Film News; ಸಂಚಲನ ಮೂಡಿಸಿದ್ದ ಬಿಚ್ಚಗಾಡು 2 ಸಿನಿಮಾ ಹೇಗಿದೆ ಅಂತೇ ಗೊತ್ತೇ?? ಟ್ವಿಟ್ಟರ್ ನಲ್ಲಿ ಕೇಳಿಬಂದ ರಿವ್ಯೂ ಏನು ಗೊತ್ತೇ??

Film News: ತಮಿಳಿನ ಖ್ಯಾತ ನಟ ವಿಜಯ್ ಆಂಟೋನಿ ಅವರಿಗೆ ಬಿಚ್ಚುಗಾಡು ಸಿನಿಮಾ ಮೂಲಕ ಅವರಿಗೆ ಮತ್ತೊಂದು ಸಕ್ಸಸ್ ಸಿಕ್ಕಿತ್ತು. ಇದೀಗ ಅವರಃ ಬಿಚ್ಚುಗಾಡು2 ಸಿನಿಮಾ ಇಂದ ಜನರ ಮುಂದೆ ಬಂದಿದ್ದಾರೆ. ಇವರಿಗೆ ಬಿಚ್ಚುಗಾಡು ಸಿನಿಮಾ ಹಾಗೆ ಮತ್ಯಾವುದು ಸಿನಿಮಾ ಕೂಡ ಹಿಟ್ ನೀಡಿರಲಿಲ್ಲ. ವಿಜಯ್ ಹಾಗೂ ಅವರ ಪತ್ನಿ ಫಾತಿಮಾ ಅವರೇ ಸಿನಿಮಾವನ್ನು ನಿರ್ದೇಶನ ಹಾಗೂ ನಿರ್ಮಾಣ ಮಾಡಿ ಯಶಸ್ಸು ಗಳಿಸಿದ್ದಾರೆ. ಮ್ಯೂಸಿಕ್ ಮತ್ತು ಎಡಿಟಿಂಗ್ ಎರಡನ್ನು ಸಹ ನಿಭಾಯಿಸಿದ್ದಾರೆ. ಬಿಚ್ಚುಗಾಡು2 ಮೇ 19ರಂದು ಬಿಡುಗಡೆ ಆಗಿದೆ. ಇದನ್ನೂ ಓದಿ: Business Ideas: ದೇವಾಲಯಗಳಿಗೆ ಹೋಗಿ, ಚಿಪ್ಪು ಕೊಡಲು ಒಪ್ಪಂದ ಮಾಡಿಕೊಂಡು ಈ ಚಿಕ್ಕ ಕೆಲಸ ಮಾಡಿದರೆ, ಲಕ್ಷ ಲಕ್ಷ ಆದಾಯ. ಹೇಗೆ ಗೊತ್ತೇ?

ಈ ಸಿನಿಮಾದ ಯುಎಸ್ ನಡೆದ ಪ್ರೀಮಿಯರ್ (premiere) ನೋಡಿದ ನೆಟ್ಟಿಗರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಬಿಚ್ಚುಗಾಡು ಚಿತ್ರದಲ್ಲಿ ತಾಯಿಯನ್ನು ಉಳಿಸಿಕೊಳ್ಳಲು ಹೋರಾಡುವ ಮಗನ ಪಾತ್ರದಲ್ಲಿ ವಿಜಯ್ ಆಂಟೋನಿ ಅವರು ನಟಿಸಿದ್ದಾರೆ. ಗುರುಮೂರ್ತಿ ಮತ್ತು ಸತ್ಯ ಹೆಸರಿನ ಎರಡು ಪಾತ್ರಗಳಲ್ಲಿ ವಿಜಯ್ ಆಂಟೋನಿ ಅವರು ನಟಿಸಿದ್ದಾರೆ. ಅಣ್ಣ ತಂಗಿಯರ ಸೆಂಟಿಮೆಂಟ್ ಸೀಕ್ವೆನ್ಸ್ ಫ್ಲ್ಯಾಶ್ ಬ್ಯಾಕ್ ನಲ್ಲಿ ಬರಲಿದ್ದು, ಆ ದೃಶ್ಯಗಳು ಜನರಿಗೆ ಇಷ್ಟವಾಗಿದೆ. ಭಿಕ್ಷೆ ಬೇಡುವ ಮಕ್ಕಳನ್ನು ಶ್ರೀಮಂತರು ಕಿಡ್ನ್ಯಾಪ್ ಮಾಡಲಿದ್ದು, ಅದೆಲ್ಲ ಟ್ರ್ಯಾಕ್ ಗಳು ಕುತೂಹಲಕಾರಿಯಾಗಿದೆ. ಇದನ್ನೂ ಓದಿ: Business ideas: ನಿಮ್ಮ ಮನೆಯಲ್ಲಿ ಹೆಂಡತಿ ಖಾಲಿ ಕುಳಿತಿದ್ದರೇ ಈ ಕೆಲಸ ಮಾಡಿ. ಲಕ್ಷ ಲಕ್ಷ ಆದಾಯ ಬರುವಂತೆ ಮಾಡಬಹುದು. ಹೇಗೆ ಗೊತ್ತೇ??

ಇದು ಸೀಕ್ವೆಲ್ ಸಿನಿಮಾ ಅಲ್ಲ, ಆದರೆ ಸಿನಿಮಾದ ಕಥೆಗೆ ಟೈಟಲ್ (Title) ಹೊಂದುವುದರಿಂದ ಈ ಟೈಟಲ್ ಸೂಕ್ತವಾಗಿದೆ. ಸಿನಿಮಾದಲ್ಲಿ ಮಕ್ಕಳ ದೃಶ್ಯಗಳು ಚೆನ್ನಾಗಿ ಮೂಡಿಬಂದಿದ್ದು, VFX ಕೆಲಸ ಇನ್ನು ಚೆನ್ನಾಗಿ ಮಾಡಬಹುದಿತ್ತು ಎನ್ನಲಾಗಿದೆ. ಕಥೆಯ ಹಿಂದಿನ ಕಲ್ಪನೆ ಚೆನ್ನಾಗಿದ್ದರೂ ಅದನ್ನು ಚೆನ್ನಾಗಿ ತೆಗೆದುಕೊಂಡು ಹೋಗುವಲ್ಲಿ ಎಡವಿರುವುದು ಕಂಡುಬರುತ್ತದೆ. ಒಂದೆರಡು ದೃಶ್ಯಗಳು ಕುತೂಹಲಕಾರಿಯಾಗಿದೆ ಎಂದು ನೆಟ್ಟಿಗರೊಬ್ಬರು ಟ್ವೀಟ್ ಮಾಡಿದ್ದಾರೆ.

ಮತ್ತೊಬ್ಬರು ಟ್ವೀಟ್ ಮಾಡಿ, ಸಿನಿಮಾದ ಮೊದಲಾರ್ಧ ಥ್ರಿಲ್ಲರ್ ಎಲಿಮೆಂಟ್ಸ್ ಇಂದ ಕೂಡಿದೆ, ಜನರಿಗೆ ಇಷ್ಟವಾಗುತ್ತದೆ. ಲಿಪ್ ಸಿಂಕ್ ಮಿಸ್ ಆಗಿರುವುದು ಕಿರಿಕಿರಿ ಉಂಟು ಮಾಡುತ್ತದೆ. ಮೊದಲಾರ್ಧ ಏನೋ ಚೆನ್ನಾಗಿ ಮೂಡಿಬಂದಿದೆ. ದ್ವಿತೀಯಾರ್ಧ ಹೇಗಿದೆ ಎನ್ನುವುದರ ಮೇಲೆ ಸಿನಿಮಾದ ರಿಸಲ್ಟ್ ನಿರ್ಧಾರವಾಗಲಿದೆ ಎಂದು ಮತ್ತೊಬ್ಬರು ಟ್ವೀಟ್ ಮಾಡಿದ್ದಾರೆ. ಈ ರೀತಿಯಾಗಿ ಮಿಶ್ರ ಪ್ರತಿಕ್ರಿಯೆ ಬಿಚ್ಚುಗಾಡು 2 ಸಿನಿಮಾಗೆ ಸಿಕ್ಕಿದ್ದು, ಬಾಕ್ಸ್ ಆಫೀಸ್ ಗಳಿಕೆ ಹೇಗಿರುತ್ತದೆ ಎಂದು ಕಾದು ನೋಡಬೇಕಿದೆ.Business news: ಹೆಚ್ಚು ಬೇಡ, ಕನ್ನಡ ಒಂದು ಬಂದ್ರೆ ಸಾಕು. – ಸರ್ಕಾರೀ ವೆಬ್ಸೈಟ್ ನಲ್ಲಿ ಮನೆ ಇಂದ ಕೆಲಸ ಮಾಡಿ 25,000 ಗಳಿಸೋದು ಹೇಗೆ ಗೊತ್ತೇ??

Comments are closed.