Virat kohli: ವಿರಾಟ್ ಕೊಹ್ಲಿ ದೇಶದ ಶ್ರಿಮಂತರ ಪಟ್ಟಿ ಸೇರಿದ್ದು ಹೇಗೆ ಗೊತ್ತಾ? ಕ್ರಿಕೆಟ್ ಮಾತ್ರ ಅಲ್ಲ, ಇವರ ಇನ್ಕಂ ಸೋರ್ಸ್ ಏನು ಗೊತ್ತಾ?

Virat kohli: ಟೀಮ್ ಇಂಡಿಯಾದ ಮಾಜಿ ಕ್ಯಾಪ್ಟನ್ ವಿರಾಟ್ ಕೊಹ್ಲಿ (Virat kohli) ಅವರು ವಿಶ್ವದ ಅತ್ಯಂತ ಜನಪ್ರಿಯ ಕ್ರಿಕೆಟರ್ ಗಳಲ್ಲಿ ಒಬ್ಬರು. ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಅವರನ್ನು ಮದುವೆಯಾಗಿದ್ದು, ಈ ಜೋಡಿಗೆ ವಮಿಕಾ ಹೆಸರಿನ ಮುದ್ದಾದ ಮಗುವಿದೆ. ವಿರಾಟ್ ಕೋಹ್ಲಿ ಅವರು ಅತ್ಯಂತ ಶ್ರೀಮಂತ ಸೆಲೆಬ್ರಿಟಿಗಳಲ್ಲಿ ಒಬ್ಬರು. ಕೊಹ್ಲಿ ಅವರು ಕ್ರಿಕೆಟರ್ ಆಗಿ ಜೊತೆಗೆ ಜಾಹೀರಾತುಗಳಲ್ಲಿ ನಟಿಸುವ ಮೂಲಕ ಕೋಟಿಗಟ್ಟಲೆ ಹಣ ಗಳಿಸುತ್ತಾರೆ. ವಿರಾಟ್ ಅವರ ಒಟ್ಟು ಆಸ್ತಿ ಎಷ್ಟು ಗೊತ್ತಾ?

JOSH 2 | Live Kannada News
Virat kohli: ವಿರಾಟ್ ಕೊಹ್ಲಿ ದೇಶದ ಶ್ರಿಮಂತರ ಪಟ್ಟಿ ಸೇರಿದ್ದು ಹೇಗೆ ಗೊತ್ತಾ? ಕ್ರಿಕೆಟ್ ಮಾತ್ರ ಅಲ್ಲ, ಇವರ ಇನ್ಕಂ ಸೋರ್ಸ್ ಏನು ಗೊತ್ತಾ? https://sihikahinews.com/2023/06/19/virat-kohli-income/

ಇನ್ಸ್ಟಾಗ್ರಾಮ್ (Instagram) ನಲ್ಲಿ ಕೊಹ್ಲಿ ಅವರಿಗೆ ಬರೋಬ್ಬರಿ 252 ಮಿಲಿಯನ್ ಫಾಲೋವರ್ಸ್ ಇದ್ದಾರೆ. ಕೊಹ್ಲಿ ಅವರು ಟೀಮ್ ಇಂಡಿಯಾದಲ್ಲಿ A ಗ್ರೇಡ್ ಆಟಗಾರ ಬಿಸಿಸಿಐ ಜೊತೆಗಿನ ಒಪ್ಪಂದದಿಂದ ಕೊಹ್ಲಿ ಅವರು ವರ್ಷಕ್ಕೆ 7 ಕೋಟಿ ಗಳಿಸುತ್ತಾರೆ. ಒಂದು ಟೆಸ್ಟ್ ಮ್ಯಾಚ್ ಗೆ 15 ಲಕ್ಷ, ಓಡಿಐ ಪಂದ್ಯಕ್ಕೆ 6 ಲಕ್ಷ ಹಾಗೂ ಟಿ20 ಪಂದ್ಯಕ್ಕೆ 3ಲಕ್ಷ ಗಳಿಸುತ್ತಾರೆ. ಇನ್ನು ಐಪಿಎಲ್ ನಲ್ಲಿ ಆರ್ಸಿಬಿ (RCB) ತಂಡದ ಪ್ರಮುಖ ಆಟಗಾರ ಆಗಿರುವ ಕೊಹ್ಲಿ ಅವರಿಗೆ ಆರ್ಸಿಬಿ ಇಂದ ತಿಂಗಳಿಗೆ 15 ಕೋಟಿ ಆದಾಯ ಬರುತ್ತದೆ. ಇದನ್ನೂ ಓದಿ: Film News: ’ಆದಿ ಪುರುಷ್’ ಥಿಯೇಟರ್ ನಲ್ಲೂ ಮೊಳಗಿದ’ ಜೈಶ್ರಿರಾಮ್’ ಘೋಷಣೆ, ಗಳಿಕೆ ಹೆಚ್ಚಳಕ್ಕೂ ಕಾರಣವಾಯ್ತಾ? ಒಟ್ಟೂ ಗಳಿಕೆ ಇಷ್ಟೋಂದಾ?

ಅಷ್ಟೇ ಅಲ್ಲದೆ ಕೊಹ್ಲಿ ಅವರು ಸುಮಾರು 18 ಬ್ರ್ಯಾಂಡ್ ಗಳಿಗೆ ಬ್ರ್ಯಾಂಡ್ ಅಂಬಾಸಿಡರ್ ಆಗಿದ್ದಾರೆ., ಅವುಗಳಿಂದ ವರ್ಷಕ್ಕೆ 7.5 ಇಂದ 10 ಕೋಟಿ ಗಳಿಸುತ್ತಾರೆ. ಬ್ಲೂ ಟ್ರೈಬ್, ಯೂನಿವರ್ಸಲ್ ಸ್ಪೋರ್ಟ್ಸ್ ಬಜ್, ಎಂಪಿಎಲ್, ಕಾನವೋ ಸೇರಿದಂತೆ 7 ಸ್ಟಾರ್ಟ್ ಅಪ್ ಗಳಲ್ಲಿ ಹೂಡಿಕೆ ಮಾಡಿದ್ದಾರೆ. ಈ ಕ್ರೀಡೆ ಉದ್ಯಮದಲ್ಲಿ ಅತಿಹೆಚ್ಚು ಸಂಪಾದನೆ ಪಡೆಯುವುದು ವಿರಾಟ್ ಕೊಹ್ಲಿ ಅವರೇ. ಬ್ರಾಂಡ್ ಜಾಹೀರಾತುಗಳನ್ನು 175ಕೋಟಿ ಗಳಿಸಿದ್ದಾರೆ.

ಕೊಹ್ಲಿ ಅವರು ಇನ್ಸ್ಟಾಗ್ರಾಮ್ ನಲ್ಲಿ ಒಂದು ಪೋಸ್ಟ್ ಗೆ 7.9ಕೋಟಿ ಸಂಭಾವನೆ ಪಡೆಯುತ್ತಾರೆ. ಟ್ವಿಟರ್ ಪೋಸ್ಟ್ ಗೆ 2.5ಕೋಟಿ ಚಾರ್ಜ್ ಮಾಡುತ್ತಾರೆ. ಇನ್ನು ಮುಂಬೈ ನಲ್ಲಿ 34ಕೋಟಿ ಬೆಲೆ ಬಾಳುವ ಮನೆ ಹೊಂದಿದ್ದು, ಗುರುಗ್ರಾಮ್ ನಲ್ಲಿ 80ಕೋಟಿ ಬೆಲೆ ಬಾಳುವ ಮನೆ ಹಾಗೂ 31 ಕೋಟಿ ಬೆಲೆ ಬಾಳುವ ಹೊಂದಿದ್ದಾರೆ. ಇಷ್ಟೇ ಅಲ್ಲದೆ, ಎಫ್.ಸಿ ಗೋವಾ, ಟೆನಿಸ್ ತಂಡಗಳ ಮಾಲೀಕರಾಗಿದ್ದಾರೆ ಕೊಹ್ಲಿ. ಇವರ ಒಟ್ಟು ಆಸ್ತಿ ₹1050 ಕೋಟಿ ರೂಪಾಯಿ ಆಗಿದೆ.

Comments are closed.