Romantic partner: ಅಬ್ಬಬ್ಬಾ ಈ ರಾಶಿಯವರು ಎಂಥ ರೋಮ್ಯಾಂಟಿಕ್ ಗೊತ್ತಾ ಲೈಫ್ ಲಾಂಗ್ ಸಮಸ್ಯೆ ಇಲ್ಲದೆ ಇವರ ಜೊತೆಗೆ ಜೀವನ ಮಾಡಬಹುದು ನೋಡಿ!

Romantic partner: ಪ್ರೀತಿ ಮದುವೆ ವಿಚಾರದಲ್ಲಿ ಬಹಳ ಹಿಂದಿನ ಕಾಲದಿಂದಲೂ ಗಂಡು ಹೆಣ್ಣಿನ ರಾಶಿ ಚಕ್ರಗಳು ನಕ್ಷತ್ರಗಳು ಸರಿ ಹೊಂದಿದ್ದರೆ ಮಾತ್ರ ಮದುವೆ ಮಾಡಬೇಕು ಎನ್ನುವ ನಂಬಿಕೆ ಇದೆ. ಒಂದು ವೇಳೆ ಗಂಡ ಹೆಂಡತಿಯ ಜಾತಕ ಹೊಂದಾಣಿಕೆ ಆದರೆ ಅವರು ಜೀವನದ ಉದ್ದಕ್ಕೂ ಬಹಳ ಸಂತೋಷ ನೆಮ್ಮದಿಯಿಂದ ಜೀವನ ಮಾಡುತ್ತಾರೆ ಎನ್ನುವ ಮಾತು ಇದೆ. ಇನ್ನು ರಾಶಿ ಚಕ್ರದ ಆಧಾರದ ಮೇಲೆ ಯಾವ ವ್ಯಕ್ತಿ ರೋಮ್ಯಾಂಟಿಕ್ ಆಗಿ ಇರುತ್ತಾರೆ ಹಾಗೆ ಇದ್ದವರು ತಮ್ಮ ಸಂಗಾತಿಯನ್ನು ಹೇಗೆ ನೋಡಿಕೊಳ್ಳುತ್ತಾರೆ ಎಂಬುದನ್ನು ಕೂಡ ವಿವರಿಸಲಾಗುತ್ತದೆ. ಜ್ಯೋತಿಷಿಗಳು ಹೇಳುವ ಪ್ರಕಾರ ತುಂಬಾ ರೋಮ್ಯಾಂಟಿಕ್ ಆಗಿರುವ ರಾಶಿ ಚಕ್ರದ ಚಿಹ್ನೆಗಳು ಯಾವವು ಗೊತ್ತ? ಇದನ್ನೂ ಓದಿ: Govt.Job: ವೇಷ ಬದಲಿಸಿ ದೇಶಕ್ಕಾಗಿ ಕೆಲಸ ಮಾಡುವ ಸಿಕ್ರೆಟ್ ಎಜೆಂಟ್ ಗಳಿಗೆ ಏನೆಲ್ಲಾ ಸೌಲಭ್ಯ ಸಿಗತ್ತೆ ಗೊತ್ತಾ? ಅಬ್ಬಾ ಸಿಕ್ಕರೆ ಇಂಥ ಕೆಲಸ ಸಿಗಬೇಕು!

JOSH 2 | Live Kannada News
Romantic partner: ಅಬ್ಬಬ್ಬಾ ಈ ರಾಶಿಯವರು ಎಂಥ ರೋಮ್ಯಾಂಟಿಕ್ ಗೊತ್ತಾ ಲೈಫ್ ಲಾಂಗ್ ಸಮಸ್ಯೆ ಇಲ್ಲದೆ ಇವರ ಜೊತೆಗೆ ಜೀವನ ಮಾಡಬಹುದು ನೋಡಿ! https://sihikahinews.com/2023/06/21/which-zodiac-sign-very-romantic/

ವೃಷಭ ರಾಶಿ: ಇವರು ಬಹಳ ಎಕ್ಸ್ಪ್ರೆಸ್ಸಿವ್ ಆಗಿರುತ್ತಾರೆ. ಅದಕ್ಕೆ ತಮ್ಮ ಭಾವನೆಯನ್ನು ಬಹಳ ಉತ್ತಮವಾಗಿ ವ್ಯಕ್ತಪಡಿಸುತ್ತಾರೆ ತುಂಬಾ ರೋಮ್ಯಾಂಟಿಕ್ ಆಗಿದ್ದು ಸಂಗಾತಿಯನ್ನು ಹೆಚ್ಚು ಪ್ರೀತಿಸುತ್ತಾರೆ ಆಗಾಗ ಆಕರ್ಷಕ ಉಡುಗೊರೆಗಳನ್ನು ಕೂಡ ನೀಡುತ್ತಾರೆ. ಮಾನಸಿಕವಾಗಿ ಹಾಗೂ ದೈಹಿಕವಾಗಿ ಸಂಗಾತಿಯೊಂದಿಗೆ ಚೆನ್ನಾಗಿ ಬರೆಯುತ್ತಾರೆ.

ಕಟಕ ರಾಶಿ: ಇವರು ಬಹಳ ನಿಷ್ಠಾವಂತ ಪ್ರೇಮಿಗಳಾಗಿರುತ್ತಾರೆ. ಅದೆಂಥದ್ದೇ ಸಂದರ್ಭ ಬಂದರೂ ಪ್ರೀತಿಯನ್ನು ಮಾತ್ರ ಬಿಟ್ಟುಕೊಡುವುದಿಲ್ಲ ಸಂಗಾತಿಯ ಎಲ್ಲಾ ಇಷ್ಟ ಕಷ್ಟಗಳನ್ನು ತಿಳಿದುಕೊಂಡು ಅದನ್ನು ಈಡೇರಿಸುತ್ತಾರೆ ಸಂಗಾತಿಯನ್ನು ಬಹಳ ಪ್ರೀತಿಸುತ್ತಾರೆ ಜೀವನ ಪರ್ಯಂತ ಇವರನ್ನು ಮದುವೆ ಆದರೆ ಅನ್ಯೋನ್ಯವಾಗಿ ಇರಬಹುದು.

ತುಲಾ ರಾಶಿ: ಪ್ರೀತಿಸುವವರನ್ನು ಬಹಳ ಪ್ರೀತಿಯಿಂದ ನೋಡಿಕೊಳ್ಳುತ್ತಾರೆ. ಇವರಿಂದ ಸಂಗಾತಿಗೆ ಯಾವತ್ತೂ ಮೋಸ ಆಗುವುದಿಲ್ಲ ಪ್ರಣಯ ಹಾಗೂ ಲೈಂಗಿಕ ಜೀವನಕ್ಕೆ ಹೆಚ್ಚು ಮಹತ್ವ ನೀಡುತ್ತಾರೆ. ಅದಕ್ಕೆ ಹೆಚ್ಚು ಆಸಕ್ತಿಯನ್ನು ಹೊಂದಿರುತ್ತಾರೆ. ಸಂಗಾತಿಯ ಸೌಂದರ್ಯವನ್ನು ಪ್ರೀತಿಸುತ್ತಾರೆ ಗೌರವಿಸುತ್ತಾರೆ ಇವರು ಬಹಳ ರೋಮ್ಯಾಂಟಿಕ್ ಆಗಿರುವ ವ್ಯಕ್ತಿತ್ವ ಹೊಂದಿರುತ್ತಾರೆ.

ವೃಶ್ಚಿಕ ರಾಶಿ: ತಮ್ಮ ಭಾವನೆಗಳನ್ನು ವ್ಯಕ್ತಪಡಿಸುವಲ್ಲಿ ಇವರು ಮುಂಚೂಣಿಯಲ್ಲಿದ್ದಾರೆ. ಸಂಗಾತಿಯನ್ನು ಹೆಚ್ಚು ಪ್ರೀತಿಸುತ್ತಾರೆ. ಜೊತೆಗೆ ಹೆಚ್ಚು ರೋಮ್ಯಾಂಟಿಕ್ ಆಗಿರುತ್ತಾರೆ. ವೃಶ್ಚಿಕ ರಾಶಿ ಅವರ ಜೊತೆ ಇರುವವರ ಪ್ರಣಯ ಜೀವನ ಬಹಳ ಅದ್ಭುತವಾಗಿರುತ್ತದೆ ಲೈಂಗಿಕವಾಗಿಯೂ ಕೂಡ ಹೆಚ್ಚು ಬೆರೆಯುತ್ತಾರೆ.

ಮೀನ ರಾಶಿ: ನೀರಿನ ಸಂಕೇತ ಮೀನು. ಈ ರಾಶಿಯವರು ಬಹಳ ಕಾಳಜಿ ಹಾಗೂ ಸೂಕ್ಷ್ಮ ವ್ಯಕ್ತಿತ್ವ ಹೊಂದಿರುವವರು ಅವರು ಯಾರನ್ನಾದರೂ ಇಷ್ಟಪಟ್ಟರೆ ಅವರ ಬಗ್ಗೆ ಕೂಲಂಕುಶವಾಗಿ ತಿಳಿದುಕೊಳ್ಳುತ್ತಾರೆ. ನಂತರ ಅವರನ್ನು ಜೀವದಷ್ಟು ಪ್ರೀತಿಸುತ್ತಾರೆ. ಕ್ಯಾಂಡಲ್ ಲೈಟ್ ಡಿನ್ನರ್ ಕವನ ಬರೆಯುವುದು ಪತ್ರ ಬರೆಯುವುದು ಈ ರೀತಿ ಮಾಡಿ ತಮ್ಮ ಸಂಗಾತಿಯನ್ನು ಇಂಪ್ರೆಸ್ ಮಾಡುತ್ತಾರೆ. ಇವರು ಸದಾ ರೋಮ್ಯಾಂಟಿಕ್ ಆಗಿರುವ ವ್ಯಕ್ತಿತ್ವ ಹೊಂದಿರುವವರು ನಿಮ್ಮನ್ನು ಮೆಚ್ಚಿಸಲು ದಿನವಿಡಿ ಪ್ಲಾನ್ ಮಾಡುತ್ತಾರೆ. ಇದನ್ನೂ ಓದಿ: Gaming App: ನಿಮ್ಮ ಮಕ್ಕಳು ಗೇಮಿಂಗ್ ನಲ್ಲಿ ಮುಳುಗುತ್ತಿದ್ದಾರಾ?? ಹಾಗಿದ್ದರೆ ಉಷಾರ್- ಹಿಂದೂ ಧರ್ಮವನ್ನು ಕುಗ್ಗಿಸಲು ಗೇಮ್ ಅನ್ನು ಹೇಗೆ ಬಳಸಿಕೊಳ್ಳುತ್ತಿದ್ದಾರೆ ಗೊತ್ತೇ?

Comments are closed.