Tippu Jayanthi: ಕಳೆದ ಬಾರಿ ವಿವಾದ ಸೃಷ್ಟಿ ಮಾಡಿದ್ದ ಟಿಪ್ಪು ಜಯಂತಿ ಆಚರಣೆ ಮಾಡುತ್ತಾ ಕಾಂಗ್ರೆಸ್?? ಕಾಂಗ್ರೆಸ್ ನಂಬಿದವರ ಕಥೆ ಏನಾಗಿದೆ ಗೊತ್ತೇ??

Tippu Jayanthi: ಕಾಂಗ್ರೆಸ್ ಸರ್ಕಾರ ಟಿಪ್ಪು ಜಯಂತಿ ಆಚರಣೆಯನ್ನು ಮಾಡುವುದನ್ನು ಶುರು ಮಾಡಿತ್ತು, ಆದರೆ ಈ ಬಾರಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಟಿಪ್ಪು ಜಯಂತಿ ಆಚರಣೆಗೆ ಬ್ರೇಕ್ ಬಿದ್ದ ಹಾಗೆ ಕಾಣುತ್ತಿದೆ. ಕಾಂಗ್ರೆಸ್ ಸರ್ಕಾರವು ಈಗ 31 ಮಹಾಪುರುಷರ ಜಯಂತಿಯನ್ನು ಆಚರಣೆ ಮಾಡಲು ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಅದಕ್ಕಾಗಿ ಹೊಸ ನಿಯಮಗಳನ್ನು ಸಹ ಜಾರಿಗೆ ತಂದಿದೆ. ಆದರೆ ಟಿಪ್ಪು ಜಯಂತಿಯನ್ನು ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ವತಿಯಿಂದ ಆಚರಣೆ ಮಾಡುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

will congress celebrate tippu jayanthi | Live Kannada News
Tippu Jayanthi: ಕಳೆದ ಬಾರಿ ವಿವಾದ ಸೃಷ್ಟಿ ಮಾಡಿದ್ದ ಟಿಪ್ಪು ಜಯಂತಿ ಆಚರಣೆ ಮಾಡುತ್ತಾ ಕಾಂಗ್ರೆಸ್?? ಕಾಂಗ್ರೆಸ್ ನಂಬಿದವರ ಕಥೆ ಏನಾಗಿದೆ ಗೊತ್ತೇ?? https://sihikahinews.com/2023/05/24/will-congress-celebrate-tippu-jayanthi/

ಕಾಂಗ್ರೆಸ್ ಸರ್ಕಾರವೇ ಟಿಪ್ಪು ಜಯಂತಿ ಆಚರಣೆಯನ್ನು ಹೊರತಂದಿತ್ತು, ಇದೀಗ ಕಾಂಗ್ರೆಸ್ ಸರ್ಕಾರವೇ ಈ ಆಚರಣೆಯನ್ನು ನಿಲ್ಲಿಸುವ ಹಾಗೆ ಕಾಣುತ್ತಿದೆ..ಪ್ರತಿ ಜಿಲ್ಲೆಯಲ್ಲಿ ಒಬ್ಬೊಬ್ಬ ಮಹಾನ್ ಪುರುಷರ ಜಯಂತಿ ಆಚರಣೆ ಮಾಡುವ ಆದೇಶ ಹೊರಡಿಸಲಾಗಿದೆ. ರಾಜ್ಯದಲ್ಲಿ ಎಲ್ಲ ಮಹಾನ್ ಪುರುಷರ ಜಯಂತಿ ಆಚರಣೆ ಮಾಡೋಕೆ ಹಣ ಬಿಡುಗಡೆ ಮಾಡುವುದು ಕಷ್ಟ ಎನ್ನಲಾಗುತ್ತಿದ್ದು, ಸಿದ್ದರಾಮಯ್ಯ ಅವರು ಹೊಸ ರೂಲ್ಸ್ ತಂದಿದ್ದಾರೆ. ಯಾವ ಯಾವ ಊರಿನಲ್ಲಿ ಯಾರ ಜಯಂತಿ ಆಚರಣೆ ನಡೆಯಲಿದೆ ಎಂದು ತಿಳಿಸುತ್ತೇವೆ ನೋಡಿ. ಇದನ್ನು ಓದಿ..Political News: ದಿಡೀರ್ ಎಂದು ಮತ್ತೆ ಮಾಧ್ಯಮದ ಮುಂದೆ ಬಂದ ಚೇತನ್ – ಸಿದ್ದು ರವರ ಮುಂದೆ ಮತ್ತಷ್ಟು ಬೇಡಿಕೆಗಳು. ಈ ಬಾರಿ ಏನು ಬೇಕಂತೆ ಗೊತ್ತೇ??

1.ಭಗವಾನ್ ಮಹಾವೀರ ಜಯಂತಿ:- ಬೆಂಗಳೂರು ನಗರ, 2.ಅಕ್ಕ ಮಹಾದೇವಿ ಜಯಂತಿ: ಶಿವಮೊಗ್ಗ, 3.ಬಸವ ಜಯಂತಿ: ಬೀದರ್, 4.ಶ್ರೀ ಶಂಕರಾಚಾರ್ಯ ಜಯಂತಿ: ಚಿಕ್ಕಮಗಳೂರು, 5.ಶ್ರೀ ಭಗೀರಥ ಜಯಂತಿ: ಚಾಮರಾಜನಗರ, 6.ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಜಯಂತಿ: ಬಳ್ಳಾರಿ, 7.ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ಜಯಂತಿ: ಮಂಡ್ಯ , 8..ಶ್ರೀ ಕೇಂಪೇಗೌಡ ಜಯಂತಿ: ಹಾಸನ, 9.ಡಾ.ಫ.ಗು.ಹಳಕಟ್ಟಿ ಜಯಂತಿ:  ವಿಜಯಪುರ, 10.ಹಡಪದ ಅಪ್ಪಣ್ಣ ಜಯಂತಿ: ಧಾರವಾಡ, 11.ನುಲಿಯ ಚಂದಯ್ಯ ಜಯಂತಿ: ಬೆಂಗಳೂರು ಗ್ರಾಮಾಂತರ, 12.ಬ್ರಹ್ಮಶ್ರೀ ನಾರಾಯಣಗುರು ಜಯಂತಿ: ಉಡುಪಿ, 13.ಶ್ರೀಕೃಷ್ಣ ಜಯಂತಿ: ದಕ್ಷಿಣ ಕನ್ನಡ, 14.ವಿಶ್ವಕರ್ಮ ಜಯಂತಿ: ವಿಜಯನಗರ, 15.ಕಿತ್ತೂರು ರಾಣಿ ಚೆನ್ನಮ್ಮ ಜಯಂತಿ: ಬೆಳಗಾವಿ.

16.ವೀರರಾಣಿ ಒನಕೆ ಓಬವ್ವ ಜಯಂತಿ: ದಾವಣಗೆರೆ, 17.ಕನಕ ಜಯಂತಿ: ಗದಗ, 18.ವಿಶ್ವಮಾನವ ದಿನಾಚರಣೆ: ಮೈಸೂರು, 19.ವಿಶ್ವಕರ್ಮ  ಅಮರ ಶಿಲ್ಪಿ ಜಕಣಾಚಾರಿ ದಿನಾಚರಣೆ: ತುಮಕೂರು, 20.ಶಿವಯೋಗಿ ಸಿದ್ದರಾಮ ಜಯಂತಿ: ಚಿತ್ರದುರ್ಗ, 21.ಮಹಾಯೋಗಿವೇಮನ ಜಯಂತಿ: ರಾಯಚೂರು, 22.ಅಂಬಿಗರ ಚೌಡಯ್ಯ ಜಯಂತಿ: ಕಾರವಾರ, 23.ಸವಿತಾ ಮಹರ್ಷಿ ಜಯಂತಿ: ಚಿಕ್ಕಬಳ್ಳಾಪುರ, 24.ಮಡಿವಾಳ ಮಾಚಿದೇವ ಜಯಂತಿ: ರಾಮನಗರ, 25.ಶ್ರೀ  ಸಂತ ಸೇವಾಲಾಲ ಜಯಂತಿ: ಯಾದಗಿರಿ, 26.ಕಾಯಕ ಶರಣರ ಜಯಂತಿ: ಕೊಪ್ಪಳ, 27.ಛತ್ರಪತಿ ಶಿವಾಜಿ  ಜಯಂತಿ: ಬಾಗಲಕೋಟೆ, 28.ಸಂತಿ  ಕವಿ ಸರ್ವಜ್ಞ ಜಯಂತಿ: ಕೊಡಗು, 29.ಶ್ರೀ ಯೋಗಿ ನಾರೇಯಣ ಯತೀಂದ್ರರ ಜಯಂತಿ: ಕೋಲಾರ, 30.ಶ್ರೀ ರೇಣುಕಾಚಾರ್ಯ ಜಯಂತಿ: ಹಾವೇರಿ, 31.ದೇವರ ದಾಸಿಮಯ್ಯ ಜಯಂತಿ: ಕಲಬುರಗಿ. ಇದನ್ನು ಓದಿ..Karnataka Politics: ಸಿದ್ದು ಸಿಎಂ, ಡಿಕೆ ಡಿಸಿಎಂ ಆದ ಬೆನ್ನಲ್ಲೇ ಕಾಂಗ್ರೆಸ್ ನಲ್ಲಿ ಭುಗಿಲೆದ್ದ ಅಸಮಾಧಾನ- ಪರಮೇಶ್ವರ್ ಹೇಳಿದ್ದೇನು ಗೊತ್ತೆ??

Comments are closed.