Business News: ಹೆಚ್ಚು ಬೇಡವೇ ಬೇಡ, ಕೇವಲ 10 ಸಾವಿರದಿಂದ ಆರಂಭ ಮಾಡಿ ಲಕ್ಷ ಲಕ್ಷ ಗಳಿಸುವುದು ಹೇಗೆ ಗೊತ್ತೇ??

Business News: ಈಗ ಹೆಚ್ಚಿನ ಜನರು ಹೊರಗಡೆ ಹೋಗಿ ಕೆಲಸ ಮಾಡುವುದಕ್ಕಿಂತ ಹೆಚ್ಚಾಗಿ, ಮನೆಯಿಂದ ಬ್ಯುಸಿನೆಸ್ ಶುರು ಮಾಡಿ, ಉತ್ತಮವಾಗಿ ಹಣಗಳಿಸಬೇಕು ಎಂದು ಬಯಸುತ್ತಾರೆ. ಒಂದು ಒಳ್ಳೆಯ ಬ್ಯುಸಿನೆಸ್ ಆಯ್ಕೆ ಮಾಡಿ, ಉತ್ತಮವಾದ ರೀತಿಯಲ್ಲಿ ಮುಂದುವರೆಸಿಕೊಂಡು ಹೋದರೆ. ನೀವು ಆ ಬ್ಯುಸಿನೆಸ್ ನಲ್ಲಿ ಒಳ್ಳೆಯ ಲಾಭ ಗಳಿಸಬಹುದು. ನೀವು ಯಾವ ಬ್ಯುಸಿನೆಸ್ ಮಾಡಬೇಕು ಎನ್ನುವುದನ್ನು ಆಯ್ಕೆ ಮಾಡಿಕೊಳ್ಳುವುದೇ ಮುಖ್ಯವಾದ ಟಾಸ್ಕ್ ಆಗಿದೆ. ಇದಕ್ಕಾಗಿ ಇಂದು ನಿಮಗೆ ಕೆಲವು ಐಡಿಯಾಗಳನ್ನು ನೀಡುತ್ತೇವೆ..ಈ ಬ್ಯುಸಿನೆಸ್ ಗಳನ್ನು 10 ಸಾವಿರ ರೂಪಾಯಿಯಿಂದ ಶುರು ಮಾಡಿ, ಲಕ್ಷಗಟ್ಟಲೇ ಲಾಭ ಗಳಿಸಬಹುದು.

ಬಳಪದ ಬ್ಯುಸಿನೆಸ್ :- ನಮ್ಮ ಊರುಗಳಲ್ಲಿ ಸಾಕಷ್ಟು ಶಾಲೆಗಳು ಮತ್ತು ಕಾಲೇಜ್ ಗಳು ಇದೆ. ಬೋರ್ಡ್ ಮೇಲೆ ಬರೆದು ಪಾಠ ಮಾಡುವುದಕ್ಕೆ ಅಲ್ಲೆಲ್ಲಾ ಸೀಮೆಸುಣ್ಣ ಅಥವಾ ಬಳಪ ಬೇಕೇ ಬೇಕು. ಇದನ್ನು ತಯಾರಿಸುವುದು ಪ್ಲಾಸ್ಟರ್ ಆಫ್ ಪ್ಯಾರಿಸ್ ಇಂದ, ಜಿಪ್ಸಂ ಇಂದ ತಯಾರಿ ಮಾಡುವ ಜೇಡಿಮಣ್ಣಿನ ರೀತಿ ಇದಾಗಿರುತ್ತದೆ. ಕಲರ್ ಕಲರ್ ಬಳಪಗಳನ್ನು ಸಹ ತಯಾರಿಸಬಹುದು. ₹10,000 ಹೂಡಿಕೆ ಮಾಡಿ, ಈ ಬ್ಯುಸಿನೆಸ್ ಶುರು ಮಾಡಬಹುದು.

ಬಿಂದಿ ಬ್ಯುಸಿನೆಸ್ :- ಹೆಣ್ಣುಮಕ್ಕಳು ಹಣೆಗೆ ಧರಿಸುವ ವಸ್ತು ಇದು. ಬಿಂದಿ ಇಟ್ಟರೆ ಹೆಣ್ಣುಮಕ್ಕಳು ಬಹಳ ಸುಂದರವಾಗಿ ಕಾಣುತ್ತಾರೆ. ಕೆಲ ವರ್ಷಗಳ ಹಿಂದೆ ಮದುವೆ ಆಗಿರುವ ಹೆಣ್ಣುಮಕ್ಕಳು ಮಾತ್ರ ಹೆಚ್ಚಾಗಿ ಬಿಂದಿ ಧರಿಸುತ್ತಿದ್ದರು. ಆದರೆ ಈಗ ಎಲ್ಲ ಹೆಣ್ಣುಮಕ್ಕಳು ಹಾಗೆಯೇ ವಿದೇಶಿ ಹೆಣ್ಣುಮಕ್ಕಳು ಕೂಡ ಬಿಂದಿ ಧರಿಸುವುದನ್ನು ಇಷ್ಟಪಡುತ್ತಾರೆ. ಹಾಗಾಗಿ ₹12,000 ಹೂಡಿಕೆ ಮಾಡಿ, ನೀವು ಕೂಡ ಮನೆಯಲ್ಲಿ ಬಿಂದಿ ತಯಾರಿಸುವ ಬ್ಯುಸಿನೆಸ್ ಶುರು ಮಾಡಬಹುದು.

ಲಕೋಟೆ :- ಕಾರ್ಡ್ ಬೋರ್ಡ್ ಮತ್ತು ಪೇಪರ್ ಬಳಸಿ ಇದನ್ನು ತಯಾರಿಸಬಹುದು. ಮನೆಯಲ್ಲಿ ಲಕೋಟೆ ತಯಾರಿಸುವುದು ಬಹಳ ಸುಲಭ. ಇವುಗಳನ್ನು ಪ್ಯಾಕೇಜಿಂಗ್ ಗಾಗಿ ಬಳಸಲಾಗುತ್ತದೆ. ಇವುಗಳನ್ನು ನೀವು ಮಷಿನ್ ಮೂಲಕ ತಯಾರಿಸಬಹುದು. ₹10,000 ಇಂದ ₹30,000 ವರೆಗು ಹೂಡಿಕೆ ಮಾಡಬೇಕಾಗುತ್ತದೆ. ಈ ಬ್ಯುಸಿನೆಸ್ ನಲ್ಲಿ 3 ರಿಂದ 5 ಲಕ್ಷ ರೂಪಾಯಿ ಸಂಪಾದನೆ ಮಾಡಬಹುದು.

ಕ್ಯಾಂಡಲ್ ಬ್ಯುಸಿನೆಸ್ :- ಹಿಂದಿನ ಕಾಲದಲ್ಲಿ ಕ್ಯಾಂಡಲ್ ಬಳಸುತ್ತಾ ಇದ್ದದ್ದು ಪವರ್ ಕಟ್ ಆದಾಗ, ಈಗ ಪವರ್ ಕಟ್ ಆಗುವುದೆ ಕಡಿಮೆ. ಬರ್ತ್ ಡೇ ಹಾಗೂ ಇನ್ನಿತರ ಸಂಭ್ರಮಗಳ ಸಮಯದಲ್ಲಿ ಕ್ಯಾಂಡಲ್ ಬಳಸಲಾಗುತ್ತದೆ. ನಿಮ್ಮ ಮನೆಯಲ್ಲಿ ಕ್ಯಾಂಡಲ್ ಮೇಕಿಂಗ್ ಬ್ಯುಸಿನೆಸ್ ಶುರು ಮಾಡಬಹುದು. ಇದಕ್ಕೆ ₹10,000 ಇಂದ ₹20,000ವರೆಗು ಖರ್ಚಾಗುತ್ತದೆ.

Comments are closed.