Astrology: ಜೂನ್ ನಲ್ಲಿ ಬದಲಾಗುವ ಗ್ರಹಗಳು ಈ ಐದು ರಾಶಿಯವರ ಮೇಲೆ ಎಂತಹ ಪರಿಣಾಮ ಬೀರಲಿದೆ ಗೊತ್ತೇ? ಶುಭವೋ ಅಶುಭವೋ ನೀವೇ ನೋಡಿ!

Astrology: ಸಾಮಾನ್ಯವಾಗಿ ಯಾವುದೇ ಗ್ರಹ ಬದಲಾವಣೆ ಆದರೂ ಅದು ರಾಶಿ ಚಕ್ರದ ಮೇಲೆ ಪರಿಣಾಮ ಬೀರುತ್ತದೆ ಪ್ರಮುಖ ಗ್ರಹಗಳಾದ ಬುಧ, ಸೂರ್ಯ, ಮಂಗಳ ಹಾಗೂ ಶನಿಯ ಬದಲಾವಣೆ ರಾಶಿ ಚಕ್ರಗಳ ಮೇಲೆ ಸಕಾರಾತ್ಮಕ ಹಾಗೂ ನಕಾರಾತ್ಮಕ ಪರಿಣಾಮ ಬೀರಲಿವೆ. ಇದೇ ಬರುವ ಜೂನ್ 7ರಂದು ಬುಧ ಗ್ರಹವು ಮೇಷ ರಾಶಿಯಿಂದ ವೃಷಭ ರಾಶಿಗೆ ಚಲಿಸಲಿದೆ. ಬಳಿಕ ಜೂನ್ 24ಕ್ಕೆ ವೃಷಭ ರಾಶಿಯಿಂದ ಮಿಥುನ ರಾಶಿಗೆ ಬರಲಿದೆ. ಇನ್ನು ಸೂರ್ಯ ಗ್ರಹವು ವೃಷಭ ರಾಶಿಯಿಂದ ಮಿಥುನ ರಾಶಿಗೆ ಜೂನ್ ಮಧ್ಯಭಾಗದಲ್ಲಿ ಚಲಿಸಲಿದ್ದಾನೆ. ಅದೇ ರೀತಿ ತನ್ನದೇ ರಾಶಿಯಲ್ಲಿ ಅಂದರೆ ಕುಂಭ ರಾಶಿಯಲ್ಲಿ ಜೂನ್ 17ರಂದು ಶನಿ ಬಂದು ಕೂರುತ್ತಾನೆ. ಜೂನ್ 30ರಂದು ಸಿಂಹ ರಾಶಿಗೆ ಬದಲಾಗುತ್ತಾನೆ. ಹಾಗಾಗಿ ಈ ಎಲ್ಲಾ ಬದಲಾವಣೆಗಳು 12 ರಾಶಿಗಳ ಮೇಲೆ ಪರಿಣಾಮ ಬೀರುತ್ತವೆ ಆದರೆ ಪ್ರಮುಖವಾಗಿ ಈ 5 ರಾಶಿಯವರು ಮಾತ್ರ ಜೂನ್ ತಿಂಗಳಲ್ಲಿ ಹೆಚ್ಚು ಜಾಗೃತಿ ವಹಿಸಬೇಕು ಯಾವ ರಾಶಿಗಳು ನೋಡೋಣ. ಇದನ್ನೂ ಓದಿ:Business news: ಹೆಚ್ಚು ಬೇಡ, ಕನ್ನಡ ಒಂದು ಬಂದ್ರೆ ಸಾಕು. – ಸರ್ಕಾರೀ ವೆಬ್ಸೈಟ್ ನಲ್ಲಿ ಮನೆ ಇಂದ ಕೆಲಸ ಮಾಡಿ 25,000 ಗಳಿಸೋದು ಹೇಗೆ ಗೊತ್ತೇ??

ವೃಷಭ ರಾಶಿ:

ಗ್ರಹಗಳ ಬದಲಾವಣೆ ವೃಷಭ ರಾಶಿಯವರಿಗೆ ಮಧ್ಯಮ ಫಲ ನೀಡಲಿದೆ. ಜನರು ತಮ್ಮ ಪ್ರತಿಭೆ ತೋರಿಸಲು ಇದು ಸೂಕ್ತ ಅವಕಾಶ ಆದರೆ ಶತ್ರುಗಳಿಂದ ಸಮಸ್ಯೆ ಎದುರಿಸಬೇಕಾಗುತ್ತದೆ ಹಾಗಾಗಿ ಸಾಕಷ್ಟು ಎಚ್ಚರಿಕೆ ವಹಿಸಬೇಕು. ಹೆಚ್ಚು ಮಾತನಾಡಿದರೆ ಅದು ಕುಟುಂಬದ ಮೇಲೆ ಪರಿಣಾಮ ಬೀರಬಹುದು. ಶನಿಯು ಈ ಸಮಯದಲ್ಲಿ ಸ್ವಲ್ಪ ನಷ್ಟವನ್ನು ಉಂಟು ಮಾಡಬಹುದು ಹಾಗಾಗಿ ಪಾರ್ಟನರ್ ಶಿಪ್ ವ್ಯವಹಾರ ಮಾಡುವಾಗ ಎಚ್ಚರಿಕೆ ಇರಲಿ.

ಸಿಂಹ ರಾಶಿ:

ಗ್ರಹಗಳ ಬದಲಾವಣೆ ಈ ರಾಶಿಯವರಿಗೆ ಮಿಶ್ರಫಲ ನೀಡಲಿದೆ ಉದ್ಯೋಗ ಮಾಡುವವರು ಸಹೋದ್ಯೋಗಿಗಳಿಂದ ಸಮಸ್ಯೆ ಎದುರಿಸಬೇಕಾಗಬಹುದು ನೀವು ಕೆಲಸವನ್ನು ಬದಲಾಯಿಸಲು ಯೋಜಿಸುತ್ತಿದ್ದರೆ ಈ ತಿಂಗಳು ಸೂಕ್ತವಲ್ಲ. ಆಸ್ತಿಗೆ ಸಂಬಂಧಿಸಿದ ವಿವಾದಗಳು ಕೂಡ ಎದುರಿಸಬೇಕಾಗಬಹುದು. ಕಾಲು ನೋವು ಬೆನ್ನು ನೋವು ಮೊದಲಾದ ಅನಾರೋಗ್ಯಗಳು ಕಾಡಬಹುದಾದ್ದರಿಂದ ಎಚ್ಚರಿಕೆವಹಿಸಿ. ಇದನ್ನೂ ಓದಿ: Business Ideas: ಮನೆಯಲ್ಲಿಯೇ ಕುಳಿತು ಗೂಗಲ್ ಪೇ ಬಳಸಿ, ಯಾವುದೇ ಬಂಡವಾಳವಿಲ್ಲದೆ ಹಣ ಗಳಿಸುವುದು ಹೇಗೆ ಗೊತ್ತೇ?? ತಿಂಗಳಿಗೆ 20 ರಿಂದ 30 ಸಾವಿರ ಗಳಿಸಬಹುದು.

ವೃಶ್ಚಿಕ ರಾಶಿ:

ನಿಮ್ಮ ವೆಚ್ಚಗಳು ಹೆಚ್ಚಾಗಬಹುದು ಹಾಗಾಗಿ ಹಣದ ಬಗ್ಗೆ ಎಚ್ಚರಿಕೆವಹಿಸಿ ನಿಮ್ಮವರಿಂದಲೇ ನಿಮಗೆ ಸಮಸ್ಯೆ ದ್ರೋಹ ಮೋಸ ಆಗಬಹುದು ಹಾಗಾಗಿ ಯಾರನ್ನು ಅತಿಯಾಗಿ ನಂಬುವುದು ಸೂಕ್ತವಲ್ಲ. ಮಂಗಳನ ಬದಲಾವಣೆ ಆದಾಯ ಹೆಚ್ಚಳವನ್ನು ತಡೆಹಿಡಿಯಬಹುದು ಮಕ್ಕಳ ಬಗ್ಗೆಯೂ ಕಾಳಜಿ ವಹಿಸಬೇಕು ವೈವಾಹಿಕ ಜೀವನದ ಮೇಲೆ ಶನಿಯ ವಕ್ರದೃಷ್ಟಿ ಇರುವುದರಿಂದ ನಿಮ್ಮ ಪ್ರೀತಿ ಉಳಿಸಿಕೊಳ್ಳಲು ಸ್ವಲ್ಪ ಶ್ರಮ ವಹಿಸಬೇಕಾಗುತ್ತದೆ.

ಧನು ರಾಶಿ:

ಹಣಕಾಸು ವಿಚಾರದಲ್ಲಿ ತುಸು ನೆಮ್ಮದಿ ಇದ್ದರೂ ಆರೋಗ್ಯದ ವಿಚಾರದಲ್ಲಿ ಸಮಸ್ಯೆಗಳು ಇರಬಹುದು ಒಂದಲ್ಲ ಒಂದು ಆರೋಗ್ಯ ಸಮಸ್ಯೆಗಳು ನಿಮ್ಮ ಸಂತೋಷದ ಕ್ಷಣವನ್ನು ಕಿತ್ತುಕೊಳ್ಳಬಹುದು. ಕೆಲಸದಲ್ಲಿ ಇರುವವರಿಗೆ ಅವರ ಶ್ರಮಕ್ಕೆ ತಕ್ಕ ಮೆಚ್ಚುಗೆ ಹಾಗೂ ಫಲ ಸಿಗುತ್ತದೆ ಆದರೂ ಪ್ರತಿಸ್ಪರ್ಧಿಗಳಿಂದ ಕಠಿಣ ಸ್ಪರ್ಧೆ ಎದುರಿಸಬೇಕು.

ಕುಂಭ ರಾಶಿ:

ಜೂನ್ ತಿಂಗಳಿನಲ್ಲಿ ನಿಮ್ಮಿಂದ ಸಣ್ಣ ತಪ್ಪು ಕೂಡ ಆಗದಂತೆ ನೋಡಿಕೊಳ್ಳಿ ಇಲ್ಲವಾದರೆ ನ್ಯಾಯಾಲಯಕ್ಕೆ ಸಂಬಂಧಿಸಿದ ಯಾವುದೇ ಸಮಸ್ಯೆ ಇದ್ದರೂ ಅದು ಉಲ್ಭಣಿಸುತ್ತದೆ. ವಾಹನ ಚಲಾಯಿಸುವಾಗ ಬಹಳ ಎಚ್ಚರಿಕೆ ಬೇಕು. ಹಾಗಾಗಿ ಜಾಗರೂಕತೆಯಿಂದ ಇರಿ ಮಂಗಳನ ಕಾರಣದಿಂದಾಗಿ ಜೀವನದಲ್ಲಿ ಸಮಸ್ಯೆ ಉಂಟಾಗಬಹುದು ಖರ್ಚು ವೆಚ್ಚಗಳು ಹೆಚ್ಚಾಗಬಹುದು ಹಾಗಾಗಿ ಜೂನ್ ತಿಂಗಳಿನಲ್ಲಿ ನಿಮ್ಮ ಜೇಬಿನ ಹಣ ಖಾಲಿ ಆಗದಂತೆ ಎಚ್ಚರವಹಿಸಿ. ಇದನ್ನೂ ಓದಿ: EV Scooter: ಎಲ್ಲರೂ ಖರೀದಿ ಮಾಡುತ್ತಿದ್ದಾರೆ ಎಂದು ಎಲೆಕ್ಟ್ರಿಕ್ ಸ್ಕೂಟರ್ ಖರೀದಿ ಮಾಡುವ ಮುನ್ನ ಈ ವಿಷಯ ತಿಳಿದು ಖರೀದಿ ಮಾಡಿ. ಇದೊಂದು ಆಲೋಚನೆ ಮಾಡಿ.

Comments are closed.