Thukali Santhosh: ಬಡವ ಬಡವ ಎಂದು ಹೇಳಿ ಕಾರು ಖರೀದಿಸಿದ ಕಾಮಿಡಿ ಸಂತೋಷ್- ಬೆಲೆ ಎಷ್ಟು ಅಂತೇ ಗೊತ್ತೇ??

Thukali Santhosh: ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ಈ ಬಾರಿಯ ಬಿಗ್ ಬಾಸ್ ನಲ್ಲಿ ಸಾಕಷ್ಟು ಬಿಗ್ ಬಾಸ್ ಸ್ಪರ್ಧಿಗಳು ಜನಪ್ರಿಯರಾಗಿ ಅವರು ಈ ಹಿಂದೆ ಪಡೆದುಕೊಂಡಿದ್ದ ಜನರ ಪ್ರೀತಿಗಿಂತ ಹೆಚ್ಚಾಗಿ ಬಿಗ್ ಬಾಸ್ ಮನೆಗೆ ಹೋಗಿ ಬಂದ ಮೇಲೆ ಹೆಚ್ಚಾಗಿ ಪ್ರೀತಿಯನ್ನು ಪಡೆದುಕೊಳ್ಳುತ್ತಿದ್ದಾರೆ. ಅವರಲ್ಲಿ ತುಕಾಲಿ ಸಂತೋಷ್ ಕೂಡ ಒಬ್ಬರು. ಬಿಗ್ ಬಾಸ್ ಮನೆಯಲ್ಲಿ ಪ್ರಖ್ಯಾತರಾಗಿದ್ದ ತುಕಾಲಿ ಸಂತೋಷ ಈಗ ಬಿಗ್ ಬಾಸ್ ಮನೆಯಿಂದ ಹೊರಬಂದ ಮೇಲೆ ಕೂಡ ಜನರ ಬಾಯಿಯಲ್ಲಿ ದಿನನಿತ್ಯದ ಸುದ್ದಿಯಾಗಿದ್ದಾರೆ.

ಸರ್ಕಾರಿ ಸಾರಿಗೆಯಲ್ಲಿ 2500 ಹುದ್ದೆಗಳು ಖಾಲಿ ಖಾಲಿ; PUC ಪಾಸ್ ಆಗಿದ್ರೆ ಸಾಕು, ಕೈತುಂಬಾ ಸಂಬಳ!

ಇನ್ನು ತುಕಾಲಿ ಸಂತೋಷ್ ಈಗ ಸೋಶಿಯಲ್ ಮೀಡಿಯಾದಲ್ಲಿ ಒಂದು ಸಂತೋಷದ ಸುದ್ದಿಯನ್ನು ಹಂಚಿಕೊಂಡಿದ್ದು ಅದನ್ನು ನೋಡಿರುವಂತಹ ಅವರ ಅಭಿಮಾನಿಗಳು ಕೂಡ ಖುಷಿಯಾಗಿದ್ದಾರೆ. ಹೌದು ತುಕಾಲಿ ಸಂತೋಷ್ ರವರು ಹೊಸ ಕಾರನ್ನು ಖರೀದಿಸಿದ್ದಾರೆ ಎನ್ನುವಂತಹ ಮಾಹಿತಿಯನ್ನು ಬಹಿರಂಗಪಡಿಸಿದ್ದಾರೆ. ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಕಾರ್ ಅನ್ನು ಖರೀದಿಸಿರುವಂತಹ ಸಂತೋಷದ ಕ್ಷಣಗಳನ್ನು ತುಕಾಲಿ ಸಂತೋಷ್ ಫೋಟೋ ಮುಖಾಂತರ ಹಂಚಿಕೊಂಡಿದ್ದಾರೆ.

ತುಕಾಲಿ ಸಂತೋಷ್ ರವರು ಕಾರನ್ನು ಖರೀದಿಸಿದ ಮೇಲೆ ಕೂಡ ಕಾಮೆಂಟ್ ಬಾಕ್ಸ್ ನಲ್ಲಿ ಕೆಲವರು ಬೇರೆ ಬೇರೆ ರೀತಿಯಾಗಿ ಕಾಮೆಂಟ್ ಮಾಡುತ್ತಿದ್ದಾರೆ. ಕೆಲವರು ನಿಮ್ಮ ಬಳಿ ದುಡ್ಡು ಇಲ್ಲ ಅಂತಿದ್ದೀರಿ ಯಾರು ವರ್ತೂರು ಸಂತೋಷ್ ಅವರು ಹಣ ಕೊಟ್ರ ಅನ್ನೋದಾಗಿ ಕೂಡ ಕಾಮೆಂಟ್ ಮಾಡಿದ್ದಾರೆ. ಇನ್ನು ಕೆಲವರು ಎಲ್ಲಿಂದ ಇನ್ನಷ್ಟು ನೀವು ಮೇಲಕ್ಕೆ ಹೋಗ್ತೀರಾ ನಿಮಗೆ ಒಳ್ಳೆದಾಗಲಿ ಅನ್ನೋದಾಗ್ಲಿ, ಕಾಮೆಂಟ್ ಮಾಡಿದ್ದಾರೆ. ಇನ್ನು ತಿಳಿದು ಬಂದಿರುವ ಮಾಹಿತಿಯ ಪ್ರಕಾರ ತುಕಾಲಿ ಸಂತೋಷ್ ಅವರು ಖರೀದಿಸಿರುವಂತಹ ಕಾರಿನ ಬೆಲೆ 15 ರಿಂದ 20 ಲಕ್ಷ ಎನ್ನುವುದಾಗಿ ಅಂದಾಜು ಮಾಡಲಾಗಿದೆ.

ಬಿಗ್ ಬಾಸ್ ನಲ್ಲಿ ಇದ್ದಾಗ ತುಕಾಲಿ ಸಂತೋಷ ಹೆಚ್ಚಾಗಿ ಸದ್ದು ಮಾಡಿದ್ದು ವರ್ತೂರು ಸಂತೋಷ್ ರವರ ಜೊತೆಗೆ ಸ್ನೇಹದ ವಿಚಾರವಾಗಿ. ಇವರನ್ನು ಬಿಗ್ ಬಾಸ್ ಪ್ರೇಕ್ಷಕರು ಸಂತು ಪಂತು ಎನ್ನುವುದಾಗಿಯೇ ಕರೀತಿದ್ರು. ಬಿಗ್ ಬಾಸ್ ಮನೆಯ ಹೊರಗೆ ಬಂದ ಮೇಲೂ ಕೂಡ ಇವರಿಬ್ಬರು ತಮ್ಮ ಸ್ನೇಹವನ್ನು ಮುಂದುವರಿಸಿಕೊಂಡು ಹೋಗುತ್ತಿರುವುದು ಎಲ್ಲರ ಮೆಚ್ಚುಗೆಯನ್ನು ಪಡೆದುಕೊಂಡಿದೆ. ಸ್ನೇಹಿತರು ಇದ್ದಾರೆ ಇವರ ರೀತಿಯಲ್ಲಿ ಇರಬೇಕು ಅನ್ನೋದಾಗಿ ಎಲ್ಲರೂ ಕಾಮೆಂಟ್ ಮಾಡ್ತಾ ಇದ್ದಾರೆ. ತುಕಾಲಿ ಸಂತೋಷ್ ಕಾರು ತೆಗೆದುಕೊಂಡ ಫೋಟೋದಲ್ಲಿ ಕೂಡ ವರ್ತೂರು ಸಂತೋಷ್ ಅವರ ಅಭಿಮಾನಿಗಳು ಸಂತೋಷವನ್ನು ವ್ಯಕ್ತಪಡಿಸುತ್ತಿದ್ದಾರೆ. ಇದನ್ನು ನೀವು ಕೂಡ ನೋಡಬಹುದಾಗಿದ್ದು ಮುಂದಿನ ದಿನಗಳಲ್ಲಿ ತುಕಾಲಿ ಸಂತೋಷ್ ಅವರಿಗೆ ಕನ್ನಡ ಚಿತ್ರರಂಗದಲ್ಲಿ ನಟಿಸಲು ಸಿನಿಮಾಗಳ ಆಫರ್ ಕೂಡ ಹುಡುಕಿಕೊಂಡು ಬರಬಹುದು ಎನ್ನಬಹುದಾಗಿದೆ.

ಬಿಗ್ ಬಾಸ್ ನಲ್ಲಿ ಗೆಲುವಂತಹ ಬಹುತೇಕ ಎಲ್ಲಾ ಸ್ಪರ್ಧಿಗಳಿಗೂ ಕೂಡ ಬಿಗ್ ಬಾಸ್ ಮನೆಯಿಂದ ಹೊರ ಬಂದಮೇಲೆ ಹೆಚ್ಚಿನ ಸಿನಿಮಾ ಅವಕಾಶಗಳು ಹುಡುಕಿಕೊಂಡು ಬರುವುದು ಸರ್ವೇಸಾಮಾನ್ಯವಾಗಿದೆ. ಬಿಗ್ ಬಾಸ್ ಮನೆಯಲ್ಲಿ ಕೂಡ ತುಕಾಲಿ ಸಂತೋಷ ಎಲ್ಲರನ್ನು ನಕ್ಕು ನಗಿಸಿರುವುದು ಇದಕ್ಕೆ ಒಂದು ಪ್ಲಸ್ ಪಾಯಿಂಟ್ ಎನ್ನಬಹುದಾಗಿದೆ.

Comments are closed.