Budha Rahu Conjunction: ಮೀನಾ ರಾಶಿಯಲ್ಲಿ ಅಪರೂಪದ ಯೋಗ- ಈ ಐದು ರಾಶಿಗಳಿಗೆ ಇನ್ನು ಶುಭ ಸಮಯ. ಹಣ ಲೆಕ್ಕವೇ ಇರಲ್ಲ

Budha Rahu Conjunction : ವೈದಿಕ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಇದೇ ಮಾರ್ಚ್ 7ರಂದು ಬುಧ ಮೀನ ರಾಶಿಗೆ ಕಾಲಿಡಲಿದ್ದಾನೆ ಹಾಗೂ ಮೀನ ರಾಶಿಯಲ್ಲಿ ಈಗಾಗಲೇ ರಾಹು ಇದ್ದಾನೆ. ತಿಳಿದು ಬಂದಿರುವ ಮಾಹಿತಿಗಳ ಪ್ರಕಾರ 18 ವರ್ಷಗಳ ನಂತರ ಮೀನ ರಾಶಿಯಲ್ಲಿ ರಾಹು ಹಾಗೂ ಬುಧ ಸಂಧಿಸುತ್ತಿರುವ ಕಾರಣದಿಂದಾಗಿ 5 ರಾಶಿಯವರಿಗೆ ವಿಶೇಷವಾದ ಯೋಗ ಕೂಡಿ ಬರಲಿದ್ದು ಆ ರಾಶಿಯವರು ಯಾರು ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ.

 ವೃಷಭ ರಾಶಿ (Taurus)

ಆರ್ಥಿಕ ಲಾಭವನ್ನು ನೀವು ಸಡನ್ನಾಗಿ ಈ ಸಂದರ್ಭದಲ್ಲಿ ಪಡೆದುಕೊಳ್ಳಲಿದ್ದೀರಿ. ವೃಷಭ ರಾಶಿಯವರ ಕೈ ತುಂಬಾ ಹಣ ಸಿಗಲಿದೆ. ಈ ಹಿಂದಿನ ಸಮಯಗಳಲ್ಲಿ ಮಾಡಿರುವಂತಹ ಹಣದ ಹೂಡಿಕೆ ನಿಮಗೆ ಈಗ ಲಾಭ ತಂದು ಕೊಡಲಿದೆ. ಆರ್ಥಿಕವಾಗಿ ನೀವು ಯಾವುದೇ ರೀತಿಯ ಸಮಸ್ಯೆಯನ್ನು ಎದುರಿಸಬೇಕಾದ ಅಗತ್ಯ ಇರುವುದಿಲ್ಲ ಹಾಗೂ ಸಂಪೂರ್ಣವಾಗಿ ಸದೃಢರಾಗಲಿದ್ದೀರಿ.

 ವೃಶ್ಚಿಕ ರಾಶಿ (Scorpion)

ವೃಶ್ಚಿಕ ರಾಶಿಯವರು ತಮ್ಮ ಮನಸ್ಸಿನಲ್ಲಿ ಅಂದುಕೊಂಡಿರುವಂತಹ ಪ್ರತಿಯೊಂದು ಇಷ್ಟಾರ್ಥಗಳನ್ನು ಕೂಡ ಈಡೇರಿಸಿಕೊಳ್ಳಲಿದ್ದಾರೆ. ಮದುವೆಯಾಗದೆ ಉಳಿದುಕೊಂಡಿರುವಂತಹ ಜನರು ಈ ಸಂದರ್ಭದಲ್ಲಿ ಕಂಕಣ ಭಾಗ್ಯ ಕೂಡಿ ಬಂದು ಮದುವೆಯಾಗಲಿದ್ದಾರೆ. ಸಂತಾನ ಭಾಗ್ಯಕ್ಕಾಗಿ ಎದುರು ನೋಡುತ್ತಿರುವವರಿಗೆ ಮಕ್ಕಳು ಹುಟ್ಟಲಿದ್ದಾರೆ. ಆರ್ಥಿಕ ವಿಚಾರಕ್ಕೆ ಬರೋದಾದ್ರೆ ನಿಮ್ಮ ಆಸ್ತಿ ಹಾಗೂ ಸಂಪತ್ತು ಇನ್ನಿತರ ಎಲ್ಲಾ ವಸ್ತುಗಳು ಹೆಚ್ಚಾಗಲಿವೆ.

 ಮೀನ ರಾಶಿ (Pisces)

ಸಮಾಜದಲ್ಲಿ ಇರುವಂತಹ ಮೀನ ರಾಶಿಯವರಿಗೆ ಗೌರವ ಇನ್ನಷ್ಟು ಹೆಚ್ಚಾಗಲಿದೆ ಹಾಗೂ ಜನರು ಅವರನ್ನು ಇಷ್ಟ ಪಡುವುದಕ್ಕೆ ಪ್ರಾರಂಭ ಮಾಡುತ್ತಾರೆ. ವ್ಯಾಪಾರದಲ್ಲಿ ನಿಮಗಿರುವಂತಹ ಶತ್ರುಗಳು ಈ ಸಂದರ್ಭದಲ್ಲಿ ದೂರವಾಗಲಿದ್ದಾರೆ. ಒಟ್ಟಾರೆಯಾಗಿ ಮೀನ ರಾಶಿಯ ವ್ಯಾಪಾರಿಗಳಿಗೆ ಈ ಸಂದರ್ಭ ಹೇಳಿ ಮಾಡಿಸಿದಂತಹ ಸಮಯವಾಗಿದೆ. ಮಾಡುವಂತಹ ಪ್ರತಿಯೊಂದು ವ್ಯಾಪಾರದಲ್ಲಿ ಲಾಭವನ್ನು ಸಂಪಾದನೆ ಮಾಡಲಿದ್ದಾರೆ.

 ಸಿಂಹ ರಾಶಿ (Leo)

ಒಂದು ವೇಳೆ ಸಿಂಹ ರಾಶಿಯವರು ಈ ಹಿಂದಿನ ಸಂದರ್ಭದಲ್ಲಿ ಸಾಲವನ್ನು ಮಾಡಿಕೊಂಡಿದ್ದಾರೆ ಅವುಗಳನ್ನು ತೀರಿಸುವಂತಹ ಅವಕಾಶ ಕೂಡಿ ಬರಲಿದೆ ಹಾಗೂ ಅದೇ ರೀತಿಯಲ್ಲಿ ಸಿಂಹರಾಶಿಯವರ ಆರ್ಥಿಕ ಸದೃಢತೆ ಈ ಸಂದರ್ಭದಲ್ಲಿ ಸಂಪೂರ್ಣವಾಗಿ ಬಲಾಢ್ಯಗೊಳ್ಳಲಿದೆ. ಕಂಕಣ ಭಾಗ್ಯಕ್ಕಾಗಿ ಎದುರು ನೋಡುತ್ತಿರುವಂತಹ ಅವಿವಾಹಿತರು ಈ ಸಂದರ್ಭದಲ್ಲಿ ಮದುವೆ ಆಗುವಂತಹ ಭಾಗ್ಯವನ್ನು ಹೊಂದಲಿದ್ದಾರೆ. ಮಾಡುವಂತ ಕೆಲಸದಲ್ಲಿ ಸಂಪೂರ್ಣ ಯಶಸ್ವಿ ಫಲಿತಾಂಶವನ್ನು ಹೊಂದಲಿದ್ದಾರೆ.

 ಕರ್ಕ ರಾಶಿ (Cancer)

ವಿದೇಶದಲ್ಲಿ ಹೋಗಿ ಉನ್ನತ ವ್ಯಾಸಂಗವನ್ನು ಮಾಡಬೇಕು ಎಂಬುದಾಗಿ ಅಂದುಕೊಂಡಿರುವಂತಹ ಕರ್ಕ ರಾಶಿಯವರ ಕನಸು ಈಡೇರಲಿದೆ. ಸಾಕಷ್ಟು ಸಮಯಗಳಿಂದ ಅರ್ಧಕ್ಕೆ ನಿಂತಿರುವಂತಹ ಕೆಲಸಗಳು ಈ ಸಂದರ್ಭದಲ್ಲಿ ಮತ್ತೆ ಶುಭಾರಂಭಗೊಂಡು ಪೂರ್ಣಗೊಳ್ಳಲಿವೆ. ಕರ್ಕರಾಶಿಯ ವ್ಯಾಪಾರಸ್ಥರು ಕೂಡ ತಮ್ಮ ವ್ಯಾಪಾರದಲ್ಲಿ ಅದ್ವಿತೀಯ ಲಾಭವನ್ನು ಪಡೆದುಕೊಳ್ಳಲಿದ್ದಾರೆ. ಕೆಲಸದಲ್ಲಿ ಪ್ರಮೋಷನ್ ಹಾಗೂ ಸಂಬಳದ ಹೆಚ್ಚಳ ಕೂಡ ಪಡೆಯಲಿದ್ದಾರೆ. ಆರ್ಥಿಕವಾಗಿ ಯಾವುದೇ ರೀತಿಯ ಸಮಸ್ಯೆಗಳಿದ್ದರೂ ಕೂಡ ನಿವಾರಣೆ ಆಗಲಿವೆ. ಕುಟುಂಬದಲ್ಲಿ ಧಾರ್ಮಿಕ ಕಾರ್ಯಕ್ರಮಗಳು ನಡೆಯುವುದರಿಂದಾಗಿ ನಿಮ್ಮ ಪುಣ್ಯ ಸಂಪಾದನೆ ಹೆಚ್ಚಲಿದೆ.

Comments are closed.