Kedarnath: ಯಾವ ವಿಐಪಿಯೂ ವರ್ಷದ ಆರು ತಿಂಗಳು ಈ ದೇವಾಲಯದ ಹತ್ತಿರವೂ ಸುಳಿಯುವುದಿಲ್ಲ ಯಾಕೆ ಗೊತ್ತಾ? ಆಧುನಿಕ ವಿಜ್ಞಾನಿಗಳಿಗೂ ಸವಾಲಾಗಿರುವ ಆ ಕಾರಣವೇನು ಗೊತ್ತೇ?

Kedarnath: ಕೆಲವು ಸಂದರ್ಭಗಳಲ್ಲಿ ನಾವು ಊಹೆ ಕೂಡ ಮಾಡಿಕೊಳ್ಳದಂಥ ಘಟನೆಗಳು ನಡೆಯುತ್ತದೆ. ಅವುಗಳು ಬೇರೆ ಸ್ಥಳಗಳಲ್ಲಿ ಮಾತ್ರವಲ್ಲ,ದೇವಸ್ಥಾನಗಳಲ್ಲಿಯೂ ನಡೆಯಬಹುದು. ದೇವರು ಶಕ್ತಿ ಏನು ಎಂದು ನಿರೂಪಿಸುವಂಥ ಘಟನೆಗಳು ಅವು. ನಮ್ಮ ಭಾರತದಲ್ಲಿ ಹೀಗೆ ನಿಗೂಢ ಎನ್ನಿಸುವಂಥ ಒಂದು ದೇವಸ್ಥಾನವಿದೆ, ಅದು ಉತ್ತರಾಖಂಡ್ ರಾಜ್ಯದ ಪ್ರಯಾಗ್ ರಾಜ್ ಎನ್ನುವಲ್ಲಿ ಇರುವ ಕೇದಾರನಾಥ ದೇವಾಲಯ. ಇದು ಶಿವನ ದೇವಾಲಯ. ನಮ್ಮ ಹಿಂದೂ ಧರ್ಮದಲ್ಲಿ ಜೀವಿತಾವಧಿಯಲ್ಲಿ ಒಬ್ಬ ವ್ಯಕ್ತಿ ಈ ದೇವಸ್ಥಾನಕ್ಕೆ ಹೋಗಿ ಶಿವನ ದರ್ಶನ ಪಡೆದರೆ, ಅವನ ಎಲ್ಲಾ ಪಾಪಗಳು ಪರಿಹಾರ ಆಗುತ್ತದೆ ಎನ್ನುವ ನಂಬಿಕೆ ಇದೆ. ಇದನ್ನ ಓದಿ:Fake App: ಅಬ್ಬಾ ಈ ಆಪ್ ಗಳನ್ನು ನೋಡಿದ್ರೆ ನಕಲಿ ಅಂತ ಅನ್ನಿಸಲ್ಲ, ಒಮ್ಮೆ ಡೌನ್ ಲೋಡ್ ಮಾಡಿದ್ರೆ ಮುಗಿತು ಜೀವನವೇ ಸರ್ವನಾಶ!

ಆದರೆ ಎಲ್ಲರೂ ಕೂಡ ಈ ದೇವಸ್ಥಾನಕ್ಕೆ ಹೋಗಲು ಸಾಧ್ಯವಿಲ್ಲ. ಇಲ್ಲಿ ಶಿವನು ಅತ್ಯಂತ ಶಕ್ತಿಶಾಲಿಯಾಗಿರುತ್ತಾನೆ ಎಂದು ಹೇಳುತ್ತಾರೆ. ಈ ದೇವಸ್ಥಾನವನ್ನು ಯಾವ ಶತಮಾನದಲ್ಲಿ ಯಾರು ಕಟ್ಟಿಸಿದರು ಎನ್ನುವುದಕ್ಕೆ ಸರಿಯಾದ ಉಲ್ಲೇಖ ಇಲ್ಲ, ಕೆಲವು ಕಡೆ ದ್ವಾಪರಯುಗದಲ್ಲಿ ಪಾಂಡವರು ಕಟ್ಟಿಸಿದರು ಎಂದು ಹೇಳಿದರು ಸಹ, ಅದಕ್ಕೆ ಸರಿಯಾದ ಸಾಕ್ಷಿ ಇಲ್ಲ. ಈ ದೇವಸ್ಥಾನ ನಿರ್ಮಾಣಕ್ಕೆ ಬಳಸಿರುವ ಕಲ್ಲುಗಳು, ಅವುಗಳ ಇಂಟರ್ ಲಾಕಿಂಗ್ ಇದನ್ನೆಲ್ಲ ನೋಡಿದರೆ, ಈಗಿನ ಆರ್ಕಿಟೆಕ್ಟ್ ಗಳಿಗೂ ಇದನ್ನು ಹೇಗೆ ಕಟ್ಟಲಾಗಿದೆ ಎನ್ನುವುದು ಸಂಪೂರ್ಣವಾಗಿ ಅರ್ಥವಾಗಿಲ್ಲ.

ಮಾಡರ್ನ್ ಆರ್ಕಿಟೆಕ್ಚರ್ ಇಲ್ಲದ ಕಾಲಘಟ್ಟದಲ್ಲಿ ಈ ದೇವಸ್ಥಾನವನ್ನು ಕಟ್ಟಿಸಿದ್ದರು ಸಹ ಯಾವುದೇ ಭೂಕಂಪ, ಪ್ರಕೃತಿ ವಿಕೋಪ ಏನೇ ನಡೆದರು ಗಟ್ಟಿಯಾಗಿ ನಿಂತಿದೆ. 2013ರಲ್ಲಿ ಉತ್ತರಾಖಂಡ್ ನಲ್ಲಿ ಸಂಭವಿಸಿದ ಭೀಕರ ಪ್ರವಾಹದ ಬಗ್ಗೆ ನಾವೆಲ್ಲರೂ ಮಾಧ್ಯಮಗಳಲ್ಲಿ ನೋಡಿದ್ದೇವೆ, ಆ ವೇಳೆ ಇಡೀ ಉತ್ತರಾಖಂಡ್ ನೀರಿನಲ್ಲಿ ಮುಳುಗಿತ್ತು. ಆಧುನಿಕ ತಂತ್ರಜ್ಞಾನವನ್ನು ಬಳಸಿ, ಕಟ್ಟಿದ ಕಟ್ಟಡಗಳು ಮನೆಗಳು ಎಲ್ಲವೂ ನೀರಿನಲ್ಲಿ ಕೊಚ್ಚಿ ಹೋಗಿತ್ತು. ಆದರೆ ಕೇದಾರನಾಥ ದೇವಸ್ಥಾನ ಮಾತ್ರ ಯಾವುದಕ್ಕೂ ಕದಲದೆ ಅಚಲವಾಗಿ ನಿಂತಿತ್ತು. ದೇವಸ್ಥಾನದ ಒಂದು ಕಲ್ಲು ಕೂಡ ಹಾನಿಯಾಗಿರಲಿಲ್ಲ ಎನ್ನುವುದು ಅಚ್ಚರಿ ತರುವ ವಿಚಾರ. ಇದನ್ನೂ ಓದಿ: Wedding money: ನಿಮ್ಮ ಮದುವೆಯಲ್ಲಿ ನೀವು ಹಣ ಖರ್ಚು ಮಾಡುವುದು ಮಾತ್ರವಲ್ಲ ಈ ಒಂದು ಕೆಲಸ ಮಾಡಿದರೆ ಲಕ್ಷ ಲಕ್ಷ ಹಣ ಗಳಿಸಬಹುದು ಜೊತೆಗೆ ಗಿಫ್ಟ್ ಕೂಡ.. ಹೇಗೆ ಗೊತ್ತಾ?

ದೇವಸ್ಥಾನ ಸಾವಿರಾರು ವರ್ಷಗಳಿಂದ ಹೀಗೆ ಇದೆ, ಇದಕ್ಕಿಂತ ದೊಡ್ಡ ದೊಡ್ಡ ಬಿಲ್ಡಿಂಗ್ ಗಳು ನೀರಿನಲ್ಲಿ ಉರುಳಿ ಹೋದವು, ಜನರ ಜೀವನವೇ ಕಷ್ಟವಾಯಿತು, ಆದರೆ ಅಂದು ಪ್ರವಾಹದ ಭೀಕರತೆ ತೀವ್ರವಾದಾಗ, ದೇವಸ್ಥಾನವನ್ನು ಒಂದು ಬಂಡೆ ರಕ್ಷಿಸಿತು. ಈ ಬಂಡೆ ಎಲ್ಲಿಂದ ಹೇಗೆ ಎಂದು ಗೊತ್ತಿಲ್ಲ, ದೇವಸ್ಥಾನದ ಹಿಂಭಾಗಕ್ಕೆ ಬಂದು ನಿಂತು, ಪ್ರವಾಹದಿಂದ ಬರುತ್ತಿದ್ದ ನೀರು ದೇವಸ್ಥಾನವನ್ನು ಹಾನಿಗೊಳಿಸದ ಹಾಗೆ ತಡೆಯಿತು. ಇಡೀ ದೇವಸ್ಥಾನ ನೀರಿನಲ್ಲಿ ಮುಳುಗಿತು, ಆದರೆ ಯಾವುದೇ ತೊಂದರೆ ಆಗಲಿಲ್ಲ. ಬಂಡೆ ಕಲ್ಲು ಇದ್ದ ಕಾರಣ, ಬರುತ್ತಿದ್ದ ನೀರು ಅಕ್ಕಪಕ್ಕಕ್ಕೆ ಹರಿದು ಹೋಯಿತು, ದೇವಸ್ಥಾನ ಸುರಕ್ಷಿತವಾಗಿತ್ತು.

ಇನ್ನು ಈ ದೇವಸ್ಥಾನದ ಹತ್ತಿರದಲ್ಲೇ ಒಂದು ಹೊಂಡವಿದೆ, ಇಲ್ಲಿಗೆ ಬಂದ ಭಕ್ತರು, ಹೊಂಡದಲ್ಲಿ ನಿಂತು ಒಂದೇ ಮನಸ್ಸಿನಿಂದ ಶಿವನ ಜಪ ಮಾಡಿದರೆ, ಅಲ್ಲೇ ಇರುವ ಸ್ಥಳದಲ್ಲಿ ನೀರಿನ ಗುಳ್ಳೆಗಳು ಬರುವುದಕ್ಕೆ ಶುರುವಾಗುತ್ತದೆ. ಈ ಎರಡು ಹೇಗೆ ಲಿಂಕ್ ಆಗಿದೆ ಎಂದು ಇದುವರೆಗೂ ಯಾರಿಗೂ ಗೊತ್ತಿಲ್ಲ, ಶಿವನ ಸ್ಮರಣೆ ಮಾಡಿದರೆ ನೀರಿನ ಗುಳ್ಳೆಗಳು ಹೇಗೆ ಬರುತ್ತದೆ ಎಂದು ಹಲವು ಸೈನ್ಟಿಸ್ಟ್ ಗಳು ಸಹ ಬಂದು ರಿಸರ್ಚ್ ಮಾಡುವ ಪ್ರಯತ್ನ ಮಾಡಿದ್ದಾರೆ ಆದರೆ ಅವರಿಗೆ ಈ ಪ್ರಶ್ನೆಗೆ ಉತ್ತರ ಸಿಕ್ಕಿಲ್ಲ. ಇದೆಲ್ಲದರ ಜೊತೆಗೆ ಈ ದೇವಸ್ಥಾನದಲ್ಲಿ ಮತ್ತೊಂದು ಆಶ್ಚರ್ಯ ಎನ್ನಿಸುವ ವಿಚಾರವಿದೆ..

ಅದೇನೆಂದರೆ, ಕೇದಾರನಾಥ ದೇವಸ್ಥಾನ ವರ್ಷದಲ್ಲಿ ಆರು ತಿಂಗಳ ಕಾಲ ಮಾತ್ರ ತೆರೆದಿರುತ್ತದ್ದ, ಇನ್ನಾರು ತಿಂಗಳು ಮುಚ್ಚಿರುತ್ತದೆ. ಒಂದು ಸಾರಿ ದೇವಸ್ಥಾನದ ಬಾಗಿಲನ್ನು ಮುಚ್ಚಿದರೆ, 6 ತಿಂಗಳ ವರೆಗು ಏನೇ ಆದರೂ ತೆರೆಯುವುದಿಲ್ಲ. ಯಾರಿಗೋಸ್ಕರವು ತೆರೆಯುವುದಿಲ್ಲ, ದೇಶದ ಪ್ರಧಾನಿಯೇ ಬಂದರು ಆ ವೇಳೆ ದೇವಸ್ಥಾನದ ಬಾಗಿಲನ್ನು ತೆರೆಯುವುದಿಲ್ಲ. ಆದರೆ ದೇವಸ್ಥಾನ ಮುಚ್ಚಿರುವ ಈ ಆರು ತಿಂಗಳ ಸಮಯದಲ್ಲಿ ಅಲ್ಲಿ ಕೆಲವು ಘಟನೆಗಳು ನಡೆಯುವ ಅನುಭವ ಸುತ್ತ ಮುತ್ತ ವಾಸ ಮಾಡುವ ಜನರಿಗೆ ಆಗಿದೆ. ಇದನ್ನೂ ಓದಿ: Abhishek marriage: ಕುಮಾರಣ್ಣನ, ನಿಖಿಲ್ ರಾಜಕೀಯದ ಕಾರಣಕ್ಕೆ ಅಭಿಷೇಕ್ ಮದುವೆಗೆ ಹೋಗದೆ ಇರುವಾಗ, ಸೈಲೆಂಟ್ ಆಗಿ ದೇವೇಗೌಡರು ಏನು ಮಾಡಿದ್ದಾರೆ ಗೊತ್ತೆ?

ದೇವಸ್ಥಾನ ಮುಚ್ಚುವ ಮೊದಲು ಅಖಂಡ ದೀಪವನ್ನು ಹಚ್ಚಲಾಗುತ್ತದೆ, ಆರು ತಿಂಗಳುಗಳ ಕಾಲದ ನಂತರ ದೇವಸ್ಥಾನದ ಬಾಗಿಲು ತೆರೆದಾಗಲು ಆ ದೀಪ ಹಾಗೆಯೇ ಉರಿಯುತ್ತಿರುತ್ತದೆ. ಮತ್ತೊಂದು ವಿಚಾರ, ಸಾಮಾನ್ಯವಾಗಿ ಮನೆಗಳನ್ನು ಒಂದೆರಡು ದಿನಗಳ ಕಾಲ ಲಾಕ್ ಮಾಡಿ ಹೊರಗೆ ಹೋಗಿದ್ದರೆ, ಮನೆಯಲ್ಲಿ ಧೂಳು ಇರುತ್ತದೆ, ಆದರೆ ಕೇದಾರನಾಥ ದೇವಸ್ಥಾನವನ್ನು ಆರು ತಿಂಗಳ ಕಾಲ ಮುಚ್ಚಿದ್ದರು ಸಹ, ದೇವಸ್ಥಾನವನ್ನು ತೆರೆದ ನಂತರ, ದೇವಸ್ಥಾನದಲ್ಲಿ ಒಂದು ಸ್ವಲ್ಪ ಕೂಡ ಧೂಳು ಇರುವುದಿಲ್ಲ. ಆಗಷ್ಟೇ ಯಾರೋ ಬಂದು ಸ್ವಚ್ಛಗೊಳಿಸಿ ಹೋಗಿದ್ದಾರೆ ಎಂದು ಅನ್ನಿಸುವ ಹಾಗೆ ಇರುತ್ತದೆ..

ಇದಕ್ಕೆ ಕಾರಣ, ಆರು ತಿಂಗಳ ಕಾಲ ದೇವಸ್ಥಾನ ಮುಚ್ಚಿರುವಾಗ ದೇವಾನುದೇವತೆಗಳೇ ಬಂದು ದೇವಸ್ಥಾನದಲ್ಲಿ ಪೂಜೆ ಮಾಡುತ್ತಾರೆ ಎನ್ನುವ ನಂಬಿಕೆ ಇದೆ. ಈ ರೀತಿ ಕೇದಾರನಾಥ ದೇವಸ್ಥಾನಕ್ಕೆ ಸಂಬಂಧಿಸಿದ ಹಾಗೆ, ಹೀಗೆಲ್ಲಾ ನಡೆಯುವುದು ಈ ದೇವಸ್ಥಾನದಲ್ಲಿ ಮಾತ್ರ ಎನ್ನುತ್ತಾರೆ. ದೇವಸ್ಥಾನದ ಒಳಗಡೆ ಹಾಗೂ ಹೊರಗಡೆ ಈ ಥರ ಅಗೋಚರ ಶಕ್ತಿಗಳಿವೆ ಎಂದು ಹೇಳುತ್ತಾರೆ. ಈ ಥರದ ಒಂದು ದೇವಸ್ಥಾನ, ಅಲ್ಲಿನ ಅನುಭವ ನಿಮಗೆ ವಿಶ್ವದ ಇನ್ನೆಲ್ಲಿಯು ಸಿಗುವುದಿಲ್ಲ. ಈ ದೇವಸ್ಥಾನದಲ್ಲಿ ಮೊದಲು ಪೂಜೆಯ ಮಂತ್ರಗಳನ್ನು ಕನ್ನಡದಲ್ಲಿ ಹೇಳಲಾಗುತ್ತಿತ್ತು, ನಂತರ ಸಂಸ್ಕೃತದಲ್ಲಿ ಮಂತ್ರವನ್ನು ಹೇಳಲಾಗುತ್ತದೆ. ಇದನ್ನೂ ಓದಿ: Romantic partner: ಅಬ್ಬಬ್ಬಾ ಈ ರಾಶಿಯವರು ಎಂಥ ರೋಮ್ಯಾಂಟಿಕ್ ಗೊತ್ತಾ ಲೈಫ್ ಲಾಂಗ್ ಸಮಸ್ಯೆ ಇಲ್ಲದೆ ಇವರ ಜೊತೆಗೆ ಜೀವನ ಮಾಡಬಹುದು ನೋಡಿ!

Comments are closed.