Fake App: ಅಬ್ಬಾ ಈ ಆಪ್ ಗಳನ್ನು ನೋಡಿದ್ರೆ ನಕಲಿ ಅಂತ ಅನ್ನಿಸಲ್ಲ, ಒಮ್ಮೆ ಡೌನ್ ಲೋಡ್ ಮಾಡಿದ್ರೆ ಮುಗಿತು ಜೀವನವೇ ಸರ್ವನಾಶ!

Fake App: ಈಗ ಇಂಟರ್ನೆಟ್ ಬಳಕೆ ಹೆಚ್ಚಾಗುತ್ತಿರುವ ಹಾಗೆಯೇ ಅದರಿಂದ ತೊಂದರೆಗಳು ಕೂಡ ಅಷ್ಟೇ ಜಾಸ್ತಿಯಾಗುತ್ತಿದೆ. ಈಗ ಮಾಲ್ವೇರ್ (Malware) ಗಳ ಮೂಲಕ ನಿಮ್ಮ ಸಿಸ್ಟಮ್ (System) ಅನ್ನು ಹ್ಯಾಕ್ ಮಾಡುವ ಪ್ರಕ್ರಿಯೇ ನಡೆಯುತ್ತಿದೆ. ನಿಮ್ಮ ಮೊಬೈಲ್ (Mobile) ಅಥವಾ ಕಂಪ್ಯೂಟರ್ (Computer) ಇಂದ ನಿಮ್ಮ ಡೇಟಾ ಕದಿಯಲಾಗುತ್ತದೆ. ಇದು ಕಂಪ್ಯೂಟರ್ ಮಾತ್ರವಲ್ಲ ಈಗ ಮೊಬೈಲ್ ಗಳಿಗೂ ಬಂದಿದೆ. ನಾವು ಬಳಸುವ ಯೂಟ್ಯೂಬ್, ನೆಟ್ಫ್ಲಿಕ್ಸ್ ಥರವೇ ಕಾಣುವ ಅಪ್ಲಿಕೇಶನ್ (Application) ಗಳನ್ನು ತಯಾರಿಸಲಾಗುತ್ತಿದೆ..

JOSH 2 | Live Kannada News
Fake App: ಅಬ್ಬಾ ಈ ಆಪ್ ಗಳನ್ನು ನೋಡಿದ್ರೆ ನಕಲಿ ಅಂತ ಅನ್ನಿಸಲ್ಲ, ಒಮ್ಮೆ ಡೌನ್ ಲೋಡ್ ಮಾಡಿದ್ರೆ ಮುಗಿತು ಜೀವನವೇ ಸರ್ವನಾಶ! https://sihikahinews.com/2023/06/21/be-careful-about-dogerrat-fake-app/

ನೋಡಲು ಒರಿಜಿನಲ್ ಹಾಗೆ ಕಂಡರು ಇದು ನಕಲಿ ಅಪ್ಲಿಕೇಶನ್ ಆಗಿರುತ್ತದೆ..ಇವುಗಳನ್ನು ಮೊಬೈಲ್ ಗೆ ಇನ್ಸ್ಟಾಲ್ ಮಾಡಿದರೆ, ನಿಮ್ಮ ಮೊಬೈಲ್ ನ ಸೂಕ್ಷ್ಮ ಡೇಟಾ, ಮನರಂಜನೆ, ಬ್ಯಾಂಕ್ ವ್ಯವಹಾರ ಇದೆಲ್ಲದರ ಮೇಲೆ ಪರಿಣಾಮ ಬೀರುತ್ತದೆ..ಈ ಥರ ಸೈಬರ್ ಕ್ರೈಮ್ ಮಾಡುವವರು ಏನೆಲ್ಲಾ ತೊಂದರೆ ಮಾಡಬಹುದು ಎನ್ನುವ ಬಗ್ಗೆಯೇ ಚಿಂತಿಸುತ್ತಿರುತ್ತಾರೆ..ಇದರಿಂದ ನಿಮ್ಮ ಡಿವೈಸ್ ಅನ್ನು ಹೇಗೆ ಪ್ರೊಟೆಕ್ಟ್ ಮಾಡಿಕೊಳ್ಳಬಹುದು? ಈಗ ಹೊಸದಾಗಿ ಬಂದಿರುವ ಮಾಲ್ವೇರ್ DogerRAT (remote access trogen) ಇದರ ಹೆಸರು. ಇದನ್ನು ಒರಿಜಿನಲ್ ಅಪ್ಲಿಕೇಶನ್ ಗಳ ಥರವೇ ಡಿಸೈನ್ ಮಾಡಿರಲಾಗುತ್ತದೆ.

ಈ ನಕಲಿ ಅಪ್ಲಿಕೇಶನ್ ಮಾಲ್ವೇರ್ RogedRAT ಡೇಟಾ ಕಳ್ಳತನ, ಅಧಿಕೃತ ಮಾಹಿತಿ ಇಲ್ಲದೆ ಲಾಗಿನ್ ಆಗುವುದು, ಫೇಕ್ ಜಾಹೀರಾತುಗಳನ್ನು ಹರಡುವುದು, ಇಂಥದ್ದನ್ನೆಲ್ಲ ಮಾಡಲಾಗುತ್ತದೆ. ನಿಮ್ಮ ಫೋನ್ ನ ಸೆನ್ಸಿಟಿವ್ ಮಾಹಿತಿಗಳನ್ನು ಕಳ್ಳತನ ಮಾಡಿ, ನಿಮ್ಮ ಮೊಬೈಲ್ ಸೆಕ್ಯೂರಿಟಿ ಅನ್ನು ವೀಕ್ ಮಾಡುತ್ತಾರೆ..ಈ ಮಾಲ್ವೇರ್ ಬ್ಯಾಂಕಿಂಗ್, ದುಡ್ಡಿನ ಸೇವೆ, ಇನ್ಷುರೆನ್ಸ್, ಈ ಕಾರ್ಮರ್ಸ್ ಇದೆಲ್ಲದರ ಮೇಲೆ ಎಫೆಕ್ಟ್ ಮಾಡುತ್ತದೆ. ಒಂದು ಸಾರಿ ಫೋನ್ ಗೆ ಇದು ಇನ್ಸ್ಟಾಲ್ ಆದರೆ, ನಿಮ್ಮ ಬ್ಯಾಂಕ್ ಡೀಟೇಲ್ಸ್, ಮೆಸೇಜ್ ಇದೆಲ್ಲವನ್ನು ಕಂಟ್ರೋಲ್ ಮಾಡುತ್ತದ. ನಿಮ್ಮ ಕಾಲ್ ರೇಕಾರ್ಡ್ಸ್, ಮೆಸೇಜ್ ಇದೆಲ್ಲವು ಅದರ ಕಂಟ್ರೋಲ್ ನಲ್ಲಿ ಇಡುತ್ತದೆ. ಸ್ಕ್ಯಾಮ್ ಮೆಸೇಜ್ ಗಳನ್ನು ಬೇರೆಯವರಿಗೆ ಕಳಿಸುವುದು, ನಿಮ್ಮ ಫೋನ್ ಇಂದ ಹಣಕಾಸು ವ್ಯವಹಾರ ಇದೆಲ್ಲವು ಅವರ ಕೈಯಲ್ಲಿ ಇರುತ್ತದೆ.

ಇದೊಂದು ಮೋಸದ ಜಾಲ ಆಗಿದ್ದು, ಇದರ ಬಗ್ಗೆ ನಿಮಗೆ ಸಾಕಷ್ಟು ತೊಂದರೆ ಕೊಡುತ್ತದೆ. ಇದರಿಂದ ನಿಮ್ಮ ಫೋನ್ ಅನ್ನು ಹೇಗೆ ಸುರಕ್ಷಿತವಾಗಿ ಇರಿಸಿಕೊಳ್ಳಬಹುದು ಎಂದು ತಿಳಿಸುತ್ತೇವೆ ನೋಡಿ..
*ಗೊತ್ತಿರದ ಲಿಂಕ್ ಹಾಗೂ ಅದರ ಜೊತೆಗಿರುವ ಫೈಲ್ ಗಳನ್ನು ಓಪನ್ ಮಾಡಬೇಡಿ.

*ಮೊಬೈಲ್ ಅನ್ನು ಆಗಾಗ ಅಪ್ಡೇಟ್ ಮಾಡುತ್ತೀರಿ. *ವೈರಸ್ ಬರದ ಹಾಗೆ ಕ್ರಮಗಳನ್ನು ಕೈಗೊಳ್ಳಿ.

*ಡೌಟ್ ಬರುವ ಲಿಂಕ್ ಮತ್ತ ಫೇಲ್ ಗಳ ಬಗ್ಗೆ ಗಮನ ಹರಿಸಿ.

*ಮಾಲ್ವೇರ್ ಅಟ್ಯಾಕ್ ಬಗ್ಗೆ ಹೆಚ್ಚು ವಿಷಯ ತಿಳಿದುಕೊಳ್ಳಿ.

*ವಿಶ್ವಾಸ ಇರುವಲ್ಲಿ ಮಾತ್ರ ಅಪ್ಲಿಕೇಶನ್ ಡೌನ್ಲೋಡ್ ಮಾಡಿ.

Comments are closed.