Gruhalakshmi Scheme: ಕೇವಲ ಮಹಿಳೆಯರಿಗೆ ಮಾತ್ರವಲ್ಲ ಪುರುಷರಿಗೂ ಸಿಗುತ್ತೆ 2,000 ರೂ. ಸರ್ಕಾರದಿಂದ ಮಹತ್ತರವಾದ ಘೋಷಣೆ!

Gruhalakshmi Scheme: ಸ್ನೇಹಿತರೆ ನಿಮಗೆಲ್ಲರಿಗೂ ಗೊತ್ತಿರಬಹುದು ನಮ್ಮ ರಾಜ್ಯ ಸರ್ಕಾರ ಅಧಿಕಾರಕ್ಕೆ ಬಂದಮೇಲೆ ಅಧಿಕಾರಕ್ಕೂ ಮುನ್ನ ತಮ್ಮ ಮ್ಯಾನಿಫೆಸ್ಟ್ ನಲ್ಲಿ ಘೋಷಣೆ ಮಾಡಿದ ಪ್ರತಿಯೊಂದು ಯೋಜನೆಗಳನ್ನು ಜನರಿಗೆ ತಲುಪಿಸುವಂತಹ ಕೆಲಸಗಳನ್ನು ಮಾಡುತ್ತಿದೆ. ಅದರಲ್ಲೂ ವಿಶೇಷವಾಗಿ ಗೃಹಲಕ್ಷ್ಮಿ ಯೋಜನೆ ಮೂಲಕ ಹಾಗೂ ಉಳಿದ ಯೋಜನೆಗಳ ಮೂಲಕ ಕೂಡ ಮಹಿಳೆಯರಿಗೆ ಹೆಚ್ಚಿನ ಪ್ರಾಧಾನ್ಯತೆಯನ್ನು ನೀಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಹೆಚ್ಚಿನ ಯೋಜನೆಗಳನ್ನು ಜಾರಿಗೆ ತರುವಂತಹ ಯೋಚನೆ ಕೂಡ ನಡೆಯುತ್ತಿದೆ ಅನ್ನೋದಾಗಿಕೂಡ ಸುದ್ದಿ ಇದೆ.

ಇನ್ನು ಮಹಿಳಾ ಹಾಗೂ ಮಕ್ಕಳ ಕಲ್ಯಾಣ ಇಲಾಖೆಯ ಸಚಿವರಾಗಿರುವಂತಹ ಲಕ್ಷ್ಮಿ ಹೆಬ್ಬಾಳ್ಕರ್ ರವರು ಹೇಳಿರುವ ಮಾಹಿತಿಯ ಪ್ರಕಾರ ಒಂದು ವರ್ಷಕ್ಕೆ ಗೃಹಲಕ್ಷ್ಮಿ ಯೋಜನೆ ಅಡಿಯಲ್ಲಿ 24,000 ಕೋಟಿ ರೂಪಾಯಿಗಳಿಗಿಂತಲೂ ಹೆಚ್ಚಿನ ಬಜೆಟ್ ಅನ್ನು ಒಂದು ವರ್ಷಕ್ಕಾಗಿ ಮೀಸಲಾಗಿರಿಸಲಾಗಿದೆ ಎಂಬುದಾಗಿ ತಿಳಿದು ಬಂದಿದೆ. ನಾವು ಹಣವನ್ನು ಖರ್ಚು ಮಾಡಿ ಮಹಿಳೆಯರ ಅಭಿವೃದ್ಧಿಗೆ ಹಾಗೂ ಸ್ವಾವಲಂಬಿ ಜೀವನಕ್ಕೆ ಕಾರಣರಾಗುತ್ತಿದ್ದೇವೆ ಎಂಬುದಾಗಿ ಹೇಳಿಕೊಂಡಿದ್ದಾರೆ. ಆಶಾ ಕಾರ್ಯಕರ್ತೆಯರು ಹಾಗೂ ಅಂಗನವಾಡಿ ಕಾರ್ಯಕರ್ತೆಯರಿಗೂ ಕೂಡ ಅನುಕೂಲಕರ ಸೌಲಭ್ಯಗಳನ್ನು ಒದಗಿಸುವಂತಹ ಕೆಲಸವನ್ನು ನಮ್ಮ ಸರ್ಕಾರ ಮಾಡುತ್ತಿದೆ ಎಂಬುದಾಗಿ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಹೇಳಿಕೊಂಡಿದ್ದಾರೆ.

 ಪುರುಷರಿಗೆ ಸಿಗುತ್ತಾ 2,000 ರೂಪಾಯಿ?

ಈ ಬಾರಿ ಸರ್ಕಾರ ಘೋಷಣೆ ಮಾಡಿರುವಂತಹ ಪ್ರತಿಯೊಂದು ಗ್ಯಾರಂಟಿಗಳು ಕೂಡ ಹೆಚ್ಚಾಗಿ ಮಹಿಳೆಯರನ್ನು ಕೇಂದ್ರ ಬಿಂದುವಾಗಿ ಇರಿಸಿಕೊಂಡು ಜಾರಿಗೆ ಬಂದಿರುವಂತಹ ಯೋಜನೆಗಳಾಗಿವೆ ಎಂಬುದನ್ನು ನಿಮಗೆ ವಿಶೇಷವಾಗಿ ವಿವರಿಸಿ ಹೇಳಬೇಕಾದ ಅಗತ್ಯವಿಲ್ಲ. ಇದರ ವಿರುದ್ಧವಾಗಿ ಪುರುಷರು ಕೂಡ ರಾಜ್ಯದ ಪುರುಷರನ್ನು ಸರ್ಕಾರ ಕಡೆಗಣಿಸುತ್ತಿದೆ ಎನ್ನುವಂತಹ ಮಾತುಗಳನ್ನು ಆಡಲು ಪ್ರಾರಂಭ ಮಾಡಿದ್ದಾರೆ.

ಪುರುಷರನ್ನು ಕೂಡ ಕೇಂದ್ರಬಿಂದುವಾಗಿಸಿಕೊಂಡು ಅವರ ಪರವಾಗಿ ಕೆಲವೊಂದು ಯೋಜನೆಗಳನ್ನು ಜಾರಿಗೆ ತರಬೇಕು ಎನ್ನುವುದಾಗಿ ಕೂಡ ರಾಜ್ಯದಲ್ಲಿ ಪುರುಷರು ಪ್ರಸ್ತಾವನೆ ಮಾಡುತ್ತಿದ್ದಾರೆ. ಸರ್ಕಾರಕ್ಕೆ ಮಹಿಳೆಯರ ರೀತಿಯಲ್ಲಿ ಪುರುಷರಿಗೂ ಕೂಡ ರೂ.2000 ಹಣವನ್ನು ಪ್ರತಿ ತಿಂಗಳು ನೀಡಬೇಕು ಎಂಬುದಾಗಿ ಕೇಳಲು ಪ್ರಾರಂಭ ಮಾಡಲಾಗಿದೆ. ಮಹಿಳೆಯರ ರೀತಿಯಲ್ಲಿಯೇ ಉಚಿತ ಬಸ್ ಪ್ರಯಾಣವನ್ನು ಕೂಡ ನೀಡಬೇಕು ಎಂಬುದಾಗಿ ಕೇಳಲಾಗುತ್ತಿದೆ.

ಸದ್ಯಕ್ಕೆ ಹರಿಯಾಣ ರಾಜ್ಯದಲ್ಲಿ ನೋಡುವುದಾದರೆ ಮಹಿಳೆಯರಿಗೆ ಮಾತ್ರವಲ್ಲದೆ ಪುರುಷರಿಗೂ ಕೂಡ ಉಚಿತ ಬಸ್ ಪ್ರಯಾಣ ಸೇವೆಯನ್ನು ನೀಡಲಾಗುತ್ತಿದೆ ಎನ್ನುವಂತಹ ಮಾಹಿತಿ ಸಿಕ್ಕಿದೆ. ಇನ್ನು ಗೃಹಲಕ್ಷ್ಮಿ ಯೋಜನೆ ಅಡಿಯಲ್ಲಿ ಮಹಿಳೆಯರಿಗೆ ಸಿಗುವ 2000 ರೂಪಾಯಿ ರೀತಿಯಲ್ಲೇ ಪುರುಷರಿಗೂ ಕೂಡ ಇದೇ ರೀತಿಯ ಹಣವನ್ನು ನೀಡುವಂತಹ ಚರ್ಚೆ ತೆರೆಮರೆಯಲ್ಲಿ ನಡೆಯುತ್ತಿದೆ ಎನ್ನುವಂತಹ ಮಾಹಿತಿಗಳು ಕೂಡ ಕೇಳಿ ಬರುತ್ತಿವೆ.

 ಆದರೆ ಇದು ಯಾವಾಗ ಸಾಕಾರಗೊಳ್ಳಬಹುದು ಹಾಗೂ ಎಷ್ಟರ ಮಟ್ಟಿಗೆ ನಿಜ ಎನ್ನುವುದನ್ನು ನಾವು ಮುಂದಿನ ದಿನಗಳಲ್ಲಿ ಕಾದು ನೋಡಬೇಕಾಗಿದೆ. ಒಟ್ಟಾರೆಯಾಗಿ ಮಹಿಳೆಯರಷ್ಟೇ ಪುರುಷರಿಗೂ ಕೂಡ ಸಮಾನವಾದ ಹಕ್ಕು ಹಾಗೂ ಸೌಲಭ್ಯಗಳನ್ನು ನೀಡಬೇಕು ಎನ್ನುವಂತಹ ಕೂಗು ಕೇಳಿ ಬರುತ್ತಿರುವುದು ಮಾತ್ರ ಸುಳ್ಳಲ್ಲ.

Comments are closed.