Abhishek marriage: ಕುಮಾರಣ್ಣನ, ನಿಖಿಲ್ ರಾಜಕೀಯದ ಕಾರಣಕ್ಕೆ ಅಭಿಷೇಕ್ ಮದುವೆಗೆ ಹೋಗದೆ ಇರುವಾಗ, ಸೈಲೆಂಟ್ ಆಗಿ ದೇವೇಗೌಡರು ಏನು ಮಾಡಿದ್ದಾರೆ ಗೊತ್ತೆ?

Abhishek marriage: ರೆಬೆಲ್ ಸ್ಟಾರ್ ಅಂಬರೀಶ್ ಹಾಗೂ ನಟಿ ಸುಮಲತಾ ಅವರ ಮಗ ಅಭಿಷೇಕ್ ಅಂಬರೀಷ್ ಹಾಗೂ ಅವಿವಾ ಬಿದಪ ಅವರ ಮದುವೆ ಒಂದು ವಾರದ ಹಿಂದೆ ಅದ್ಧೂರಿಯಾಗಿ ನಡೆಯಿತು. ಈ ಮದುವೆಗೆ ಸ್ಯಾಂಡಲ್ ವುಡ್, ಕಾಲಿವುಡ್, ಬಾಲಿವುಡ್ ಹಾಗೂ ಟಾಲಿವುಡ್ ನ ಹಲವು ಸೆಲೆಬ್ರಿಟಿಗಳು ಹಾಗೂ ರಾಜಕೀಯ ರಂಗದ ದಿಗ್ಗಜರು ಬಂದು ಹೊಸ ದಂಪತಿಗಳಿಗೆ ಶುಭ ಕೋರಿದ್ದಾರೆ.. ಈ ಜೋಡಿಯ ಮದುವೆಗೆ ದೇವೇಗೌಡ ಅವರ ಕುಟುಂಬ ಬರದೆ ಇದ್ದದ್ದು ಹಲವು ಅನುಮಾನಗಳಿಗೆ ದಾರಿ ಮಾಡಿಕೊಟ್ಟಿತ್ತು. ಇದನ್ನೂ ಓದಿ: KTM 200 Duke 2023: ಬಿಡುಗಡೆಯಾಗಿದೆ ಹೊಸ KTM -200, ಹೊಸ ಲುಕ್, ಬೆಲೆ ಹಾಗೂ ಹೊಸ ವೈಶಿಷ್ಯತೇ ಏನು ಗೊತ್ತೆ? ತಿಳಿದರೆ ಇಂದೇ ಬುಕ್ ಮಾಡ್ತೀರಾ.

ಅಭಿಷೇಕ್ ಅಂಬರೀಷ್ ಹಾಗೂ ನಿಖಿಲ್ ಕುಮಾರಸ್ವಾಮಿ ಒಳ್ಳೆಯ ಸ್ನೇಹಿತರಾಗಿದ್ದರು, ಹಾಗೆಯೇ ಕುಮಾರಸ್ವಾಮಿ ಅವರೊಡನೆ ಹಾಗೂ ಕುಮಾರಸ್ವಾಮಿ ಅವರೊಡನೆ ಅಂಬರೀಷ್ ಅವರ ಕುಟುಂಬಕ್ಕೆ ಒಳ್ಳೆಯ ಬಾಂಧವ್ಯವು ಇತ್ತು, ಹಾಗಾಗಿ ಇವರ ಕುಟುಂಬದಿಂದ ಒಬ್ಬರು ಕೂಡ ಅಭಿಷೇಕ್ ಅವಿವಾ ಮದುವೆಗೆ ಬರದೆ ಇದ್ದದ್ದು, ಹಲವು ಅನುಮಾನ ಮೂಡಿಸಿತ್ತು. ಆದರೆ ಈಗ ದೇವೇಗೌಡ ಅವರು ಪತ್ರದ ಮೂಲಕ ಹೊಸಜೋಡಿಗೆ ಶುಭಕೋರಿದ್ದಾರೆ.

“ಶ್ರೀಮತಿ ಸುಮಲತಾ ಅವರೇ, ನೀವು ಪ್ರೀತಿ ಪೂರ್ವಕ ಕಳುಹಿಸಿದ ನಿಮ್ಮ ಪುತ್ರನ ವಿವಾಹ ಮಹೋತ್ಸವದ ಆಹ್ವಾನ ಪತ್ರಿಕೆ ನನಗೆ ತಲುಪಿದೆ. ನಿಮ್ಮ ಅಭಿಮಾನಕ್ಕಾಗಿ ಧನ್ಯವಾದಗಳು. ಈ ಶುಭ ಸಂದರ್ಭದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿರುವ ಅಭಿಷೇಕ್ ಹಾಗೂ ಅವಿವ ನವ ಮಧುಮಕ್ಕಳಿಗೆ ಶುಭಾಶೀರ್ವಾದಗಳನ್ನು ಕೋರುತ್ತೇನೆ. ಮಧು ಮಕ್ಕಳ ಭವಿಷ್ಯ ಬದುಕು ಸುಖವಾಗಿರಲಿ, ನೆಮ್ಮದಿಯಾಗಿರಲಿ, ಸಂತೋಷವಾಗಿರಲೆಂದು ಹಾರೈಸುತ್ತೇನೆ..” ಎಂದು ದೇವೇಗೌಡರು ಪತ್ರದಲ್ಲಿ ಬರೆದಿದ್ದಾರೆ. ದೇವೇಗೌಡ ಅವರು ಎಲ್ಲಾ ಅನುಮಾನಗಳಿಗೆ ಈ ಮೂಲಕ ಉತ್ತರ ನೀಡಿದ್ದಾರೆ..

ದೇವೇಗೌಡ ಅವರು ಬರೆದಿರುವ ಪತ್ರದ ಫೋಟೋ ಹಾಗೂ ದೇವೇಗೌಡ ಅವರನ್ನು ಮದುವೆಗೆ ಆಹ್ವಾನಿಸಲು ಅಭಿಷೇಕ್ ಅಂಬರೀಶ್ ಅವರು ಹೋಗಿರುವ ಫೋಟೋವನ್ನು ಸುಮಲತಾ ಅವರು ಟ್ವೀಟ್ ಮಾಡಿದ್ದು, “ಅಭಿಷೇಕ್ ಅಂಬರೀಶ್ ಮತ್ತು ಅವಿವಾ ಅವರ ಮದುವೆಗೆ ಮತ್ತು ಆರತಕ್ಷತೆ ಸಮಾರಂಭಕ್ಕೆ ಶುಭ ಕೋರಿದ ಮಾಜಿ ಪ್ರಧಾನಿಗಳಾದ ಶ್ರೀ ಹೆಚ್.ಡಿ. ದೇವೇಗೌಡ ಅವರಿಗೆ ಶ್ರೀ ಅಂಬರೀಶ್ ಅವರ ಕುಟುಂಬದಿಂದ ಧನ್ಯವಾದಗಳು. ಹೊಸ ಜೀವನಕ್ಕೆ ಕಾಲಿಟ್ಟ ದಂಪತಿಗೆ ನಿಮ್ಮ ಹಾರೈಕೆ, ಆಶೀರ್ವಾದ ಸದಾ ಹೀಗೆಯೇ ಇರಲಿ..” ಎಂದು ಬರೆದಿದ್ದಾರೆ ನಟಿ ಸುಮಲತಾ. ಇದನ್ನೂ ಓದಿ: Govt.Job: ವೇಷ ಬದಲಿಸಿ ದೇಶಕ್ಕಾಗಿ ಕೆಲಸ ಮಾಡುವ ಸಿಕ್ರೆಟ್ ಎಜೆಂಟ್ ಗಳಿಗೆ ಏನೆಲ್ಲಾ ಸೌಲಭ್ಯ ಸಿಗತ್ತೆ ಗೊತ್ತಾ? ಅಬ್ಬಾ ಸಿಕ್ಕರೆ ಇಂಥ ಕೆಲಸ ಸಿಗಬೇಕು!

Comments are closed.