Virat Kohli: ಟೀಮ್ ಇಂಡಿಯಾಗೆ ಇನ್ನು ವಿರಾಟ್ ಕೊಹ್ಲಿ ಅಗತ್ಯವೇ ಇಲ್ಲ- ಕೊಹ್ಲಿ ಬೇಡವೇ ಬೇಡ.

Virat Kohli: ಸ್ನೇಹಿತರೆ ಈ ಬಾರಿಯ ಇಂಗ್ಲೆಂಡ್ ವಿರುದ್ಧದ ಸರಣಿಯಲ್ಲಿ ಸಾಕಷ್ಟು ಅನುಭವಿ ಆಟಗಾರರ ಅನುಪಸ್ಥಿತಿಯಲ್ಲಿ ಕೂಡ ರೋಹಿತ್ ಶರ್ಮ ನಾಯಕತ್ವದಲ್ಲಿ ಭಾರತೀಯ ಕ್ರಿಕೆಟ್ ತಂಡ ಬಲಿಷ್ಠ ಇಂಗ್ಲೆಂಡ್ ವಿರುದ್ಧ 3 ಹಾಗೂ 1 ಗೆಲುವಿನ ಅಂತರದಲ್ಲಿ ಈಗಾಗಲೇ ಕೊನೆಯ ಟೆಸ್ಟ್ ಪಂದ್ಯ ಬಾಕಿ ಉಳಿದಿರುವಂತೆ ಸರಣಿಯನ್ನು ಗೆದ್ದು ಬೀಗಿದೆ ಎಂದು ಹೇಳಬಹುದಾಗಿದೆ. ಕೊನೆಯ ಟೆಸ್ಟ್ ಪಂದ್ಯ, ಧರ್ಮಶಾಲದಲ್ಲಿ ಇದೇ ಮಾರ್ಚ್ 7 ನೇ ತಾರೀಕಿನಂದು ನಡೆಯಲಿದೆ. ಇದಕ್ಕೂ ಮುನ್ನವೇ ಈಗ ಭಾರತೀಯ ಕ್ರಿಕೆಟ್ ತಂಡದ ಮಾಜಿ ಆಟಗಾರ ಹಾಗೂ ಕಾಮಂಟೇಟರ್ ಆಗಿರುವಂತಹ ಸುನಿಲ್ ಗವಾಸ್ಕರ್ ಅವರು ವಿರಾಟ್ ಕೊಹ್ಲಿ ಅವರ ಬಗ್ಗೆ ಒಂದು ಆಶ್ಚರ್ಯಕರ ಹೇಳಿಕೆಯನ್ನು ನೀಡಿದ್ದು ಈಗ ಅದು ಸೋಶಿಯಲ್ ಮೀಡಿಯಾದಲ್ಲಿ ದೊಡ್ಡ ಮಟ್ಟದಲ್ಲಿ ಸುದ್ದಿಯಾಗುತ್ತಿದೆ.

ಹೌದು ಇಂಗ್ಲೆಂಡ್ ವಿರುದ್ಧ ಸರಣಿಗೆ ವಿರಾಟ್ ಕೊಹ್ಲಿ ಅವರ ಹೆಸರನ್ನು ಆಯ್ಕೆ ಮಾಡಲಾಗಿತ್ತಾದರೂ ಕೂಡ ವಿರಾಟ್ ಕೊಹ್ಲಿ ಅವರು ತಮ್ಮ ಪತ್ನಿ ಮಗುವಿಗೆ ಜನ್ಮ ನೀಡುತ್ತಿರುವ ಹಿನ್ನೆಲೆಯಲ್ಲಿ ವೈಯಕ್ತಿಕ ಕಾರಣಗಳಿಂದಾಗಿ ಸರಣಿಯಿಂದ ಹಿಂದಕ್ಕೆ ಹೋಗುತ್ತಾರೆ. ಇದರ ಜೊತೆಗೆ ಎರಡನೇ ಪಂದ್ಯದ ನಂತರ ತಂಡದಿಂದ ಕೆ ಎಲ್ ರಾಹುಲ್ ಹಾಗೂ ರವೀಂದ್ರ ಜಡೇಜಾ ಕೂಡ ತಂಡದಿಂದ ಹೊರಗೆ ಹೋಗುತ್ತಾರೆ. ಕೇವಲ ಯುವ ಆಟಗಾರರನ್ನೇ ಇಟ್ಟುಕೊಂಡು ರೋಹಿತ್ ಶರ್ಮ ಅವರು ಈ ಸರಣಿಯನ್ನು ವಶಪಡಿಸಿಕೊಂಡಿದ್ದಾರೆ ಎನ್ನುವುದಾಗಿ ಸುನಿಲ್ ಗವಾಸ್ಕರ್ ಹೇಳಿಕೊಂಡಿದ್ದಾರೆ. ಇದೇ ಸಂದರ್ಭದಲ್ಲಿ ನೀಡಿರುವಂತಹ ಒಂದು ದೊಡ್ಡ ಹೇಳಿಕೆ ಈಗ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ.

ಮೂರು ವರ್ಷಗಳ ಹಿಂದೆ ಆಸ್ಟ್ರೇಲಿಯಾದಲ್ಲಿ ಅದರಲ್ಲೂ ವಿಶೇಷವಾಗಿ ಗಾಬ್ಬಾದಲ್ಲಿ ಸಾಕಷ್ಟು ಹಿರಿಯ ಆಟಗಾರರ ಅನುಪಸ್ಥಿತಿಯ ನಡುವೆ ಕೂಡ ಭಾರತೀಯ ಕ್ರಿಕೆಟ್ ತಂಡ ಯುವ ಆಟಗಾರರ ಜೊತೆಗೆ ಬಲಿಷ್ಠ ಆಸ್ಟ್ರೇಲಿಯಾ ಕ್ರಿಕೆಟ್ ತಂಡವನ್ನು ಸೋಲಿಸಿತ್ತು. ಇದೇ ರೀತಿಯಲ್ಲಿ ಈಗ ನಡೆಯುತ್ತಿರುವಂತಹ ಇಂಗ್ಲೆಂಡ್ ವಿರುದ್ಧ ಸರಣಿಯಲ್ಲಿ ಕೂಡ ಅನುಭೋಗಿ ಆಟಗಾರರ ಅನುಪಸ್ಥಿತಿಯಲ್ಲಿ ಭಾರತೀಯ ಕ್ರಿಕೆಟ್ ತಂಡ ಯುವ ಆಟಗಾರರನ್ನು ಒಳಗೊಂಡ ತಂಡವನ್ನು ಹೊಂದುವ ಮೂಲಕ ಇಂಗ್ಲೆಂಡ್ ತಂಡಕ್ಕೆ ಸೋಲಿನ ರುಚಿಯನ್ನು ತೋರಿಸಿದೆ.

ಹೀಗಾಗಿ ದೊಡ್ಡ ಆಟಗಾರರು ತಂಡದಲ್ಲಿ ಇದ್ದರೆ ಮಾತ್ರ ಗೆಲ್ಲುತ್ತೇವೆ ಎನ್ನುವಂತಹ ತಪ್ಪು ಕಲ್ಪನೆಯನ್ನು ಪ್ರತಿಯೊಬ್ಬರೂ ಹೋಗಲಾಡಿಸಿಕೊಳ್ಳಬೇಕು ಯಾಕೆಂದರೆ ಇತ್ತೀಚಿಗೆ ನಡೆದಿರುವಂತಹ ಸರಣಿ ಇದಕ್ಕೆ ಜೀವಂತ ಉದಾಹರಣೆಯಾಗಿದೆ ಹೀಗಾಗಿ ನಮ್ಮಿಂದಲೇ ಎಲ್ಲಾ ಎನ್ನುವುದಾಗಿ ಯಾವ ಆಟಗಾರರು ಕೂಡ ಭಾವಿಸಬೇಕಾದ ಅಗತ್ಯ ಇಲ್ಲ ಎಂಬುದಾಗಿ ಸುನಿಲ್ ಗವಾಸ್ಕರ್ ಹೇಳಿಕೆ ನೀಡಿದ್ದಾರೆ.

ಸೋಶಿಯಲ್ ಮೀಡಿಯಾದಲ್ಲಿ ಪ್ರತಿಯೊಬ್ಬರಿಗೂ ಕೂಡ ಸುನಿಲ್ ಗವಾಸ್ಕರ್ ಅವರು ವಿರಾಟ್ ಕೊಹ್ಲಿ ಅವರನ್ನು ಟಾರ್ಗೆಟ್ ಮಾಡಿ ಈ ರೀತಿಯ ಹೇಳಿಕೆಯನ್ನು ನೀಡಲಾಗಿದೆ ಎನ್ನುವುದಾಗಿ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಿದ್ದು ವಿಶೇಷವಾಗಿ ವಿರಾಟ್ ಕೊಹ್ಲಿ ಅಭಿಮಾನಿಗಳು ಇದರ ವಿರುದ್ಧ ಅಸಮಾಧಾನವನ್ನು ವ್ಯಕ್ತಪಡಿಸುತ್ತಿದ್ದಾರೆ. ಈ ಸರಣಿಯಲ್ಲಿ ವಿರಾಟ್ ಕೊಹ್ಲಿ ಅವರು ಕೇವಲ ಮೊದಲ ಪಂದ್ಯವನ್ನು ಮಾತ್ರ ಆಡಿ ಹೊರಗೆ ಹೋಗಿದ್ದರು ಎನ್ನುವುದಾಗಿ ನಿಮಗೆಲ್ಲರಿಗೂ ತಿಳಿದಿರುವ ವಿಚಾರವಾಗಿದ್ದು, ಗವಾಸ್ಕರ್ ಕೂಡ ಇದೇ ನಿಟ್ಟಿನಲ್ಲಿ ತಮ್ಮ ಹೇಳಿಕೆಯನ್ನು ನೀಡಿದ್ದಾರೆ ಎಂಬುದಾಗಿ ಕ್ರಿಕೆಟ್ ಲೋಕದಲ್ಲಿ ಮಾತುಕತೆಗಳು ಜೋರಾಗಿ ನಡೆಯುತ್ತಿವೆ.

Comments are closed.