Marriage: ಇಲ್ಲಿ ಯಾರ ಹೆಂಡತಿಯನ್ನು ಬೇಕಾದ್ರೆ ಎತ್ಕೊಂಡು ಮದುವೆಯಾಗಬಹುದು- ಅಡ್ಡ ಯಾರು ಬರಲ್ಲ. ಎಲ್ಲಿ, ಯಾಕೆ ಗೊತ್ತೇ?

Marriage: ಸ್ನೇಹಿತರೆ ಇಡೀ ಪ್ರಪಂಚದಲ್ಲಿ ಮದುವೆಗೆ ಅದರದೇ ಆದಂತಹ ಬೇರೆ ಬೇರೆ ವಿಭಿನ್ನವಾದ ಆಚರಣೆ ಹಾಗೂ ಮಾಡುವ ವಿಧಾನ ವಿಭಿನ್ನವಾಗಿರುತ್ತದೆ. ಸ್ಥಳದಿಂದ ಸ್ಥಳಕ್ಕೆ ಧರ್ಮದಿಂದ ಧರ್ಮಕ್ಕೆ ಮದುವೆ ಆಗುವ ರೀತಿ ವಿಭಿನ್ನವಾಗಿರುತ್ತದೆ ಆದರೆ ಪ್ರತಿಯೊಂದು ಧರ್ಮದ ಆಚರಣೆಗಳಲ್ಲಿ ಕೂಡ ಮದುವೆ ಅತ್ಯಂತ ಪ್ರಮುಖವಾದ ಭಾಗವಾಗಿರುತ್ತದೆ. ಪ್ರತಿಯೊಬ್ಬರು ಕೂಡ ಜೀವನದಲ್ಲಿ ಒಂದಲ್ಲ ಒಂದು ಕಾಲಘಟ್ಟದಲ್ಲಿ ಮದುವೆ ಆಗಲೇಬೇಕು ಅನ್ನೋದು ಅಲಿಖಿತ ಮನುಷ್ಯ ಧರ್ಮ. ಬೇರೆ ಬೇರೆ ದೇಶಗಳಿಗೆ ಹೋಲಿಸಿದರೆ ನಮ್ಮ ದೇಶದಲ್ಲಿ ಕೂಡ ಸ್ಥಳದಿಂದ ಸ್ಥಳಕ್ಕೆ ಮದುವೆಯಾಗುವಂತಹ ಆಚರಣೆ ಬೇರೆ ಬೇರೆ ರೀತಿಯಾಗಿ ನಾವು ಕಾಣಬಹುದಾಗಿದೆ.

ಆದರೆ ಇವತ್ತಿನ ಲೇಖನದಲ್ಲಿ ನಾವು ಒಂದು ದೇಶದಲ್ಲಿ ನಡೆಯುವಂತಹ ವಿಚಿತ್ರ ಮದುವೆಯ ಪದ್ಧತಿಯ ಬಗ್ಗೆ ಹೇಳಲು ಹೊರಟಿದ್ದೇವೆ. ಈ ದೇಶದಲ್ಲಿ ಬೇರೆಯವರ ಹೆಂಡತಿಯನ್ನು ಎತ್ತಿಕೊಂಡು ಹೋಗಿ ಮದುವೆ ಆಗ್ತಾರಂತೆ. ಪಶ್ಚಿಮ ಆಫ್ರಿಕಾದ ನೈಜರ್ ಎನ್ನುವ ಪ್ರದೇಶದಲ್ಲಿ ವಾಸಿಸುವಂತಹ ವೊಡಾಬೆ ಜನಾಂಗದ ಬಗ್ಗೆ ಇವತ್ತಿನ ಈ ಆರ್ಟಿಕಲ್ ನಲ್ಲಿ ನಾವು ಹೇಳೋದಕ್ಕೆ ಹೊರಟಿರುವುದು. ಇವರ ಮದುವೆಯಾಗುವ ರೀತಿ ವಿಚಿತ್ರ ಸಂಪ್ರದಾಯವನ್ನು ಒಳಗೊಂಡಿದೆ. ಇವರು ಮದುವೆ ಆಗೋದಕ್ಕೆ ಬೇರೆಯವರ ಹೆಂಡತಿಗೆ ಹಣವನ್ನು ನೀಡುತ್ತಾರಂತೆ.

ಇವರ ಮೊದಲ ಮದುವೆ ಕುಟುಂಬದ ಸದಸ್ಯರ ಒಪ್ಪಿಗೆ ಸಾಂಪ್ರದಾಯಿಕವಾಗಿ ನಡೆಯುತ್ತದೆ. ಆದರೆ ಎರಡನೇ ಮದುವೆಗೆ ನಾವು ಈ ಮೇಲೆ ಹೇಳಿರುವಂತಹ ಪದ್ಧತಿಯನ್ನು ಇವರು ಆಚರಿಸುವುದು. ಯಾರಾದರೂ ಮತ್ತೆ ಮರುಮದುವೆ ಆಗಬೇಕೆಂದರೆ ಆತ ಇದೇ ಪದ್ಧತಿಯನ್ನು ಪಾಲಿಸಬೇಕಾಗಿರುತ್ತದೆ ಇಲ್ಲವಾದರೆ ಆತನಿಗೆ ಮತ್ತೊಂದು ಮದುವೆ ಆಗುವಂತಹ ಹಕ್ಕು ಅವರ ಸಂಪ್ರದಾಯದ ಪ್ರಕಾರ ಇರುವುದಿಲ್ಲ ಅನ್ನುವುದಾಗಿ ಅವರ ನಂಬಿಕೆ. ಇವರು ಪ್ರತಿ ವರ್ಷ ಗೆರೆವೋಲ್ ಹಬ್ಬವನ್ನು ಆಚರಿಸುತ್ತಾರೆ ಹಾಗೂ ಈ ಸಂದರ್ಭದಲ್ಲಿ ಪ್ರತಿಯೊಬ್ಬ ಹುಡುಗರು ಕೂಡ ಮುಖಕ್ಕೆ ಬಣ್ಣವನ್ನು ಬಳಿದುಕೊಂಡು ಬರ್ತಾರೆ. ಈ ಹಬ್ಬದಲ್ಲಿ ಅವರು ನೃತ್ಯ ಹಾಗೂ ಬೇರೆ ಬೇರೆ ಚಟುವಟಿಕೆಗಳನ್ನು ಮಾಡುವ ಮೂಲಕ ಬೇರೆಯವರ ಹೆಂಡತಿಯ ಮನಸ್ಸನ್ನು ಗೆಲ್ಲಲು ಯಶಸ್ವಿಯಾಗುತ್ತಾರೆ ಅಥವಾ ಪ್ರಯತ್ನ ಪಡುತ್ತಾರೆ.

ಇನ್ನು ಈ ರೀತಿ ಮದುವೆ ಆಗುವ ಸಂದರ್ಭದಲ್ಲಿ ಆ ಮಹಿಳೆಯ ಗಂಡನಿಗೆ ಆಕೆ ಓಡಿ ಹೋಗುವ ವಿಚಾರ ತಿಳಿಯಬಾರದು. ಇನ್ನು ಈ ರೀತಿಯ ಹಬ್ಬದಿಂದ ಯಾವ ಜೋಡಿಗಳು ಓಡಿ ಹೋಗುತ್ತಾರೋ ಅವರನ್ನು ಊರಿನವರು ಸೇರಿಸಿ ಮತ್ತೆ ಮರು ವಿವಾಹ ಮಾಡುತ್ತಾರೆ. ಈ ಚಟುವಟಿಕೆ ಕಳೆದ ಸಾಕಷ್ಟು ವರ್ಷಗಳಿಂದಲೂ ಕೂಡ ಈ ಜನಾಂಗದ ಜನರಿಂದ ನಡೆದುಕೊಂಡು ಬರುತ್ತಿದೆ. ಈ ರೀತಿ ಕೂಡ ಮರು ಮದುವೆಯನ್ನು ಮಾಡಿಕೊಳ್ಳಬಹುದ ಅನ್ನೋದನ್ನ ಸಾಕಷ್ಟು ಜನರು ತಿಳಿದಿರುವುದಿಲ್ಲ. ಇದೇ ರೀತಿಯ ಸಾಕಷ್ಟು ಚಿತ್ರ ವಿಚಿತ್ರವಾದ ಅಂತಹ ಆಚರಣೆಗಳನ್ನು ನೀವು ಆಫ್ರಿಕಾದ ಬುಡಕಟ್ಟು ಜನಾಂಗದಲ್ಲಿ ನೋಡಬಹುದಾಗಿದೆ. ಇದೇ ರೀತಿ ವಿಶ್ವದಲ್ಲಿ ನಾವು ಸಾಕಷ್ಟು ಬೇರೆಬೇರೆ ರೀತಿಯ ಆಚರಣೆಗಳನ್ನು ಬುಡಕಟ್ಟು ಜನಾಂಗದ ಜನರಲ್ಲಿ ನೋಡಬಹುದಾಗಿದೆ.

Comments are closed.