Wedding money: ನಿಮ್ಮ ಮದುವೆಯಲ್ಲಿ ನೀವು ಹಣ ಖರ್ಚು ಮಾಡುವುದು ಮಾತ್ರವಲ್ಲ ಈ ಒಂದು ಕೆಲಸ ಮಾಡಿದರೆ ಲಕ್ಷ ಲಕ್ಷ ಹಣ ಗಳಿಸಬಹುದು ಜೊತೆಗೆ ಗಿಫ್ಟ್ ಕೂಡ.. ಹೇಗೆ ಗೊತ್ತಾ?

Wedding money: ಮದುವೆ ಅನ್ನೋದು ಪ್ರತಿಯೊಬ್ಬರಿಗೂ ಒಂದು ಕನಸು, ಜೀವನದಲ್ಲಿ ಒಮ್ಮೆ ಮಾತ್ರ ನಡೆಯುವ ಈ ಸಂಭ್ರಮದ ಗಳಿಗೆಯನ್ನು ಮೆಮೊರಿ ಆಗಿಸಲು ಸಾಕಷ್ಟು ಜನ ಬಯಸುತ್ತಾರೆ. ಅದರಲ್ಲೂ ಬೇರೆ ಯಾವ ದೇಶದಲ್ಲಿಯೂ ಭಾರತದಲ್ಲಿ ಇರುವಂತೆ ಬಹಳ ಸಾಂಪ್ರದಾಯಿಕವಾದ ಹಾಗೂ ಅಚ್ಚುಕಟ್ಟಿನ ವಿವಾಹ ಕಾರ್ಯಕ್ರಮ ನಡೆಯುವುದಿಲ್ಲ. ಹಾಗಾಗಿ ನಮಗೆ ಮಾತ್ರವಲ್ಲದೆ ವಿದೇಶಿgaರಿಗೂ ಕೂಡ ಭಾರತೀಯ ಮದುವೆ ಅಂದ್ರೆ ಬಹಳ ಇಷ್ಟವಂತೆ. ಇದೇ ಇಷ್ಟವನ್ನು ನೀವು ಬಂಡವಾಳವಾಗಿಸಿಕೊಳ್ಳಬಹುದು ನೋಡಿ.

ಹೌದು, ಮದುವೆ ಅಂದ್ರೆ ಸಂಭ್ರಮವೂ ಹೌದು ಸಂತೋಷವೂ ಹೌದು. ಇದರ ಜೊತೆಗೆ ಮದುವೆ ಸಂದರ್ಭದಲ್ಲಿ ಸಾಕಷ್ಟು ಹಣ ವ್ಯಯಿಸಬೇಕಾಗುತ್ತದೆ. ಆದರೆ ಇನ್ನು ಮುಂದೆ ಮದುವೆ ಆಗುವವರು ಹಣ ಖರ್ಚು ಮಾಡುವುದು ಮಾತ್ರವಲ್ಲ ಮದುವೆಯ ಸಂದರ್ಭದಲ್ಲಿ ಒಂದಷ್ಟು ಹಣ ಗಳಿಸಬಹುದು ಜೊತೆಗೆ ಗಿಫ್ಟ್ ಗಳು ಕೂಡ ಸಿಗಬಹುದು ಹೇಗೆ ಅಂತೀರಾ ಹೇಳ್ತಿವಿ ಮುಂದೆ ಓದಿ.. ಇದನ್ನೂ ಓದಿ: Virat kohli: ವಿರಾಟ್ ಕೊಹ್ಲಿ ದೇಶದ ಶ್ರಿಮಂತರ ಪಟ್ಟಿ ಸೇರಿದ್ದು ಹೇಗೆ ಗೊತ್ತಾ? ಕ್ರಿಕೆಟ್ ಮಾತ್ರ ಅಲ್ಲ, ಇವರ ಇನ್ಕಂ ಸೋರ್ಸ್ ಏನು ಗೊತ್ತಾ?

ಮದುವೆಗೆ ಫಾರಿನರ್ಸ್ ಗೆಸ್ಟ್ – ಗಿಫ್ಟ್

ಭಾರತೀಯ ಆಚರಣೆಗಳು ಸಂಪ್ರದಾಯಗಳು ಅಂದ್ರೆ ವಿದೇಶಿಕರಿಗೆ ಬಹಳ ಆಸಕ್ತಿ ಹಾಗಾಗಿ ಭಾರತಕ್ಕೆ ಪ್ರತಿ ವರ್ಷ ವಿದೇಶದಿಂದ ಪ್ರವಾಸಕ್ಕಾಗಿ ಬರುವವರ ಸಂಖ್ಯೆಯು ಜಾಸ್ತಿ. ಹೀಗೆ ಪ್ರವಾಸಕ್ಕೆಂದು ಭಾರತಕ್ಕೆ ಬರುವವರಿಗೆ ಭಾರತೀಯ ಮದುವೆ ಆಚರಣೆಯನ್ನು ನೋಡುವುದು ಬಹಳ ಇಷ್ಟವಂತೆ. ಹಾಗಾಗಿ ನೀವು ಕೂಡ ನಿಮ್ಮ ಮದುವೆಗೆ ವಿದೇಶಿಗರನ್ನು ಆಹ್ವಾನಿಸಬಹುದು. ಅವರು ನಿಮ್ಮ ಮದುವೆಗೆ ಬಂದು ಒಂದೆರಡು ದಿನ ಇದ್ದು ಮದುವೆಯ ಸಂದರ್ಭದಲ್ಲಿ ಪಾಲ್ಗೊಳ್ಳುತ್ತಾರೆ ಜೊತೆಗೆ ನಿಮಗೆ ಒಂದಿಷ್ಟು ಹಣ ಗಿಫ್ಟ್ ಎಲ್ಲವನ್ನು ಕೊಟ್ಟು ಹೋಗುತ್ತಾರೆ. ಇದಕ್ಕಾಗಿ ನೀವು ಏನು ಮಾಡಬೇಕು ಗೊತ್ತಾ?

ನಿಮ್ಮ ಮದುವೆಯ ವಿವರಣೆಯನ್ನು ಆನ್ಲೈನ್ ನಲ್ಲಿ ಹಾಕಬೇಕು. ಇದಕ್ಕಾಗಿ https://www.joinmywedding.com/ ಎನ್ನುವ ವೆಬ್ಸೈಟ್ ಲಭ್ಯವಿದೆ. ಇದರಲ್ಲಿ ನೀವು ನಿಮ್ಮ ಮದುವೆಯ ಇನ್ವಿಟೇಶನ್ ಕಾರ್ಡ್ ನಿಂದ ಹಿಡಿದು ಯಾವ ಸ್ಥಳದಲ್ಲಿ ಮದುವೆ ಆಗುತ್ತದೆ ಎಷ್ಟು ದಿನದ ಮದುವೆ ಹೆಂಡತಿಯಾದಿ ವಿಷಯಗಳನ್ನು ಹಾಕಬೇಕು. ಜೊತೆಗೆ ನೀವು ಎಷ್ಟು ವಿದೇಶಿ ಪ್ರವಾಸಿಗರನ್ನು ನಿಮ್ಮ ಮದುವೆಗೆ ಆಹ್ವಾನಿಸಲು ಇಷ್ಟಪಡುತ್ತೀರಿ ಎಂಬುದನ್ನು ತಿಳಿಸಬೇಕು. ಇದೇ ರೀತಿ ವಿದೇಶಿಗರೂ ಕೂಡ ಈ ವೆಬ್ಸೈಟ್ನಲ್ಲಿ ತಾವು ಯಾರ ಮದುವೆಗೆ ಹೋಗಲು ಇಷ್ಟಪಡುತ್ತೇವೆ ಎಂಬುದನ್ನು ತಿಳಿಸುತ್ತಾರೆ. ನಿಮ್ಮ ಹಾಗೂ ವಿದೇಶಿಕ ರ ಮಾಹಿತಿಯನ್ನು ಕಲೆ ಹಾಕಿದ ಈ ವೆಬ್ಸೈಟ್ ನಿಮಗೆ ಕರೆ ಮಾಡಿ ಮಾಹಿತಿಯನ್ನು ಕನ್ಫರ್ಮ್ ಮಾಡಿಕೊಳ್ಳುತ್ತದೆ.

ವಿದೇಶಿಗರು ನಿಮ್ಮ ಮದುವೆಗೆ ಬರುತ್ತಾರೆ ಎಂದಾದರೆ ಅವರನ್ನು ಸ್ವಾಗತಿಸುವುದು ಅವರಿಗೆ ಮದುವೆಯ ಸಂದರ್ಭದಲ್ಲಿ ಒದಗಿಸುವುದು ನಿಮ್ಮ ಕೆಲಸ. ನಿಮ್ಮ ಮದುವೆ ಹೇಗೆ ನಡೆಯುತ್ತದೆ ಎಂಬುದನ್ನು ವಿದೇಶಿಕರಿಗೆ ತೋರಿಸುವುದು ಮಾತ್ರವಲ್ಲದೆ ಇಡೀ ಜಗತ್ತಿಗೆ ನಿಮ್ಮ ಮದುವೆ ತಿಳಿಯುವಂತೆ ಮಾಡಬಹುದು ಜೊತೆಗೆ ಒಂದಿಷ್ಟು ಕಮಾಯಿ ಕೂಡ ಮಾಡಿಕೊಳ್ಳಬಹುದು. ಅಲ್ಲದೆ ವಿದೇಶಿಕರು ನಿಮ್ಮ ಮದುವೆಯ ಸಂದರ್ಭದಲ್ಲಿ ಖುಷಿ ಹೆಚ್ಚಾದರೆ ಹೆಚ್ಚು ಹಣ ನೀಡಬಹುದು ಜೊತೆಗೆ ಸಾಕಷ್ಟು ಗಿಫ್ಟ್ ಗಳನ್ನು ಕೂಡ ಕೊಡುತ್ತಾರೆ. ಹಾಗಾದ್ರೆ ಇನ್ಯಾಕೆ ತಡ ಮುಂದಿನ ತಿಂಗಳು ನಿಮ್ಮ ಮದುವೆ ಇದ್ದರೆ ಕೂಡಲೇ ನಿಮ್ಮ ಮದುವೆಯ ಬಗ್ಗೆ ಈ ವೆಬ್ಸೈಟ್ನಲ್ಲಿ ಮಾಹಿತಿಯನ್ನು ನೀಡಿ ವಿದೇಶಿಗರು ಕೂಡ ನಿಮ್ಮ ಮದುವೆಗೆ ಬಂದು ಪಾಲ್ಗೊಳ್ಳುವಂತೆ ಮಾಡಿ. ಇದನ್ನೂ ಓದಿ: Govt.Job: ವೇಷ ಬದಲಿಸಿ ದೇಶಕ್ಕಾಗಿ ಕೆಲಸ ಮಾಡುವ ಸಿಕ್ರೆಟ್ ಎಜೆಂಟ್ ಗಳಿಗೆ ಏನೆಲ್ಲಾ ಸೌಲಭ್ಯ ಸಿಗತ್ತೆ ಗೊತ್ತಾ? ಅಬ್ಬಾ ಸಿಕ್ಕರೆ ಇಂಥ ಕೆಲಸ ಸಿಗಬೇಕು!

Comments are closed.