Karnataka Politics: ಸಿದ್ದು ಸಿಎಂ, ಡಿಕೆ ಡಿಸಿಎಂ ಆದ ಬೆನ್ನಲ್ಲೇ ಕಾಂಗ್ರೆಸ್ ನಲ್ಲಿ ಭುಗಿಲೆದ್ದ ಅಸಮಾಧಾನ- ಪರಮೇಶ್ವರ್ ಹೇಳಿದ್ದೇನು ಗೊತ್ತೆ??

Karnataka Politics: ರಾಜ್ಯದಲ್ಲಿ ವಿಧಾನ ಸಭಾ ಚುನಾವಣೆ ನಡೆದು ಕಾಂಗ್ರೆಸ್ ಪಕ್ಷ (Congress Party) ಅತಿಹೆಚ್ಚು ಕ್ಷೇತ್ರದಲ್ಲಿ ಗೆಲುವು ಸಾಧಿಸಿ ಬಹುಮತ ಪಡೆದಿದೆ. ಇದೀಗ ಹೈಕಮಾಂಡ್ ರಾಜ್ಯದ ಸಿಎಂ ಆಗಿ ಸಿದ್ದರಾಮಯ್ಯ (Siddaramaiah) ಅವರನ್ನು ಹಾಗೆಯೇ ಡಿಸಿಎಂ ಆಗಿ ಡಿಕೆ ಶಿವಕುಮಾರ್ (DKShivkumr) ಅವರನ್ನು ಘೋಷಣೆ ಮಾಡಿದೆ. ಈ ಘೋಷಣೆ ನಡೆಯುತ್ತಿದ್ದ ಹಾಗೆಯೇ ಮಾಜಿ ಡೆಪ್ಯುಟಿ (DCM) ಸಿಎಂ ಡಾ.ಜಿ ಪರಮೇಶ್ವರ (Dr.G.Parameshwar) ಅವರು ಕೋಪಗೊಂಡಿದ್ದಾರೆ. ಅವರು ಮಾಧ್ಯಮದ ಎದುರು ಹೇಳಿದ್ದು ಹೀಗೆ..

“ದಲಿತ ಸಮುದಾಯಕ್ಕೆ ಸೇರಿದವರ ನಿರೀಕ್ಷೆ ದೊಡ್ಡಮಟ್ಟದಲ್ಲಿದೆ. ಅವುಗಳನ್ನು ಅರ್ಥ ಮಾಡಿಕೊಂಡು ನಿರ್ಧಾರಗಳನ್ನು ತೆಗೆದುಕೊಳ್ಳಬೇಕು..” ಎಂದು ಎಚ್ಚರಿಕೆ ನೀಡಿದ್ದಾರೆ. “ನಾನು ಕೂಡ ಸಿಎಂ ಹಾಗೂ ಡಿಸಿಎಂ ಸ್ಥಾನಕ್ಕಾಗಿ ಎಡ್ಜ್ರು ನೋಡುತ್ತಿದ್ದೆ, ಈಗ ಹೈಕಮಾಂಡ್ ಕಡೆಯಿಂದ ಘೋಷಣೆ ಆಗಿದೆ, ಮುಂದಿನ ದಿನಗಳಲ್ಲಿ ಸಂಪುಟ ವಿಸ್ತರಣೆ ಆದರೆ ಆಗ ನೋಡೋಣ.. ಈಗ ಎರಡನೇ ಸಾರಿ ಸಿದ್ದರಾಮಯ್ಯ ಅವರು ಸಿಎಂ ಆಗಿದ್ದು, ಅವರಿಂದ ಒಳ್ಳೆಯ ಆಡಳಿತ ಬರಲಿ..” ಎಂದಿದ್ದಾರೆ. ಇದನ್ನೂ ಓದಿ: Business Ideas: ಹೆಚ್ಚಿನ ಬಂಡವಾಳವಿಲ್ಲದೆ ಕೂಡ, ಬಿಸಿನೆಸ್ ಆರಂಭ ಮಾಡಿ ಲಕ್ಷ ಲಕ್ಷ ಲಾಭ ಗಳಿಸುವ ಬಿಸಿನೆಸ್ ಯಾವುದು ಗೊತ್ತೇ?? ನೋಡಿ ಟ್ರೈ ಮಾಡಿ.

ಇನ್ನು ಮಾತನಾಡಿ, “ಇವತ್ತು ಸಂಜೆಯೇ ಅಧಿಕೃತ ಸಿ.ಎಲ್.ಪಿ ಸಭೆ ಕರೆಯಲಾಗಿದೆ. ಪಕ್ಷದ ವೀಕ್ಷಕರು ಸಹ ಈ ವಿಷಯದ ಬಗ್ಗೆ ಘೋಷಣೆ ಮಾಡುತ್ತಾರೆ. ಈ ಸರ್ಕಾರದಲ್ಲಿ ದಲಿತರಿಗೆ ಪ್ರಾಮುಖ್ಯತೆ ಹೇಗಿರುತ್ತದೆ ಎನ್ನುವುದನ್ನು ನೋಡಬೇಕಿದೆ. ಒಟ್ಟು 51 ಕ್ಷೇತ್ರಗಳಲ್ಲೂ 37 ಕ್ಷೇತ್ರಗಳಲ್ಲಿ ದಲಿತರೇ ಗೆದ್ದಿದ್ದೀವಿ..ಇನ್ನಿತರ ಕ್ಷೇತ್ರಗಳಲ್ಲಿ ಸಹ ದಲಿತ ಸಮುದಾಯದವರ ಮತಗಳು ಹೆಚ್ಚಿನ ಪರಿಣಾಮ ಬೀರಿದೆ. ನಾವು ಶಿಸ್ತಿನಿಂದ ಇರುವ ಜನರು, ಲಾಭಿ ಮಾಡೋರಲ್ಲ.. ಬೆಂಬಲ ಸಿಕ್ಕಿರೋದು ಯಾವ ಸಮುದಾಯದಿಂದ ಎನ್ನುವುದು ಗೊತ್ತಿರಬೇಕು..” ಎಂದು ಹೇಳಿದ್ದಾರೆ ಪರಮೇಶ್ವರ್ ಅವರು.

“ನಮ್ಮ ರಾಜ್ಯ ರಾಜಸ್ಥಾನದ ಹಾಗೆ ಆಗಲು ಬಿಡಬಾರದು, ಉತ್ತಮವಾಗಿ ಆಡಳಿತ ಇರಬೇಕು ಎನ್ನುವ ನಿರೀಕ್ಷೆ ಜನರಲ್ಲಿದೆ. ಅದನ್ನು ಎಲ್ಲರೂ ಅರ್ಥಮಾಡಿಕೊಳ್ಳಬೇಕು. ಡಿಸಿಎಂ ಅವರು ಏನು ಕೊಡುತ್ತಾರೋ, ಅದನ್ನು ನನಗೆ ಕೊಡಲೇಬೇಕು..” ಎಂದು ಕೋಪದಿಂದ ಹೇಳಿದ್ದಾರೆ. “ಎಲ್ಲವೂ ಅಧಿಕೃತವಾಗಿಯೇ ನಡೆಯಬೇಕು. ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಿರುವುದಕ್ಕೆ ಎಲ್ಲರ ಕೊಡುಗೆ ಕೂಡ ಇದೆ. ಡಿಸಿಎಂ ಸ್ಥಾನ ಒಬ್ಬರಿಗೇ ಸಿಗಬೇಕು ಅಂತ ನಿಯಮ ಇಲ್ಲ.. ಇಲ್ಲಿ ನಾವೆಲ್ಲರೂ ಒಟ್ಟಿಗೆ ಇದ್ದೇವೆ.. ಎಲ್ಲರು ಜೊತೆ ಸೇರಿ ಅಧಿಕಾರ ನಡೆಸುತ್ತೇವೆ..” ಎಂದು ಹೇಳಿದ್ದಾರೆ. ಇದನ್ನೂ ಓದಿ: Post Office: ಅಂಚೆ ಕಚೇರಿಯಲ್ಲಿ ನೀವು MIS ಯೋಜನೆಯಲ್ಲಿ ಹೂಡಿಕೆ ಮಾಡಿ, ಸಾವಿರದಂತೆ ಆರಂಭಿಸಿ, 4.5 ಲಕ್ಷ ಪಡೆಯುವುದು ಹೇಗೆ ಗೊತ್ತೇ??

Comments are closed.