Maruti Suzuki: ಬೈಕ್ ನಂತೆ ಮೈಲೇಜ್ ನೀಡುವ ಕಾರ್ ಬಿಡುಗಡೆ ಮಾಡುತ್ತಿರುವ ಮಾರುತಿ- ಎಷ್ಟು ಮೈಲೇಜ್ ಗೊತ್ತೇ? ಏನೆಲ್ಲಾ ಇರುತ್ತೆ ಅಂತೇ ಗೊತ್ತೆ?

Maruti Suzuki: ಮಾರುತಿ ಸುಜುಕಿ ಸಂಸ್ಥೆ ನಮ್ಮ ದೇಶದಲ್ಲಿ ಕಾರ್ ತಯಾರಿಕೆ ಮತ್ತು ಮಾರಾಟದಲ್ಲಿ ಮುಂಚೂಣಿಯಲ್ಲಿರುವ ಸಂಸ್ಥೆ ಆಗಿದೆ. ಈ ಸಂಸ್ಥೆಯು ಮಾಸಿಕವಾಗಿ ಅತಿಹೆಚ್ಚು ಕಾರ್ ಗಳನ್ನು ಸೇಲ್ ಮಾಡುವ ಸಂಸ್ಥೆಗಳಲ್ಲಿ ಒಂದು. ಇದೀಗ ಮಾರುತಿ ಸುಜುಕಿ ಸಂಸ್ಥೆಯು ತಮ್ಮ ಸಂಸ್ಥೆಯ ಹೊಸ ಮಾರುತಿ ಸುಜುಕಿ ಎಂಗೇಜ್ ಕಾರ್ ಅನ್ನು ಜುಲೈ 5ರಂದು ಬಿಡುಗಡೆ ಮಾಡಲಿದೆ. ಈ ಕಾರ್ ಟೊಯೊಟಾ ಇನೋವಾ ಹೈಕ್ರಾಸ್‌ ಕಾರ್ ನ ಬ್ಯಾಡ್ಜ್ ಇಂಜಿನಿಯರಿಂಗ್ ಆವೃತ್ತಿ ಆಗಿರುವ ಇನ್ವಿಕ್ಟೋ ಪ್ರೀಮಿಯಂ ಎಂಪಿವಿ ಕಾರ್ ಆಗಿದೆ.

ಮಾರುತಿ ಸುಜುಕಿ ಎಂಗೇಜ್ ಕಾರ್ ಗ್ರ್ಯಾಂಡ್ ವಿಟಾರಾ ಎಸ್‍.ಯು.ವಿ ಗಿಂತ ಮೇಲಿನ ಸ್ಥಾನದಲ್ಲಿ ಇರಲಿದೆ. ಈಗ ಮಾರುತಿ ಇನ್ಕ್ವಿಟಿ ಕಾರ್ ಬಿಡುಗಡೆ ಆಗಲಿದ್ದು, ಮುಂದಿನ ವರ್ಷದಲ್ಲಿ ನ್ಯೂ ಜೆನೆರೇಷನ್ ಮಾರುತಿ ಸ್ವಿಫ್ಟ್ ಕಾಂಪ್ಯಾಕ್ಟ್ ಸೆಡಾನ್ ಕಾರ್ ಬಿಡುಗಡೆ ಮಾಡಲಾಗುತ್ತದೆ. ಮುಂದಿನ ವರ್ಷ ಬಿಡುಗಡೆ ಆಗಲಿರುವ ಕಾರ್ ಗಳ ವಿಶೇಷತೆ ಹಾಗೂ ಅದಕ್ಕೆ ಸಂಬಂಧ ಪಟ್ಟಿರುವ ಮಾಹಿತಿಗಳನ್ನು ಇಂದು ನಿಮಗೆ ತಿಳಿಸುತ್ತೇವೆ ನೋಡಿ..

ನ್ಯೂ ಜೆನೆರೇಷನ್ ಮಾರುತಿ ಸುಜುಕಿ ಸ್ವಿಫ್ಟ್ :- ಇದು ಪೂರ್ತಿ ಅಪ್ಡೇಟ್ ಆಗಿರುವ ಕಾರ್ ಆಗಿರಲಿದೆ. ಹೊರದೇಶದಲ್ಲಿ ಈ ಕಾರ್ ಅನ್ನು ಪರೀಕ್ಷೆ ಮಾಡಲಾಗಿದೆ. 2023ರ ಅಂತ್ಯಕ್ಕೆ ಅಥವಾ 2024ರ ಆರಂಭದ ವೇಳೆ ಜಪಾನ್ ನಲ್ಲಿ ಈ ಕಾರ್ ಲಾಂಚ್ ಆಗಲಿದೆ. 2024ರ ಮೊದಲ 6 ತಿಂಗಳ ವೇಳೆ ಭಾರತದಲ್ಲಿ ಲಾಂಚ್ ಆಗಲಿದೆ. ಈ ಕಾರ್ 1.2 ಲೀಟರ್ ನ ಮೂರು ಸಿಲಿಂಡರ್ ಸ್ಟ್ರಾಂಗ್ ಹೈಬ್ರಿಡ್ ಪೆಟ್ರೋಲ್ ಇಂಜಿನ್ ಹೊಂದಿದೆ. ಈ ಕಾರ್ ಮಿಡ್ ಸ್ಪೆಕ್ ಹಾಗೂ ಟಾಪ್ ಎಂಡ್ ಎನ್ನುವ ಎರಡು ಆವೃತ್ತಿಗಳಲ್ಲಿ ಲಾಂಚ್ ಆಗಬಹುದು ಎನ್ನಲಾಗಿದೆ. ಬೇಕಿದ್ದರೆ ಗ್ಯಾಸೋಲಿನ್ ಇಂಜಿನ್ ಅನ್ನು ಸಹ ಮುಂದುವರೆಸಬಹುದು. ಕಾರ್ ನಲ್ಲಿ 5 ಸ್ಪೀಡ್ ಗೇರ್ ಬಾಕ್ಸ್, 5 ಸ್ಪೀಡ್ AMT ಗೇರ್ ಬಾಕ್ಸ್ ಹೊಂದಿಸಲಾಗಿದೆ.

ನ್ಯೂ ಜೆನೆರೇಷನ್ ಮಾರುತಿ ಡಿಸೈರ್ :- ಈ ಕಾರ್ ಸಹ ಹಿಂದಿನ ಸ್ವಿಫ್ಟ್ ಕಾರ್ ರೀತಿಯಲ್ಲಿ ಒಳಗೆ ಮತ್ತು ಹೊರಗೆ ವಿನ್ಯಾಸಗೊಳಿಸಿ, ಪರೀಕ್ಷೆ ಮಾಡಲಾಗುತ್ತದೆ. ಇದು ಹ್ಯಾಚ್ ಬ್ಯಾಕ್ ಆಗಿರುತ್ತದೆ. 2024ರ ಎರಡನೇ ಭಾಗದಲ್ಲಿ ಈ ಕಾರ್ ಬಿಡುಗಡೆ ಆಗುತ್ತದೆ. ಇದರಲ್ಲಿ ಸಹ ಸ್ಟ್ರಾಂಗ್ ಹೈಬ್ರಿಡ್ ಇಂಜಿನ್ ಇರುತ್ತದೆ. ಈ ಎರಡು ಕಾರ್ ಗಳಲ್ಲಿ ಹೊಸ ತಂತ್ರಜ್ಞಾನ ಬಳಸಿರುವುದರಿಂದ ಒಳಗೆ ಮತ್ತು ಹೊರಗೆ ಹೆಚ್ಚು ವೆಚ್ಚ ಆಗಬಹುದು. ಸ್ಟ್ರಾಂಗ್ ಹೈಬ್ರಿಡ್ ಪೆಟ್ರೋಲ್ ಇಂಜಿನ್ ಇರುವುದರಿಂದ 35 ಇಂದ 40 ಕಿಮೀವರೆಗು ಮೈಲೇಜ್ ನೀಡುತ್ತದೆ. ಈ ಕಾರಣಗಳಿಂದ ಈ ಎರಡು ಕಾರ್ ಗಳು ಜನರಿಗೆ ಇಷ್ಟವಾಗಿದೆ.

Comments are closed.