ಗೆಳೆಯರ ಬಳಗದಲ್ಲೂ ಆತ್ಮೀಯ ಗೆಳೆಯ ಒಬ್ಬನಿಗಿಂತ ಜಾಸ್ತಿ ಇದ್ದರೂ ಅದು ದೊಡ್ಡ ವಿಷಯ. ಸಾಮಾಜಿಕ ಜಾಲತಾಣಗಳಲ್ಲೂ ಇವರ ಪಾಲ್ಗೊಳ್ಳುವಿಕೆ ಬಹಳ ಕಡಿಮೆ ಇರುತ್ತದೆ. ಹೆಂಡತಿಯ ಮಾತನ್ನು ಬಹಳ ಬೇಗ ಒಪ್ಪಿಕೊಳ್ಳುತ್ತಾರೆ.

ಉದ್ಯೋಗ ಕ್ಷೇತ್ರದಲ್ಲಿ ಮಾತ್ರ ಇವರಿಗೆ ಇವರೇ ಸಾಟಿ. ಇವರ ಕಲ್ಪನಾ ಶಕ್ತಿ ಬಹಳ ದೊಡ್ಡಮಟ್ಟದ್ದಾಗಿರುತ್ತದೆ. ಇವರ ಆರೋಗ್ಯ ಉತ್ತಮವಾಗಿರುತ್ತದೆ. ಇವರಿಗೆ ತಬಲ, ಮೃದಂಗ ಇಂತಹ ಚರ್ಮ ವಾದ್ಯಗಳಲ್ಲಿ ಆಸಕ್ತಿ ಹೆಚ್ಚು. ಇವರು ಇದರ ವಾದನವನ್ನು ಕಲಿಯುತಾರೆಂದಲ್ಲ ಆದರೆ ಆಸಕ್ತಿ ಮಾತ್ರ ಹೆಚ್ಚಿರುತ್ತದೆ. ದಾನ ಧರ್ಮಗಳೆಲ್ಲ ಇವರು ಹೆಚ್ಚಾಗಿ ಮಾಡುವುದಿಲ್ಲ. ಆಗಾಗ ನೌಕರಿಯನ್ನು ಬದಲಾಯಿಸುತ್ತಾರೆ. ಇವರಿಗೆ ಪ್ರಕೃತಿಯೊಂದಿಗೆ ಕಾಲ ಕಳೆಯುವುದು ಬಹಳ ಇಷ್ಟವಾಗಿರುತ್ತದೆ. ಅದರಲ್ಲೂ ಹಿಮಚ್ಛಾದಿತ ಪರ್ವತಗಳೆಂದರೆ ಬಹಳ ಪ್ರೀತಿ. ಕೆತ್ತನೆಯ ಶಿಲ್ಪಗಳು ಕೂಡ ಇವರಿಗೆ ಬಹಳ ಇಷ್ಟ. ಕೋಪ ಬಹ ಕಡಿಮೆ ಬಂದರೂ ಇವರಿಗೆ ಕೋಪ ಬಂದಾಗ ಇವರ ಮುಂದೆ ನಿಲ್ಲಲಾಗುವುದಿಲ್ಲ. ಇದನ್ನೂ ಓದಿ: Travel News: ದೇಶವೇ ಮೆಚ್ಚುವಂತಹ ಪ್ರವಾಸ ಪ್ಯಾಕೇಜ್ ಘೋಷಣೆ ಮಾಡಿದ IRCTC (ರೈಲ್ವೆ)- 7 ದಿನಗಳ ಟ್ರಿಪ್ ಗೆ ಎಷ್ಟು ಕಡಿಮೆ ಬೆಲೆ ಗೊತ್ತೇ? ಎಲ್ಲಿಗೆ ಪಯಣ ಗೊತ್ತೆ??

Comments are closed.