Political News: ದಿಡೀರ್ ಎಂದು ಮತ್ತೆ ಮಾಧ್ಯಮದ ಮುಂದೆ ಬಂದ ಚೇತನ್ – ಸಿದ್ದು ರವರ ಮುಂದೆ ಮತ್ತಷ್ಟು ಬೇಡಿಕೆಗಳು. ಈ ಬಾರಿ ಏನು ಬೇಕಂತೆ ಗೊತ್ತೇ??

Political News: ಚಂದನವನದ ನಟ ಚೇತನ್ ಅಹಿಂಸಾ (Chetan Ahimsa) ಅವರು ಹಲವು ಕಾರಣಗಳಿಂದ, ತಾವು ನೀಡುವ ಹೇಳಿಕೆಗಳಿಂದ ಸುದ್ದಿಯಾಗುತ್ತಾರೆ. ಆಗಾಗ ವಿವಾದಾತ್ಮಕ ಹೇಳಿಕೆಗಳ ಮೂಲಕ ಸುದ್ದಿಯಾಗುವುದೇ ಹೆಚ್ಚು. ಇದೀಗ ಚೇತನ್ ಅವರು ನಮ್ಮ ರಾಜ್ಯದ ಹೊಸ ಸಿಎಂ ಸಿದ್ದರಾಮಯ್ಯ (Siddaramaiah) ಅವರ ಮುಂದೆ ಕೆಲವು ಬೇಡಿಕೆಗಳನ್ನು ಇಟ್ಟಿದ್ದಾರೆ. ಸೋಷಿಯಲ್ ಮೀಡಿಯಾ (Social Media) ಮೂಲಕ ಅವುಗಳನ್ನು ಪೋಸ್ಟ್ ಮಾಡಿದ್ದಾರೆ.. ಇದನ್ನೂ ಓದಿ: IRCTC: ಕಡಿಮೆ ಬೆಲೆಗೆ ಸುತ್ತಿ ಬನ್ನಿ ಕರಾವಳಿ ಕರ್ನಾಟಕ- ಆರು ರಾತ್ರಿ, ಐದು ಅಗಲು ಟ್ರಿಪ್ ನಲ್ಲಿ ಎಷ್ಟೆಲ್ಲ ತೋರಿಸುತ್ತಾರೆ ಗೊತ್ತೇ? IRCTC (ರೈಲ್ವೆ) ಪ್ಯಾಕೇಜ್ ಹೇಗಿದೆ ಗೊತ್ತೇ?

ಎಲೆಕ್ಷನ್ ನಲ್ಲಿ ಕಾಂಗ್ರೆಸ್ ಪಕ್ಷ (Congress party) ಬಹುಮತ ಸಾಧಿಸಿ, ಸಿದ್ದರಾಮಯ್ಯ ಅವರು ಸಿಎಂ ಆಗಿ ಆಯ್ಕೆಯಾಗಿದ್ದಾರೆ. ಕಳೆದ ಶನಿವಾರ ಸಿದ್ದರಾಮಯ್ಯ ಅವರು ಕಂಠೀರವ ಸ್ಟೇಡಿಯಂ ನಲ್ಲಿ, ಅದ್ಧೂರಿಯಾಗಿ ಅರೇಂಜ್ ಮಾಡಲಾಗಿದ್ದ ಕಾರ್ಯಕ್ರಮದಲ್ಲಿ ಪ್ರಮಾಣವಚನ ಸ್ವೀಕರಿಸಿದರು. ಹಾಗೆಯೇ ಮೊದಲ ಕ್ಯಾಬಿನೆಟ್ ಸಭೆಯಲ್ಲಿ ಭರವಸೆ ನೀಡಿರುವ 5 ವಿಷಯಗಳಿಗೆ ಒಪ್ಪಿಗೆ ನೀಡಿದ್ದಾರೆ. ಹೀಗಿರುವಾಗ ನಟ ಚೇತನ್ ಅವರು ಮೊದಲಿಗೆ ಸಿದ್ದರಾಮಯ್ಯ ಅವರನ್ನು ಟೀಕೆ ಮಾಡಿದ್ದರು.

“‘ವಿಚಾರವಾದಿ’ ಎಂದು ಕರೆಸಿಕೊಳ್ಳುವ ಸಿದ್ದರಾಮಯ್ಯ ಅವರು ಕರ್ನಾಟಕದ ಸಿಎಂ ಆಗಿ ದೇವರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದ್ದಾರಾ? ಯಾವ/ಯಾರು ದೇವರು? ದೇವರು ಎಲ್ಲಿದ್ದಾನೆ/ಳೆ/ರೆ? ಇದು ನಿರ್ದಿಷ್ಟವಾದ ಸೈದ್ಧಾಂತಿಕ ಆರಂಭವಲ್ಲ.” ಎಂದು ಬರೆಯುವ ಮೂಲಕ ನಟ ಚೇತನ್ ಅವರು ಸಿದ್ದರಾಮಯ್ಯ ಅವರು ಪ್ರಮಾಣ ವಚನ ಸ್ವೀಕಾರ ಮಾಡಿದ್ದರ ಬಗ್ಗೆ ಟೀಕಿಸಿದ್ದರು. ಬಳಿಕ ಸಿದ್ದರಾಮಯ್ಯ ಅವರು ಸಿಎಂ ಆದ ತಕ್ಷಣ ಮಾಡಬೇಕು ಎಂದು ಕೆಲವು ಬೇಡಿಕೆಗಳನ್ನು ಇಟ್ಟಿದ್ದಾರೆ. ಇದನ್ನೂ ಓದಿ: Business Ideas: ಹೆಚ್ಚಿನ ಬಂಡವಾಳವಿಲ್ಲದೆ ಕೂಡ, ಬಿಸಿನೆಸ್ ಆರಂಭ ಮಾಡಿ ಲಕ್ಷ ಲಕ್ಷ ಲಾಭ ಗಳಿಸುವ ಬಿಸಿನೆಸ್ ಯಾವುದು ಗೊತ್ತೇ?? ನೋಡಿ ಟ್ರೈ ಮಾಡಿ.

“ಸಿದ್ದರಾಮಯ್ಯ ಅವರು ಮುಂದಿನ ಮುಖ್ಯಮಂತ್ರಿ (cm) ಆಗಲಿದ್ದಾರೆ ಅವರು ತಕ್ಷಣ ಮಾಡಬೇಕಾದ ಕೆಲವು ಕಾರ್ಯಗಳು ಇಲ್ಲಿವೆ: 1. ಎಲ್ಲಾ 5 ಚುನಾವಣಾ (Election) ಯೋಜನೆಗಳನ್ನು ಜಾರಿಗೊಳಿಸಬೇಕು

  1. ಗೋಹತ್ಯೆ ವಿರೋಧಿ ಮಸೂದೆ & ಮತಾಂತರ ವಿರೋಧಿ ಮಸೂದೆಯನ್ನು ತೆಗೆದುಹಾಕಬೇಕು; 4% ಮುಸ್ಲಿಂ OBC ಮೀಸಲಾತಿಯನ್ನು ಮರುಸ್ಥಾಪಿಸಬೇಕು
  2. ಜಾತಿ ಗಣತಿಯನ್ನು ಬಹಿರಂಗಪಡಿಸಬೇಕು/ಹೊರಗೆ ತರಬೇಕು
  3. ಎಸ್ಟಿ (ST) ಒಳ ಮೀಸಲಾತಿ ಮತ್ತು ಖಾಸಗಿ ವಲಯದ ಮೀಸಲಾತಿಯನ್ನು(ಜಾತಿ/ಪ್ರದೇಶ/ಇತ್ಯಾದಿ) ಜಾರಿಗೊಳಿಸಬೇಕು..” ಎಂದು ಬರೆದುಕೊಂಡಿದ್ದಾರೆ ನಟ ಚೇತನ್.

Comments are closed.