Kannada Astrology: ಅಬ್ಬಬ್ಬ ಯಾರಿಗೂ ಬೇಡಪ್ಪ ಈ ಅಂಗಾರಕ ಯೋಗ ಎಂಥ ಶ್ರೀಮಂತನು ಕೂಡ ಬಡವನಾಗಿಬಿಡುತ್ತಾನೆ! ಯಾರ ಜಾತಕದಲ್ಲಿ ಇರುತ್ತೆ ಗೊತ್ತಾ ಈ ಯೋಗ?

Kannada Astrology: ಮಂಗಳದೊಂದಿಗೆ ರಾಹು ಮತ್ತು ಕೇತು ಸೇರಿದಾಗ ಅಂಗಾರಕ ಯೋಗ ಸೃಷ್ಟಿಯಾಗುತ್ತದೆ. ಅಂಗಾರಕ ಯೋಗ ಯಾವ ರಾಶಿಯಲ್ಲಿ ಯಾರ ಜಾತಕದಲ್ಲಿ ಇದೆಯೋ ಅವರು ನಾಶವಾಗಿ ಹೋಗುತ್ತಾರೆ ಎಂದು ವೈದಿಕ ಶಾಸ್ತ್ರದಲ್ಲಿ ಹೇಳಲಾಗಿದೆ. ವೈದಿಕ ಶಾಸ್ತ್ರದಲ್ಲಿ ಹೇಳಿರುವ ಪ್ರಕಾರ ಸಾಕಷ್ಟು ಮಂಗಳಕರ ಯೋಗಗಳು ಹಾಗೂ ಇನ್ನೂ ಕೆಲವು ನಕಾರಾತ್ಮಕ ಪರಿಣಾಮವನ್ನು ಉಂಟುಮಾಡುವಂತಹ ಯೋಗಗಳು ಸೃಷ್ಟಿಯಾಗುತ್ತವೆ. ಕೆಲವು ಯೋಗಗಳು ಮನುಷ್ಯನ ಪ್ರಗತಿಯನ್ನು ತಂದು ಕೊಟ್ಟರೆ ಇನ್ನೂ ಕೆಲವು ಉಪಯೋಗಗಳು ಹಾನಿಯನ್ನು ಉಂಟುಮಾಡುತ್ತವೆ. ಹೀಗೆ ಮಂಗಳನ ಜೊತೆಗೆ ರಾಹು ಹಾಗೂ ಕೇತು ಸೇರಿಕೊಂಡಾಗ ಸೃಷ್ಟಿಯಾಗುವ ಅಂಗಾರಕ ಯೋಗ ಯಾರ ಜಾತಕದಲ್ಲಿದೆಯೋ ಅವರಿಗೆ ಗೆಲುವು ಅಥವಾ ಯಶಸ್ಸು ಸಿಗುವುದಿಲ್ಲ.

ರಾಹು ಮತ್ತು ಮಂಗಳ ಶತ್ರುಗಳು ಎಂದೇ ಹೇಳಬಹುದು. ಹಾಗಾಗಿ ಇವರಿಬ್ಬರಿಂದ ಸೃಷ್ಟಿಯಾಗುವ ಅಂಗಾರಕ ಯೋಗ ಹಲವರ ಜಾತಕದಲ್ಲಿ ಇದ್ದು ಸಮಸ್ಯೆಯನ್ನು ಉಂಟುಮಾಡುತ್ತದೆ. ಈ ಯೋಗ ಯಾರ ಜಾತಕದಲ್ಲಿ ಇದೆಯೋ ಅಂತವರು ಬಹಳ ಬೇಗ ಕೋಪಗೊಳ್ಳುತ್ತಾರೆ. ಹಿಂಸಾತ್ಮಕ ಪ್ರವೃತ್ತಿಯನ್ನು ಹೊಂದಿರುತ್ತಾರೆ. ಸಹೋದರ ಹಾಗೂ ಸ್ನೇಹಿತರ ಜೊತೆಗೆ ಭಿನ್ನಾಭಿಪ್ರಾಯವನ್ನು ಸೃಷ್ಟಿಸಿಕೊಳ್ಳುತ್ತಾರೆ.

ಅಪಘಾತದ ಭಯವೂ ಇರುತ್ತದೆ, ಆರೋಗ್ಯದಲ್ಲಿ ಏರುಪೇರು ಉಂಟಾಗಬಹುದು. ಯಾವುದೇ ಕೆಲಸಕ್ಕೆ ಕೈ ಹಾಕಿದರೂ ಆ ಕೆಲಸ ಈಡೇರುವುದೇ ಇಲ್ಲ. ಯಾರ ಜಾತಕದಲ್ಲಿ ಮಂಗಳ ಹಾಗೂ ರಾಹುವಿನ ಸಂಯೋಗ ಇದೆಯೋ ಅಂತವರು ನ್ಯಾಯಾಲಯದ ಪ್ರಕರಣಗಳಲ್ಲಿ ಸಿಲುಕಿ ಕೊಳ್ಳುತ್ತಾರೆ. ರಾಹು ಹಾಗೂ ಮಂಗಳನ ಸಂಯೋಗ 12ನೇ ಮನೆಯಲ್ಲಿ ಆದರೆ ಅಂಥವರು ಜೈಲು ಶಿಕ್ಷೆ ಅನುಭವಿಸುವ ಸಂದರ್ಭ ಬರಬಹುದು. ಶ್ರೀಮಂತನೂ ಕೂಡ ಬಡವನಾಗುತ್ತಾನೆ.

ಅಂಗಾರಕ ಯೋಗಕ್ಕೆ ಪರಿಹಾರಗಳು
ಮಂಗಳ ಹಾಗೂ ರಾಹುವಿನ ಸಂಯೋಗದಿಂದ ಉಂಟಾಗುವ ಅಂಗಾರಕ ಯೋಗವನ್ನು ತಪ್ಪಿಸಲು ಸಾಧ್ಯವಿಲ್ಲ ಆದರೆ ಈ ಯೋಗದಿಂದ ಉಂಟಾಗುವ ನಕಾರಾತ್ಮಕ ಪರಿಣಾಮವನ್ನು ತಡೆಗಟ್ಟಲು ಮಂಗಳ ಹಾಗೂ ರಾಹುವಿನ ಮಂತ್ರವನ್ನು ದಿನವೂ ಪಠಿಸಬೇಕು. ಶನಿವಾರದಂದು ಕಪ್ಪು ಉದ್ದನ್ನು ಧ್ಯಾನ ಮಾಡಿ. ಮಂಗಳವಾರ ಮಂಗಗಳಿಗೆ ಆಹಾರ ನೀಡುವುದು ಒಳ್ಳೆಯದು. ಧ್ಯಾನ ಮಾಡುವುದು ಹಾಗೂ ದೇವರ ಪೂಜೆ ಪುನಸ್ಕಾರಾದಿಗಳಲ್ಲಿ ತೊಡಗಿಕೊಳ್ಳುವುದು ಉತ್ತಮ. ಸಯಮವನ್ನು ತೆಗೆದುಕೊಳ್ಳಿ ಈ ಸಮಯವೂ ಕೂಡ ಕಳೆದು ಹೋಗುತ್ತದೆ ಹಾಗಾಗಿ ನಕರತ್ಮಕ ಯೋಚನೆಗಳಿಗಿಂತಲೂ ಮುಂದೆ ಬರುವ ಸಕಾರಾತ್ಮಕ ದಿನಗಳ ಬಗ್ಗೆ ಚಿಂತನೆ ನಡೆಸಿ.

ಅಂಗಾರಕ ಯೋಗದ ಭಯವಿದ್ದವರು ಬೆಳ್ಳಿ ಬಳೆಯನ್ನು ಧರಿಸುವುದು ಒಳ್ಳೆಯದು ಅಥವಾ ಪರ್ಸನಲ್ಲಿ ಚಿಕ್ಕ ಬೆಳ್ಳಿ ತುಂಡನ್ನು ಇಟ್ಟುಕೊಳ್ಳಬಹುದು. ಆದರೆ ಚಿನ್ನ ಧರಿಸುವುದು ಸೂಕ್ತವಲ್ಲ. ಇನ್ನು ಈ ಸಮಯದಲ್ಲಿ ಹನುಮಾನ್ ಚಾಲೀಸಾ ಪಠಣ ಮಾಡಿದರು ಕೂಡ ಒಳ್ಳೆಯದಾಗುತ್ತದೆ.

Comments are closed.