Arecanut Rate: ಹಳದಿ ಎಲೆ ರೋಗ ದಿಂದ ತತ್ತರಿಸುತ್ತಿರುವ ಮಲೆನಾಡ ಅಡಿಕೆ ಬೆಳೆಗಾರರಿಗೆ ಗುಡ್ ನ್ಯೂಸ್: ಹೆಚ್ಚುತ್ತಿದೆ ಅಡಿಕೆ ದರ! ಇಂದಿನ ಧಾರಣೆ ತಿಳಿಯಿರಿ

Arecanut Rate: ಇತ್ತೀಚಿಗೆ ಅಡಿಕೆ ದರದಲ್ಲಿ ಸಾಕಷ್ಟು ಏರುಪೇರು ಕಾಣಿಸುತ್ತಿದೆ ಕೆಲವೊಮ್ಮೆ ಅಡಕೆ ದರ ತುಸು ಜಾಸ್ತಿ ಏನು ಆಗಿದೆ ಇನ್ನು ಕೆಲವೊಮ್ಮೆ ಪಾತಾಳಕ್ಕೆ ಎಳೆಯುತ್ತದೆ ಆದರೆ ಇದೀಗ ಅಡಿಕೆ ಬೆಳೆಗಾರರಿಗೆ ಖುಷಿಯ ವಿಚಾರ ಸಿಕ್ಕಿದ್ದು, ಶುಕ್ರವಾರ ಅಡಿಕೆ ಧಾರಣೆಯಲ್ಲಿ ಏರಿಕೆ ಕಂಡಿದೆ. ಕಳೆದ ವಾರ 57,000 ಗಡಿ ದಾಟಿದ್ದ ಅಡಿಕೆ ಧಾರಣೆ ಕೊಂಚ ಕುಸಿತವನ್ನು ಕಂಡಿದೆ ಆದರೆ ಕೆಲವು ಪ್ರದೇಶಗಳಲ್ಲಿ ಅಡಿಕೆ ಉತ್ತಮ ಬೆಲೆ ಸಿಗುತ್ತಿರುವುದು ರೈತರಲ್ಲಿ ಸಂತಸ ಮೂಡಿಸಿದೆ.

ಈ ಬಾರಿ ಮಲೆನಾಡು ಭಾಗದಲ್ಲಿ ವಿಪರೀತ ಮಳೆಯಿಂದಾಗಿ ಕೊಳೆ ರೋಗ ಕಾಣಿಸಿಕೊಂಡಿದೆ. ಅಷ್ಟೇ ಅಲ್ಲದೆ ಯೆಲ್ಲಾಪುರ, ಸಿದ್ದಾಪುರ, ಸಿರಸಿ ಮೊದಲಾದ ಪ್ರದೇಶಗಳಲ್ಲಿ ಹಳದಿ ಎಲೆ ರೋಗ ಅಡಿಕೆಗೆ ಭಾದಿಸುತ್ತಿದ್ದು, ಅಡಿಕೆ ಬೆಳೆಗಾರರು ತತ್ತರಿಸಿ ಹೋಗಿದ್ದಾರೆ. ಆದರೆ ಇವತ್ತಿನ ಅಡಿಕೆ ಧಾರಣೆಯ ಬೆಲೆ ನೋಡುವುದಾದರೆ ಸ್ವಲ್ಪ ಮಟ್ಟಿಗೆ ಹೆಚ್ಚಳ ಕಂಡಿದೆ ಎನ್ನುಬಹುದು.

ಇಂದಿನ ಅಡಿಕೆ ಧಾರಣೆ:

ಕೊಪ್ಪ – ರಾಶಿ ಅಡಿಕೆ – 46899 ರೂಪಾಯಿಗಳು

ದಾವಣಗೆರೆ – ರಾಶಿ ಅಡಿಕೆ – 52,869 ರೂಪಾಯಿಗಳು

ಸಿದ್ದಾಪುರ – ರಾಶಿ ಅಡಿಕೆ- 50, 999 ರೂಪಾಯಿಗಳು.

ಸಿರಸಿ – ರಾಶಿ ಅಡಿಕೆ- 50,469 ರೂಪಾಯಿಗಳು

ಯಲ್ಲಾಪುರ ರಾಶಿ ಅಡಿಕೆ – 55,825 ರೂಪಾಯಿಗಳು

ಬಂಟ್ವಾಳ – ಹಳೆದು – 46 – 49,000 ರೂಪಾಯಿಗಳು

ಬಂಟ್ವಾಳ -ಕೋಕಾ -12,500 ರಿಂದ 25,000 ರೂಪಾಯಿಗಳು

ಮಂಗಳೂರು- ಹೊಸದು -25,876 ರಿಂದ 31,000 ರೂಪಾಯಿಗಳು

ಪುತ್ತೂರು – ಹೊಸದು -ರೂ.34,000 ಗಳಿಂದ 42,500 ರೂಪಾಯಿಗಳು

ಪುತ್ತೂರು -ಕೋಕಾ -11000, -26,000 ರೂಪಾಯಿಗಳು

ಶಿವಮೊಗ್ಗ – ರಾಶಿ ಅಡಿಕೆ – 50219 ರೂಪಾಯಿಗಳು

ತುಮಕೂರು – ರಾಶಿ ಅಡಿಕೆ – 54,050 ರೂಪಾಯಿಗಳು

Comments are closed.